For Quick Alerts
ALLOW NOTIFICATIONS  
For Daily Alerts

ಪಿಂಡ ಪ್ರದಾನ ಕಾರ್ಯವನ್ನು 'ಗಯಾ'ದಲ್ಲಿ ಮಾಡಿದರೆ ಪಿತೃಗಳು ಸ್ವರ್ಗಕ್ಕೆ ಹೋಗುತ್ತಾರಂತೆ!

|

ಶ್ರಾದ್ಧವು ಸಪ್ಟೆಂಬರ್ 24 ರಿಂದ ಸಪ್ಟೆಂಬರ್ 25 ರವರೆಗೆ ಮುಂದುವರಿಯುತ್ತದೆ. ಮೃತರಾದ ಹಿರಿಯರ ಸದ್ಗತಿಗಾಗಿ ಶ್ರಾದ್ಧವನ್ನು ನಡೆಸಲಾಗುತ್ತದೆ. ಈ ಪದ್ಧತಿಯನ್ನು ನಡೆಸಲು ಪಿತೃ ಪಕ್ಷದ ದಿನಗಳನ್ನು ಆರಿಸಲಾಗುತ್ತದೆ. ಪೂರ್ಣಿಮೆಯಿಂದ ಹಿಡಿದು ಹದಿನೈದು ದಿನಗಳು ಮತ್ತು ಬಾದ್ರಪದ ಮಾಸದ ಅಮವಾಸ್ಯೆಯ ಅಶ್ವಿನ್ ಮಾಸವನ್ನು ಈ ಪದ್ಧತಿಯನ್ನು ನಡೆಸಲು ಹಾಗೂ ಹಿರಿಯರಿಗೆ ಅರ್ಪಿಸಲಾಗಿದೆ. ತಮ್ಮ ಹಿರಿಯರ ಕಾರ್ಯಗಳನ್ನು ನಡೆಸಲು ಹಿಂದೂಗಳು ಈ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

ಪಿಂಡ ದಾನ ಪದ್ಧತಿ ಎಂಬುದು ಪ್ರಧಾನವಾಗಿದ್ದು ವ್ಯಕ್ತಿಯು ಮೃತಪಟ್ಟು ಕೆಲವು ದಿನಗಳ ನಂತರ ಇದನ್ನು ಮಾಡಲಾಗುತ್ತದೆ, ಪಿತೃ ಪಕ್ಷದಲ್ಲಿ ಕೂಡ ಇದನ್ನು ನಡೆಸಬಹುದಾಗಿದೆ. ಈ ಪದ್ಧತಿಯನ್ನು ನಡೆಸಲು ಪವಿತ್ರ ನದಿ ತೀರವನ್ನು ಆಯ್ಕೆ ಮಾಡಲಾಗುತ್ತದೆ. ಗಯಾದಲ್ಲಿ ಹೆಚ್ಚಾಗಿ ಪಿಂಡ ಪ್ರಧಾನ ಕಾರ್ಯವನ್ನು ಮಾಡಲಾಗುತ್ತದೆ. ಇಂದಿನ ಲೇಖನದಲ್ಲಿ ಪಿಂಡ ಪ್ರಧಾನ ಕಾರ್ಯವನ್ನು ನಡೆಸಲು ಏಕೆ ಗಯಾವನ್ನು ಆಯ್ಕೆಮಾಡಲಾಗುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ಗಯಾಸುರನ ಕಥೆ

ಗಯಾಸುರನ ಕಥೆ

ಗಯಾಸುರ ಎಂಬ ಅಸುರನ ಹೆಸರನ್ನೇ ಈ ಸ್ಥಳಕ್ಕೆ ಇಡಲಾಗಿದೆ. ಭಸ್ಮಾಸುರನ ನಂತರ ಗಯಾಸುರ ಪಟ್ಟಕ್ಕೆ ಬರುತ್ತಾನೆ. ಬ್ರಹ್ಮನನ್ನು ಒಲಿಸಿಕೊಳ್ಳುವುದಕ್ಕಾಗಿ ಈತ ಕಠಿಣ ತಪಸ್ಸನ್ನು ಮಾಡುತ್ತಾನೆ. ಇವನ ತಪಸ್ಸನ್ನು ನೋಡಿ ಮೆಚ್ಚಿದ ಬ್ರಹ್ಮನು ವರವನ್ನು ಕೇಳಲು ಗಯಾಸುರನಿಗೆ ಹೇಳುತ್ತಾನೆ. ತಾನು ಕೂಡ ದೇವತೆಗಳಂತೆ ಕಳಂಕರ ರಹಿತನಾಗಿರಬೇಕು ಹಾಗೂ ಅವನ ಶರೀರದ ದೃಷ್ಟಿಯಿಂದ ಜನರು ತಮ್ಮ ಜೀವನದ ಹಿಂದಿನ ಪಾಪಗಳಿಂದ ಮುಕ್ತಗೊಳ್ಳಬೇಕು ಎಂದು ಬೇಡಿಕೊಳ್ಳುತ್ತಾನೆ. ಆದ್ದರಿಂದ, ಸ್ಥಳವು ನಿಧಾನವಾಗಿ ವಿಮೋಚನೆಯ ಸ್ಥಳವಾಗಿ ಪ್ರಾಮುಖ್ಯತೆಯನ್ನು ಗಳಿಸಿತು.

