For Quick Alerts
ALLOW NOTIFICATIONS  
For Daily Alerts

ಶಕ್ತಿಶಾಲಿ ಗಣನಾಯಕ ಹಾಗೂ ಪುಕ್ಕಲ ಇಲಿಯ ಕಥೆಯಿದು!

By Manu
|

ಗಣೇಶ ಬಂದ, ಹೊಟ್ಟೆ ಮೇಲೆ ಗಂಧ, ಕಾಯ್ ಕಡುಬು ತಿಂದ, ಚಿಕ್ಕೆರೆಲ್ ಬಿದ್ದ, ದೊಡ್ ಕೆರೇಲಿ ಎದ್ದ .... ಡಾ. ಎಸ್. ಮರುಳಯ್ಯನವರು ಬರೆದ ಈ ಶಿಶುಗೀತೆ ಗಣೇಶ ಹಬ್ಬದ ಕುರಿತು ಮಕ್ಕಳಲ್ಲಿ ಹೆಚ್ಚಿನ ಕುತೂಹಲ ಕೆರಳಿಸುತ್ತದೆ. ಗಜಮುಖ ಗಣಪನನ್ನು ಆರಾಧಿಸದ ಹಿಂದೂ ಮನೆಯೇ ಇರಲಾರದು.

ಯಾವಾಗ ಬಾಲ ಗಂಗಾಧರ ತಿಲಕರು ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿಸಿದರೋ ಈ ಸಂಭ್ರಮದಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಲು ನೆರವಾಯಿತು. ಡೊಳ್ಳು ಹೊಟ್ಟೆ, ಸ್ಥೂಲಕಾಯ, ಗಜಮುಖ, ಏಕದಂತ ಮೊದಲಾದ ವಿರೂಪಗಳನ್ನು ಹೊಂದಿದ್ದರೂ ಗಣಪ ಎಲ್ಲರ ನೆಚ್ಚಿನ ದೇವರು.

ಈತನ ವಾಹನ ಇಲಿಯಾದ ಕಾರಣ ಮನೆಯ ತಿಂಡಿಯಲ್ಲಿ ಇಲಿಗಳಿಗೂ ಪಾಲು ನೀಡುವುದುಂಟು. ಗಣೇಶನ ವಾಹನ ಇಲಿ ಎಂದು ಎಲ್ಲರಿಗೂ ಗೊತ್ತಿದ್ದರೂ ಏಕಾಗಿ ಗಣೇಶ ಇಲಿಯನ್ನು ತನ್ನ ವಾಹನವಾಗಿಸಿದ್ದಾನೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಏಕೆಂದರೆ ಗಣೇಶನ ಗಾತ್ರಕ್ಕೂ ಇಲಿಯ ಗಾತ್ರಕ್ಕೂ ತಾಳಮೇಳವೇ ಇಲ್ಲ.

lord Ganesha

ಇಲಿ ಅತಿ ಪುಕ್ಕಲಾಗಿದ್ದು ವೇಗವಾಗಿ ಓಡುವ ಶಕ್ತಿಯೂ ಇಲ್ಲ. ಆದರೆ ಇದರ ಹಿಂದೆ ಒಂದು ರೋಚಕ ಕಥೆಯಿದೆ. ಬನ್ನಿ, ಈ ಕಥೆ ಯಾವುದು ಎಂಬುದನ್ನು ಈಗ ನೋಡೋಣ: ಗಣೇಶ ಚತುರ್ಥಿ ವಿಶೇಷ: ಗಣಪನಿಗೆ ಇವುಗಳೆಂದರೆ ಅಚ್ಚುಮೆಚ್ಚು

ಕ್ರೋಂಚನ ಕಥ
ಗಣೇಶ ಪುರಾಣದ ಪ್ರಕಾರ ಗಣೇಶನ ವಾಹನವಾದ ಇಲಿ ತನ್ನ ಪೂರ್ವಜನ್ಮದಲ್ಲಿ ದೇವಮಾನವನಾಗಿತ್ತು. ಈತನಿಗೆ ಕ್ರೋಂಚ ಎಂಬ ಹೆಸರೂ ಇತ್ತು. ಒಮ್ಮೆ ಇಂದ್ರನ ಆಸ್ಥಾನದಲ್ಲಿ ಕ್ರೋಂಚನು ಅಕಸ್ಮಿಕವಾಗಿ ವಾಮದೇವನೆಂಬ ಮುನಿಯ ಕಾಲುಬೆರಳುಗಳನ್ನು ತುಳಿದುಬಿಟ್ಟನು. ವಾಮದೇವ ಅಂದಿನ ದಿನಗಳಲ್ಲಿ ಅಪಾರ ಪಾಂಡಿತ್ಯ ಮತ್ತು ವಿಶೇಷ ಶಕ್ತಿಗಳನ್ನು ತಪಸ್ಸಿನಿಂದ ಪಡೆದವರೆಂದು ಹೆಸರುವಾಸಿಯಾಗಿದ್ದರು.

