For Quick Alerts
ALLOW NOTIFICATIONS  
For Daily Alerts

ಶನಿ ಮಹಿಮೆ: ಸೂರ್ಯ ದೇವ ತನ್ನ ಪುತ್ರ ಭಗವಾನ್ 'ಶನಿ'ಯನ್ನು ದೂರ ಮಾಡಿದ್ದೇಕೆ?

|

ನಮಗೆಲ್ಲಾ ತಿಳಿದಿರುವಂತೆ ಶನಿಯು ಪ್ರತಿಯೊಬ್ಬರ ಜನ್ಮಕುಂಡಲಿಯಲ್ಲಿ ಸಂಕಷ್ಟಗಳನ್ನು ತೊಂದೊಡ್ಡುವವರಾಗಿದ್ದಾರೆ. ಶನಿ ಆಕ್ರಮಣವಾಯಿತು ಎಂದಾದಲ್ಲಿ ನಾವು ಶನಿ ನೀಡುವ ಕಷ್ಟಗಳನ್ನು ಅನುಭವಿಸಲೇಬೇಕಾಗುತ್ತದೆ. ಸತ್ಯ ಹರಿಶ್ಚಂದ್ರ, ನಳ ಮಹರಾಜ, ವಿಕ್ರಮಾದಿತ್ಯ ಹೀಗೆ ಸಾಮಾನ್ಯರಿಂದ ಅಸಾಮಾನ್ಯರು, ದೇವಾಧಿ ದೇವತೆಗಳು ಕೂಡ ಶನಿಯಿಂದ ಸಂಕಷ್ಟಗಳನ್ನು ಅನುಭವಿಸಿದವರೇ. ಆದ್ದರಿಂದಲೇ ವಿಶೇಷವಾಗಿ ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಜೀವನದಿಂದ ಬರುವ ಕಷ್ಟಗಳಿಂದ ನಾವು ಪಾಠ ಕಲಿಯುತ್ತೇವೆ ಎಂದು ಹೇಳಲಾಗುತ್ತದೆ ಅಂತೆಯೇ ಶನಿ ನೀಡುವ ಕಷ್ಟಗಳಿಂದ ಕೂಡ ಮೈಕೊಡವಿ ನಾವು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ.

ಸೂರ್ಯ ಭಗವಾನ್ ಮತ್ತು ಛಾಯಾ ದಂಪತಿಗಳ ಪುತ್ರನಾಗಿರುವ ಶನಿಯು ಹುಟ್ಟುತ್ತಲೇ ತಂದೆಯಿಂದ ತಿರಸ್ಕೃತರಾದವರು. ಕಪ್ಪು ವರ್ಣದಲ್ಲಿ ಹುಟ್ಟಿದ್ದ ಸಂತಾನದ ಮೇಲೆಯೇ ಸೂರ್ಯ ದೇವರಿಗೆ ಅಸಮಾಧಾನವಿತ್ತು ಅಂತೆಯೇ ಈತ ನನ್ನ ಪುತ್ರನಲ್ಲ ಎಂದು ಮಗನನ್ನೇ ತ್ಯಜಿಸಿದ್ದರು. ಹೀಗೆ ಶನಿ ಪರಮಾತ್ಮ ಕೂಡ ಹುಟ್ಟುತ್ತಲೇ ದುಃಖ ಅವಮಾನಗಳನ್ನು ಸಹಿಸಿದವರು ಮತ್ತು ಕಷ್ಟಗಳನ್ನೇ ಸವಾಲಾಗಿ ಶಿವ ಭಗವಾನರಿಂದಲೇ ವರವನ್ನು ಪಡೆದುಕೊಂಡವರು. ಇಂದಿನ ಲೇಖನದಲ್ಲಿ ಶನಿ ಪರಮಾತ್ಮನ ಬಗ್ಗೆ ಮತ್ತುಷ್ಟು ವಿವರಗಳನ್ನು ವಿಶದವಾಗಿ ತಿಳಿದುಕೊಳ್ಳೋಣ.

