For Quick Alerts
ALLOW NOTIFICATIONS  
For Daily Alerts

ಗುಪ್ತ ನವರಾತ್ರಿಯನ್ನು ರಹಸ್ಯವಾಗಿ ಆಚರಿಸಬೇಕಂತೆ! ಯಾಕೆ ಗೊತ್ತೇ?

|

ನವರಾತ್ರಿಯ ಆಚರಣೆಯು ದೇಶದಾದ್ಯಂತ ವಿಶೇಷ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿಯ ಆರಾಧನೆಗೆ ಮೀಸಲಾಗಿರುವ ಈ ಆಚರಣೆಯು ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯಲ್ಲಿ ಇರುತ್ತದೆಯಾದರೂ ಆರಾಧನೆಯ ಉದ್ದೇಶ ಹಾಗೂ ಹಿನ್ನೆಲೆಗಳು ಒಂದೇ. ಒಂಬತ್ತು ದಿನಗಳ ಕಾಲ ದೇವಿಯ ಒಂದೊಂದು ಅವತಾರಗಳಿಗೆ ಮೀಸಲಾಗಿರುತ್ತದೆ. ಆಯಾ ದಿನಗಳಿಗೆ ಅನುಗುಣವಾಗಿ ಆರಾಧನೆ ಹಾಗೂ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.

Why is Gupt Navratri celebrated secretly?

ಹಿಂದೂ ಧರ್ಮದ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ನವರಾತ್ರಿಯ ಆಚರಣೆಯಿಂದ ವ್ಯಕ್ತಿ ಜೀವನದಲ್ಲಿ ಯಶಸ್ಸು ಹಾಗೂ ಸಂಭ್ರಮವನ್ನು ಪಡೆದುಕೊಳ್ಳುತ್ತಾನೆ. ಅಲ್ಲದೆ ಕುಟುಂಬವು ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ನವರಾತ್ರಿಗೆ ಸಂಬಂಧಿಸಿದ ಗುಪ್ತ ನವರಾತ್ರಿಯು ಬಹಳ ಶ್ರೇಷ್ಠವಾದ ಆಚರಣೆ ಎಂದು ಹೇಳಲಾಗುತ್ತದೆ. ಇದನ್ನು ಗುಪ್ತವಾಗಿ ಆಚರಿಸುತ್ತಾರೆ ಎಂದು ಸಹ ಹೇಳಲಾಗುವುದು. ಗುಪ್ತ ನವರಾತ್ರಿಯ ಕುರಿತು ಇನ್ನಷ್ಟು ಮಾಹಿತಿ ಹಾಗೂ ಅದರಿಂದ ಉಂಟಾಗುವ ಪ್ರಭಾವಗಳ ಕುರಿತು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಗುಪ್ತ ನವರಾತ್ರಿ

ಗುಪ್ತ ನವರಾತ್ರಿ

ನವರಾತ್ರಿಗಳು ಮೂರು ತಿಂಗಳಿಗೊಮ್ಮೆ ಬರುತ್ತವೆ. ಅಶ್ವಿನ್ ಮತ್ತು ಚೈತ್ರದ ತಿಂಗಳಲ್ಲಿ ಎರಡು ನವರಾತ್ರಿ ಬರುತ್ತವೆ. ಅವುಗಳನ್ನು ಪ್ರತ್ಯಕ್ಷ ಅಥವಾ ಮುಕ್ತ ನವರಾತ್ರಿ ಎಂದು ಕರೆಯುತ್ತಾರೆ. ಉಳಿದ ಎರಡು ನವರಾತ್ರಿಯು ಮಾಘ ಮತ್ತು ಆಷಾಢ ಮಾಸದಲ್ಲಿ ಬರುತ್ತವೆ. ಅದನ್ನು ಗುಪ್ತ ನವರಾತ್ರಿ ಎಂದು ಕರೆಯುತ್ತಾರೆ.

