For Quick Alerts
ALLOW NOTIFICATIONS  
For Daily Alerts

ನಾಸಾ ಮಂಗಳ ಗ್ರಹದಲ್ಲಿ ನೌಕೆ ಇಳಿಸಿದಾಗ ಭಾರತೀಯರು ಸಂಭ್ರಮಿಸಿದ್ದು ಈ ಬಿಂದಿ ನೋಡಿ

|

ನಾವು ಭಾರತೀಯರು ನಮ್ಮದೇ ಆದ ಆಚಾರ, ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುತ್ತೇವೆ. ಹೆಣ್ಮಕ್ಕಳು ಸೀರೆ ಉಡುವುದು, ಕೈಗೆ ಬಳೆ ಹಾಕುವುದು, ಬೊಟ್ಟು ಹಾಕುವುದು, ತಲೆಗೆ ಹೂ ಮುಡಿಯುವುದು ಇವೆಲ್ಲಾ ಹಿಂದೂ ಧರ್ಮದ ಆಚಾರಗಳಾಗಿವೆ. ಅಂದವಾಗಿ ಅಲಂಕಾರ ಮಾಡಿಕೊಂಡು ಮನೆಯಿಂದ ಹೊರಗಡೆ ಹೋಗುವಾಗ ಬಿಂದಿ ಹಾಕದಿದ್ದರೆ ಮನೆಯ ಹಿರಿಯರು ಒಂದು ಬಿಂದಿ ಹಾಕು, ಇನ್ನೂ ಲಕ್ಷಣವಾಗಿ ಕಾಣ್ತೀಯ ಅಂತಾರೆ.

ಆದ್ದರಿಂದಾಗಿ ಈ ರೀತಿಯ ಆಚಾರಗಳು ನಮ್ಮ ರಕ್ತದಲ್ಲಿ ಮೈಗೂಡಿರುತ್ತವೆ. ಅಲ್ಲದೆ ಎಷ್ಟೇ ಎತ್ತರಕ್ಕೆ ಬೆಳೆದರೂ ಭಾರತೀಯ ಆಚಾರ, ಉಡುಪು ಇವುಗಳೆನ್ನೆಲ್ಲಾ ಪ್ರತಿನಿಧಿಸುವವರನ್ನು ನಮಗೆ ಅವರ ಬಗ್ಗೆ ಹೆಮ್ಮೆ ಉಂಟಾಗುವುದು. ಉದಾಹರಣೆಗೆ ಸುಧಾ ಮೂರ್ತಿಯವರನ್ನು ನೋಡಿ. ಕಾರ್ಪೋರೇಟ್‌ ಕಂಪನಿಯ ಒಡತಿ. ಕಾರ್ಪೋರೇಟ್‌ ಡ್ರೆಸ್ಸಿಂಗ್‌ ಸ್ಟೈಲ್‌ ಭಿನ್ನವಾಗಿರುತ್ತೆ. ಆದರೆ ಅವರು ಮಾತ್ರ ಭಾರತೀಯ ಉಡುಗೆಯಲ್ಲೇ ಕಾಣ ಸಿಗುವುದು.

ಅದೇ ರೀತಿ ಎರಡು ಮೂರು ದಿನಗಳಿಂದ ಅಮೆರಿಕದ ನಾಸಾ ತಂಡದಲ್ಲಿದ್ದ ಮಾಸ್ಕ್ ಧರಿಸಿದ ಮಹಿಳೆಯ ಹಣೆಯಲ್ಲಿ ಬಿಂದಿ ಸಕತ್‌ ಗಮನ ಸೆಳೆದಿದೆ. ಇಡೀ ಜಗತ್ತು ನಾಸಾದ ಸಾಧನೆಯನ್ನು ಅಚ್ಚರಿಯಿಂದ ವೀಕ್ಷಿಸುತ್ತಿತ್ತು. ಅತ್ಯಾಧುನಿಕ ಪರ್ಸಿವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಇಳಿಯುತ್ತಿರುವ ರೋಚಕ ಕ್ಷಣದಲ್ಲಿ ಭಾರತೀಯರ ಕಣ್ಣಿಗೆ ಒಬ್ಬ ವ್ಯಕ್ತಿ ಕಂಡು ಬಂದರು. ಆ ವ್ಯಕ್ತಿಯೇ ಬಾಹ್ಯಾಕಾಶ ನೌಕೆ ಮಂಗಳನಲ್ಲಿ ಇಳಿದಾಗ ಅದನ್ನು ಘೋಷಿಸಿದ್ದು.