1. ಶನಿ ದೇವರ ಹುಟ್ಟಿನ ನಿಜವಾದ ಕಥೆ

1. ಶನಿ ದೇವರ ಹುಟ್ಟಿನ ನಿಜವಾದ ಕಥೆ

ನಮ್ಮ ಸನಾತನ ಧರ್ಮ, ನಂಬಿಕೆಗಳು ಮೂಢನಂಬಿಕೆಯನ್ನೇ ಆಧಾರವಾಗಿಟ್ಟುಕೊಂಡಿವೆ. ಇಂದಿಗೂ ಹಿಂದೂ ಧರ್ಮ ಶಾಸ್ತ್ರಗಳು ಸಾಕಷ್ಟು ಸಾಕ್ಷ್ಯಗಳಿಲ್ಲದೆ ಇನ್ನೂ ಸಂದೇಹಾಸ್ಪದವಾಗಿಯೇ ಇದೆ.

2. ಹಿಂದೂ ಧರ್ಮದ ಪವಿತ್ರ ಪುರಾಣಗಳು

2. ಹಿಂದೂ ಧರ್ಮದ ಪವಿತ್ರ ಪುರಾಣಗಳು

ವೇದ, ಪುರಾಣ, ಉಪನಿಶತ್ತು, ಶಾಸ್ತ್ರಗಳು ಮತ್ತು ಸ್ಮೃತಿಗಳಲ್ಲಿ ಸಾಕ್ಷ್ಯಾಧಾರಗಳಿದ್ದು ಇದು ಇಂದಿನ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಅಂತೆಯೇ ನಮ್ಮ ವೇದ ಶಾಸ್ತ್ರಗಳಿಗೆ ಮೂಲಾಧಾರವಾಗಿದೆ. ದೇವರು ಇರುವುದರ ಬಗ್ಗೆ ಮಾಹಿತಿಯನ್ನು ಕೂಡ ಈ ಪವಿತ್ರ ಗ್ರಂಥಗಳು ನೀಡುತ್ತಿವೆ.

MOST READ: ಶನಿದೇವರನ್ನು ಒಲಿಸಿಕೊಳ್ಳಲು ತಪ್ಪದೇ ಮಾಡಿ ಶನಿವಾರ ವ್ರತ

3. ಹಿಂದೂ ಶಾಸ್ತ್ರಗಳು

3. ಹಿಂದೂ ಶಾಸ್ತ್ರಗಳು

ಪುರಾತಮ ಧರ್ಮ ಗ್ರಂಥಗಳ ಆಳವನ್ನು ನಾವಿನ್ನೂ ಅನ್ವೇಷಿಸಿಲ್ಲ ಇದು ಕೆಲವೊಂದು ಪ್ರಮುಖ ರಹಸ್ಯಗಳನ್ನು ಒಳಗೊಂಡಿವೆ. ಅದಾಗ್ಯೂ ಕೆಲವೊಂದು ಕಥೆಗಳನ್ನಾಧರಿಸಿ ಈ ಪುರಾಣಗಳನ್ನು ನಾವು ನಂಬುತ್ತೇವೆ.

4. ಸೂರ್ಯ ದೇವ

4. ಸೂರ್ಯ ದೇವ

ಶನಿ ದೇವರ ಕಥೆಯಲ್ಲಿ ಮುಖ್ಯವಾಗಿ ಅವರ ತಂದೆ ಸೂರ್ಯ ದೇವರ ಪ್ರಸ್ತುತಿಯನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಶನಿಯನ್ನು ಶಿಕ್ಷೆಯ ದೇವರು ಎಂದು ಕರೆಯುತ್ತಾರೆ, ಒಬ್ಬರ ಪಾಪಕೃತ್ಯಗಳ ಲೆಕ್ಕಾಚಾರವನ್ನು ಇರಿಸಿಕೊಂಡು ಕಾಲಾನುಕ್ರಮೇಣ ಶಿಕ್ಷೆಯ ಮೂಲಕ ಲೆಕ್ಕ ಚುಕ್ತಾ ಮಾಡುವ ಕಾಯಕ ಶನಿಯದ್ದಾಗಿದೆ.

