ವಿಷ್ಣು 'ಶೇಷನಾಗನ' ಮೇಲೆಯೇ ವಿಶ್ರಮಿಸುತ್ತಾನೆ, ಯಾಕೆ ಅಂತೀರಾ?

By: Deepu
Subscribe to Boldsky

ಹಿಂದು ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತದೆ ಪುರಾಣಗಳು. ಕೆಲವರು ಶಿವ ಭಕ್ತರಾಗಿದ್ದರೆ, ಇನ್ನು ಕೆಲವರು ವಿಷ್ಣುವಿನ ಭಕ್ತರಾಗಿದ್ದಾರೆ. ವಿಷ್ಣುವಿಗೆ ಹಲವಾರು ಅವತಾರಗಳು ಇವೆ ಎಂದು ಪುರಾಣಗಳಲ್ಲಿ ನಾವು ಓದಿದ್ದೇವೆ ಮತ್ತು ಕೇಳಿದ್ದೇವೆ. ವಿಷ್ಣುವನ್ನು ಪೂಜಿಸುವ ಜನರು ಆತನ ಒಂದೊಂದು ಅವತಾರವನ್ನು ಪೂಜಿಸುತ್ತಾರೆ. ಭಗವಾನ್ 'ವಿಷ್ಣುವಿನ' ಹೆಸರಿನ ಹಿಂದಿದೆ, ಕುತೂಹಲಕರ ಸಂಗತಿ

ವಿಷ್ಣು ತನ್ನ ಒಂದೊಂದು ಅವತಾರದಲ್ಲಿ ಭೂಮಿಯ ಮೇಲೆ ಬಂದು ಅಧರ್ಮವನ್ನು ತುಳಿದು ಧರ್ಮ ಸ್ಥಾಪನೆ ಮಾಡಿದ್ದಾನೆ. ವಿಷ್ಣು ಗರುಡನ ಮೇಲೆ ಸವಾರಿ ಮಾಡುತ್ತಾ ಹೋಗುವುದನ್ನು, ಶಂಖ, ಚಕ್ರ, ಗಧಾ, ಪದ್ಮವನ್ನು ಹಿಡಿದುಕೊಂಡಿರುವ ವಿಷ್ಣು ಮತ್ತು ಹಲವು ತಲೆಗಳು ಇರುವಂತಹ ನಾಗನ ಮೇಲೆ ಮಲಗಿರುವುದನ್ನು ನಾವು ನೋಡಿದ್ದೇವೆ.   ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ

ವಿಷ್ಣುವಿನ ಈ ಅವತಾರವನ್ನು ನಾವು ಅನಂತ ಶಯನನೆಂದು ಕರೆಯುತ್ತೇವೆ. ಶೇಷನಾಗನ ಮೇಲೆ ಮಲಗಿರುವುದಕ್ಕೆ ಹಲವಾರು ಕಾರಣಗಳು ಇವೆ. ಗರುಡನನ್ನು ವಿಷ್ಣುವಿನ ವಾಹನವೆಂದು ಕರೆಯಲಾಗುತ್ತದೆ. ಅದೇ ಶೇಷನಾಗನಿಗೂ ವಿಶೇಷ ಸ್ಥಾನವಿದೆ. ವಿಷ್ಣು ಶೇಷನಾಗನ ಮೇಲೆ ಮಲಗುವುದು ಯಾಕೆ ಎಂದು ಬೋಲ್ಡ್ ಸ್ಕೈ ನಿಮಗೆ ಸವಿಸ್ತಾರವಾಗಿ ತಿಳಿಸಿಕೊಡಲಿದೆ....  

ಸಂಕಷ್ಟದ ಸಮಯದಲ್ಲಿ ನೆರವು

ಸಂಕಷ್ಟದ ಸಮಯದಲ್ಲಿ ನೆರವು

ಯಾವ್ಯಾವ ಸಮಯದಲ್ಲಿ ಭೂಮಿಗೆ ಸಂಕಷ್ಟವು ಎದುರಾಗುತ್ತದೆಯೋ ಆ ಸಮಯದಲ್ಲಿ ವಿಷ್ಣುವು ತನ್ನ ಅವತಾರವೆತ್ತಿ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಶೇಷನಾಗನೆಂದರೆ ಅನಂತವೆನ್ನುವ ಸಂಕೇತವಾಗಿದೆ. ಅನಂತವೆಂದರೆ ಅಂತ್ಯವಿಲ್ಲದ್ದು ಎನ್ನುವ ಅರ್ಥವಿದೆ. ಮನುಷ್ಯರಿಗೆ ಒಳ್ಳೆಯದಾಗಲು ವಿಷ್ಣುವು ಆಶೀರ್ವದಿಸುತ್ತಾನೆ. ಇದರಿಂದಾಗಿ ಆತ ಶೇಷನಾಗನ ಮೇಲೆ ವಿಶ್ರಮಿಸಿರುತ್ತಾನೆ.

ವಿಷ್ಣುವಿನ ಮುಖಭಾವ

ವಿಷ್ಣುವಿನ ಮುಖಭಾವ

ಪ್ರತೀ ಸಲ ಭೂಮಿಗೆ ಏನಾದರೂ ವಿಪತ್ತು ಎದುರಾದಾಗ ವಿಷ್ಣುವು ಹಲವಾರು ಅವತಾರಗಳನ್ನು ಎತ್ತುತ್ತಾನೆ. ಹಿಂದೂ ಧರ್ಮದ ಪ್ರಕಾರ ಶೇಷನಾಗನನ್ನು ವಿಷ್ಣುವಿನ ಶಕ್ತಿಯೆಂದು ನಂಬಲಾಗಿದೆ. ಇದರಿಂದ ವಿಷ್ಣು ಶೇಷನಾಗನ ಮೇಲೆ ಮಲಗಿರುತ್ತಾನೆ.

