For Quick Alerts
ALLOW NOTIFICATIONS  
For Daily Alerts

ರಕ್ಷಾಬಂಧನದ ಹಿಂದಿರುವ ಸುಂದರ ದಂತಕತೆಗಳಿವು

By Deepak M
|

ಆಗಸ್ಟ್ 3ಕ್ಕೆ ರಕ್ಷಾ ಬಂಧನ ಹಬ್ಬ. ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಇರುವ ಹಬ್ಬವೇ ರಕ್ಷಾ ಬಂಧನ. ಇವರ ನಡುವಿನ ಪ್ರೀತಿಯನ್ನು ಸಾರಲು ಇಲ್ಲಿ ರಾಖಿಯನ್ನು ಕಟ್ಟಲಾಗುತ್ತದೆ. ಮೂಲತಃ ರಾಖಿಯು ಒಂದು ದಾರದಿಂದ ಸಿದ್ಧಗೊಳ್ಳುತ್ತಿತ್ತು. ಆದರೆ ಇಂದು ಅದು ಒಂದು ವಿವಿಧ ಶೈಲಿಯ ವಿನ್ಯಾಸದ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಇಂದು ನಿಮ್ಮ ಭಾವನೆಗೆ ತಕ್ಕ ಹಾಗೆ ಆಧುನಿಕವಾದ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಿಮ್ಮ ಸೋದರ ನಿಜಕ್ಕು ನಿಮಗೆ ವಿಶೇಷವಾಗಿದ್ದರೆ, ಆತನಿಗಾಗಿ ಒಂದು ವಿಶೇಷವಾದ ರಾಖಿಯನ್ನು ಕೊಂಡುಕೊಳ್ಳಿ. ನಿಮಗೆ ಮಾರುಕಟ್ಟೆಯ ರಾಖಿಯು ಹಿಡಿಸದಿದ್ದಲ್ಲಿ, ನೀವೇ ಸ್ವತಃ ರಾಖಿಯನ್ನು ತಯಾರಿಸಿಕೊಳ್ಳಬಹುದು. ಇದು ಸರಳ ಮತ್ತು ಕಡಿಮೆ ಬೆಲೆಯು ಸಹ ಹೌದು. ಇದು ಎಷ್ಟು ಬೆಲೆ ಬಾಳುತ್ತದೆ ಎಂಬುದಕ್ಕಿಂತ, ನೀವು ತಯಾರಿಸಿದಿರಿ ಎಂಬ ಕಾರಣಕ್ಕೆ ನಿಮ್ಮ ಅಣ್ಣನ ಮುಖದಲ್ಲಿ ಇದು ಪ್ರೀತಿ ತುಂಬಿದ ಮುಗುಳ್ನಗೆಯನ್ನು ತರಿಸುವ ಸಾಮಾರ್ಥ್ಯವನ್ನು ಹೊಂದಿರುತ್ತದೆ.

ಪ್ರತಿ ವರ್ಷವು ನೀವು ನಿಮ್ಮ ಸೋದರನಿಗಾಗಿ ಹಲವಾರು ಅಂಗಡಿಗಳನ್ನು ಅಲೆದು ಅಲೆದು ಒಂದು ರಾಖಿಯನ್ನು ಖರೀದಿಸಿರಬಹುದು. ಆದರೆ ಈ ವರ್ಷ ಈ ರಾಖಿ ದಿನಕ್ಕಾಗಿ ನಿಮ್ಮ ಸೋದರನಿಗಾಗಿ ನೀವೇ ಸ್ವತಃ ರಕ್ಷಾ ಬಂಧನವನ್ನು ತಯಾರಿಸಿ. ಇದಕ್ಕಾಗಿ ಕೇವಲ 20 ನಿಮಿಷಗಳ ಕಾಲ ಮಾತ್ರ ತಗುಲುತ್ತದೆ. ನಿಮ್ಮ ಕೈಯಾರೆ ರಕ್ಷಾಬಂಧನವನ್ನು ತಯಾರಿಸುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ. ನಾವು ಇಂದು ಇಲ್ಲಿ ರಕ್ಷಾ ಬಂಧನದ ಇತಿಹಾಸವನ್ನು ನಿಮಗೆ ವಿವರಿಸುತ್ತಿದ್ದೇವೆ

