For Quick Alerts
ALLOW NOTIFICATIONS  
For Daily Alerts

ಮೊಹರಂ 2019 ವಿಶೇಷ: ವೀರಾಧಿವೀರ ಹುಸೇನ್‌ನ ರೋಚಕ ಕಥೆ

By Arshad
|

ಇಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಥಮ ತಿಂಗಳೇ ಮೊಹರಂ ಅಥವಾ ಮುಹರ್ರಮ್. ಚಂದ್ರನ ಚಲನೆಯನ್ನು ಆಧರಿಸಿರುವ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರ ಮಾಸಗಳೆಂದು ನಂಬಲಾಗಿದೆ.

2019ರಲ್ಲಿ ಸೆಪ್ಟೆಂಬರ್ 10ರಂದು ಮೊಹರಂನ ಕಡೇ ದಿನವನ್ನು ಆಚರಣೆ ಮಾಡಲಾಗುತ್ತಿದೆ. ರಜಜ್ (ಏಳನೆಯ ಮಾಸ), ಬಳಿಕ ಮೂರು ಸತತ ತಿಂಗಳುಗಳಾದ ದುಲ್ ಖಾಯ್ದಾ (ಹನ್ನೊಂದನೇ ತಿಂಗಳು), ದುಲ್ ಹಜ್ಜ್ (ಹನ್ನೆರಡನೇ ತಿಂಗಳು) ಮತ್ತು ಮೊಹರಂ (ಮುಂದಿನ ವರ್ಷದ ಮೊದಲನೇ ತಿಂಗಳು) ಮೊಹರಂ ಎಂರೆ ಅರೇಬಿಕ್ ಭಾಷೆಯಲ್ಲಿ 'ನಿಷೇಧ' ಎಂಬ ಅರ್ಧ ಬರುತ್ತದೆ.

Muharram

ವಾಸ್ತವವಾಗಿ ಈ ಪದ ಅರೇಬಿಕ್ ಪದವಾದ 'ಹರಾಂ' ಅಂದರೆ ಪಾಪದಿಂದ ಕೂಡಿದ ಎಂಬ ಪದದಿಂದ ಉದ್ಭವವಾಗಿದೆ. ಅಲ್ಲದೇ ಈ ತಿಂಗಳಲ್ಲಿಯೇ ಪ್ರವಾದಿ ಮೊಹಮ್ಮದರ ಮೊಮ್ಮಗನಾದ ಹುನೇನ್‌ರನ್ನು ಕ್ರಿ. ಶ 680ರ ಕರ್ಬಲಾ ಯುದ್ಧದಲ್ಲಿ ಕುಟುಂಬ ಸಹಿತ ಕೊಲ್ಲಲಾಗಿತ್ತು. ಆದ್ದರಿಂದ ಈ ತಿಂಗಳನ್ನು ವಿಶ್ವದಾದ್ಯಂತ ಮುಸ್ಲಿಮರು ಹುತಾತ್ಮರಾದ ಹುಸೇನ್ ರ ಸ್ಮರಣಾರ್ಥವಾಗಿ ಆಚರಿಸುತ್ತಾರೆ.

ಕರ್ಬಲಾದ ಯುದ್ಧ ಮೊಹರಂ ಒಂದರಿಂದ ಪ್ರಾರಂಭಗೊಂಡು ಸತತವಾಗಿ ಹತ್ತು ದಿನಗಳವರೆಗೆ ನಡೆಯುತ್ತದೆ. ಈ ಹತ್ತು ದಿನಗಳ ಅವಧಿಗೆ 'ಅಷುರಾ' ಎಂದು ಕರೆಯಲಾಗುತ್ತದೆ. ಅಷ್ರಃ ಎಂದರೆ ಅರೇಬಿಕ್ ನಲ್ಲಿ ಹತ್ತು. ಹತ್ತು ದಿನಗಳ ಯುದ್ಧಕ್ಕೆ ಅಷುರಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಮೊಹರಂ ಮೊದಲ ದಿನ ನವವರ್ಷದ ಮೊದಲ ದಿನವಾಗಿದ್ದರೆ ಹತ್ತನೆಯ ದಿನ ಅಷುರಾ ದಿನವಾಗಿ ಮುಸ್ಲಿಮರಿಗೆ ಪವಿತ್ರವಾದ ದಿನವಾಗಿದೆ. ಅದರಲ್ಲೂ ಷಿಯಾ ಪಂಗಡಕ್ಕೆ ಸೇರಿದವರಿಗೆ ಈ ದಿನಗಳು ಅತ್ಯಂತ ಮಹತ್ವದ್ದಾಗಿವೆ. ಕರ್ಬಲಾ ಯುದ್ಧದ ಒಂಬತ್ತನೆಯ ದಿನ ಮತ್ತು ಹುಸೇನ್ ರ ಹತ್ಯೆಯಾದ ಹತ್ತನೆಯ ದಿನದಗಳನ್ನು ಉಪವಾಸದ ಮೂಲಕ ಆಚರಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ ಮುಂದೆ ಓದಿ

