For Quick Alerts
ALLOW NOTIFICATIONS  
For Daily Alerts

ಗುರು ಪೂರ್ಣಿಮೆಯ ಪೂಜೆ ಎಂದು? ಚಂದ್ರ ಗ್ರಹಣದ ದಿನ ಮಾಡಬಹುದೇ?

|

ಗುರು ಪೂರ್ಣಿಮೆಯನ್ನು ಹಿಂದೂ ಧರ್ಮದಲ್ಲಿ ಪವಿತ್ರವಾದ ಆಚರಣೆಯಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜೀವನದ ಸಾಕ್ಷಾತ್ಕಾರಗಳಿಗೆ ಬೆಳಕು ನೀಡುವವನು ಗುರು. ಗುರುವಿನ ಸನ್ಮಾರ್ಗದಲ್ಲಿ ನಡೆದು ಜೀವನ ನಡೆಸಿದರೆ ಮುಕ್ತಿ ದೊರೆಯುವುದು. ಹಾಗಾಗಿಯೇ ಗುರು ಪೂರ್ಣಿಮೆಯ ದಿನ ಗುರುವಿಗೆ ವಿಶೇಷ ಆರಾಧನೆ ನಡೆಸಲಾಗುವುದು. ಈ ಮೂಲಕ ಗುರುವಿಗೆ ಕೃತಜ್ಞತೆ ಹಾಗೂ ಗುರುವಿನ ಪಾದಕ್ಕೆ ತಲೆ ಭಾಗುವ ಒಂದು ಪರಿಯಾಗಿದೆ. ಗ್ರಹಣ ಎನ್ನುವುದು ಸೂತಕದ ಸಂಕೇತ.

ನಿತ್ಯದ ಬದುಕಿನಲ್ಲಿ ಬೆಳಕನ್ನು ಚೆಲ್ಲುವವನು ಚಂದ್ರ. ನಮ್ಮ ಕುಂಡಲಿಗಳ ಮೇಲೆ ಪ್ರಭಾವ ಬೀರಿ ಜೀವನದ ಬದಲಾವಣೆ ತಂದುಕೊಡುವವನು ಚಂದ್ರ. ಚಂದ್ರನಿಗೆ ಗ್ರಹಣ ಎಂದರೆ ಅದು ಜಗತ್ತಿಗೆ ಕತ್ತಲು. ಗುರುಪೂರ್ಣಿಮೆ ಹಾಗೂ ಗ್ರಹಣವು ಸಾಮಾನ್ಯವಾಗಿ ಒಂದೇ ದಿನ ಸಂಭವಿಸುವುದಿಲ್ಲ. ಆದರೆ ಈ ಬಾರಿ ಎರಡು ಒಂದೇ ದಿನ ಬಂದಿವೆ.

ಈ ಜುಲೈ 27, 2018 ಗುರು ಪೂರ್ಣಿಮೆಯ ದಿನ. ಅಂದೇ ಚಂದ್ರ ಗ್ರಹಣವು ಸಂಭವಿಸುವುದರಿಂದ ಗುರು ಪೂರ್ಣಿಮೆಯನ್ನು ಆಚರಿಸುವುದು ಹೇಗೆ? ಚಂದ್ರ ಗ್ರಹಣ ಪೂಜೆ ಮಾಡಬಾರದು ಎಂದು ಹೇಳುತ್ತದೆ... ಹಾಗಾದರೆ ಈ ಎರಡು ಸಂದರ್ಭಗಳು ಒಂದೇ ಸಮಯದಲ್ಲಿ ಉದ್ಭವ ಆಗುವುದಕ್ಕೆ ಗೊಂದಲ ಹಾಗೂ ಸಂದಿಗ್ಧತೆ ಉಂಟಾಗುವುದು ಸಹಜ. ಅದಕ್ಕಾಗಿ ಏನು ಮಾಡುವುದು? ಎನ್ನುವ ಉತ್ತರಕ್ಕೆ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಉತ್ತರ ನೋಡಿ...

