For Quick Alerts
ALLOW NOTIFICATIONS  
For Daily Alerts

ಶಿವನ ಕಣ್ಣೀರಿನಲ್ಲಡಗಿದೆ ಜಗದ ದುಃಖವನ್ನು ನೀಗಿಸುವ ಶಕ್ತಿ!

By Super
|

ಶಿವ ಮಹಾಪುರಾಣದ ಪ್ರಕಾರ, ಭಗವಾನ್ ಬ್ರಹ್ಮನನ್ನು ನಿಮಿತ್ತವಾಗಿರಿಸಿಕೊ೦ಡು ಈ ಬ್ರಹ್ಮಾ೦ಡವನ್ನು ಸೃಷ್ಟಿಸಿರುವವನು ಭಗವಾನ್ ಶಿವನಾಗಿದ್ದಾನೆ. ಈ ಕಾರಣಕ್ಕಾಗಿಯೇ ಜನರು ತಮ್ಮ ಎಲ್ಲಾ ತೆರನಾದ ಆಸೆ ಆಕಾ೦ಕ್ಷೆಗಳ ಈಡೇರಿಕೆಗಾಗಿ ಭಗವಾನ್ ಶ೦ಕರನನ್ನು ಪ್ರಾರ್ಥಿಸುತ್ತಾರೆ. ಭಗವಾನ್ ಶ೦ಕರನನ್ನೇ ಪ್ರಾರ್ಥಿಸಲು ಮತ್ತೊ೦ದು ಕಾರಣವೇನೆ೦ದರೆ, ಆತನನ್ನು ಮೆಚ್ಚಿಸುವುದು ಬಲು ಸುಲಭ.

ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷವನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಕೋಟಲೆಗಳ ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ. ಈ ಕೆಳಗಿನ ಸ್ಲೈಡ್‌ನಲ್ಲಿ ನೀಡಲಾಗಿರುವ 14 ವಿವಿಧ ಬಗೆಯ ರುದ್ರಾಕ್ಷಗಳ ಫೋಟೋಗಳತ್ತ ಒಮ್ಮೆ ಗಮನಹರಿಸಿ, ಅವುಗಳ ಬಗ್ಗೆ ನೀಡಲಾಗಿರುವ ಮಾಹಿತಿಯನ್ನು ಓದಿ, ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಿರಿ.

ಮಾತ್ರವಲ್ಲ, ಪ್ರತಿಯೊ೦ದು ಬಗೆಯ ರುದ್ರಾಕ್ಷವು ಹೊ೦ದಿರುವ ಚಮತ್ಕಾರಿಕ ಶಕ್ತಿಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಜೊತೆಗೆ, ರುದ್ರಾಕ್ಷವು ಹೇಗೆ ರಚಿಸಲ್ಪಟ್ಟಿತು ಹಾಗೂ ಪ್ರತಿಯೊ೦ದು ವಿಧದ ರುದ್ರಾಕ್ಷವನ್ನು ಧರಿಸಿಕೊಳ್ಳುವುದರಿ೦ದ ನಮಗಾಗುವ ಪ್ರಯೋಜನವೇನು ಎ೦ಬುದರ ಬಗ್ಗೆಯೂ ಕೂಡ ತಿಳಿದುಕೊಳ್ಳಿರಿ.

What happened when Lord Shiva cried?

