For Quick Alerts
ALLOW NOTIFICATIONS  
For Daily Alerts

ದೇವಸ್ಥಾನದ ಹುಂಡಿಗೆ ಹಣ ಹಾಕುವುದರ ಹಿಂದಿನ ಸತ್ಯತೆ...

By Staff
|

ಹಿಂದೂ ಧರ್ಮದಲ್ಲಿ ಪೂಜಿಸಲು ಕೋಟಿ ದೇವದೇವತೆಗಳಿದ್ದಾರೆ. ಅದೇ ದೇವ-ದೇವತೆಗಳ ಬಗ್ಗೆ ಪುರಾಣಗಳಲ್ಲಿ ಒಂದೊಂದು ಕಥೆಯಿದೆ. ಈ ಕಥೆಗಳನ್ನು ಹಿಂದೂ ಧರ್ಮಿಯರು ನಂಬುವುದು ಮಾತ್ರವಲ್ಲದೆ ಕೆಲವೊಂದು ಆಚರಣೆಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಕೆಲವೊಂದು ಆಚರಣೆಗಳು ವಿಚಿತ್ರ ಹಾಗೂ ಅಸಹಜವೆಂದು ಅನಿಸಿದರೂ ಇದು ಧಾರ್ಮಿಕ ವಿಚಾರವಾಗಿರುವ ಕಾರಣ ಪ್ರಶ್ನೆ ಎತ್ತುವಂತಿಲ್ಲ. ದೇವರ ಮೇಲಿನ ನಂಬಿಕೆಯಿಂದಲೇ ಈ ಎಲ್ಲಾ ಆಚರಣೆಗಳನ್ನು ಯಾವುದೇ ತಪ್ಪಿಲ್ಲದೆ ಮುಂದುವರಿಸಿಕೊಂಡು ಹೋಗುತ್ತಾರೆ. ಇಂತಹ ಆಚರಣೆಗಳಲ್ಲಿ ಒಂದು ದೇವಸ್ಥಾನಗಳಲ್ಲಿ ಹುಂಡಿಗೆ ಹಣ ಹಾಕುವುದು. ಶ್ರೀಮಂತ ದೇವಾಲಯಗಳು: ಇಲ್ಲಿ ಧನ ಸಂಪತ್ತು ತುಂಬಿ ತುಳುಕುತ್ತಿದೆ!

ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹಲವಾರು ಕಾಣಿಕೆ ಹುಂಡಿಗಳು ಕಾಣಸಿಗುತ್ತದೆ. ಅಲ್ಲಿಗೆ ಬರುವ ಭಕ್ತರು ಹಣವನ್ನು ತಲೆಗೆ ಮೂರು ಸುತ್ತು ತಿರುಗಿಸಿ ಬಳಿಕ ಹುಂಡಿಗೆ ಹಾಕುತ್ತಾರೆ. ಹುಂಡಿಗೆ ಹಣ ಹಾಕುವುವದರ ಹಿಂದಿರುವ ಮರ್ಮವೇನೆಂದು ನೀವು ಕೇಳಬಹುದು. ಇದಕ್ಕೆ ಹಿಂದೂ ಪುರಾಣಗಳನ್ನು ತಿರುವಿ ನೋಡಿದಾಗ ಸಂಪತ್ತಿನ ದೇವರಾಗಿರುವ ಕುಬೇರನಿಂದ ವಿಷ್ಣು ಸಾಲ ಪಡೆದಿದ್ದ. ಅದನ್ನು ತೀರಿಸಲು ಭಕ್ತರು ವಿಷ್ಣುವಿಗೆ ನೆರವಾಗುತ್ತಾರೆ ಎನ್ನುವ ಕಥೆ ಹಿಂದೂ ಪುರಾಣಗಳಲ್ಲಿ ಇದೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...

ಹುಂಡಿಯಲ್ಲಿ ಹಣ ಹಾಕುವುದು ಅಗತ್ಯವೇ ಎಂದು ಕೇಳಬಹುದು. ಇದರ ಬಗ್ಗೆ ನೀವು ಗಮನಿಸಿದಾಗ ಹಣ ಹಾಕುವುದು ಅಗತ್ಯವೆಂದನಿಸುತ್ತದೆ. ಹುಂಡಿಯಲ್ಲಿ ಹಣ ಹಾಕುವುದು ಎಷ್ಟು ಅಗತ್ಯ ಎನ್ನುವುದನ್ನು ಈ ಲೇಖನದಲ್ಲಿ ಕೊಟ್ಟಿರುವ ಕೆಲವೊಂದು ಕಾರಣಗಳಿಂದ ತಿಳಿದುಕೊಳ್ಳಿ ಮತ್ತು ಮುಂದಿನ ಸಲ ದೇವಸ್ಥಾನಕ್ಕೆ ಹೋದಾಗ ತಪ್ಪದೆ ಹುಂಡಿಗೆ ಹಣ ಹಾಕಿ.