ಕ್ರೋಂಚನಿಂದ ಅರಿವಿಲ್ಲದೇ ಈ ಪ್ರಮಾದವಾಗಿದ್ದರೂ ವಾಮದೇವರು ಇದನ್ನು ಆತ ಉದ್ದೇಶಪೂರ್ವಕವಾಗಿಯೇ ಮಾಡಿದ್ದಾನೆಂದು ತಪ್ಪು ತಿಳಿದು ಕ್ರೋಧಗೊಂಡು ಇಲಿಯಾಗುವಂತೆ ಶಪಿಸಿದರು. ತಕ್ಷಣ ಅರಿತ ಕ್ರೋಂಚ ತನ್ನಿಂದಾದ ಪ್ರಮಾದಕ್ಕೆ ಕ್ಷಮೆ ಯಾಚಿಸಿದ. ಬಳಿಕ ವಾಮದೇವರ ಕ್ರೋಧ ಶಾಂತಗೊಂಡಿತು. ಆದರೆ ಬಿಟ್ಟ ಬಾಣ, ಕೊಟ್ಟ ಶಾಪಗಳನ್ನು ಹಿಂದೆ ಪಡೆಯಲು ಸಾಧ್ಯವಿಲ್ಲದ ಕಾರಣ ವಾಮದೇವರು ಕ್ರೋಂಚನನ್ನು ಮುಂದಿನ ಜನ್ಮದಲ್ಲಿ ಗಣೇಶನನ್ನು ಭೇಟಿಯಾಗಿ ತನ್ನ ವಾಹನವಾಗುವಂತೆ ಕೇಳಿಕೊಳ್ಳಲು ಸೂಚಿಸಿದರು.

ಈ ಮೂಲಕ ಕ್ರೋಂಚ ಇಲಿಯ ಅಥವಾ ಮೂಷಿಕದ ರೂಪದಲ್ಲಿ ಮುಂದಿನ ಜನ್ಮದಲ್ಲಿ ಗಣೇಶನ ವಾಹನವಾಗಿ ಮೂಷಿಕವಾಹನನೆಂಬ ಹೆಸರು ಪಡೆದ. ಗಣೇಶನ ಜೊತೆಗೇ ಸದಾ ಪೂಜೆಗೊಳಪಡುವ ಭಾಗ್ಯವನ್ನೂ ಪಡೆದ. ಆದರೆ ಈ ಜನ್ಮದಲ್ಲಿ ಆತ ಮಹರ್ಷಿ ಪರಾಶರರ ಆಶ್ರಮವನ್ನು ಸೇರಿಕೊಂಡ.

ಕಂಟಕಪ್ರಾಯನಾಗಿ ಮಾರ್ಪಟ್ಟ ಕ್ರೋಂಚ
ಇಲಿ ಎಂದಾಕ್ಷಣ ನಾವೆಲ್ಲಾ ಚಿಕ್ಕ ಇಲಿಯನ್ನೇ ಕಲ್ಪಿಸಿಕೊಳ್ಳುತ್ತೇವೆ. ಆದರೆ ಹಿಂದಿನ ಜನ್ಮದ ಕ್ರೋಂಚ ಇಲಿಯಾಗಿ ಮಾರ್ಪಟ್ಟ ಬಳಿಕ ಒಂದು ದೊಡ್ಡ ಪರ್ವತದಷ್ಟು ದೊಡ್ಡವನಾಗಿದ್ದ. ಈತ ನಡೆದಾಡುತ್ತಿದ್ದರೆ ಕಳಗಿನ ನೆಲದಲ್ಲಿದ್ದವರೆಲ್ಲಾ ಹೆದರಿ ನಡುಗುತ್ತಿದ್ದರು. ಈತನ ಭಾರಕ್ಕೆ ಕಾಲಿಟ್ಟಲ್ಲೆಲ್ಲಾ ಭಾರೀ ಅನಾಹುತ ಆಗುತ್ತಾ ಹೋಗಿತ್ತು. ಸರಿಸುಮಾರು ಇಡಿಯ ಭೂಮಿಯ ಜನರಿಗೆ ಈತ ಕಂಟಕಪ್ರಾಯನಾಗಿ ಮಾರ್ಪಟ್ಟ. ಚತುರ್ಥಿ ವಿಶೇಷ: ಗಣೇಶ ವಿಗ್ರಹ ಸ್ಥಾಪನೆ, ಪೂಜಾ ವಿಧಾನ ಹೇಗೆ?