ದುರ್ಗಾ ದೇವಿಯ ರೂಪ

ದುರ್ಗಾ ದೇವಿಯ ರೂಪ

ಎಲ್ಲಾ ನವರಾತ್ರಿಯ ಸಮಯದಲ್ಲೂ ದೈವರೂಪಳಾದ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಅವತಾರದ ದಿನದ ನವರಾತ್ರಿಯನ್ನು ವಿಶೇಷವಾಗಿ ಪೂಜಿಸಲಾಗುವುದು. ಉಳಿದ ದಿನಗಳಲ್ಲಿ ದೇವಿಯ ವಿವಿಧ ಅವತಾರಗಳಿಗೂ ಪೂಜಿಸಲಾಗುವುದು.

Most Read: ನೀರಿನಲ್ಲಿ ನೆನೆಸಿಟ್ಟ 'ಮೆಂತೆ ಕಾಳಿನ' ಆರೋಗ್ಯಕಾರಿ ಪ್ರಯೋಜನಗಳು

ಗುಪ್ತ ನವರಾತ್ರಿಯ ರಹಸ್ಯವೇನು?

ಗುಪ್ತ ನವರಾತ್ರಿಯ ರಹಸ್ಯವೇನು?

ಆಷಾಢ ನವರಾತ್ರಿ ದೇಶದಾದ್ಯಂತ ಜನಪ್ರಿಯವಾದ ಹಾಗೂ ಆಚರಿಸುವ ಹಬ್ಬವಾಗಿದೆ. ಇದನ್ನು ದಸರಾ ಎಂದು ಸಹ ಕರೆಯುತ್ತಾರೆ. ಈ ಹಬ್ಬವು ವಾಸ್ತವವಾಗಿ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಿಶ್ರಣವಾಗಿದೆ. ಅಂತೆಯೇ ಗುಪ್ತ ನವರಾತ್ರಿಯೂ ಒಂದು. ಆದರೆ ಇದನ್ನು ಎಲ್ಲೆಡೆಯೂ ಅಥವಾ ದೊಡ್ಡ ಆಚರಣೆಯ ರೂಪದಲ್ಲಿ ಆಚರಿಸಲಾಗುವುದಿಲ್ಲ.

ಗುಪ್ತ ನವರಾತ್ರಿಯ ಇನ್ನೊಂದು ವಿಶೇಷ

ಗುಪ್ತ ನವರಾತ್ರಿಯ ಇನ್ನೊಂದು ವಿಶೇಷ

ಕುಟುಂಬದಲ್ಲಿ ವ್ರತವನ್ನು ಕೈಗೊಂಡವರು ಮರಣ ಹೊಂದಿದ್ದರೆ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಸೇವೆಯಲ್ಲಿ ಇರುವಾಗಲೇ ದೈವಾಧೀನರಾಗಿದ್ದರೆ ಅಂತಹ ಕುಟುಂಬದಲ್ಲಿ ಒಂಟಿಯಾಗಿ ದೇವಿಯನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದೇವಿಗೆ ಮೀಸಲಾದ ಮಂತ್ರಗಳನ್ನು ಪಠಿಸುತ್ತಾರೆ. ಇಲ್ಲಿ ಯಾವುದೇ ಆಡಂಬರಗಳಿರುವುದಿಲ್ಲ. ಕೇವಲ ಭಕ್ತಿಭಾವವೇ ದೇವಿಗೆ ಅರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ದೇವಿ ಆಶೀರ್ವಾದ ನೀಡುವಳು ಎನ್ನುವ ನಂಬಿಕೆಯಿದೆ.

ಗುಪ್ತ ನವರಾತ್ರಿಯ ಕೇಂದ್ರ ದೇವತೆ ಯಾರು?

ಗುಪ್ತ ನವರಾತ್ರಿಯ ಕೇಂದ್ರ ದೇವತೆ ಯಾರು?