ವಿಷ್ಣುವಿಗೆ ನೆರವಾಗುವುದು

ವಿಷ್ಣುವಿಗೆ ನೆರವಾಗುವುದು

ಕಥೆಯಲ್ಲಿ ಹೇಳಿದಂತೆ ವಿಷ್ಣುವಿಗೆ ಸಾಲ ತೀರಿಸಲು ನೆರವಾಗಲು ಹುಂಡಿಗೆ ಹಣ ಹಾಕುವ ಭಕ್ತರು ವಿಷ್ಣುವನ್ನು ಸಾಲ ಮುಕ್ತನನ್ನಾಗಿಸಲು ಪ್ರಯತ್ನಿಸುತ್ತಾರೆ.ಈ ಕಥೆಗೆ ಬಲ ನೀಡುವಂತೆ ಹೆಚ್ಚಿನ ಎಲ್ಲಾ ಧರ್ಮಗಳಲ್ಲೂ ಹುಂಡಿ ಎನ್ನುವುದು ಇದೆ. ಇದರಿಂದ ಎಲ್ಲಾ ಧರ್ಮಗಳ ಭಕ್ತರು ಸಾಲ ಮುಕ್ತನಾಗಲು ವಿಷ್ಣುವಿಗೆ ನೆರವಾಗುತ್ತಿದ್ದಾರೆ ಎನ್ನಬಹುದು.

ದೇವಸ್ಥಾನದ ಅಭಿವೃದ್ಧಿಗೆ ನಿಧಿ ಶೇಖರಣೆ

ದೇವಸ್ಥಾನದ ಅಭಿವೃದ್ಧಿಗೆ ನಿಧಿ ಶೇಖರಣೆ

ಯಾವುದೇ ಧರ್ಮವಾಗಿದ್ದರೂ ಅಲ್ಲಿರುವ ಮಂದಿರಗಳ ದೈನಂದಿನ ನಿರ್ವಹಣೆಗೆ ಹಣ ಬೇಕಾಗುತ್ತದೆ. ಹುಂಡಿಯಲ್ಲಿ ಹಾಕುವ ಹಣವನ್ನು ವ್ಯವಸ್ಥಾಪನ ಮಂಡಳಿ ಪಡೆದುಕೊಂಡು ಅದನ್ನು ದೈನಂದಿನ ಖರ್ಚು ಮತ್ತು ಮಂದಿರದ ಅಭಿವೃದ್ಧಿಗೆ ಬಳಸುತ್ತದೆ.

ದೇವಸ್ಥಾನದ ಅಭಿವೃದ್ಧಿಗೆ ನಿಧಿ ಶೇಖರಣೆ

ದೇವಸ್ಥಾನದ ಅಭಿವೃದ್ಧಿಗೆ ನಿಧಿ ಶೇಖರಣೆ

ದೈನಂದಿನ ಸಾಮಾಗ್ರಿಗಳ ಖರೀದಿ, ದೇವದೇವರುಗಳ ಪೂಜೆಯ ಖರ್ಚು, ಅರ್ಚಕರು ಸೇರಿದಂತೆ ದೇವಸ್ಥಾನದಲ್ಲಿನ ಸಿಬ್ಬಂದಿಯ ಖರ್ಚು ಈ ಹುಂಡಿಯಿಂದಲೇ ತೆಗೆಯಬೇಕಾಗುತ್ತದೆ.

ದೇವರ ದಯೆ ಪಡೆಯಲು

ದೇವರ ದಯೆ ಪಡೆಯಲು

ಹುಂಡಿಗೆ ಹಣ ಹಾಕುವ ಮೂಲಕ ದೇವರು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಮೃದ್ಧಿ ನೀಡುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಇದು ನಂಬಿಕೆಯಲ್ಲದೆ ಬೇರೇನೂ ಅಲ್ಲ.

ದೇವರ ದಯೆ ಪಡೆಯಲು

ದೇವರ ದಯೆ ಪಡೆಯಲು

ಇದು ಕೇವಲ ಒಂದು ಅಥವಾ ಎರಡು ದಿನದಲ್ಲಿ ಬಂದಿರುವಂತಹ ನಂಬಿಕೆಯಲ್ಲ. ಶತಮಾನಗಳಿಂದಲೂ ಈ ನಂಬಿಕೆ ಬೆಳೆದು ಬಂದಿದೆ. ದೇವರ ಆಶೀರ್ವಾದವನ್ನು ಅನುಭವಿಸಬಹುದೇ ಹೊರತು ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ.