5. ಶನಿ ದೇವ

5. ಶನಿ ದೇವ

ಶನಿ ಭಗವಾನ್ ತನ್ನ ಅನುಯಾಯಿಗಳನ್ನು ಭಯಭೀತಗೊಳಿಸಿದ್ದಾರೆ, ಮುಖ್ಯವಾಗಿ ದುಷ್ಟ ಕೆಲಸಗಳಿಗೆ ಅವರು ತದ್ವಿರುದ್ಧರಾಗಿದ್ದಾರೆ. ಅವರು ಶಿವನನ್ನು ಪೂಜಿಸಿ ಕಠಿಣ ನೈತಿಕತೆ ಮತ್ತು ದುರಾಚಾರದ ಬಗ್ಗೆ ಒಂದು ಲೆಕ್ಕವನ್ನು ಇರಿಸಿಕೊಳ್ಳುವ ಅಧಿಕಾರವನ್ನು ನೀಡುವ ವರವನ್ನು ಬಯಸಿದರು ಇದು ಸ್ವರ್ಗ ಮತ್ತು ನರಕದಲ್ಲೂ ಸಮಾನವಾಗಿದೆ.

6. ಅಂದು ಯಾರದೋ ತಪ್ಪಿಗೆ.....

6. ಅಂದು ಯಾರದೋ ತಪ್ಪಿಗೆ.....

ಇನ್ನೊಬ್ಬರ ತಪ್ಪನ್ನು ಹುಡುಕಿ ಅವರಿಗೆ ಕಷ್ಟವನ್ನು ನೀಡಲು ಶನಿಯು ಏಕೆ ಇಷ್ಟಪಡುತ್ತಾರೆ ಎಂಬುದು ತಿಳಿದಿದೆಯೇ? ಏಕೆಂದರೆ ಯಾರದ್ದೋ ತಪ್ಪಿನ ಬಲಿಪಶುವಾಗಿ ಅವರು ಶಿಕ್ಷೆಯನ್ನು ಅನುಭವಿಸಿದ್ದರು. ಅವರು ಶನಿಯ ತಂದೆ ಸೂರ್ಯದೇವನಾಗಿದ್ದರು.

7. ಛಾಯಾ ದೇವತೆ

7. ಛಾಯಾ ದೇವತೆ

ಶನಿಯು ಛಾಯಾಳ ಗರ್ಭದಲ್ಲಿರುವಾಗಲೇ, ಶಿವನಿಗೆ ತನ್ನ ಭಕ್ತಿಯನ್ನು ಸಮರ್ಪಿಸಿದ್ದರು. ಇದರಿಂದ ಮಗುವಿನ ಬಗ್ಗೆ ಸೂಕ್ತ ಕಾಳಜಿಯನ್ನು ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಹುಟ್ಟಿದ ಮಗುವು ಕಪ್ಪು ಬಣ್ಣವನ್ನು ಹೊಂದಿತ್ತು ಜೊತೆಗೆ ದುರ್ಬಲನಾಗಿತ್ತು.