ಗುಪ್ತ ನವರಾತ್ರಿಯಲ್ಲೂ ಒಂಬತ್ತು ರೂಪದ ನವ ದುರ್ಗೆಯೇ ಪ್ರಮುಖ ದೇವತೆಯಾಗಿರುತ್ತಾಳೆ. ಈ ರೂಪದಲ್ಲಿ ಬರುವ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ, ಕುಶ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಕಲಾರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯರನ್ನು ಪೂಜಿಸಲಾಗುತ್ತದೆ. ಗುಪ್ತ ನವರಾತ್ರಿಯ ಮೊದಲ ದಿನದಿಂದಲೂ ಒಂಬತ್ತು ದೇವಿಗಳ ರೂಪವನ್ನು ಅದೇ ಕ್ರಮವಾಗಿ ಪೂಜಿಸಲಾಗುತ್ತದೆ.

Most Read: ಇಷ್ಟಾರ್ಥ ಸಿದ್ಧಿಗಾಗಿ-'ಬ್ರಹ್ಮಚಾರಿಣಿ ದೇವಿ'ಯನ್ನು ಪೂಜಿಸಿ

ಗುಪ್ತ ನವರಾತ್ರಿಯ ಪ್ರಮುಖ ದೇವತೆ

ಗುಪ್ತ ನವರಾತ್ರಿಯ ಪ್ರಮುಖ ದೇವತೆ

ಅಂತಿಮ ದಿನದಂದು ಸಿದ್ಧಿದಾತ್ರಿ ದೇವತೆಯ ಆಶೀರ್ವಾದವನ್ನು ಆಶಿಸುತ್ತಾರೆ. ಭಕ್ತಿ ಭಾವ ಹಾಗೂ ಸೂಕ್ತ ರೀತಿ-ನೀತಿಯ ಅನುಸಾರ ಆರಾಧನೆಯನ್ನು ಕೈಗೊಳ್ಳುವುದರ ಮೂಲಕ ದೇವಿಯ ಕೃಪೆಯನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಒಂಬತ್ತು ದಿನಗಳ ಆರಾಧನೆಯ ಬಳಿಕ ಸಿದ್ಧಿದಾರಿ ದೇವತೆಯು ಎಲ್ಲಾ ವಿಧದ ಆಶೀರ್ವಾದವನ್ನು ನೀಡುತ್ತಾಳೆ ಎಂದು ಹೇಳಲಾಗುವುದು.

ಗುಪ್ತ ನವರಾತ್ರಿಯ ವಿವಿಧ ಆವೃತ್ತಿಗಳು

ಗುಪ್ತ ನವರಾತ್ರಿಯ ವಿವಿಧ ಆವೃತ್ತಿಗಳು

ಗುಪ್ತ ನವರಾತ್ರಿಯ ಸಮಯದಲ್ಲಿ ಆಚರಿಸುವ ಅಥವಾ ಕೈಗೊಳ್ಳುವ ಪೂಜೆ, ಸಂಪ್ರದಾಯ ಹಾಗೂ ಆಚರಣೆಗಳು ದಸರಾ ನವರಾತ್ರಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಗುಪ್ತ ನವರಾತ್ರಿಯಲ್ಲಿ ಶಾಕಾಂಬರಿ ದೇವಸ್ಥಾನದಲ್ಲಿ ಮಹಾನ್ ಉತ್ಸವದ ಮೂಲಕ ಆಚರಿಸಲಾಗುತ್ತದೆ. ಭಾರತದ ಕೆಲವು ಪ್ರದೇಶದಲ್ಲಿ ಗಾಯತ್ರಿ ದೇವಿಯ ನವರಾತ್ರಿ ಎಂದು ಸಹ ಆಚರಿಸುತ್ತಾರೆ.

