For Quick Alerts
ALLOW NOTIFICATIONS  
For Daily Alerts

ಮೃತ್ಯು ಲೋಕಕ್ಕೆ, ಭೇಟಿ ನೀಡಿದ ವಿಷ್ಣುದೇವ! ಇಲ್ಲಿದೆ ಕಂಪ್ಲೀಟ್ ಸ್ಟೋರಿ

|

ದೇವಾನು - ದೇವತೆಯರು ಸರ್ವ ಲೋಕ ಸಂಚಾರಿ ಎಂಬುದು ನಿಮಗೆ ತಿಳಿದಿರುವ ವಿಚಾರ. ತಮ್ಮ ಮನಸ್ಸು ತೋರುವ ಲೋಕಕ್ಕೆ ತಾವು ತೆರಳಬಹುದು. ದೇವರ ದಾರಿ ಹೀಗೆಯೇ ಎಂದು ಹೇಳಲಾಗದು. ಹೀಗಿರುವಾಗ ಒಂದು ದಿನ, ತ್ರಿಮೂರ್ತಿಗಳಲ್ಲಿ ಒಬ್ಬರಾದ ವಿಷ್ಣುದೇವ, ಮೃತ್ಯು ಲೋಕಕ್ಕೆ ಭೇಟಿ ನೀಡಬೇಕೆಂದು ಬಯಸುತ್ತಾರೆ. ಈ ವಿಚಾರವನ್ನು ಸಂಪತ್ತಿನ ಆದಿ ದೇವತೆಯಾದ, ಲಕ್ಷ್ಮೀದೇವಿಯ ಬಳಿ ಚರ್ಚಿಸಿದಾಗ, ಲಕ್ಷ್ಮೀದೇವಿಯೂ ಕೂಡ ವಿಷ್ಣುವಿನೊಟ್ಟಿಗೆ ಮೃತ್ಯು ಲೋಕಕ್ಕೆ ಬರುವುದಾಗಿ ತನ್ನ ಇಚ್ಛೆಯನ್ನು ತಿಳಿಸುತ್ತಾರೆ.

When Lord Vishnu Visited The Mrityu Loka

ಆದರೆ ಆ ಲೋಕದ ನಿಯಮಗಳನ್ನು ಸಂಪೂರ್ಣವಾಗಿ ಅರಿಯಾದವರು, ಅಲ್ಲಿಗೆ ತೆರಳುವುದು ಸರಿಯಲ್ಲ ಎಂಬುದು ವಿಷ್ಣುದೇವನ ಇಂಗಿತವಾಗಿತ್ತು. ಇದನ್ನು ಅರಿತರೂ, ಲಕ್ಷ್ಮೀದೇವಿ ಮೃತ್ಯು ಲೋಕಕ್ಕೆ ತೆರಳುವ ತನ್ನ ಬಯಕೆಯನ್ನು ವಿಷ್ಣುವಿನೊಂದಿಗೆ ಹೇಳಿಕೊಳ್ಳುತ್ತಾಳೆ.