8. ತಂದೆ ಸೂರ್ಯನಿಂದಲೇ ಶನಿಯ ತಿರಸ್ಕಾರ

8. ತಂದೆ ಸೂರ್ಯನಿಂದಲೇ ಶನಿಯ ತಿರಸ್ಕಾರ

ತನ್ನ ಪುತ್ರನನ್ನು ನೋಡಿ, ಸೂರ್ಯನು ತಿರಸ್ಕಾರ ಹೊಂದುತ್ತಾರೆ. ಮಗನೆಂದು ಶನಿಯನ್ನು ಸ್ವೀಕರಿಸಲು ಸೂರ್ಯನು ಸಿದ್ಧರಿರುವುದಿಲ್ಲ ಮತ್ತು ತನ್ನ ಪತ್ನಿ ಮತ್ತು ಮಗನನ್ನು ಸೂರ್ಯನು ತಿರಸ್ಕರಿಸುತ್ತಾರೆ. ಈ ಸಮಯದಲ್ಲಿ ತಾಯಿ ಮತ್ತು ಪುತ್ರರು ಸಾಕಷ್ಟು ಹಿಂಸೆ ನೋವನ್ನು ಅನುಭವಿಸಬೇಕಾಗುತ್ತದೆ.

MOST READ:ಇದು ಹಸ್ತವನ್ನು ನೋಡಿ ಭವಿಷ್ಯ ಹೇಳುವ ವಿದ್ಯೆ! ನಿಮ್ಮದೂ ಪರಿಶೀಲಿಸಿಕೊಳ್ಳಿ

9. ಶನಿ ದೇವರ ತಪ್ಪಸ್ಸು

9. ಶನಿ ದೇವರ ತಪ್ಪಸ್ಸು

ತನ್ನ ತಂದೆಗೆ ಸಮಾನವಾಗಿ ಶಕ್ತಿಯನ್ನು ಪಡೆದುಕೊಳ್ಳಲು ಶಿವನನ್ನು ಒಲಿಸಿಕೊಳ್ಳಬೇಕೆಂದು ಶನಿಯು ಕಠಿಣ ತಪಸ್ಸನ್ನು ಮಾಡುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಶಿವನು ವರವನ್ನಿತ್ತು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುವ ವರವನ್ನು ನೀಡುತ್ತಾರೆ.

10. ಸೂರ್ಯ ಸಿದ್ಧಾಂತ

10. ಸೂರ್ಯ ಸಿದ್ಧಾಂತ

ಸೂರ್ಯ ಸಿದ್ಧಾಂತದಲ್ಲಿ ಹೇಳಿರುವಂತೆ ಶನಿ ಕೂಡ ದೇವತೆಗಳ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಮತ್ತು ಕೆಟ್ಟದ್ದರ ಮೇಲೆ ಕಣ್ಣಿಡುವ ಶಕ್ತಿಯನ್ನು ಹೊಂದುತ್ತಾರೆ. ಅವರ ಶಕ್ತಿಯಡಿಯಲ್ಲಿ, ಉತ್ತಮ ಕೆಲಸಗಳಿಗೆ ಬಹುಮಾನಗಳನ್ನು ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ಶನಿ ನೀಡುತ್ತಾರೆ. ಇದರಲ್ಲಿ ದೇವತೆಗಳು, ಅಸುರರು ಮತ್ತು ಮನುಷ್ಯರೂ ಸೇರಿದ್ದಾರೆ.

11. ಶನಿ ದೇವರಿಗೆ ಶಿವನ ವರ

11. ಶನಿ ದೇವರಿಗೆ ಶಿವನ ವರ

ಈ ಎಲ್ಲಾ ಶಕ್ತಿಗಳಿಂದ ತನಗೆ ಪ್ರಾಮುಖ್ಯತೆಯನ್ನು ನೀಡಲು ಶನಿ ದೇವರು ಮುಂದಾಗುತ್ತಾರೆ. ತನ್ನ ತಂದೆಯ ಕೃತ್ಯಕ್ಕೆ ಶನಿಯು ಸೂರ್ಯನನ್ನು ಶಪಿಸುತ್ತಾರೆ. ವಂಚನೆಗೆ ಹೆದರದವರು, ಕಪಟವನ್ನಾಡುವವರು ಅಂತೆಯೇ ವೈಯಕ್ತಿ ಪ್ರಯೋಜನಕ್ಕಾಗಿ ಇತರರ ಬಾಳನ್ನು ಹಾಳುಮಾಡುವವರು ಶನಿಯ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅವರು ಶಿಕ್ಷೆಗೆ ಒಳಪಡುತ್ತಾರೆ.