ಗುಪ್ತ ನವರಾತ್ರಿಯ ಪೂಜೆ ರೂಪ

ಗುಪ್ತ ನವರಾತ್ರಿಯ ಪೂಜೆ ರೂಪ

ಗುಪ್ತ ನವರಾತ್ರಿಯ ಒಂಬತ್ತು ದಿನಗಳ ಅವಧಿಯಲ್ಲಿ ತಾಯಿ ದುರ್ಗಾ ದೇವಿಗೆ ದುರ್ಗಾ ಸಪ್ತಸತಿಯ ಪಠಣ, ಮಾರ್ಕಡೇಯ ಪುಆಣದ ಭಾಗ ಹಾಗೂ ಮಹಾ ದುರ್ಗೆಯ ಪುರಾಣದ ಭಾಗದ ಕಥೆಯನ್ನು ಹೇಳಲಾಗುತ್ತದೆ. ಭಯಾನಕ ರಾಕ್ಷಸ ಮಹಿಷಾಸುರನ ವಧೆ ಹಾಗೂ ದೇವಿ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ವಿಜಯ ಪಡೆದ ಹಿನ್ನೆಲೆಯನ್ನು ಹೊಂದಿರುವ ಕಥೆಯ ಹಿನ್ನೆಲೆಯಲ್ಲಿ ಪೂಜೆಯ ವಿಧಿ-ವಿಧಾನವು ನಡೆಯುತ್ತದೆ. ಆದರೆ ಇತ್ತೀಚೆಗೆ ಹೆಚ್ಚು ತಾಂತ್ರಿಕ ರೂಪವನ್ನು ಅನುಸರಿಸುವುದನ್ನು ಕಾಣಬಹುದು.

Most Read: ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು

ಗುಪ್ತ ನವರಾತ್ರಿಯ ಪೂಜೆಯ ಪ್ರಯೋಜನ

ಗುಪ್ತ ನವರಾತ್ರಿಯ ಪೂಜೆಯ ಪ್ರಯೋಜನ

ಗುಪ್ತ ನವರಾತ್ರಿಯ ಪೂಜೆಯಿಂದ ತಾಯಿ ದುರ್ಗಾದೇವಿಯು ತೃಪ್ತಳಾಗಿ ಸಂಪತ್ತು, ಸಮೃದ್ಧಿ, ವಿದ್ಯಾ-ಬುದ್ಧಿ ಹಾಗೂ ವ್ಯಕ್ತಿಗೆ ಸಕಾರಾತ್ಮಕ ಶಕ್ತಿ ಒಲಿಯುವಂತೆ ಆಶೀರ್ವಾದ ನೀಡುತ್ತಾಳೆ. ಇದರಿಂದ ಭಕ್ತರ ಮನಸ್ಸಿನಲ್ಲಿ ನೆಲೆಸಿರುವ ಭಯವು ನಿರ್ಮೂಲನೆಯಾಗಿ ಆತ್ಮವಿಶ್ವಾಸವು ಉಂಟಾಗುವುದು. ಈ ಸಂದರ್ಭದಲ್ಲಿ ದುರ್ಗಾ ಸಪ್ತಶತಿಯನ್ನು ಪಠಿಸಿದರೆ ಬಹಳ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುವುದು. ಗುಪ್ತ ನವರಾತ್ರಿಯ ಸಂದರ್ಭದಲ್ಲಿ ಜಪಿಸಬೇಕಾದ ಪವಿತ್ರವಾದ ಮಂತ್ರವೆಂದರೆ " ಐಮ್ ಹ್ರೀಮ್ ಕ್ಲೀಮ್‍ಚಾಮುಂಡಾಯೈ ವಿಚ್‍ಚೇ". ಈ ಬೀಜ ಮಂತ್ರವು ದುಷ್ಟ ಶಕ್ತಿಗಳ ನಿವಾರಿಸಲು ಹಾಗೂ ಜನರ ಭಯವನ್ನು ನಿವಾರಿಸುವಲ್ಲಿ ಹೆಚ್ಚು ಶಕ್ತಿಯುತವಾಗಿ ಪರಿಣಾಮ ಬೀರುವುದು.

English summary

Why is Gupt Navratri celebrated secretly?

Navratris come once in three months. While two Navratris falling in the months of Ashwin and Chaitra are highly popular and are known as Pratyaksh or open Navratris, the other two occurring in the months of Magh and Ashadh are called as Gupt Navratris or the secret ones.
X
Desktop Bottom Promotion