For Quick Alerts
ALLOW NOTIFICATIONS  
For Daily Alerts

ಮೂಷಿಕ ವಾಹನ ಗಣೇಶನ ಹಿಂದಿರುವ ರಹಸ್ಯವೇನು?

By Viswanath S
|

ಇನ್ನೇನು ಗಣೇಶ ಚತುರ್ಥಿ ಬರುತ್ತಿದೆ ಮತ್ತು ಅದನ್ನು ಎಲ್ಲರೂ ಅತ್ಯಂತ ಉತ್ಸುಕತೆಯಿಂದ ಕಾಯುತ್ತಿರುವ ವರ್ಷದ ಆಚರಣೆ. ಆನೆತಲೆ ಹೊಂದಿರುವ ಗಣೇಶನನ್ನು ಪ್ರತಿಯೊಂದು ಹಿಂದೂವಿನ ಮನೆಯಲ್ಲಿ, ಎಲ್ಲಾ ಪ್ರದೇಶಗಳಲ್ಲಿ ಮತ್ತು ಎಲ್ಲಾ ಸಂಸ್ಕೃತಿಗಳಲ್ಲಿ ತಾರತಮ್ಯವಿಲ್ಲದೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

ಗಣೇಶನನ್ನು ಆನೆ ತಲೆಯುಳ್ಳವನು, ದೊಡ್ಡ ಹೊಟ್ಟೆಯುಳ್ಳವನು, ಮೂಷಿಕದ ಮೇಲೆ ಸವಾರಿ ಮಾಡುವವನು ಎಂದು ವಿಭಿನ್ನ ರೀತಿಯಲ್ಲಿ ವರ್ಣಿಸುತ್ತಾರೆ. ಬೃಹತ್ ದೇಹವಿರುವ ಗಣೇಶ ಅಷ್ಟು ಸಣ್ಣ ಮೂಷಿಕದ ಮೇಲೆ ಏಕೆ ಸವಾರಿ ಮಾಡುತ್ತಾನೆ ಎಂದು ಅನೇಕ ಜನರಿಗೆ ಒಂದು ಕುತೂಹಲ ಪ್ರಶ್ನೆ. ವಾಸ್ತವವಾಗಿ ಗಣೇಶನು ಸವಾರಿಮಾಡುವುದಕ್ಕೆ ಮೂಷಿಕವನ್ನು ಇಟ್ಟುಕೊಂಡಿರುವ ಬಗ್ಗೆ ಒಂದು ಕುತೂಹಲಕಾರಿ ಕಥೆಯಿದೆ.

Why Lord Ganesha Rides A Mouse?

ಗಣೇಶನು ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವವನು ಮತ್ತು ಯಾವ ಭೇದ ಭಾವವಿಲ್ಲದೆ ಎಲ್ಲಾ ಭಕ್ತರನ್ನು ಆಶೀರ್ವದಿಸುವವನು ಎಂದು ನಮಗೆಲ್ಲರಿಗೂ ತಿಳಿದ ವಿಷಯ. ಗಣೇಶನು ಇತರ ದೇವರುಗಳ ಮತ್ತು ದೇವಿಗಳ ಪೂಜೆ ಮಾಡುವುದಕ್ಕೆ ಮೊದಲು ಹೇಗೆ ಮತ್ತು ಯಾಕೆ ಪೂಜಿಸಲರ್ಹನಾಗಿದ್ದಾನೆಯೆಂದು ತೋರಿಸಲು ಗಣೇಶನ ಮೂಷಿಕ ಸವಾರಿ ಕಥೆಯಿಂದ ತಿಳಿಯುತ್ತದೆ.

ಗಣೇಶನು ಸವಾರಿ ಮಾಡುವ ಮೂಷಿಕ ಹಿಂದಿನ ಜನ್ಮದಲ್ಲಿ ಒಬ್ಬ ದೇವತೆಯಾಗಿದ್ದು ಒಬ್ಬ ಋಷಿಯಿಂದ ಶಾಪಪಡೆದಿದ್ದನು. ಗಣೇಶನು ಮೂಷಿಕದ ಮೇಲೆ ಏಕೆ ಸವಾರಿ ಮಾಡುತ್ತಾನೆಂದು ಈ ಸಂಪೂರ್ಣ ಕಥೆಯನ್ನು ಮುಂದೆ ಓದಿ.

ಗಣೇಶ ಹಬ್ಬಕ್ಕೆ ಬಗೆ ಬಗೆಯ ತಿಂಡಿಗಳು

ಗಣೇಶಪುರಾಣದಲ್ಲಿ ಬರುವ ಕ್ರೋಂಚ ಎಂಬುವನ ಕಥೆ
ಗಣೇಶನ ಮೂಷಿಕ ಹಿಂದಿನ ಜನ್ಮದಲ್ಲಿ ಕ್ರೋಂಚ ಎಂಬ ಹೆಸರಿನ ದೇವತೆಯಾಗಿದ್ದನು. ಒಮ್ಮೆ ಇಂದ್ರನ ಆಸ್ಥಾನದಲ್ಲಿ ಕ್ರೋಂಚನು ತನಗರಿವಿಲ್ಲದೆ ಆಕಸ್ಮಿಕವಾಗಿ ಮಹಾನ್ ಬುದ್ಧಿಯುಳ್ಳ ವಾಮದೇವನೆಂಬ ಋಷಿಯ ಕಾಲಿನಬೆರಳುಗಳನ್ನು ತುಳಿದುಬಿಟ್ಟನು. ಋಷಿ ವಾಮದೇವನು ತನ್ನ ಕಾಲ್ಬೆರಳುಗಳನ್ನು ಉದ್ದೇಶಪೂರ್ವಕವಾಗಿ ತುಳಿದನೆಂದು ಕೋಪಗೊಂಡು ಕ್ರೋಂಚನಿಗೆ ‘ಮೂಷಕನಾಗಿಹೋಗು' ಎಂದು ಶಾಪಕೊಟ್ಟನು. ಭಯಭೀತನಾದ ಕ್ರೋಂಚನು ಮುನಿಯ ಪಾದಗಳಿಗೆರಗಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದನು.