ರಕ್ಷಾಬಂಧನದಲ್ಲಿ ಅಡಗಿದೆ ಹಲವಾರು ಪುರಾಣ ಕಥೆಗಳು

ರಾಖಿಯ ಕುರಿತಾದ ಪುರಾಣಗಳು ಮತ್ತು ದಂತಕತೆಗಳು

ರಾಖಿಯ ಕುರಿತಾದ ಪುರಾಣಗಳು ಮತ್ತು ದಂತಕತೆಗಳು

ರಕ್ಷಾಬಂಧನದ ಸುತ್ತ ಹಲವಾರು ಪುರಾಣಗಳು ಇವೆ. ಅದರಲ್ಲಿ ಒಂದು ಹೀಗಿದೆ:- ಒಮ್ಮೆ ಇಂದ್ರನ ಅಮರಾವತಿಯ ಮೇಲೆ ರಾಕ್ಷಸನೊಬ್ಬ ದಾಳಿ ಮಾಡಿದನಂತೆ. ಆಗ ಇಂದ್ರನ ಪತ್ನಿಯಾದ ಶಚಿ ದೇವಿಯು ಸಹಾಯಕ್ಕಾಗಿ ವಿಷ್ಣುವಿನ ಮೊರೆ ಹೋದಾಗ, ವಿಷ್ಣು ಶಚಿ ದೇವಿಗೆ ಒಂದು ಹತ್ತಿಯ ದಾರವನ್ನು ನೀಡಿ, ಅದನ್ನು ಆಕೆಯ ಗಂಡನ ಕೈಗೆ ಕಟ್ಟುವಂತೆ ಹೇಳಿದನಂತೆ. ಆಕೆಯು ಹಾಗೆಯೇ ಮಾಡಿದಾಗ, ಇಂದ್ರನು ಯುದ್ಧದಲ್ಲಿ ರಾಕ್ಷಸನನ್ನು ಸೋಲಿಸದನಂತೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು.

ರಾಖಿಯ ಕುರಿತಾದ ಪುರಾಣಗಳು ಮತ್ತು ದಂತಕತೆಗಳು

ರಾಖಿಯ ಕುರಿತಾದ ಪುರಾಣಗಳು ಮತ್ತು ದಂತಕತೆಗಳು

ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ.

ಇತಿಹಾಸದಲ್ಲಿ ರಾಖಿಯ ಕುರಿತಾದ ಉಲ್ಲೇಖಗಳು

ಇತಿಹಾಸದಲ್ಲಿ ರಾಖಿಯ ಕುರಿತಾದ ಉಲ್ಲೇಖಗಳು

ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸನಿಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.

ರಾಖಿಯ ಐತಿಹಾಸಿಕ ಉಲ್ಲೇಖಗಳು

ರಾಖಿಯ ಐತಿಹಾಸಿಕ ಉಲ್ಲೇಖಗಳು

ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯೂನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.

ಭಾರತದಾದ್ಯಂತ ರಕ್ಷಾ ಬಂಧನ

ಭಾರತದಾದ್ಯಂತ ರಕ್ಷಾ ಬಂಧನ

ರಕ್ಷಾ ಬಂಧನವನ್ನು ಆಚರಿಸುವ ರಾಖಿ ಪೂರ್ಣಿಮೆಯು ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ. ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಈ ದಿನವು ಅತ್ಯಂತ ಮಂಗಳಕರವೆಂದು ಪ್ರತೀತಿ.

ರಕ್ಷಾಬಂಧನದ ಮಹತ್ವ

ರಕ್ಷಾಬಂಧನದ ಮಹತ್ವ

ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ. ಈ ಹಬ್ಬವನ್ನು ಆಧ್ಯಾತ್ಮಿಕವಾಗಿ ನೋಡಿದರೆ, ಈ ಹಬ್ಬವು ನಡೆ, ನುಡಿ ಮತ್ತು ಕ್ರಿಯೆಗಳಲ್ಲಿ ಪರಿಶುದ್ಧತೆಯನ್ನು ಹೊಂದುವಂತೆ ಸೂಚಿಸುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತ ಇರುತ್ತದೆ. ಇನ್ನು ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗು ಶಕ್ತಿಯನ್ನು ಸೋದರನಿಗೆ ನೆನಪು ಮಾಡಿಕೊಡುತ್ತದೆ.

English summary

Why Is Rakshabandhan Celebrated?

Raksha Bandhan is a festival that celebrates the bond of love between brothers and sisters. The metaphorical bond is literally symbolised by a thread that we call the Rakhi.
X
Desktop Bottom Promotion