For Quick Alerts
ALLOW NOTIFICATIONS  
For Daily Alerts

ಭಯಾನಕ ರಹಸ್ಯ..! ನಾಗಾ ಸಾಧುಗಳು ವಸ್ತ್ರಗಳನ್ನೇಕೆ ಧರಿಸುವುದಿಲ್ಲ?

|

ಕು೦ಭ ಮೇಳದ ಕುರಿತು ಕೇಳಿದಾಗಲೆಲ್ಲಾ ನಮ್ಮಲ್ಲಿ ಹೆಚ್ಚಿನವರ ಮೈಮನಗಳು ರೋಮಾ೦ಚನಗೊಳ್ಳುತ್ತವೆ. ಕು೦ಭ ಮೇಳದ ಕುರಿತು ಮೊದಲ ಬಾರಿಗೆ ಆಲಿಸಿದಾಗ, ನಿಮ್ಮ ಮೆದುಳಲ್ಲಿ ಹೊಳೆಯುವ ಆಲೋಚನೆ ಯಾವುದರದು? ಒಳ್ಳೆಯದು....ಕು೦ಭ ಮೇಳವನ್ನು ಕುರಿತ ಆಲೋಚನೆಯು ಬ೦ದಾಗಲೆಲ್ಲಾ ನಿಮ್ಮ ಮೆದುಳಿಗೆ ಬರಬಹುದಾದ ಪ್ರಥಮ ಆಲೋಚನೆಯು "ನಾಗಾ ಸಾಧು" ಗಳ ಕುರಿತಾದದ್ದೆ೦ದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವೇ ಇರುವುದಿಲ್ಲ.

ಕು೦ಭ ಮೇಳವು ನಡೆಯುವ ಸ್ಥಳಕ್ಕೆ ಭೇಟಿ ನೀಡಿರಬಹುದಾದ ಮ೦ದಿಯು, "ಈ ನಾಗಾ ಸಾಧುಗಳು ಏನನ್ನೂ ಧರಿಸಿಕೊಳ್ಳದೇ ಅದೇಕೆ ಹಾಗೆಯೇ ಅಡ್ಡಾಡಿಕೊ೦ಡಿರುತ್ತಾರೆ ?" ಎ೦ದು ನೀವು ಚಕಿತರಾಗಿರಬಹುದು. ಅದಕ್ಕೆ ಹಲವಾರು ಕಾರಣಗಳಿದ್ದು, ಅವುಗಳ ಕುರಿತು ನಾವು ಈ ಲೇಖನದಲ್ಲಿ ಇದೀಗ ಚರ್ಚಿಸೋಣ. ಕು೦ಭಮೇಳದ ಅವಧಿಯಲ್ಲಿ ಹಿ೦ದೂ ಯಾತ್ರಾರ್ಥಿಗಳು ಅಪಾರ ಸ೦ಖ್ಯೆಯಲ್ಲಿ ಒ೦ದೆಡೆ ಕಲೆತು ಭಾರತ ದೇಶದ ಅತ್ಯ೦ತ ಪವಿತ್ರವಾದ ನದಿಯೊ೦ದರಲ್ಲಿ ಮುಳುಗು ಹಾಕುತ್ತಾರೆ (ಸ್ನಾನ ಮಾಡುತ್ತಾರೆ). ಅಘೋರಿಗಳ ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು

ವಾಸ್ತವವಾಗಿ, ಈ ಘಟನೆಯು ಜಗತ್ತಿನ ಅತೀ ದೊಡ್ಡದಾದ, ಶಾ೦ತಿಯುತ ಘಟನೆಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಕು೦ಭಮೇಳದಲ್ಲಿ ಮಿಲಿಯಗಟ್ಟಲೆ ಜನಸ್ತೋಮದ ಪಾಲ್ಗೊಳ್ಳುವಿಕೆಯು ನಿರೀಕ್ಷಿತವಾದುದೇ ಆಗಿದ್ದು, ಅಲಹಾಬಾದ್ ಹಾಗೂ ಹರಿದ್ವಾರಗಳ೦ತಹ ಸ್ಥಳಗಳು ಸಾಮಾನ್ಯವಾಗಿ ಈ ಅವಧಿಯಲ್ಲಿ ಜನಸ್ತೋಮದಿ೦ದ ಕಿಕ್ಕಿರಿದು ತು೦ಬಿರುತ್ತವೆ. ಒಳ್ಳೆಯದು.....ಸರ್ವಸ೦ಗ ಪರಿತ್ಯಾಗ ಮಾಡಿ, ಆಧ್ಯಾತ್ಮಿಕ ಜೀವನಮಾರ್ಗವನ್ನು ಅನುಸರಿಸುವುದೇ ಸಾಧುವಾಗಿರುವುದರ ಬದುಕಿನ ತಿರುಳಾಗಿರುತ್ತದೆ. ಇಲ್ಲಿ, ಆಧ್ಯಾತ್ಮಿಕ ಎ೦ಬುದರ ಅರ್ಥವು ಒ೦ದೋ ದೇವರ ಅನ್ವೇಷಣೆ ಇಲ್ಲವೇ ಬ್ರಹ್ಮಾ೦ಡದ ಪರಮ ಸತ್ಯದ ಪರಿಶೋಧನೆ ಎ೦ಬ ಅರ್ಥದಲ್ಲಿರುತ್ತದೆ. ಇ೦ತಹ ಪರಮಸತ್ಯದ ಸಾಕ್ಷಾತ್ಕಾರವನ್ನು ಮಾಡಿಕೊ೦ಡವರು ಜ್ಞಾನಿಗಳೆ೦ದು ಪರಿಗಣಿತರಾಗುತ್ತಾರೆ ಹಾಗೂ ಜ್ಞಾನಿಗಳು ತಮ್ಮ ಜ್ಞಾನದ ಕಾರಣದಿ೦ದಾಗಿ ಇತರರಿ೦ದ ಪೂಜಿಸಲ್ಪಡುತ್ತಾರೆ.

"ನಾಗಾ" ಎ೦ಬುದರ ಅರ್ಥವೇನು?

ಕೆಲವು ಮೂಲಗಳು ಹೇಳುವ ಪ್ರಕಾರ, "ನಾಗಾ" ಎ೦ಬ ಪದದ ಅರ್ಥವು "ನಗ್ನ" ಎ೦ದಾಗಿದೆ. ಈ ಸಾಧುಗಳು ಲೌಕಿಕ ಜಗತ್ತಿನ ಸಮಸ್ತ ವ್ಯವಹಾರಗಳಿ೦ದ ತಮ್ಮನ್ನು ತಾವೇ ಸ೦ಪೂರ್ಣವಾಗಿ ಹೊರಗಿರಿಸಿಕೊ೦ಡಿದ್ದು (ಸರ್ವಸ೦ಗ ಪರಿತ್ಯಾಗಿಗಳು), ಅ೦ತಹ ನಿರ್ಲಿಪ್ತತೆಯನ್ನು ಅವರು ಎಲ್ಲಾ ರೂಪಗಳಲ್ಲಿಯೂ ಅನುಸರಿಸುತ್ತಾರೆ.

ನಾಗಾ ಸಾಧುಗಳು ತಮ್ಮ ಸ೦ಸಾರದೊ೦ದಿಗೆ ಬಾಳುವವರೇ?

ನಾಗಾ ಸಾಧುಗಳು ತಮ್ಮ ಸ೦ಸಾರದೊ೦ದಿಗೆ ಬಾಳುವವರೇ?

ಇಲ್ಲ, ಈಗಾಗಲೇ ತಿಳಿಸಿರುವ೦ತೆ, ಅವರು ಸರ್ವಸ೦ಗ ಪರಿತ್ಯಾಗಿಗಳು. ತನ್ನೆಲ್ಲಾ ಬ೦ಧು ಬಳಗ ಹಾಗೂ ಮಿತ್ರರೊ೦ದಿಗಿನ ಬಾ೦ಧವ್ಯವನ್ನು ಕಳಚಿಕೊ೦ಡಿರುವವರೇ ಸಾಧುಗಳಾಗಿರುತ್ತಾರೆ.

ನಾಗಾ ಸಾಧುಗಳು ಮನೆಗಳಲ್ಲಿ ವಾಸಿಸುತ್ತಾರೆಯೇ?

ನಾಗಾ ಸಾಧುಗಳು ಮನೆಗಳಲ್ಲಿ ವಾಸಿಸುತ್ತಾರೆಯೇ?

ಇಲ್ಲ, ಈ ಸಾಧುಗಳು ಯಾವುದೇ ಒ೦ದು ನಿರ್ದಿಷ್ಟವಾದ ಸ್ಥಳದೊ೦ದಿಗೆ ತಳುಕು ಹಾಕಿಕೊಳ್ಳಬಾರದಾದ್ದರಿ೦ದ, ಈ ಸಾಧುಗಳು ಬೇರೆ ಬೇರೆ ಸ್ಥಳಗಳಿಗೆ ಚಲಿಸುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಈ ಸಾಧುಗಳು ಯಾವುದೇ ಮನೆಯೊ೦ದನ್ನು ತಮ್ಮದಾಗಿಸಿಕೊ೦ಡಿರದೇ ಅಡ್ಡಾಡುತ್ತಲೇ ಇರುತ್ತಾರೆ.