ವಿಮೋಚನೆಗಾಗಿ ಜನರು ಈ ಸ್ಥಳಕ್ಕೆ ಭೇಟಿ ನೀಡಲಾರಂಭಿಸಿದರು. ಇದರಿಂದ ಸಾವಿನ ನಂತರ ಯಮ ಲೋಕಕ್ಕೆ ಹೋಗುವ ಆತ್ಮಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದನ್ನು ನೋಡಿದ ಯಮರಾಜನು ಬ್ರಹ್ಮ ದೇವರಿಗೆ ಮೊರೆ ಹೋದರು, ರಾಕ್ಷಸನು ವಿಮೋಚನೆಗೆ ಕಾರಣವಾಗುವುದು ತಪ್ಪು ಎಂದು ಹೇಳುತ್ತಾರೆ. ಮತ್ತು ಇದು ದೇವರ ಭಕ್ತರನ್ನು ಬೇರೆಡೆಗೆ ತಿರುಗಿಸುತ್ತದೆ. ಹೀಗಾಗಿ, ಈ ವಿಷಯವನ್ನು ದೇವರುಗಳೊಂದಿಗೆ ಚರ್ಚಿಸಿ ಪರಿಹಾರವನ್ನು ಕಂಡುಹಿಡಿಯಲಾಯಿತು.

Most Read: ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

ಯಜ್ಞವನ್ನು ನಡೆಸಲಾಯಿತು

ಯಜ್ಞವನ್ನು ನಡೆಸಲಾಯಿತು

ಗಯಾಸುರನಿಗೆ ತಿಳಿಯದಂತೆ ದೇವತೆಗಳೆಲ್ಲರೂ ಸೇರಿ ಯಜ್ಞವನ್ನು ನಡೆಸಲು ಆರಂಭಿಸಿದರು. ಇದಕ್ಕೆ ಗಯಾಸುರ ಒಪ್ಪುತ್ತಾನೆ. ಹೀಗೆ ದೇವತೆಗಳು ಯಜ್ಞವನ್ನು ನಡೆಸುತ್ತಾರೆ ಮತ್ತು ವಿಷ್ಣುವು ಅಸುರನಿಗೆ ವರವನ್ನು ನೀಡುತ್ತಾರೆ.

ರಾಜ ದಶರಥನ ಪಿಂಡ ದಾನವನ್ನು ಗಯಾದಲ್ಲಿ ನಡೆಸಲಾಯಿತು

ರಾಜ ದಶರಥನ ಪಿಂಡ ದಾನವನ್ನು ಗಯಾದಲ್ಲಿ ನಡೆಸಲಾಯಿತು

ರಾಮನ ಪಿತನಾದ ದಶರಥನ ಪಿಂಡ ಪ್ರದಾನ ಕಾರ್ಯವನ್ನು ಗಯಾದಲ್ಲಿ ನಡೆಸಲಾಗಿತ್ತು. ಈಗ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯ ರಾಜನಾಗಿ ದಶರಥನು ರಾಜ್ಯವನ್ನು ಆಳುತ್ತಿದ್ದರು. ಅವರ ಪುತ್ರನಾದ ರಾಮನು ತಮ್ಮ ನ್ಯಾಯಯುತವಾದ ಆಡಳಿತ ಮತ್ತು ಸತ್ಯತೆಗೆ ಬದ್ಧರಾಗಿದ್ದರು. ದಶರಥ ಮರಣ ಹೊಂದಿದ ನಂತರ, ಅವರ ಪಿಂಡ ಪ್ರದಾನ ಕಾರ್ಯವನ್ನು ರಾಮ ಮತ್ತು ಅವರ ಪತ್ನಿ ಸೀತಾ ಮಾತೆಯು ಗಯಾದಲ್ಲಿ ನಡೆಸಿದರು. ತದನಂತರ ಈ ಸ್ಥಳವನ್ನು ಪಿಂಡ ದಾನಕ್ಕಾಗಿ ಆಯ್ಕೆಮಾಡಲಾಯಿತು.