ಲಕ್ಷ್ಮೀದೇವಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಒಪ್ಪಿಕೊಂಡ ವಿಷ್ಣು

ಲಕ್ಷ್ಮೀದೇವಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಒಪ್ಪಿಕೊಂಡ ವಿಷ್ಣು

ಲಕ್ಷ್ಮೀದೇವಿಯ ಹತಾಶ ಭಾವವನ್ನು ಕಂಡು ವಿಷ್ಣುದೇವ, ಮೃತ್ಯು ಲೋಕಕ್ಕೆ ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ಆದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ, ತನ್ನ ಎಲ್ಲಾ ಸೂಚನೆಗಳನ್ನು ಕಟ್ಟು- ನಿಟ್ಟಾಗಿ ಪಾಲಿಸುವಂತೆ, ಆ ಲೋಕದ ಯಾವುದೇ ನಿಯಮಗಳನ್ನು ಮುರಿಯದಂತೆ, ಮತ್ತು ಲಕ್ಷ್ಮೀದೇವಿಯು ಯಾವುದೇ ಕಾರಣಕ್ಕೂ ತನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳದಂತೆ ಷರತ್ತನ್ನು ವಿಧಿಸುತ್ತಾನೆ. ಇದಕ್ಕೆ ಲಕ್ಷ್ಮೀದೇವಿಯೂ ಸಮ್ಮತಿಯನ್ನು ಸೂಚಿಸುತ್ತಾಳೆ. ನಂತರ, ವಿಷ್ಣುದೇವ ಮತ್ತು ಲಕ್ಷ್ಮೀದೇವಿ ಇಬ್ಬರೂ ಮೃತ್ಯು ಲೋಕದ ಕಡೆಗೆ ಪಯಣ ಬೆಳೆಸುತ್ತಾರೆ. ಲಕ್ಷ್ಮೀದೇವಿ, ವಿಷ್ಣುವಿನ ಸೂಚನೆಗಳನ್ನು ಶ್ರದ್ಧೆಯಿಂದ ಪಾಲಿಸುತ್ತಾ, ವಿಷ್ಣುವಿನ ದಾರಿಯಲ್ಲೇ ಸಾಗುತ್ತಾಳೆ. ಹೀಗೆ ಸ್ವಲ್ಪ ದಾರಿಯನ್ನು ಕ್ರಮಿಸಿದ ನಂತರ, ತಾನು ಹಿಂತಿರುಗಿ ಬರುವವರೆಗೂ ಲಕ್ಷ್ಮೀದೇವಿಯನ್ನು ಅಲ್ಲೇ ಕಾಯಲು ತಿಳಿಸಿ, ವಿಷ್ಣುದೇವ ಮುಂದಕ್ಕೆ ಸಾಗುತ್ತಾನೆ. ಇದಕ್ಕೆ ಲಕ್ಷ್ಮೀದೇವಿಯು ಸಮ್ಮತಿಯನ್ನು ಸೂಚಿಸುತ್ತಾಳೆ.

Most Read: ವಿಷ್ಣು ಸಂಕಷ್ಟಹರ ಮಂತ್ರ ಪಠಿಸಿ-ಸುಖ ಸಂಪತ್ತನ್ನು ಪಡೆದುಕೊಳ್ಳಿ

ವಿಷ್ಣುದೇವನ ಷರತ್ತನ್ನು ಮರೆತುಬಿಟ್ಟ ಲಕ್ಷ್ಮಿ!

ವಿಷ್ಣುದೇವನ ಷರತ್ತನ್ನು ಮರೆತುಬಿಟ್ಟ ಲಕ್ಷ್ಮಿ!

ಅದೇ ಜಾಗದಲ್ಲಿ ಸ್ವಲ್ಪ ಸಮಯ ಕಳೆಯುತ್ತದೆ. ವಿಷ್ಣುವಿನ ಬರುವಿಕೆಯ ಕೊಂಚ ಸುಳಿವೂ ಸಿಗುವುದಿಲ್ಲ. ಮತ್ತಷ್ಟು ಸಮಯ ಅಲ್ಲೇ ಕಳೆದರೂ, ವಿಷ್ಣುದೇವ ಹಿಂತಿರುಗುವುದಿಲ್ಲ. ಲಕ್ಷ್ಮೀದೇವಿ ತನ್ನ ಜಾಗದಿಂದ ವಿಷ್ಣು ನಡೆದ ದಿಕ್ಕಿನಲ್ಲೇ ನಿಧಾನವಾಗಿ ಸಾಗುತ್ತಾಳೆ. ಸ್ವಲ್ಪ ದೂರದಲ್ಲೇ ಸಾಸಿವೆ ಹೊಲವೊಂದು ಕಾಣಸಿಗುತ್ತದೆ. ಆ ಹೊಲದ ತುಂಬಾ ಹಳದಿ ಬಣ್ಣದ ಹೂಗಳು ತುಂಬಿರುತ್ತವೆ. ಆ ರಮಣೀಯವಾದ ದೃಶ್ಯ, ಲಕ್ಷ್ಮೀದೇವಿಯ ಮನವನ್ನು ಸೆಳೆಯುತ್ತದೆ. ಆಗ ಲಕ್ಷ್ಮಿ, ವಿಷ್ಣುದೇವನ ಷರತ್ತನ್ನು ಮರೆತು, ಆ ಹೊಲವನ್ನು ಪ್ರವೇಶಿಸುತ್ತಾಳೆ. ಅಲ್ಲಿ ತುಂಬಿದ್ದ ಹಲವು ಹೂ ಗೊಂಚಲಿನಿಂದ ಒಂದನ್ನು ಕಿತ್ತು, ತನ್ನ ಮುಡಿಗೇರಿಸಿಕೊಳ್ಳುತ್ತಾಳೆ.