ಭಾರತೀಯರಿಗೆ ಅದೊಂದು ಹೆಮ್ಮೆಯ ಕ್ಷಣವೆಂದೇ ಹೇಳಬಹುದು. ನಾಸಾ ಮಂಗಳದಲ್ಲಿ ನೌಕೆ ಇಳಿಸಿದರೂ ಆ ಸಾಧನೆಯಲ್ಲಿ ನಮ್ಮ ಭಾರತೀಯಳ ಪಾಲೂ ಇದ್ದಿದ್ದು ನೋಡಿ ಕುಣಿದು ಕುಪ್ಪಳಿಸಿದರು. ಮಾಸ್ಕ್‌ ಹಾಕಿ ಅವರು ನೌಕೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದಾಗ ಆ ಮಹಿಳೆ ಅಪ್ಪಟ ಭಾರತೀಯ ನಾರಿ ಎಂದು ಸುಳಿವು ನೀಡಿದ್ದೇ ಆಕೆಯ ಹಣೆಯಲ್ಲಿದ್ದ ಬಿಂದಿ. ಅವರೇ ಡಾ.ಸ್ವಾತಿ ಮೋಹನ್.

ಮಂಗಳ ಗ್ರಹದಲ್ಲಿ ಇಳಿದಿರುವ ಪರ್ಸಿವೆರೆನ್ಸ್ ರೋವರ್ ಅಲ್ಲಿರುವ ಇರಬಹುದಾದ ಸೂಕ್ಷ್ಮ ಜೀವಿಗಳ ಕುರಿತು ಸಂಶೋಧನೆ ನಡೆಸಲಿದೆ. ಈ ರೋವರ್ ನ್ನು ಜುಲೈ 30ರಂದು ಉಡಾಯಿಸಲಾಗಿದ್ದು, ಸುದೀರ್ಘ ಪ್ರಯಾಣದ ಬಳಿಕ ಇದೀಗ ಮಂಗಳನ ಅಂಗಳವನ್ನು ಯಶಸ್ವಿಯಾಗಿ ತಲುಪಿದೆ.

ಅಂದರೆ ಸುಮಾರು 203 ದಿನಗಳ ಕಾಲ 300 ಮಿಲಿಯನ್ ಮೈಲಿಗಳ ಅಂತರವನ್ನು ಕ್ರಮಿಸಿ ರೋವರ್ ಮಂಗಳನ ಮೇಲೆ ಯಶಸ್ವಿಯಾಗಿ ಇಳಿದಿದೆ. ನಾಸಾದ ಈ ಸಾಧನೆಯಲ್ಲಿ ಭಾರತೀಯ ಮೂಲದ ಡಾ. ಸ್ವಾತಿ ಮೋಹನ್ ಬಹುಮುಖ್ಯ ಪಾತ್ರವಹಿಸಿದ್ದು, ರೋವರ್ ಲ್ಯಾಂಡಿಂಗ್ ಸಿಸ್ಟಮ್ ನ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಗುವಾಗಿದ್ದಾಗಲೇ ವಿದೇಶಕ್ಕೆ ಹೋಗಿದ್ದರೂ ಮರೆಯಲಿಲ್ಲ ಭಾರತೀಯ ಸಂಸ್ಕೃತಿ

ಮಗುವಾಗಿದ್ದಾಗಲೇ ವಿದೇಶಕ್ಕೆ ಹೋಗಿದ್ದರೂ ಮರೆಯಲಿಲ್ಲ ಭಾರತೀಯ ಸಂಸ್ಕೃತಿ

ಡಾ. ಸ್ವಾತಿಯವರು ಒಂದು ವರ್ಷ ಇದ್ದಾಗಲೇ ಅವರ ಪೋಷಕರು ಅಮೆರಿಕಕ್ಕೆ ವಲಸೆ ಹೋಗಿದ್ದರು.

ಇವರು ಉತ್ತರ ಅಮೆರಿಕದ ವರ್ಜಿನಿಯಾ ವಾಶಿಂಗ್ಟನ್ ಡಿಸಿ ಮೆಟ್ರೋ ಏರಿಯಾದಲ್ಲಿ ಬೆಳೆದವರು. ಬಾಲ್ಯದಲ್ಲಿ ಅವರು ನೋಡಿ ಸ್ಟಾರ್‌ ಟ್ರೆಕ್‌ ಸಿರೀಸ್‌ ಅವರಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿತು.