why is muharram observed

Courtesy: Mr. Syed Belal Jafri

ಹುಸೇನ್ ಅಂದರೆ ಯಾರು?

ಹುಸೇನ್ ಇಬ್ನ್ ಅಲಿಯವರು ಪ್ರವಾದಿ ಮೊಹಮ್ಮದರ ಮೊಮ್ಮಗನಾಗಿದ್ದರು. ಕ್ರಿ. ಶ 620ರಲ್ಲಿ ಜನಿಸಿದ ಅವರು ತಮ್ಮ ಅಜ್ಜನ ಆರೈಕೆಯಲ್ಲಿ ಬೆಳೆದರು. ಇಸ್ಲಾಂ ಧರ್ಮಗ್ರಂಥಗಳ ಪ್ರಕಾರ ಈ ಜಗತ್ತಿನಲ್ಲಿ ಹಲವಾರು ಪ್ರವಾದಿಗಳು ಬಂದು ಹೋಗಿದ್ದು ಅದರಲ್ಲಿ ಪ್ರವಾದಿ ಮೊಹಮ್ಮದರು ಕಡೆಯವರಾಗಿದ್ದಾರೆ. ಅಜ್ಜನ ಗುಣಗಳನ್ನು ಮೈಗೂಡಿಸಿಕೊಂಡ ಹುಸೇನ್ ಅಲ್ಪಕಾಲದಲ್ಲಿಯೇ ಅತ್ಯಂತ ಸಹಾನುಭೂತಿಯುಳ್ಳ ವ್ಯಕ್ತಿ ಎಂದು ಎಲ್ಲರಿಂದ ಗುರುತಿಸಲ್ಪಡುತ್ತಾರೆ. ಅವರ ಬುಡಕಟ್ಟಿನ ಯುವರಾಜನಾಗಿದ್ದರೂ ಜನಸಾಮಾನ್ಯರೊಡನೆ ಸುಲಭವಾಗಿ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕಾರಣ ಬೇಗನೇ ಎಲ್ಲರ ಮನಗೆಲ್ಲುತ್ತಾರೆ. ಆದರೆ ಅವರ ಸಹೋದರ ಹಸನ್ ರವರು ಸಮಾಜದ ದಮನಿತರ ಮತ್ತು ತುಳಿತಕ್ಕೊಳಗಾದವರ ನೆರವಿಗೆ ಬರಲು ಸಮಾಜದ ಕಟ್ಟಳೆಗಳನ್ನೇ ಮುರಿಯುತ್ತಾರೆ. ಇದೇ ಕಾರಣಕ್ಕೆ ಹುಸೇನ್ ರನ್ನು ಇಸ್ಲಾಮಿಕ್ ಇತಿಹಾಸದಲ್ಲಿ ಓರ್ವ ಪ್ರಮುಖ ನೇತಾರನೆಂದು ಗುರುತಿಸಲಾಗುತ್ತದೆ.