ಕ್ರೋಂಚನ ಬೇಡಿಕೆಗೆ ಮುನಿಯ ಕ್ರೋಧ ಕಡಿಮೆಯಾಯಿತು ಅವನು ತಾನು ಒಮ್ಮೆ ಕೊಟ್ಟ ಶಾಪ ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಕ್ರೋಂಚನು ಮುಂದಿನ ಜನ್ಮದಲ್ಲಿ ಗಣೇಶನನ್ನು ಕಂಡು ಅವನ ವಾಹನವಾಗು ಎಂದು ಹೇಳಿದನು. ಹಾಗೆ ಆಗುವುದರಿಂದ ಇತರ ದೇವರುಗಳು ಮತ್ತು ದೇವತೆಗಳು ಸಹ ಅವನನ್ನು ಪೂಜಿಸಲು ಅರ್ಹನಾಗಿರುತ್ತಾನೆಂದು ಹೇಳಿದನು. ಹೀಗೆ ನಡೆದ ಘಟನೆಯಿಂದ ಕ್ರೋಂಚನು ವಾಮದೇವ ಮುನಿಯ ಶಾಪದಿಂದ ಮೂಷಿಕನಾಗಿ ಮಾರ್ಪಟ್ಟು ಮಹರ್ಷಿ ಪರಾಶರರ ಆಶ್ರಮವನ್ನು ಸೇರಿಕೊಂಡನು.

ಭಯಕಂಟಕ ಕ್ರೋಂಚ
ಕ್ರೋಂಚ ಯಾವುದೇ ಸಾಮಾನ್ಯ ಮೂಷಿಕನಾಗಿರಲಿಲ್ಲ. ವಾಸ್ತವವಾಗಿ, ಒಂದು ದೊಡ್ಡ ಪರ್ವತಾಕರದಲ್ಲಿದ್ದನು ಮತ್ತು ಅವನನ್ನು ಕಂಡರೆ ಭಯ ಉಂಟಾಗುತ್ತಿತ್ತು. ಅವನು ಎಲ್ಲರಿಗೂ ಬಹಳ ತೊಂದರೆ ಕೊಡುತ್ತಿದ್ದನು ಮತ್ತು ಅವನ ದಾರಿಗೆ ಸಿಕ್ಕಿದ್ದೆಲ್ಲವನ್ನೂ ನಾಶಮಾಡುತ್ತಿದ್ದನು. ಅವನು ಎಲ್ಲ ಜನರಿಗೆ ಇನ್ನೊಬ್ಬ ಭಯಕಂಟಕನಾಗಿ ಹೋದನು.

ಗಣೇಶನ ವಾಹನ
ಇದೇ ಸಮಯದಲ್ಲಿ ಋಷಿ ಪರಾಶರರು ಗಣೇಶನನ್ನು ತಮ್ಮ ಆಶ್ರಮಕ್ಕೆ ಆಹ್ವಾನಿಸಿದರು ಮತ್ತು ಅವರ ಪತ್ನಿ ವತ್ಸಲ ಗಣೇಶನ ಅರೈಕೆಮಾಡಿದರು. ಕ್ರೋಂಚನ ಭಯೋತ್ಪಾದಕತೆಯ ವಿಷಯವನ್ನು ಕೇಳಿ, ಗಣೇಶನು ಅವನನ್ನು ಎದುರಿಸಿ ಕ್ರೋಂಚನ ಆಹಂಕಾರವನ್ನು ಕೊನೆಗಾಣಿಸಲು ನಿರ್ಧರಿಸಿದನು. ಗಣೇಶನು ತನ್ನ ಶಸ್ತ್ರಾಸ್ತ್ರಗಳಲ್ಲೊಂದನ್ನು ಅವನ ಮೇಲೆ ಪ್ರಯೋಗ ಮಾಡಿದನು: ಆ ಅಸ್ತ್ರವಾದ ಪಾಶವು ಕ್ರೋಂಚ ಇರುವ ದಿಕ್ಕಿನಲ್ಲಿ ಹಾರಿಕೊಂಡು ಹೋಯಿತು. ಆ ಪಾಶವು ಎಷ್ಟು ಹೊಳೆಯುತ್ತಿದ್ದೆಂದರೆ ಇಡೀ ಬ್ರಹ್ಮಾಂಡವು ಅದರ ಬೆಳಕಿನಿಂದ ತುಂಬಿಹೋಯಿತು. ಪಾಶವು ಕ್ರೋಂಚನನ್ನು ಅಟ್ಟಿಸಿಕೊಂಡು ಹೋಗಿ ಅವನ ಕುತ್ತಿಗೆಯ ಸುತ್ತ ಸುತ್ತಿಕೊಂಡು ಗಣೇಶನ ಪಾದಗಳಲ್ಲಿ ತಂದು ಹಾಕಿತು. ಆಗ ಕ್ರೋಂಚನು ಕ್ಷಮೆಯಾಚಿಸಿದಾಗ ಗಣೇಶನು ಕ್ಷಮೆ ನೀಡಿ ಅವನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡನು.

English summary

Why Lord Ganesha Rides A Mouse?

Ganesh Chaturthi is coming up and it happens to be one of the most awaited celebration of the year. The elephant headed God is revered in every Hindu household,
X
Desktop Bottom Promotion