ವಿಶೇಷ ಪೂಜೆಗಳಿಗಾಗಿ

ವಿಶೇಷ ಪೂಜೆಗಳಿಗಾಗಿ

ಹೆಚ್ಚಿನ ದೇವಸ್ಥಾನಗಳು ತಮ್ಮದೇ ಆದ ಪೂಜಾ ವಿಧಿವಿಧಾನಗಳನ್ನು ಅನುಸರಿಕೊಂಡು ಹೋಗುತ್ತವೆ. ಈ ಚಟುವಟಿಕೆಗಳು ತುಂಬಾ ವಿಶೇಷವಾಗಿರುವಂತಹದ್ದು ಮತ್ತು ವರ್ಷದಲ್ಲಿ ಇದಕ್ಕೆ ತುಂಬಾ ಹಣ ಬೇಕಾಗುತ್ತದೆ. ವಿಶೇಷ ದಿನಗಳಲ್ಲಿ ಮಾಡುವಂತಹ ಯಜ್ಞಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ.

ವಿಶೇಷ ಪೂಜೆಗಳಿಗಾಗಿ

ವಿಶೇಷ ಪೂಜೆಗಳಿಗಾಗಿ

ಇದಕ್ಕಾಗಿ ನಾವು ಹುಂಡಿಗೆ ಹಣ ಹಾಕುವುದು ತುಂಬಾ ಅಗತ್ಯವಾಗಿರುತ್ತದೆ. ಈ ಯಜ್ಞಗಳಿಗೆ ಬರುವ ಹೆಚ್ಚಿನ ಸಂಖ್ಯೆಯ ಭಕ್ತರು ಹುಂಡಿಗೆ ಹಣ ಹಾಕುತ್ತಾರೆ. ಇದರಿಂದ ಬೇಕಾದಷ್ಟು ಹಣ ಪಡೆದು ವಿಶೇಷ ಯಜ್ಞಗಳನ್ನು ಮಾಡಲಾಗುತ್ತದೆ.

Image courtesy

ಅಶಕ್ತರಿಗೆ ನೆರವಾಗಲು

ಅಶಕ್ತರಿಗೆ ನೆರವಾಗಲು

ಹೆಚ್ಚಿನ ಮಂದಿರಗಳು ಇದನ್ನು ಮಾಡುವುದಿಲ್ಲ. ಆದರೆ ಕೆಲವೊಂದು ಮಂದಿರಗಳ ವ್ಯವಸ್ಥಾಪನ ಮಂಡಳಿ ಹುಂಡಿಯಲ್ಲಿ ಬರುವಂತಹ ಹಣವನ್ನು ಅಶಕ್ತರಿಗೆ ಬೇಕಾಗುವ ಮನೆ ಕಟ್ಟಿಕೊಡುತ್ತದೆ ಮತ್ತು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಹುಂಡಿಯಲ್ಲಿರುವ ಹಣವನ್ನು ದಾನಧರ್ಮ ಮಾಡಲು ಬಳಸಲಾಗುತ್ತದೆ ಮತ್ತು ಯಾವುದೇ ವ್ಯಾಪಾರಕ್ಕಲ್ಲ.

ಆಸೆಮುಕ್ತನಾಗಲು

ಆಸೆಮುಕ್ತನಾಗಲು

ಪುರಾಣಗಳ ಪ್ರಕಾರ ವ್ಯಕ್ತಿಯೊಬ್ಬ ತನ್ನಲ್ಲಿರುವ ಹಣವನ್ನು ಬೇರೆಯವರಿಗೆ ದಾನವಾಗಿ ನೀಡಿದಾಗ ಮಾತ್ರ ಆತ ಆಸೆಮುಕ್ತನಾಗುತ್ತಾನೆ. ಹುಂಡಿಯಲ್ಲಿ ಹಣ ಹಾಕುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಅಂಶಗಳು ದೂರವಾಗಿ ಹೃದಯವು ನಿರ್ಮಲವಾಗಲಿ ಎನ್ನುವುದು. ಹುಂಡಿಯಲ್ಲಿ ಹಣ ಹಾಕಲು ಇದು ಒಂದು ಕಾರಣವಾಗಿದೆ.

ಆಸೆಮುಕ್ತನಾಗಲು

ಆಸೆಮುಕ್ತನಾಗಲು

ದೇವರಲ್ಲಿನ ನಂಬಿಕೆ ಹುಂಡಿಯಲ್ಲಿ ಜನರು ಹಣ ಹಾಕಲು ಕಾರಣವಾಗಿದೆ. ಇದರಲ್ಲಿ ಯಾವುದೇ ಸ್ವಾರ್ಥ ಕಾಣಿಸುತ್ತಿಲ್ಲ ಮತ್ತು ಜನರು ಹುಂಡಿಗೆ ಹಣ ಹಾಕಲೇಬೇಕು ಎಂದು ಯಾರು ಕೂಡ ಅವರನ್ನು ಒತ್ತಾಯಿಸುವುದಿಲ್ಲ.

English summary

What Is The Concept Of Hundi In Temple?

India is a land of mixed cultures and traditions where many religions grow, sustain and flourish by themselves. Due to its secular concept towards religions, every Indian is free to follow and have faith in his/her own religion. As a matter of fact, every religion all over the world has its own gods and goddesses; and everyone is free to follow the religion that they like to and prefer.
X
Desktop Bottom Promotion