12. ಶನಿಯ ಕುರಿತು ದಂತಕಥೆಗಳು

12. ಶನಿಯ ಕುರಿತು ದಂತಕಥೆಗಳು

ಶನಿಯಿಂದ ಸಂಕಷ್ಟಕ್ಕೆ ಒಳಗಾಗಿರುವವರು ಹನುಮನ ಪೂಜೆ ಮಾಡಿದರೆ ಸಾಕು. ಈ ಕುರಿತು ಎರಡು ದಂತಕಥೆಗಳಿದ್ದು ಶನಿಯ ಅಹಂ ಅನ್ನು ಹನುಮಂತನು ಧ್ವಂಸ ಮಾಡಿ ಅವರನ್ನು ರಾವಣನ ಕಾರಾಗೃಹದಿಂದ ಬಿಡುಗಡೆ ಮಾಡುತ್ತಾರೆ.

13. ನವಗ್ರಹ

13. ನವಗ್ರಹ

ನವಗ್ರಹದ ಮುಖ್ಯ ಅಧಿಪತಿ, ಒಂಭತ್ತು ಗ್ರಹಗಳಲ್ಲಿ ಒಂದಾಗಿರುವ ಸೂರ್ಯನು ಹನುಮಂತನ ಮುಖ್ಯ ಗುರುಗಳೂ ಆಗಿದ್ದಾರೆ. ಗುರುದಕ್ಷಿಣೆ ನೀಡುವ ಸಲುವಾಗಿ ಸೂರ್ಯ ದೇವರು ಏನು ಆದೇಶಿಸುತ್ತಾರೋ ಅದನ್ನು ತಾನು ನೀಡುವುದಾಗಿ ಹನುಮಂತನು ಸೂರ್ಯನಲ್ಲಿ ಕೇಳಿಕೊಳ್ಳುತ್ತಾರೆ.

14. ಸೂರ್ಯದೇವ

14. ಸೂರ್ಯದೇವ

ಒತ್ತಾಯದ ಮೇರೆಗೆ ಶನಿಯು ಮನೆಗೆ ಹಿಂತಿರುಗುವಂತೆ ಮಾಡೆಂದು ಸೂರ್ಯನು ಹನುಮನಲ್ಲಿ ಬೇಡಿಕೊಳ್ಳುತ್ತಾರೆ. ಶನಿಯು ಸೂರ್ಯ ಮತ್ತು ಛಾಯಾ ದಂಪತಿಗಳ ಪುತ್ರನಾಗಿದ್ದು, ಯಮ ಮತ್ತು ಸಹೋದರಿ ಯಮಿಗೆ ಸಹೋದರರಾಗಿದ್ದಾರೆ.

15. ಶನಿ ಮತ್ತು ಹನುಮಂತ ದೇವರು

15. ಶನಿ ಮತ್ತು ಹನುಮಂತ ದೇವರು

ಸೂರ್ಯ ಭಗವಾನರ ಕೋರಿಕೆಯನ್ನು ಈಡೇರಿಸುವುದಾಗಿ ಹನುಮಾನ್ ಮಾತು ಕೊಡುತ್ತಾರೆ. ಶನಿಯು ಹನುಮಂತನ ಬಾಲವನ್ನು ಅಣಕಿಸಿ ಹನುಮಂತನಿಗೆ ಅವಮಾನ ಮಾಡುತ್ತಾರೆ ನಂತರ ತನ್ನ ತಂದೆಯ ಕೋರಿಕೆಯನ್ನು ತಿರಸ್ಕರಿಸುತ್ತಾರೆ.

MOST READ:ದುರಾದೃಷ್ಟ ತರಬಹುದಾದ ಗಿಡಗಳಿವು- ಮನೆಯಲ್ಲಿ ಅಪ್ಪಿತಪ್ಪಿಯೂ ಇಡಬೇಡಿ!