ಕರ್ಬಲಾದ ಯುದ್ಧ

ಇಂದಿನ ಇರಾಕ್ ನಲ್ಲಿರುವ ಕರ್ಬಲಾ ಆ ಕಾಲದಲ್ಲಿ ಆಧುನಿಕ ಪಟ್ಟಣವಾಗಿತ್ತು. ಪ್ರವಾದಿ ಮೊಹಮ್ಮದರು ವಿಧಿವಶರಾದ ಬಳಿಕ ಇಸ್ಲಾಮಿಕ್ ಜಗತ್ತಿನ ಬಹುತೇಕ ಭಾಗ ಅಂದಿನ ಆಡಳಿತಗಾರ ಮತ್ತು ಪೀಡಕನಾಗಿದ ಯಾಜಿದ್ ರಿಗೆ ಸೇರುತ್ತದೆ. ಅಧಿಕಾರ ಕೈಗೆ ಬಂದಿದ್ದೇ ತಡ ಯಾಜಿದ್ ರ ಕ್ರೌರ್ಯ ಎಲ್ಲಾ ಮಿತಿಗಳನ್ನು ಮೀರುತ್ತದೆ. ಜನಸಾಮಾನ್ಯರಿಗೆ ಬದುಕಲು ಬಿಡದೇ ಅನಾಚಾರ ಎಲ್ಲೆಡೆ ತಾಂಡವವಾಡುತ್ತದೆ. ಈ ಕ್ರೌರ್ಯವನ್ನು ವಿರೋಧಿಸಿದ ಹುಸೇನ್ ಯಾಜಿದ್ ರ ಎದುರು ನಿಲ್ಲುತ್ತಾರೆ. ಹುಸೇನ್ ರ ಬೆಂಬಲಕ್ಕೆ ಇದ್ದ ಕೇವಲ ಎಪ್ಪತ್ತೆರಡು ಬೆಂಬಲಿಗರು ಯಾಜಿದ್‌ನ ಮೂವತ್ತು ಸಾವಿರ ಸುಸಜ್ಜಿತ ಸೈನಿಕರ ತುಕಡಿಗೆ ಯಾವುದೇ ಸವಾಲೇ ಅಲ್ಲ. ಆದರೂ ಹತ್ತು ದಿನಗಳ ಕಾಲ ವೀರಾವೇಶದಿಂದ ಹೋರಾಡಿ ಹತ್ತನೆಯ ದಿನ ಹುತಾತ್ಮರಾಗುತ್ತಾರೆ. ತಮ್ಮ ಜನರಿಗಾಗಿ ಸಾವಿಗೂ ಹೆದರದೇ ಚಕ್ರವರ್ತಿಯ ಭಾರಿ ಪಡೆಗೆ ಎದುರಾಗಿ ನಿಂತು ಹೋರಾಡಿ ವೀರಮರಣವನ್ನಪ್ಪಿದ ಹುಸೇನ್‌ರ ತ್ಯಾಗವನ್ನು ಇಂದಿಗೂ ಮೊಹರಂ ಆಚರಣೆಯ ಮೂಲಕ ಸ್ಮರಿಸಲಾಗುತ್ತದೆ.

Muharram

ಮೊಹರಂ ಮಹತ್ವ

ಅನ್ಯಾಯದ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ತೆತ್ತ ಹುಸೇನ್ ಇಬ್ನ್ ಅಲಿಯವರ ಸ್ಮರಣಾರ್ಥ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಇಡಿಯ ತಿಂಗಳು ಷಿಯಾ ಪಂಗಡದ ಮುಸ್ಲಿಮರು ಶೋಕವನ್ನು ಆಚರಿಸುತ್ತಾರೆ. ಈ ತಿಂಗಳಲ್ಲಿ ಯಾವುದೇ ಸಂಭ್ರಮ ಅಥವಾ ಪ್ರಮುಖ ಕಾರ್ಯಗಳನ್ನು ಆಚರಿಸಲಾಗುವುದಿಲ್ಲ. ಕೇವಲ ಷಿಯಾ ಪಂಗಡವಲ್ಲ, ಇಡಿಯ ಮುಸ್ಲಿಂ ಸಮುದಾಯದಲ್ಲಿಯೇ ಈ ತಿಂಗಳಲ್ಲಿ ಯಾವುದೇ ಪ್ರಮುಖವಾದ ಕಾರ್ಯವನ್ನು, ವಿಶೇಷವಾಗಿ ಹೆಚ್ಚಿನ ಖರ್ಚುವೆಚ್ಚದ ಮತ್ತು ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮಗಳನ್ನು ಆದಷ್ಟೂ ತಡೆಹಿಡಿಯಲಾಗುತ್ತದೆ.