gurupurnima

ಈ ವರ್ಷದ ಗುರು ಪೂರ್ಣಿಮೆ

ಗುರು ಪೂರ್ಣಿಮೆಯು ಆಶಾಢ ಮಾಸದ ಹದಿನೈದನೇ ದಿನದಂದು(ಶುಕ್ಲ ಪಕ್ಷ)ಆಚರಿಸುತ್ತಾರೆ. ಅದು ಈ ವರ್ಷ ಜುಲೈ 27ರಂದು ಬರುವುದು. ಪೂರ್ಣಿಮೆಯ ತಿಥಿ ಜುಲೈ 26 ರಂದು 11:16 ರಿಂದ ಪ್ರಾರಂಭವಾಗುವುದು. ಇದು ಜುಲೈ 28ರಂದು 01:50ರ ತನಕ ಮುಂದುವರಿಯುವುದು. ಹಿಂದೂಗಳು, ಬೌದ್ಧರು ಮತ್ತು ಜೈನರು ಪ್ರಾಥಮಿಕವಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಭಾರತದಲ್ಲಿ ವಿವಿಧ ಸಂಪ್ರದಾಯಗಳ ಪ್ರಕಾರ ಈ ಪೂಜೆಯು ಶಿವ, ಬುದ್ಧ ಮತ್ತು ವೇದವ್ಯಾಸರಿಗೆ ಅರ್ಪಿತವಾಗಿದೆ. ಜನರು ತಮ್ಮದೇ ಆದ ಗುರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುವರು. ಗುರುವು ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವನು. ಹಾಗಾಗಿ ಪ್ರತಿವರ್ಷ ಗುರುವಿನ ಗೌರವಾರ್ಥವಾಗಿ ಆಧ್ಯಾತ್ಮಿಕ ರೂಪದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗುವುದು.

ಗುರು ಪೂರ್ಣಿಮೆ ಮತ್ತು ಚಂದ್ರಗ್ರಹಣ

ಗುರು ಪೂರ್ಣಿಮೆಯ ದಿನವೇ ಚಂದ್ರಗ್ರಹಣ ಬಂದಿರುವುದರಿಂದ ಎಂದು ಪೂಜೆ ಸಲ್ಲಿಸಬೇಕು ಎನ್ನುವ ಗೊಂದಲವಿದೆ. ಏಕೆಂದರೆ ಗ್ರಹಣವು ಸೂತಕಕಾಲ ಎಂದು ಹೇಳಲಾಗುವುದು. ಈ ದುರಾದೃಷ್ಟದ ಸಮಯದಲ್ಲಿ ಪೂಜೆಯನ್ನು ಕೈಗೊಳ್ಳಬಾರದು. ಗ್ರಹಣ ಮತ್ತು ಪೂರ್ಣಿಮೆಯು ಒಂದೇ ದಿನ ಸಂಭವಿಸುತ್ತದೆ ಆದರೂ ಗ್ರಹಣವು ಜುಲೈ 27ರಂದು ರಾತ್ರಿ 11:54ರಿಂದ ಪ್ರಾರಂಭವಾಗಿ ಜುಲೈ 28ರಂದು ಮುಂಜಾನೆ 3:55ರ ವರೆಗೆ ಉಳಿದಿರುತ್ತದೆ. ಗ್ರಹಣ ಹಿಡಿಯುವುದಕ್ಕೆ 9 ಗಂಟೆಯ ಮೊದಲು ಪೂಜೆಯನ್ನು ನಡೆಸಬಹುದು. ಹಾಗಾಗಿ ಗುರು ಪೂರ್ಣಿಮೆಯ ಆಚರಣೆಯನ್ನು ಅಥವಾ ಪೂಜೆಯನ್ನು ಜುಲೈ 27ರ ಮಧ್ಯಾಹ್ನ 2 ಗಂಟೆಯ ಒಳಗೆ ಮುಗಿಸಬೇಕು. ನಂತರದ ಸಮಯದಲ್ಲಿ ಅಂದರೆ ಸೂತಕದ ಸಮಯದಲ್ಲಿ ದೇಗುಲಗಳೆಲ್ಲವೂ ಮುಚ್ಚಿರುತ್ತವೆ.