16. ಕ್ಷಮೆಗಾಗಿ ಯಾತನೆ

16. ಕ್ಷಮೆಗಾಗಿ ಯಾತನೆ

ಅವರ ಜಂಭ, ದುರಹಂಕಾರವನ್ನು ನೋಡಿ ಹನುಮಂತನು ಶನಿಗೆ ತಕ್ಕ ಶಾಸ್ತಿ ಮಾಡಲು ಯೋಚಿಸುತ್ತಾರೆ. ತನ್ನ ಬಾಲದಿಂದ ಶನಿಯನ್ನು ಅವರು ಕಟ್ಟಿ ಹಾಕಿ ದೇಹವನ್ನು ಹಿಂಡುತ್ತಾರೆ. ಈ ಸಮಯದಲ್ಲಿ ಶನಿಯು ನೋವಿನಿಂದ ಕೂಗುತ್ತಾ ತನ್ನನ್ನು ಕ್ಷಮಿಸುವಂತೆ ಯಾಚಿಸುತ್ತಾರೆ. ಮನೆಗೆ ಬರುವುದಾಗಿ ಅವರು ಭರವಸೆಯನ್ನೀಯುತ್ತಾರೆ ಮತ್ತು ತನ್ನ ಶಕ್ತಿಯನ್ನು ದುರುಪಯೋಗಪಡಿಸುವುದಿಲ್ಲವೆಂದು ಮಾತು ಕೊಟ್ಟ ನಂತರವೇ ಹನುಮಾನ್ ಶನಿಯನ್ನು ಬಿಡುಗಡೆ ಮಾಡುತ್ತಾರೆ.

17. ಎಳ್ಳೆಣ್ಣೆ ಮತ್ತು ಎಳ್ಳು ನೀಡುವುದು

17. ಎಳ್ಳೆಣ್ಣೆ ಮತ್ತು ಎಳ್ಳು ನೀಡುವುದು

ಶನಿಯ ಸಂಪೂರ್ಣ ದೇಹ ನೋವಿನಿಂದ ಕೂಡಿರುತ್ತದೆ. ಹನುಮಂತನು ಎಳ್ಳು ಮತ್ತು ಎಣ್ಣೆಯಿಂದ ತಂದು ನೋವು ನಿವಾರಿಸಿಕೊಳ್ಳುವಂತೆ ಹೇಳುತ್ತಾರೆ. ಹೀಗೆ ಹನುಮಾನ್ ಭಕ್ತರು ಶನಿಗೆ ಎಳ್ಳೆಣ್ಣೆ ಮತ್ತು ಎಳ್ಳನ್ನು ಅರ್ಪಿಸಬಹುದಾಗಿದೆ.

18. ಹನುಮಂತನ ಆಶೀರ್ವಾದ

18. ಹನುಮಂತನ ಆಶೀರ್ವಾದ

ಹೀಗೆ ಶನಿಯಿಂದ ಸಂಕಷ್ಟಕ್ಕೆ ಒಳಗಾದವರು ಹನುಮಂತನ ಸಹಾಯದಿಂದ ಆ ಕಷ್ಟದಿಂದ ಪಾರಾಗಬಹುದು. ಅಂತೆಯೇ ಹನಮಾನ್ ಭಕ್ತರಿಗೆ ಶನಿಯು ತೊಂದರೆಯನ್ನುಂಟು ಮಾಡುವುದಿಲ್ಲ.

English summary

Why Suryadev refused to acknowledge Lord Shani as his son?

The legendary tale of Lord Shani’s birth and abandonment by his father Lord Sun (Suryadev). In Hinduism, Lord Shani is highly revered as the God of Punishment, who keeps an account of one’s misdeeds and from time to time serves them their due punishment in the mortal world, as mentioned in Surya Siddhanta.Lord Shani is dreaded by his followers, mainly due to his association with evil foreboding. He performed strict penance to appease Lord Shiva and sought his boon to grant him the authority to keep a check on morality and misdeed, committed by anyone, including Gods of heaven and hell.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more