ಗಣೇಶನ ವಾಹನನಾಗಿ ಭಡ್ತಿ ಪಡೆದ ಕ್ರೋಂಚ
ಇದೇ ಸಮಯದಲ್ಲಿ ಋಷಿ ಪರಾಶರರು ಗಣೇಶನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಅವರ ಪತ್ನಿ ವತ್ಸಲ ಗಣೇಶನನ್ನು ಅಕ್ಕರೆಯಿಂದ ನೋಡಿಕೊಂಡು ಆದರದ ಆತಿಥ್ಯ ಒದಗಿಸಿದರು. ಈ ಸಂದರ್ಭದಲ್ಲಿ ಪರ್ವತಾಕಾರದ ಇಲಿ ಮತ್ತು ಈತನ ಉಪಟಳದ ಬಗ್ಗೆಯೂ ವಿಷಯ ಬಂದಿತ್ತು. ಇದನ್ನು ಅರಿತ ಗಣೇಶ ಕ್ರೋಂಚನನ್ನು ಭೇಟಿ ಮಾಡಿ ಆತನ ಅಹಂಕಾರವನ್ನು ಕೊನೆಗೊಳಿಸಲು ನಿರ್ಧರಿಸಿದ. ಇದಕ್ಕಾಗಿ ಆತ ತನ್ನ ಬಳಿಕ ಪಾಶ ಎಂಬ ಅಸ್ತ್ರವನ್ನು ಬಳಸಿದ. ಕ್ರೋಂಚನತ್ತ ಎಸೆದ ಪಾಶ ಪ್ರಖರ ಬೆಳಕಿನಿಂದ ತುಂಬಿತ್ತು. ಗಣೇಶ ಹಬ್ಬಕ್ಕೆ ಕೇಸರಿ ಮೋದಕದ ರೆಸಿಪಿ

ಎಷ್ಟು ಎಂದರೆ ಇಡಿಯ ಬ್ರಹ್ಮಾಂಡವೇ ಬೆಳಕಿನಿಂದ ತುಂಬಿತು. ಈ ಪಾಶದಿಂದ ಪಾರಾಗಲು ಕ್ರೋಂಚ ಯತ್ನಿಸಿದರೂ ಕಡೆಗೂ ಪಾಶ ಆತನ ಕುತ್ತಿಗೆಗೆ ಸುತ್ತಿಕೊಂಡು ಎತ್ತಿಕೊಂಡು ಬಂದು ಗಣೇಶನ ಕಾಲಬುಡದಲ್ಲಿ ಹಾಕಿತು. ಸೋಲೊಪ್ಪಿಕೊಂಡ ಕ್ರೋಂಚ ಗಣೇಶನಲ್ಲಿ ಕ್ಷಮೆಯಾಚಿಸಿದ. ಈತನ ಕ್ಷಮೆಯನ್ನು ಮನ್ನಿಸಿದ ಗಣೇಶ ಈತನ ಮರಣಾನಂತರ ಮುಂದಿನಜನ್ಮದಲ್ಲಿ ಪುಟ್ಟ ಗಾತ್ರದವನಾಗಿ ತನ್ನ ವಾಹನವಾಗುವಂತೆ ಮಾಡಿಕೊಂಡ. ಗಾತ್ರದೊಡನೇ ತನ್ನ ದರ್ಪವನ್ನೂ ಕಳೆದುಕೊಂಡ ಕ್ರೋಂಚ ಮುಂದಿನ ಜನ್ಮದಲ್ಲಿ ಅತಿ ಪುಕ್ಕಲನಾದ.

English summary

Why did Ganesha choose the Mouse as his Vehicle?

Ganesh Chaturthi is coming up and it happens to be one of the most awaited celebration of the year. The elephant headed God is revered in every Hindu household, irrespective of regions and cultures. Ganesha is denoted through a lot of symbols such as the elephant head, big belly and riding a mouse.
X
Desktop Bottom Promotion