For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮ: ಸಾವಿನ ಬಳಿಕ ಕೇಶ ಮುಂಡನ ಮಾಡುವುದು ಯಾಕೆ?

By Manu
|

ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ವಿವಿಧ ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ. ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...

ಅದರಲ್ಲೂ ಮನೆಯಲ್ಲಿ ಯಾರಾದರೂ ಹಿರಿಯರು ಸಾವನ್ನಪ್ಪಿದರೆ ಕಿರಿಯರು ತಲೆಬೋಳಿಸಿಕೊಳ್ಳುವ ಸಂಪ್ರದಾಯವು ಇದೆ. ಹಿಂದಿನ ಕಾಲದಲ್ಲಿ ಪತಿ ಸಾವನ್ನಪ್ಪಿದರೆ ಪತ್ನಿಯ ತಲೆ ಬೋಳಿಸಲಾಗುತ್ತಿತ್ತು. ಆದರೆ ಆ ಕೆಟ್ಟ ಪದ್ಧತಿಯನ್ನು ಇಂದಿನ ದಿನಗಳಲ್ಲಿ ಅನುಸರಿಸಲಾಗುತ್ತಿಲ್ಲ. ತಂದೆ ಅಥವಾ ತಾಯಿ ಸಾವನ್ನಪ್ಪಿದರೆ, ಸಹೋದರ ಅಥವಾ ಸಹೋದರಿ ಸಾವನ್ನಪ್ಪಿದರೆ ಮಗ ಅಥವಾ ಅವರಿಗೆ ಸಂಬಂಧಪಟ್ಟವರು ತಲೆ ಬೋಳಿಸುವ ಪದ್ಧತಿ ಈಗಲೂ ಇದೆ. ಇದು ಯಾಕೆಂದು ತಿಳಿಯಲು ಈ ಲೇಖನವನ್ನು ಮುಂದಕ್ಕೆ ಓದುತ್ತಾ ಸಾಗಿ...

ಸಾವಿನ ಬಳಿಕ ಮುಂಡನ ಮಾಡುವುದು ಯಾಕೆ?

ಸಾವಿನ ಬಳಿಕ ಮುಂಡನ ಮಾಡುವುದು ಯಾಕೆ?

ಪತಿ ಸಾವಿನಿಂದ ವಿಧವೆಯಾಗುವ ಮಹಿಳೆಯ ತಲೆಯನ್ನು ಬೋಳಿಸಿ ಮುಂಡನ ನಡೆಸಲಾಗುತ್ತದೆ. ಈ ಮುಂಡನವು ಜೀವಮಾನಪೂರ್ತಿ ಉಳಿದಿರುತ್ತದೆ ಮತ್ತು ವಿಧವೆಯರು ಕೂದಲು ಬೆಳೆಸುವುದಿಲ್ಲ. ಮೇಲ್ಜಾತಿಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಪುರುಷರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಕೆಲವೇ ಸಮಯದಲ್ಲಿ ಕೂದಲು ಬೆಳೆಯುತ್ತದೆ.

ಶುದ್ಧೀಕರಣ ವೃತ

ಶುದ್ಧೀಕರಣ ವೃತ

ಹಿರಿಯರು ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ಮತ್ತು ಇತರ ವಿಧಿವಿಧಾನಗಳನ್ನು ಮಾಡುವವರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ಶುದ್ಧೀಕರಣ ವ್ರತವಾಗಿದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಸತ್ತವರಿಗೆ ಮಾಡುವ ಅಂತಿಮ ವೃತವಾಗಿದೆ.

ಅಹಂ ತ್ಯಜಿಸುವುದು

ಅಹಂ ತ್ಯಜಿಸುವುದು

ಮನೆಯಲ್ಲಿನ ಪುರುಷರು ತಲೆಬೋಳಿಸಿಕೊಳ್ಳುವುದು ಅವರು ತಮ್ಮ ಅಹಂ ಬಿಟ್ಟ ಸಂಕೇತವಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಅವರಿಂದ ಬಿಡುವಾದ ಜಾಗವನ್ನು ತುಂಬುವಾಗ ವ್ಯಕ್ತಿಯಲ್ಲಿ ಅಹಂ ಬರಬಹುದು ಮತ್ತು ಇದನ್ನು ಬಿಟ್ಟು ಮನೆಯವರೊಂದಿಗೆ ಒಳ್ಳೆಯ ರೀತಿಯಿಂದ ನಡೆದುಕೊಳ್ಳಬೇಕೆನ್ನುವ ಸಂಕೇತವೇ ಈ ಮುಂಡನ

ಶೋಕದ ಸಂಕೇತ

ಶೋಕದ ಸಂಕೇತ

ಕುಟುಂಬದಲ್ಲಿ ದುಃಖದ ಘಟನೆ ನಡೆದಿದೆ ಮತ್ತು ನಾವು ಶೋಕದಲ್ಲಿ ಇದ್ದೇವೆ ಎನ್ನುವುದನ್ನು ಸೂಚಿಸಲು ಮುಂಡನ ಮಾಡಲಾಗುತ್ತದೆ. ಪರಿಚಯಸ್ಥರು ಶೋಕದಲ್ಲಿರುವ ವ್ಯಕ್ತಿಯೊಂದಿಗೆ ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.