Most Read: ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ಪಿತೃ ದೇವನಾಗಿ ವಿಷ್ಣು

ಪಿತೃ ದೇವನಾಗಿ ವಿಷ್ಣು

ಮನುಷ್ಯನ ಜೀವನ ಮತ್ತು ಮರಣದಿಂದ ಮುಕ್ತಿಯನ್ನು ನೀಡುವವರು ವಿಷ್ಣುವಾಗಿದ್ದಾರೆ. ಜೀವನದ ದುಃಖ ಮತ್ತು ಯಾತನೆಗಳಿಂದ ಸ್ವತಂತ್ರವನ್ನು ನೀಡುವುದು. ದೇವರಿಗೆ ನಾವು ಹೇಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆಯೋ ಅಂತೆಯೇ ಹಿರಿಯರು ಪಿತೃಗಳಾಗಿ ಅವರು ಪಿಂಡವನ್ನು ಅರ್ಪಿಸುವ ಮೂಲಕ ನಾವು ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. (ಅದಾಗ್ಯೂ ಅವರ ಫೋಟೋಗಳನ್ನು ದೇವರ ಸಮೀಪ ಇರಿಸುವುದಿಲ್ಲ). ಈ ಸ್ಥಳದಲ್ಲಿ ಸ್ವಯಂ ವಿಷ್ಣುವೇ ಪಿತೃ ದೇವರಾಗಿ ಸ್ಥಾಪನೆಗೊಂಡಿದ್ದಾರೆ.

Most Read:ಈ ಗ್ರಾಮದಲ್ಲಿ ಮನುಷ್ಯರು ಮತ್ತು ಪಕ್ಷಿಗಳಿಗೆ ಕಣ್ಣುಗಳೇ ಕಾಣಿಸುವುದಿಲ್ಲವಂತೆ!

ಮರಣದ ನಂತರ ಸ್ವರ್ಗಕ್ಕೆ ಹೋಗಲು ಬಯಸುವವರಿಗೆ ಈ ಸ್ಥಳ ಪವಿತ್ರವಾದುದು

ಮರಣದ ನಂತರ ಸ್ವರ್ಗಕ್ಕೆ ಹೋಗಲು ಬಯಸುವವರಿಗೆ ಈ ಸ್ಥಳ ಪವಿತ್ರವಾದುದು

ಪಿತೃ ಲೋಕದಲ್ಲಿ ಹಿರಿಯರು ಸ್ವತಃ ಆಹಾರವನ್ನು ತಾವೇ ಸೇವಿಸಲಾರರು. ಆದ್ದರಿಂದ ಭೂಮಿಯಲ್ಲಿರುವ ಅವರ ಮಕ್ಕಳು ಅವರಿಗೆ ಆಹಾರವನ್ನು ಉಣಬಡಿಸಬೇಕು. ಇದರ ಸಲುವಾಗಿಯೇ ಅವರ ಜೀವಿತಾವಧಿಯಲ್ಲಿ ಕರ್ಮಗಳನ್ನು ನಡೆಸಲಾಗುತ್ತದೆ. ಪತೃಗಳು ಸ್ವರ್ಗಕ್ಕೆ ಹೋಗಲಿ ಎಂಬ ಆಶಯವನ್ನಿಟ್ಟುಕೊಂಡೇ ಅವರಿಗೆ ಪಿಂಡ ಪ್ರಧಾನವನ್ನು ನಡೆಸಲಾಗುತ್ತದೆ. ಗಯಾದಲ್ಲಿ ಈ ಕಾರ್ಯವನ್ನು ಮಾಡುವುದರಿಂದ ಪಿತೃಗಳು ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಂಬಲಾಗಿದೆ.

English summary

Why Is Pind Daan Performed In Gaya?

Shradh has begun from September 24 and will continue till September 25. Shradh refers to that ritual which is performed in memory of the long-dead ancestors. The Pitra Paksha days are chosen for this ritual. The fifteen days from the Purnima of the Bhadrapad month to the Amavasya of the Ashvin month are dedicated to the ancestors. Hindus have to perform these rituals as a duty towards their ancestors.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more