Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣೇಶ ಹಬ್ಬಕ್ಕೆ ಕೇಸರಿ ಮೋದಕದ ರೆಸಿಪಿ
ಅನೇಕ ಬಗೆಯ ತಿಂಡಿಗಳನ್ನು ಮಾಡಿ ಗಣೇಶನಿಗೆ ಅರ್ಪಿಸಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಮೋದಕ, ಚಕ್ಕೂಲಿ, ವಡೆ ಹೀಗೆ ಬಗೆ ಬಗೆಯ ತಿಂಡಿಗಳನ್ನು ತಯಾರಿಸಲಾಗುವುದು.
ಈ ಮೋದಕ ಸಿಹಿ ತಿಂಡಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ಈ ಬಾರಿಯ ಗಣೇಶ ಹಬಕ್ಕೆ ಕೇಸರಿ ಮೋದಕದ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಸ್ವಲ್ಪ ಕೇಸರಿ
* ಮೈದಾ 3 ಕಪ್
* ರವಾ 3 ಚಮಚ
* ಸಕ್ಕರೆ ಅರ್ಧ ಕಪ್ (ಇದನ್ನು ಪಾಕ ರೀತಿ ಮಾಡಿಡಬೇಕು)
* ತೆಂಗಿನ ತುರಿ ಒಂದೂವರೆ ಕಪ್
* ಏಲಕ್ಕಿ 1-2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಕೇಸರಿಯನ್ನು 2-3 ಚಮಚ ಬಿಸಿ ನೀರಿನಲ್ಲಿ ಹಾಕಿ 10-15 ನಿಮಿಷ ಇಡಬೇಕು.
2. ಒಂದು ಬಟ್ಟಲಿನಲ್ಲಿ ರವೆ ಮತ್ತು ಮೈದಾ ಹಾಕಿ ಅದಕ್ಕೆ ಕೇಸರಿ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಬೇಕು.
3. ಈಗ ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲೆಸಬೇಕು.
4. ಈಗ ಬಾಣಲೆಯನ್ನು ಬಿಸಿ ಮಾಡಿ, ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿಟ್ಟು ಅದರಲ್ಲಿ ಸಕ್ಕರೆ ಪಾಕವನ್ನು ಹಾಕಿ ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ 1-2 ನಿಮಿಷದವರೆಗೆ ಹುರಿಯಬೇಕು. ನಂತರ ಉರಿಯಿಂದ ತೆಗೆದು ತಣ್ಣಗಾಗಲು ಬದಿಯಲ್ಲಿಡಬೇಕು.
5. ಈಗ ಕಲೆಸಿಟ್ಟ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ಬೆರಳಿನಿಂದ ಗುಂಡಿ ರೀತಿ ಮಾಡಿ ಅದರಲ್ಲಿ ತಣ್ಣಗಾದ ತೆಂಗಿನ ತುರಿಯ ಮಿಶ್ರಣವನ್ನು ಒಂದೊಂದು ಚಮಚ ಹಾಕಿ ಕೈಯಿಂದಲೇ ಉಂಡೆಯನ್ನು ಮೆಲ್ಲನೆ ಅದುಮಿದಾಗ ಚಿತ್ರದಲ್ಲಿ ಕಾಣುವ ಶೇಪ್ ನಲ್ಲಿ ಮಾಡಬಹುದು.
6. ನಂತರ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು, ಎಣ್ಣೆ ಕಾದ ನಂತರ ಮೋದಕ ಅನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆದರೆ ಗಣೇಶ ಹಬ್ಬಕ್ಕೆ ರುಚಿಯಾದ ಮೋದಕ ರೆಡಿ.



Click it and Unblock the Notifications