ವಿಷ್ಣುದೇವ ಬರುತ್ತೀರಿವುದು ಕಾಣಿಸುತ್ತದೆ

ವಿಷ್ಣುದೇವ ಬರುತ್ತೀರಿವುದು ಕಾಣಿಸುತ್ತದೆ

ಇದೇ ಉತ್ಸಾಹದಿಂದ ಮುಂದೆ ಸಾಗುತ್ತಿದ್ದಾಗ, ರಸಭರಿತ ಹಣ್ಣುಗಳನ್ನು ಹೊತ್ತು ನಿಂತ ತೋಟವೊಂದು ಲಕ್ಷ್ಮೀದೇವಿಗೆ ಕಾಣಿಸುತ್ತದೆ. ಆ ಹಣ್ಣನ್ನು ತಿನ್ನಲು ಮನಸ್ಸಾಗಿ, ಅಲ್ಲಿಂದ ಒಂದು ಹಣ್ಣನ್ನು ಕಿತ್ತು ಸೇವಿಸುತ್ತಾಳೆ. ಹೀಗೆ ಮನಸ್ಸು ಉಲ್ಲಾಸದಿಂದಿರಲು, ಲಕ್ಷ್ಮೀದೇವಿಯ ವಿರುದ್ಧ ದಿಕ್ಕಿನಿಂದ ವಿಷ್ಣುದೇವ ಬರುತ್ತೀರಿವುದು ಕಾಣಿಸುತ್ತದೆ. ಆಗ ತಕ್ಷಣ ಲಕ್ಷ್ಮೀದೇವಿಗೆ, ವಿಷ್ಣುದೇವನು ವಿಧಿಸಿದ ಷರತ್ತುಗಳು ನೆನಪಾಗುತ್ತವೆ. ತನ್ನದೇ ನಿರ್ಧಾರವನ್ನು ತೆಗೆದುಕೊಂಡು, ವಿಷ್ಣುವಿನ ಸೂಚನೆಯನ್ನು ಮುರಿದಿರುತ್ತಾಳೆ.

ಶಿಕ್ಷೆಯನ್ನು ವಿಧಿಸಿದ ವಿಷ್ಣುದೇವ

ಶಿಕ್ಷೆಯನ್ನು ವಿಧಿಸಿದ ವಿಷ್ಣುದೇವ

ವಿಷ್ಣುದೇವ, ಲಕ್ಷ್ಮೀದೇವಿಯ ಬಳಿ ಬಂದು, ಈ ಹೂವು, ಹಣ್ಣುಗಳೆಲ್ಲವೂ ವಾಸ್ತವವಲ್ಲ. ಕೇವಲ ನಿನ್ನ ಭ್ರಮೆ. ಏಕೆಂದರೆ, ಇದು ಭೂಮಿಯಲ್ಲಿರುವ ಒಳ್ಳೆಯ ಮತ್ತು ಉದಾರ ಮನಸ್ಸಿರುವ ರೈತನು ಬೆಳೆಸಿರುವುದರ ಪ್ರತಿಬಿಂಬವಷ್ಟೇ. ಆ ರೈತನ ಅನುಮತಿಯಿಲ್ಲದೆ, ಆತ ಕಷ್ಟಪಟ್ಟು ಬೆಳೆದ ಬೆಳೆಗೆ ಕೈ ಹಾಕಿದರೆ, ಶಿಕ್ಷೆ ಕಟ್ಟಿಟ್ಟ ಬುತ್ತಿ. ಆ ತಪ್ಪು ನಿನ್ನ ಕಡೆಯಿಂದ ನಡೆದಿದೆ. ಆದ್ದರಿಂದ, ಆ ರೈತನ ಮನೆಯಲ್ಲಿ ಮುಂದಿನ ಹನ್ನೆರಡು ವರ್ಷಗಳಕಾಲ ನಿನ್ನ ಸೇವೆಯನ್ನು ಸಲ್ಲಿಸು ಎಂದು ಶಿಕ್ಷೆಯನ್ನು ವಿಷ್ಣುದೇವ ವಿಧಿಸುತ್ತಾನೆ.

Most Read: ಅಂದು ಶಿವನ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಹನ್ನೆರಡು ವರ್ಷಗಳಕಾಲ ರೈತನ ಮನೆಯಲ್ಲೇ ವಾಸಿಸುತ್ತಾಳೆ!

ಹನ್ನೆರಡು ವರ್ಷಗಳಕಾಲ ರೈತನ ಮನೆಯಲ್ಲೇ ವಾಸಿಸುತ್ತಾಳೆ!