ವಿದ್ಯಾಭ್ಯಾಸ

ವಿದ್ಯಾಭ್ಯಾಸ

ಮೆಕ್ಯಾನಿಕಲ್‌ನಲ್ಲಿ ಬ್ಯಾಚುರಲ್ ಸೈನ್ಸ್ ಡಿಗ್ರಿ ಹಾಗೂ ಏರೋಸ್ಪೇಸ್‌ ಇಂಜಿನಿಯರಿಂಗ್ ಅನ್ನು ಕಾರ್ನಲ್ ಯೂನಿರ್ವಸಿಟಿಯಿಂದ ಪಡೆದು ನಂತರ MIT ಡಿಪಾರ್ಟ್‌ಮೆಂಟ್‌ನಿಂದ ಏರೋನಾಟಿಕ್ಸ್ ಮತ್ತು ಅಸ್ಟ್ರೋನಾಟಿಕ್ಸ್‌ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಪಡೆದರು.

ಇದೀಗ ನಾಸಾದ ವಿವಿಧ ಯೋಜನೆಯಲ್ಲಿ ಪ್ರಮುಖ ಪಾತ್ರಹಿಸುತ್ತಿದ್ದಾರೆ.

 ಆದರ್ಶ ವ್ಯಕ್ತಿ ಆದ ಡಾ. ಸ್ವಾತಿ ಮೋಹನ್

ಆದರ್ಶ ವ್ಯಕ್ತಿ ಆದ ಡಾ. ಸ್ವಾತಿ ಮೋಹನ್

ರೋವರ್ ಲ್ಯಾಂಡಿಂಗ್ ಸಿಸ್ಟಮ್ ನ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಅವರನ್ನು ನೋಡಿದ ಅನೇಕರನ್ನು ಮನದಲ್ಲಿ ನಾನೂ ಕೂಡ ಅವರಂತೆಯೇ ದೊಡ್ಡ ವಿಜ್ಞಾನಿಯಾಗಬೇಕು ಎಂಬ ಆಸೆ ಮೂಡಿದೆ. ಈ ಮೂಲಕ ಅನೇಕ ಯುವ ಪೀಳಿಗೆಯ ಆದರ್ಶ ವ್ಯಕ್ತಿಯಾಗಿ ಮಿಂಚಿದ್ದಾರೆ.

 ಬಿಂದಿಯ ಹೆಮ್ಮೆ ಹೆಚ್ಚಿದೆ

ಬಿಂದಿಯ ಹೆಮ್ಮೆ ಹೆಚ್ಚಿದೆ

ಮಂಗಳದಲ್ಲಿ ತಾವು ಮಾಡಿದ ಸಾಧನೆಯ ಬಗ್ಗೆ ವಿವರಣೆಯ ಫೋಟೋವನ್ನು ನಾಸಾ ಬಿಡುಗಡೆ ಮಾಡಿದ್ದೇ ತಡ ಬಿಂದಿ ಹಾಕಿದ ಮಹಿಳೆಯ ಫೋಟೋ ವೈರಲ್‌ ಆಯ್ತು. ಕೆಲವೊಂದು ಕ್ರಿಶ್ಚಿಯನ್ ಸ್ಕೂಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಬಿಂದಿ ಹಾಕಬಾರದು ಎಂಬಂತೆ ತಾಕೀತು ಮಾಡುತ್ತಾರೆ. ಆದರೆ ಅಮೆರಿಕದಲ್ಲಿಯೇ ಬೆಳೆದರೂ ನಾಸಾದಲ್ಲಿ ಉನ್ನತ ಸ್ಥಾನದಲ್ಲಿ ಇದ್ದರೂ ತನ್ನ ಮೂಲ ಮರೆಯದ ಡಾ. ಸ್ವಾತಿ ಮೋಹನ್ ನಿಜಕ್ಕೂ ಗ್ರೇಟ್‌. ಈ ಮೂಲಕ ಬಿಂದಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.

English summary

Who is Swati Mohan, the woman leading NASA’s Mars 2020 landing

Who is Swati Mohan, the woman leading NASA’s Mars 2020 landing, Read On,
X