ಪ್ರತೀಕಾರದ ಸಿದ್ಧಾಂತ ಬಿಡುವುದು

ಪ್ರತೀಕಾರದ ಸಿದ್ಧಾಂತ ಬಿಡುವುದು

ಕೂದಲು ಪ್ರತೀಕಾರದ ಸಿದ್ಧಾಂತವನ್ನು ತ್ಯಜಿಸುವುದರ ಸಂಕೇತವಾಗಿದೆ. ತಾತ್ಸಾರ ಭಾವನೆಯನ್ನು ಬಿಟ್ಟು ಸತ್ತವರು ಬಿಟ್ಟು ಹೋಗಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದೇ ಮುಂಡನದ ಉದ್ದೇಶವಾಗಿದೆ.

ಧನಾತ್ಮಕ ಶಕ್ತಿ

ಧನಾತ್ಮಕ ಶಕ್ತಿ

ದುಃಖದಿಂದ ಯಾವಾಗಲೂ ನಕಾರಾತ್ಮಕತೆ ಆವರಿಸುತ್ತದೆ. ಕೂದಲು ಬೋಳಿಸಿಕೊಂಡು ಹೊಸ ಜೀವನಕ್ಕೆ ತಯಾರಾಗುವುದು, ಅಂತಿಮ ಕ್ರಿಯೆಗಳಿಗೆ ಧನಾತ್ಮಕವಾಗಿ ತಯಾರಾಗುವುದು ಮತ್ತು ಬದ್ಧತೆ ಹಾಗೂ ಏಕಾಗ್ರತೆಯಿಂದ ಇದನ್ನು ಪೂರೈಸುವುದು ಮುಂಡನದ ಉದ್ದೇಶವಾಗಿದೆ.

ಬೇರ್ಪಡುವಿಕೆ ಮತ್ತು ವೈರಾಗ್ಯ ಹೆಚ್ಚಿಸುವುದು

ಬೇರ್ಪಡುವಿಕೆ ಮತ್ತು ವೈರಾಗ್ಯ ಹೆಚ್ಚಿಸುವುದು

ತುಂಬಾ ಪ್ರೀತಿಪಾತ್ರರು ಮತ್ತು ಮನಸ್ಸಿಗೆ ಹತ್ತಿರವಾಗಿರುವವರು ಸಾವನ್ನಪ್ಪಿದರೆ ಆಗ ಭಾವನಾತ್ಮಕವಾಗಿ ಪರಿಣಾಮ ಉಂಟಾಗುತ್ತದೆ. ಇದುವರೆಗೆ ಹಿರಿಯರಿಂದ ಸಿಗುತ್ತಿದ್ದ ಮಾರ್ಗದರ್ಶನ ಮತ್ತು ಸಲಹೆಗಳು ಇನ್ನು ಸಿಗುವುದಿಲ್ಲವೆನ್ನುವ ನೋವು ಇರುತ್ತದೆ. ವೈರಾಗ್ಯವನ್ನು ಬಿಟ್ಟು ಜೀವನಕ್ಕೆ ತಯಾರಾಗಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.

ಗೌರವದ ಸಂಕೇತ

ಗೌರವದ ಸಂಕೇತ

ಸತ್ತವರಿಗೆ ಗೌರವ ಸೂಚಕವಾಗಿಯೂ ಮುಂಡನ ಮಾಡಲಾಗುತ್ತದೆ. ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಪ್ರೀತಿಯಿಂದ ಇದ್ದು, ಕಿರಿಯರಿಗೆ ಮಾರ್ಗದರ್ಶನ ನೀಡಿ ಮುಂದಿನ ಜೀವನಕ್ಕೆ ಬೇಕಾಗುವ ದಾರಿಯನ್ನು ಮಾಡಿರುವ ಹಿರಿಯರು ಸಾವನ್ನಪ್ಪಿದಾಗ ಅವರಿಗೆ ಗೌರವ ಸೂಚಕವಾಗಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಉದ್ದೇಶದಿಂದ ಮುಂಡನ ಮಾಡಲಾಗುತ್ತದೆ.

English summary

Why Is Mundan Done After Death in Hindus

Mundan or shaving the head is one of the most prominent rituals observed in Hinduism after the death of the elderly family members. Though this ritual is fast disappearing in most Hindu communities, a few communities still hold on to this practice firmly till date. We can cite several reasons as to why this is advocated after death.
X
Desktop Bottom Promotion