For Quick Alerts
ALLOW NOTIFICATIONS  
For Daily Alerts

ಓಣಂ ಹಬ್ಬದ ಹಿಂದಿರುವ ಐತಿಹಾಸಿಕ ಮಹತ್ವವೇನು?

By Jaya Subramanya
|
Onam 2019 : ಓಣಂ ಹಬ್ಬದ ಆಚರಣೆಯ ಹಿಂದಿರುವ ಮಹತ್ವವೇನು? | BoldSky Kannada

ಕೇರಳದ ರಾಷ್ಟ್ರೀಯ ಹಬ್ಬವಾಗಿರುವ ಓಣಂ ಅನ್ನು ಕೇರಳದ ಜನತೆ ಒಗ್ಗೂಡಿ ಆಚರಿಸುತ್ತಾರೆ. ಬರಿಯ ಮನೆಗಳಲ್ಲಿ ಮಾತ್ರವೇ ಈ ಹಬ್ಬವನ್ನು ಆಚರಿಸದೇ ಇಡಿಯ ನಾಡೇ ಓಣಂಗಾಗಿ ಸಿದ್ಧಗೊಳ್ಳುತ್ತದೆ. ಬೇರೆ ಬೇರೆ ಸ್ಪರ್ಧೆಗಳು, ಪೂಕಳಂ, ಬೋಟ್ ಸ್ಪರ್ಧೆ, ಓಣಂ ಸದ್ಯಂ, ಓಣಂ ನ್ಯತ್ಯ ಹೀಗೆ ಒಣಂನ ಹತ್ತು ದಿನ ಕೂಡ ಬೇರೆ ಬೇರೆ ಕಾರ್ಯಕ್ರಮಗಳಿರುತ್ತವೆ.

ಈ ವರ್ಷ ಸೆಪ್ಟೆಂಬರ್ 10 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.

ಓಣಂ ಆಚರಣೆಯು ಕೇರಳಿಗರಿಗೆ ಒಂದು ರೀತಿ ಸಂಭ್ರಮದ ಹಬ್ಬವಾಗಿದೆ. ಈ ದಿನದಂದು ಮಾಡುವ ಎಲ್ಲಾ ಕೆಲಸದಲ್ಲಿಯೂ ಹೊಸತನವಿರುತ್ತದೆ, ವೈವಿಧ್ಯತೆ ಇರುತ್ತದೆ. ಅಂತೆಯೇ ಇಲ್ಲಿನವರು ಓಣಂ ಅನ್ನು ಬಲಿ ಚಕ್ರವರ್ತಿಯ ಆಗಮನದ ಸಂಕೇತ ಎಂಬಂತೆ ಕೊಂಡಾಡುತ್ತಾರೆ ಕೂಡ. ಈ ಹಬ್ಬ ಕೂಡ ಪ್ರತ್ಯೇಕ ಐತಿಹಾಸಿಕ ಮಹತ್ವವನ್ನು ಒಳಗೊಂಡಿದ್ದು ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ....

Onam Festival


ಇತಿಹಾಸ
ದಂತಕಥೆಗಳ ಪ್ರಕಾರ ಕೇರಳ ರಾಜ್ಯವನ್ನು ಅಸುರ ರಾಜ ಬಲಿ ಚಕ್ರವರ್ತಿ ಆಳುತ್ತಿದ್ದನಂತೆ. ಬಲಿ ಚಕ್ರವರ್ತಿ ದಯಾಳು ಹಾಗೂ ಕರುಣಾಮಯಿಯಾಗಿದ್ದನು. ಆತನ ಆಡಳಿತದಲ್ಲಿ ಜನರು ಕಷ್ಟದಿಂದ ಬಳಲಿದ್ದೇ ಇಲ್ಲವಂತೆ. ಪ್ರತಿಯೊಬ್ಬರೂ ರಾಜನ ಆಡಳಿತದಿಂದ ಖುಷಿಯಾಗಿದ್ದರು ಅಂತೆಯೇ ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತು.

ಸಿಹಿ ಸಿಹಿಯಾದ 'ಉಣ್ಣಿಯಪ್ಪಮ್' ಆಹಾ ಬೊಂಬಾಟ್ ರುಚಿ!