ಕರ್ಬಲಾ ಯುದ್ಧವನ್ನು ಕೆಲವೆಡೆ ನಾಟಕರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಯುದ್ಧದ ಸಲಕರಣೆಗಳನ್ನು ಸಾಂಕೇತಿಕ ರೂಪದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಕೆಲವೆಡೆ ತಮ್ಮನ್ನು ತಾವೇ ಹೊಡೆದುಕೊಂಡು ಶಿಕ್ಷಿಸಿಕೊಳ್ಳುವ ಪ್ರಕ್ರಿಯೆಯೂ ಕಂಡುಬರುತ್ತದೆ. ಆದರೆ ಈ ರೀತಿಯಾಗಿ ಶಿಕ್ಷಿಸಿಕೊಳ್ಳುವುದಕ್ಕೆ ಇಸ್ಲಾಂನಲ್ಲಿ ಯಾವುದೇ ಸಮರ್ಥನೆಯಿಲ್ಲ. ಕೇವಲ ತಮ್ಮ ಸಂತೋಷಕ್ಕಾಗಿ ಹಿಂದಿನವರು ಆಚರಿಸಿಕೊಂಡು ಬಂದಿದ್ದನ್ನೇ ಅವರ ಪೀಳಿಗೆಯವರು ಆಚರಿಸಿಕೊಂಡು ಬಂದಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಕರ್ಬಲಾ ಯುದ್ಧದ ಬಳಿಕ ಏನಾಯಿತು?

ಯುದ್ಧದಲ್ಲಿ ಹುಸೇನ್‌ರ ಸಾವಿನ ಬಳಿಕ ಸುದ್ದಿಯನ್ನು ಜುಹೇರ್ ಬಿನ್ ಖೈಸ್ (ZUHAIR BIN QAIS) ಎಂಬುವರು ಯಾಜಿದ್ ರಿಗೆ ಮುಟ್ಟಿಸುತ್ತಾರೆ. ತಮ್ಮ ಸೈನ್ಯದ ಮುಂದೆ ಸತ್ಯಕ್ಕಾಗಿ ಸಾವಿಗೆ ಎದೆಯೊಡ್ಡಿ ಹುತಾತ್ಮರಾದ ಹುಸೇನ್‌ರ ಬಗ್ಗೆ ಅರಿವಾದೊಡನೆಯೇ ಯಾಜಿದ್‌ರಿಗೆ ತಮ್ಮ ತಪ್ಪಿನ ಅರಿವಾಗತೊಡಗುತ್ತದೆ. ಅಲ್ಲಾಹನಲ್ಲಿ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿ ಕರ್ಬಲಾ ಯುದ್ಧದಲ್ಲಿ ಉಳಿದಿದ್ದ ಹುಸೇನ್‌ರ ಇತರ ಅನುಯಾಯಿಗಳನ್ನು ಸೆರೆಯಿಂದ ಮುಕ್ತಿ ನೀಡಿ ತಮ್ಮ ಕೌರ್ಯವನ್ನು ಕೊನೆಗೊಳಿಸುವುದಾಗಿ ಘೋಷಿಸುತ್ತಾರೆ. ಅದೇ ಕ್ಷಣದಲ್ಲಿ ಪ್ರವಾದಿ ಮೊಹಮ್ಮದರ ಅನುಯಾಯಿಯಾಗಿ ಮುಸ್ಲಿಮರಾಗಿ ಪರಿವರ್ತನೆಗೊಳ್ಳುತ್ತಾರೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Why is muharram observed

Muharram is the first month of the Islamic calendar. According to Islamic beliefs, it is one of the four sacred months of the year. The word 'Muharram' means 'forbidden'. The word is basically derived from 'haram' which means sinful. The month of Muharram is considered sacred because in this month Hussain, the grandson of Prophet Mohammed was brutally massacred along with His family in Karbala in the year 680 CE
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X