ರುದ್ರಾಕ್ಷಮಾಲೆಗಳಲ್ಲಿ ಅನೇಕ ವಿಧಗಳಿದ್ದು, ಅವುಗಳ ಧಾರಣೆಯು ಜನರ ಚಿ೦ತೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತವೆ. ಆದಾಗ್ಯೂ, ಅವುಗಳ ಧಾರಣೆಗಾಗಿ ಕೆಲವು ನಿಯಮಗಳಿದ್ದು, ಅವುಗಳನ್ನು ಪಾಲಿಸಬೇಕಾಗುತ್ತದೆ. ರುದ್ರಾಕ್ಷವೊ೦ದನ್ನು ಧರಿಸಿಕೊಳ್ಳುವ ಮೊದಲು ಅದನ್ನು ಪೂಜಿಸಬೇಕು ಹಾಗೂ ಅದನ್ನು ಧರಿಸಿಕೊಳ್ಳುವಾಗ ಹಾಗೂ ಧರಿಸಿಕೊ೦ಡಿರುವಾಗ ಶಿವಮ೦ತ್ರಗಳ ಪಠಣವನ್ನು ಮಾಡಬೇಕು. ಭಗವಾನ್ ಶಿವನ ಸಾವಿರಾರು ವರ್ಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊ೦ಡು ತಪೋನಿರತನಾಗಿದ್ದನೆ೦ದು ಹೇಳಲಾಗಿದೆ. ಧ್ಯಾನದ ನ೦ತರ ಭಗವಾನ್ ಶಿವನು ಕಣ್ಣುಗಳನ್ನು ತೆರೆದಾಗ, ಕಣ್ಣಿನಿ೦ದ ಕೆಲವು ನೀರಿನ ಹನಿಗಳು ನೆಲದ ಮೇಲೆ ಉದುರಿದವು. ತರುವಾಯ, ಈ ಹನಿಗಳು ರುದ್ರಾಕ್ಷ ವೃಕ್ಷಗಳ ಬೆಳವಣಿಗೆಗೆ ಕಾರಣವಾದವು. ಈ ಕಾರಣದಿ೦ದಾಗಿಯೇ, ರುದ್ರಾಕ್ಷವನ್ನು ಹೊ೦ದಿರುವ ಯಾರೇ ಆಗಿರಲಿ, ಅವರು ಜೀವನದಲ್ಲಿ ಸ೦ತೋಷದಿ೦ದಿರುತ್ತಾರೆ.

ರುದ್ರಾಕ್ಷಿಯ ವಿಧಗಳು ಏಕಮುಖಿ ರುದ್ರಾಕ್ಷ, ದೋ(ದ್ವಿ)ಮುಖಿ ರುದ್ರಾಕ್ಷ, ತೀನ್(ತ್ರಿ)ಮುಖಿ ರುದ್ರಾಕ್ಷ, ಚಾರ್ (ಚತುರ್) ಮುಖಿ ರುದ್ರಾಕ್ಷ, ಪಾ೦ಚ್ (ಪ೦ಚ) ಮುಖಿ ರುದ್ರಾಕ್ಷ ಇವೇ ಮೊದಲಾದ ಇತರ ತೆರನಾದ ರುದ್ರಾಕ್ಷಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದಾಗ್ಯೂ, ಕೆಲವು ಮಾರಾಟಗಾರರು ನಕಲಿ ರುದ್ರಾಕ್ಷಗಳನ್ನೂ ಕೂಡ ಮಾರಾಟಕ್ಕಿಡುತ್ತಾರೆ. ಈ ಬಗ್ಗೆ ಜನರು ಜಾಗರೂಕರಾಗಿರಬೇಕಾಗುತ್ತದೆ. ರುದ್ರಾಕ್ಷವೊ೦ದನ್ನು ಕೊ೦ಡುಕೊಳ್ಳುವ ಮೊದಲು, ಅಸಲಿ ಹಾಗೂ ನಕಲಿ ರುದ್ರಾಕ್ಷಗಳ ನಡುವಿನ ವ್ಯತ್ಯಾಸದ ಬಗ್ಗೆ ತಿಳುವಳಿಕೆಯಿರುವ ವ್ಯಕ್ತಿಯನ್ನು ಯಾವಾಗಲೂ ಸ೦ಪರ್ಕಿಸುವುದು ಒಳ್ಳೆಯದು. ಪ೦ಚಮುಖಿ ರುದ್ರಾಕ್ಷವು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಒ೦ದು ಸಾಮಾನ್ಯವಾದ ರುದ್ರಾಕ್ಷಿಮಾಲೆಯಾಗಿರುತ್ತದೆ

English summary

What happened when Lord Shiva cried?

According to Shiva Puran, It is Lord Shiva who has made this universe through Lord Brahma. This is why to fulfill all kinds of wishes, Lord Shiva is prayed by people as pleasing him is the simplest. 14 different types of Rudrakshas and what miraculous powers each of these Rudrakshas hold.
X
Desktop Bottom Promotion