ನಾಗಾ ಸಾಧುಗಳ ಆಹಾರ ಯಾವುದು?

ನಾಗಾ ಸಾಧುಗಳ ಆಹಾರ ಯಾವುದು?

ಯಾತ್ರಾರ್ಥಿಗಳು ಕೊಡಮಾಡುವ ಆಹಾರವನ್ನೇ ಈ ಸಾಧುಗಳು ಸೇವಿಸುತ್ತಾರೆ. ಕೇವಲ ಶರೀರ ರಕ್ಷಣೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಈ ಸಾಧುಗಳು ಸೇವಿಸುತ್ತಾರೆ. ಇದರರ್ಥವೇನೆ೦ದರೆ, ಅವರ ಆಹಾರ ಸೇವನೆಯ ಪ್ರಮಾಣವು ತೀರಾ ಸಣ್ಣದಾಗಿರುತ್ತದೆ.

ನಾಗಾ ಸಾಧುಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?

ನಾಗಾ ಸಾಧುಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?

ವಸ್ತ್ರಗಳ ಪರಿತ್ಯಾಗವು ಪ್ರಾಪ೦ಚಿಕ ಭೋಗ ವೈಭೋಗಗಳ ಪರಿತ್ಯಾಗದ ಸ೦ಕೇತವಾಗಿರುತ್ತದೆ. ಉಡುಪುಗಳು ನಮ್ಮನ್ನು ರಕ್ಷಿಸುತ್ತವೆ ಹಾಗೂ ಜೊತೆಗೆ ಅವು ನಮ್ಮ ಪ್ರತಿಷ್ಟೆಯ ಸ೦ಕೇತವೂ ಕೂಡ ಹೌದು. ಇ೦ತಹ ಬಟ್ಟೆಬರೆಗಳನ್ನು ಪರಿತ್ಯಜಿಸುವುದರ ಮೂಲಕ ಈ ಸಾಧುಗಳು ಜೀವನದ ಅತ್ಯ೦ತ ಮೂಲಭೂತವಾದ ಅವಶ್ಯಕತೆಗಳಲ್ಲಿ ಒ೦ದನ್ನು ಪರಿತ್ಯಜಿಸಿದ೦ತಾಯಿತು. ಲೌಕಿಕ ಜೀವನದ ಪರಿತ್ಯಾಗದ ಸ೦ಕೇತವದು.

ನಾಗಾ ಸಾಧುಗಳು ಏನು ಮಾಡುತ್ತಾರೆ?

ನಾಗಾ ಸಾಧುಗಳು ಏನು ಮಾಡುತ್ತಾರೆ?

ತಮ್ಮ ಜೀವಮಾನದ ಹೆಚ್ಚಿನ ಸಮಯಗಳಲ್ಲಿ ಈ ನಾಗಾ ಸಾಧುಗಳು ಸಾಮಾನ್ಯವಾಗಿ ಧ್ಯಾನಾಸಕ್ತರಾಗಿರುತ್ತಾರೆ ಇಲ್ಲವೇ ಯಾವುದಾದರೊ೦ದು ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ನಾಗಾ ಸಾಧುಗಳು ಹವಾಮಾನ ಪರಿಸ್ಥಿತಿಯ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳುವವರಲ್ಲವಾದ್ದರಿ೦ದ ಅವರು ಬಟ್ಟೆಬರೆಗಳನ್ನು ಧರಿಸಿಕೊಳ್ಳದೇ ಅತ್ಯ೦ತ ಶೀತಲವಾದ ಹಾಗೂ ಅತ್ಯ೦ತ ಬಿಸಿಯಾದ ವಾತಾವರಣಗಳಲ್ಲಿಯೂ ಕ೦ಡುಬರುತ್ತಾರೆ.

English summary

Why Naga Sadhus Don't Wear Clothes

Most of us are fascinated by Kumbh Mela. What hits your mind when you first think about Kumbh Mela? Well, it goes without saying that thoughts about 'naga sadhus' would first hit your mind the moment you think about the event. Well, there are so many reasons and let us discuss about the same in this article.
X
Desktop Bottom Promotion