ಎಲ್ಲಾ ಗ್ರಹಗಳ ಆಸನ

ಎಲ್ಲಾ ಗ್ರಹಗಳ ಆಸನ

ಹಿಂದೂ ಪುರಾಣಗಳ ಪ್ರಕಾರ ಶೇಷನಾಗನು ಎಲ್ಲಾ ಗ್ರಹಗಳನ್ನು ತನ್ನ ಸುರುಳಿಯಲ್ಲಿ ಇಟ್ಟುಕೊಂಡು ವಿಷ್ಣುವಿನ ನಾಮ ಪಠಿಸುತ್ತಾನೆ. ವಿಷ್ಣುವನ್ನು ಸಂಪೂರ್ಣ ಭೂಮಿಯ ಹಾಗೂ ಗ್ರಹಗಳ ಒಡೆಯನೆಂದು ಹೇಳುವುದರಿಂದ ಇದನ್ನು ನಾವು ನಂಬಬಹುದಾಗಿದೆ.

ವಿಷ್ಣುವಿನ ರಕ್ಷಕ

ವಿಷ್ಣುವಿನ ರಕ್ಷಕ

ಶೇಷನಾಗನು ಕೇವಲ ವಿಷ್ಣುವಿಗೆ ವಿಶ್ರಮಿಸಲು ಸ್ಥಳ ಮಾತ್ರ ನೀಡಿರುವುದಲ್ಲದೆ ಆತನನ್ನು ರಕ್ಷಿಸುತ್ತಾನೆ ಕೂಡ. ಕೃಷ್ಣನು ಹುಟ್ಟಿದಾಗ ವಸು ದೇವನು ಆತನನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವಾಗ ಭಾರೀ ಪ್ರವಾಹ ಮತ್ತು ಮಳೆಯ ಮಧ್ಯೆ ಕೃಷ್ಣನನ್ನು ರಕ್ಷಿಸಿರುವುದು ಶೇಷನಾಗ. ಇದರಿಂದ ಶೇಷನಾಗನನ್ನು ವಿಷ್ಣುವಿನ ರಕ್ಷಕನೆಂದು ಕರೆಯಲಾಗುತ್ತದೆ.

ಸಂಬಂಧ ಅಂತ್ಯವಾಗಲ್ಲ

ಸಂಬಂಧ ಅಂತ್ಯವಾಗಲ್ಲ

ವಿಷ್ಣು ಮತ್ತು ಶೇಷನಾಗನ ಸಂಬಂಧವು ಚಿರವಾಗಿರುವಂತದ್ದಾಗಿದೆ. ಭೂಮಿ ಮೇಲೆ ಅಧರ್ಮದ ವಿರುದ್ಧ ಹೋರಾಡಿ ಕೆಟ್ಟ ಶಕ್ತಿಗಳಿಂದ ಭೂಮಿಯನ್ನು ರಕ್ಷಿಸಲು ವಿಷ್ಣುವಿಗೆ ಶೇಷನಾಗನು ನೆರವಾಗಿದ್ದಾನೆ. ತ್ರೇತಾಯುಗದಲ್ಲಿ ರಾಮನ ಅವತಾರ ಧರಿಸಿದ್ದಾಗ ಶೇಷನಾಗನು ಲಕ್ಷಣನ ರೂಪದಲ್ಲಿದ್ದನು. ಅದೇ ದ್ವಾಪರಯುಗದಲ್ಲಿ ಕೃಷ್ಣನಿಗೆ ಶಕ್ತಿಯಾಗಿ ಬಲರಾಮನಾಗಿದ್ದ.

ಸಂಬಂಧ ಅಂತ್ಯವಾಗಲ್ಲ

ಸಂಬಂಧ ಅಂತ್ಯವಾಗಲ್ಲ

ಈಗ ಶೇಷನಾಗನ ಮೇಲೆ ವಿಷ್ಣುವು ಮಲಗಿರುವುದು ಯಾಕೆಂದು ಪ್ರತಿಯೊಬ್ಬರಿಗೆ ತಿಳಿದಿರಬಹುದು. ಶೇಷನೆಂದರೆ ಸಮತೋಲನ ಮತ್ತು ನಾಗನೆಂದರೆ ಸಮಯವೆಂದು ಅರ್ಥ. ಶೇಷನಾಗನ ಮೇಲೆ ವಿಷ್ಣು ಮಲಗಿರುವುದು ಸಮಯವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಅರ್ಥವಾಗಿದೆ.

 
English summary

Why Does Lord Vishnu Sleep on a Serpent Bed

There is certain significance of this depiction. Lord Vishnu has taken various avatars and he is the symbol of restoration of the world from the sea of sin. It is true that Gadura is regarded as the 'Vahana' (vehicle) of Lord Vishnu, but Seshanaag is equally co-related with Lord Vishnu, even in his every incarnation. Why he sleep on a serpent bed? Let's find out the answer
Please Wait while comments are loading...
Subscribe Newsletter