ಗುರು ಪೂರ್ಣಿಮೆಯ ಇತಿಹಾಸ

ಗುರು ಎನ್ನುವುದು ಸಂಸ್ಕೃತದ ಪದವಾಗಿದೆ. ಇದು ಎರಡು ಪದಗಳಾದ "ಗು" ಮತ್ತು "ರು" ಎನ್ನುವ ಎರಡು ಪದಗಳಿಂದ ಬಂದಿದೆ. ಇದರಲ್ಲಿ ಗು ಎಂದರೆ ಕತ್ತಲು ಹಾಗೂ ರು ಎಂದರೆ ಕತ್ತಲನ್ನು ತೆಗೆದು ಹಾಕುವುದು ಎನ್ನುವ ಅರ್ಥವನ್ನು ನೀಡುತ್ತದೆ. ಗುರು ಪೂರ್ಣಿಮೆ ಎಂದರೆ ಕತ್ತಲನ್ನು ತೊರೆದು ಬೆಳಕನ್ನು ಪಡೆಯುವುದು ಎಂದರ್ಥವಾಗುತ್ತದೆ. ಹಾಗಾಗಿ ಗುರು ಪೂರ್ಣಿಮೆಯನ್ನು ಒಬ್ಬ ಶಿಕ್ಷಕನಿಗೆ ಮೂಲಭೂತವಾಗಿ ಆಧ್ಯಾತ್ಮಿಕ ಮಾರ್ಗದರ್ಶಿಗೆ ಸಮರ್ಪಿತವಾಗಿರುವುದು. ವ್ಯಕ್ತಿಯ ಜೀವನದಲ್ಲಿ ಜ್ಞಾನವನ್ನು ನೀಡಿ ಬದುಕನ್ನು ಹಸನಾಗಿಸುವವನು ಗುರು. ಹಾಗಾಗಿ ಗುರುವಿಗೆ/ಶಿಕ್ಷಕನಿಗೆ ವಿಶೇಷ ಗೌರವ ಹಾಗೂ ಆರಾಧನೆ ನೀಡಲಾಗುವುದು.

ಶಿವನು ಮೊದಲ ಗುರು

ಒಂದು ಕಥೆಯ ಪ್ರಕಾರ ಸುಮಾರು 15,000 ವರ್ಷಗಳ ಹಿಂದೆ ಶಿವನು ಹಿಮಾಲಯದಲ್ಲಿ ಧ್ಯಾನವನ್ನು ಕೈಗೊಂಡಿದ್ದನು. ಆ ಪ್ರದೇಶದ ಜನರು ಯಾವುದೋ ಯೋಗಿ ಒಬ್ಬ ಧ್ಯಾನದಲ್ಲಿ ತೊಡಗಿದ್ದಾನೆ ಎಂದು ತಿಳಿದಿದ್ದರು. ಅವನ ಕಣ್ಣುಗಳ ಕೆಳಭಾಗದಲ್ಲಿ ನೀರುಗಳು ಗಟ್ಟಿಯಾಗಿರುವುದನ್ನು ಬಿಟ್ಟರೆ ಬೇರೆ ಯಾವುದೇ ಲಕ್ಷಣಗಳು ತೋರುತ್ತಿರಲಿಲ್ಲ. ಅನೇಕರು ಅಲ್ಲಿಗೆ ಬಂದು ಅವನನ್ನು ಭೇಟಿಯಾಗಲು ಹಾಗೂ ಅವರ ಧ್ಯಾನವನ್ನು ಮುರಿಯಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ನಂತರ ಏಳು ವ್ಯಕ್ತಿಯಗಳು ಬಂದು ಸತತ ಏಳು ವರ್ಷಗಳ ಕಾಲ ಅಲ್ಲಿಯೇ ನಿಂತು ಶಿವನನ್ನು ವೀಕ್ಷಿಸುತ್ತಿದ್ದರು. ಇದನ್ನು ಗಮನಿಸಿದ ಶಿವನು. ತನ್ನ ಕಣ್ಣುಗಳ ಕೆಳಭಾಗದಲ್ಲಿ ಕಟ್ಟಿದ್ದ ನೀರಿನ ರಹಸ್ಯವನ್ನು ಅವರಿಗೆ ನೀಡಿದನು. ಅದು ಉನ್ನತ ಮಟ್ಟದ ಪ್ರಜ್ಞೆ ಮತ್ತು ಧ್ಯಾನದಿಂದ ಮಾತ್ರ ಸಾಧಿಸುವುದಾಗಿತ್ತು. ನಂತರ ಅದನ್ನು ಪಡೆದ ಆ ಏಳು ವ್ಯಕ್ತಿಗಳು ಸಪ್ತ ಋಷಿಗಳಾದರು. ಋಷಿಗಳಿಗೆ ಯೋಗದ ರಹಸ್ಯವನ್ನು ನೀಡಿದ ಮೊದಲನೆಯ ಗುರು ಶಿವ. ಹಾಗಾಗಿ ಶಿವನೇ ಮೊದಲ ಗುರುವಾದನು. ಈ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಲುವಾಗಿ ಗುರುಪೂರ್ಣಿಮೆ ಎಂದು ಕರೆಯಲಾಯಿತು. ಆದಿ ಗುರು ಎಂದು ಸಹ ಕರೆಯಲಾಯಿತು.

English summary

When To Do The Guru Purnima Puja On The Lunar Eclipse Day?

This July 27, 2018 is a full moon day but there will be no bright full moon to see, like the other Purnima days because of the lunar eclipse. While the festival demands a Guru puja to be performed, the eclipse says, no auspicious puja should be performed on this day. What a dilemma, right? Well, we will give you a solution, read on!
X
Desktop Bottom Promotion