ದೇವರಿಗೆ ಇದು ಸವಾಲಾಗಿತ್ತು
ರಾಜ ಬಲಿಚಕ್ರವರ್ತಿಯ ಉದಾರ ಮನಸ್ಸಿನಿಂದ ಸಂತಸಗೊಂಡ ಜನರು ಆತನನ್ನೇ ದೇವರೆಂದು ಪೂಜಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಮತ್ಸರ ಉಂಟಾಗುತ್ತದೆ ಮತ್ತು ಅವರು ಬಲಿಯ ಖ್ಯಾತಿಯನ್ನು ಕುಗ್ಗಿಸಬೇಕೆಂದು ಉಪಾಯವನ್ನು ಮಾಡುತ್ತಾರೆ. ಬಲಿಯಿಂದ ತಮ್ಮ ಅಧಿಕಾರಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂದು ಹೆದರಿದ ದೇವತೆಗಳು ವಿಷ್ಣುವನ್ನು ಸಂಧಿಸಿ ಅವರಲ್ಲಿ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ. ಬಲಿಯ ದಯಾಮಯ ಪ್ರವೃತ್ತಿಯ ಬಗ್ಗೆ ಅರತಿದ್ದ ವಿಷ್ಣುವು ಬಲಿಯನ್ನು ಪರೀಕ್ಷಿಸಲು ಸ್ವತಃ ತಾವೇ ವಾಮನ ರೂಪವನ್ನು ತಾಳುತ್ತಾರೆ

ವಿಷ್ಣುವಿನ ವಾಮನ ಅವತಾರ
ಬಡ ಬ್ರಾಹ್ಮಣನಾಗಿ ಕುಬ್ಜ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿ ವಿಷ್ಣುವು ಹೋಗುತ್ತಾರೆ. ತನಗೆ ಸಣ್ಣ ತುಂಡು ಭೂಮಿ ದಾನ ನೀಡುವಂತೆ ಅವರು ಬಲಿಯಲ್ಲಿ ಕೇಳುತ್ತಾರೆ. ತನ್ನ ಮೂರು ಪಾದಗಳು ಆಕ್ರಮಿಸುವ ಸ್ಥಳವನ್ನು ದಾನ ನೀಡುವಂತೆ ವಾಮನ ಬಲಿಯನ್ನು ಕೇಳುತ್ತಾರೆ. ಅಂತೆಯೇ ರಾಜನು ಇದಕ್ಕೆ ಸಮ್ಮತಿಯನ್ನು ಸೂಚಿಸುತ್ತಿದ್ದಂತೆಯೇ ವಾಮನನು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಡುತ್ತಾರೆ. ಎರಡನೇ ಹೆಜ್ಜೆಯಲ್ಲಿ ಆಕಾಶವನ್ನು ಆವರಿಸಿಕೊಳ್ಳುತ್ತಾರೆ ಮತ್ತು ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ವಿಷ್ಣುವು ಇರಿಸುತ್ತಾರೆ.

ಪಾತಾಳ ಲೋಕಕ್ಕೆ ವಿಷ್ಣುವು ಬಲಿಯನ್ನು ತಳ್ಳುತ್ತಾರೆ. ವಿಷ್ಣು ಭಕ್ತನಾಗಿದ್ದ ಬಲಿಯು ವಿಷ್ಣುವನ್ನು ನೋಡಬೇಕೆಂದು ಬಯಸುತ್ತಾರೆ. ಬಲಿಯ ಉದಾರ ಮನಸ್ಸಿನಿಂದ ಸಂಪ್ರೀತನಾದ ವಿಷ್ಣುವು ಆತನಿಗೆ ವರವನ್ನು ನೀಡುತ್ತಾರೆ. ತನ್ನ ಪ್ರಜೆಗಳನ್ನು ನೋಡಲು ವರುಷಕ್ಕೊಮ್ಮೆ ಬಲಿ ಚಕ್ರವರ್ತಿ ಭೂಮಿಗೆ ಬರಬಹುದು ಎಂಬುದು ಆ ವರವಾಗಿರುತ್ತದೆ. ಬಲಿ ಚಕ್ರವರ್ತಿಯು ಭೂಮಿಗೆ ಆಗಮಿಸುವ ದಿನವನ್ನು ಓಣಂ ಆಗಿ ಆಚರಿಸಲಾಗುತ್ತದೆ. ಬಲಿಗೆ ಗೌರವನ್ನು ತೋರಿಸಲು ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ತಮಿಳು ನಾಡಿನ ಸಚ್ಚಿಂದ್ರಮ್ದೇ ವಸ್ಥಾನದಲ್ಲಿ ಬಲಿ ಚಕ್ರವರ್ತಿ ಕಥೆಯ ಕುರಿತು ಕೆತ್ತನೆಗಳನ್ನು ರಚಿಸಿದ್ದಾರೆ.

ಮಲೆಯಾಳಿಗರ ಅಚ್ಚುಮೆಚ್ಚಿನ 'ಓಣಂ' ಹಬ್ಬದ ವಿಶೇಷತೆ ಹಾಗೂ ಮಹತ್ವ

English summary

What Is The History Behind The Celebration Of Onam Festival

Onam is considered to be the most popular festival of Kerala, where people of all ages participate with equal joy and excitement. Onam is celebrated in the month of August or September, depending upon the Malayalam Calendar, also known as the Kolla Varsham. It is celebrated during the Chingam month of the Kolla Varsham. The Onamcarnival lasts from four to ten days, and within these few days, the people of Kerala bring the culture, tradition, and rituals together in the best possible form.
X
Desktop Bottom Promotion