ವಿಷ್ಣುವಿನ ಆಜ್ಞೆಯ ಅನುಸಾರ ಹನ್ನೆರಡು ವರ್ಷಗಳಕಾಲ ರೈತನ ಮನೆಯಲ್ಲೇ ವಾಸಿಸುತ್ತಾಳೆ. ಆ ಕಾಲಾವಧಿಯಲ್ಲಿ ರೈತನು ಬಹಳ ಶ್ರೀಮಂತನಾಗಿ ಬೆಳೆದು ನಿಲ್ಲುತ್ತಾನೆ. ಆ ಶ್ರೀಮಂತಿಕೆಯ ನಡುವೆಯೂ, ರೈತ ತನ್ನ ಉದಾರ ಗುಣವನ್ನು ಬಿಟ್ಟುಕೊಡುವುದಿಲ್ಲ. ಹಾಗೆ ಕಾಲ ಚಕ್ರ ಉರುಳುತ್ತಾ, ಲಕ್ಷ್ಮೀದೇವಿ ರೈತನ ಮನೆಯನ್ನು ಬಿಡುವ ಸಮಯ ಬರುತ್ತದೆ. ಆಗ ರೈತ, ಲಕ್ಷ್ಮೀದೇವಿಯನ್ನು ನಮಸ್ಕರಿಸಿ, ಇನ್ನಷ್ಟು ಕಾಲ ತನ್ನ ಮನೆಯಲ್ಲಿ ತಂಗುವಂತೆ ಕೋರಿಕೊಳ್ಳುತ್ತಾನೆ.

ಧನ ತ್ರಯೋದಶಿ

ಧನ ತ್ರಯೋದಶಿ

ಲಕ್ಷ್ಮೀದೇವಿ, ಆ ರೈತನನ್ನು ಆಶೀರ್ವದಿಸಿ, ತನ್ನ ಇರುವಿಕೆಯ ಫಲವನ್ನು ಇನ್ನು ಮುಂದೆಯೂ ಪಡೆಯಬೇಕಾದರೆ, ಏಕಾದಶಿಯ ದಿನದಂದು, ಮನೆಯನ್ನು ಶುಚಿಗೊಳಿಸಿ, ದೀಪವನ್ನು ಬೆಳಗಿಸಿ, ತನ್ನ ಮೂರುತಿಗೆ ಭಕ್ತಿ ಪೂರ್ವಕ ಪೂಜೆಯನ್ನು ಸಲ್ಲಿಸುವಂತೆ ಸ್ವತಃ ಲಕ್ಷ್ಮೀದೇವಿಯೇ ತಿಳಿಸುತ್ತಾಳೆ. ಲಕ್ಷ್ಮೀದೇವಿಯ ಮಾತಿನಂತೆ ರೈತ, ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿ, ದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ. ಹಾಗೆಯೇ, ಪ್ರತೀವರ್ಷವೂ ಈ ತ್ರಯೋದಶಿಯನ್ನು ಭಕ್ತಿಯಿಂದ ಆಚರಿಸಿ, ಅದರ ಫಲವನ್ನು ಅನುಭವಿಸುತ್ತಾನೆ. ಹೀಗೆ ಮುಂದಿನ ದಿನಗಳಲ್ಲಿ, ಈ ಪೂಜಾ ಕಾರ್ಯಕ್ರಮಕ್ಕೆ, ‘ಧನ ತ್ರಯೋದಶಿ' ಎಂಬ ಹೆಸರೂ ಬರುತ್ತದೆ.

ಆದ್ದರಿಂದ ದೇವರನ್ನು ಭಕ್ತಿಯಿಂದ ಪೂಜಿಸಿದರೆ, ಆದರ ಫಲಾಫಲಗಳು ದೊರೆಯುವುದು ಖಂಡಿತ. ಹಾಗೆಯೇ, ಅನುಮತಿಯಿಲ್ಲದೆ ಮತ್ತೊಬ್ಬರ ವಸ್ತುವಿಗೆ ಕೈ ಹಾಕಿದರೆ, ಯಾರೆಯಾದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಈ ಕಥೆಯ ಮೂಲ ಸಾರಾಂಶ.

English summary

When Lord Vishnu Visited The Mrityu Loka

Lord Vishnu once thought of visiting the Mrityu Loka. As he discussed it with Goddess Lakshmi, she expressed her wish of accompanying him to the Mrityu Loka. However, Lord Vishnu said it was not safe for her to go to that place since she did not know all the rules of the place. However, Goddess Lakshmi still requested him to take her along.
X
Desktop Bottom Promotion