For Quick Alerts
ALLOW NOTIFICATIONS  
For Daily Alerts

ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು

|

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾ ಮಹತ್ವದ ಸ್ಥಾನವಿದೆ. ರುದ್ರಾಕ್ಷಿಯಲ್ಲಿ ದೈವೀ ಸ್ವರೂಪವನ್ನು ಕಾಣಲಾಗುತ್ತದೆ. ದುಷ್ಟಶಕ್ತಿಯನ್ನು ತಡೆಯುವ ಶಕ್ತಿ ರುದ್ರಾಕ್ಷಿಗೆ ಇದೆ ಎಂದು ನಂಬಲಾಗುತ್ತದೆ. ಗ್ರಹಗತಿಗಳ ದೋಷವನ್ನು ತಡೆಯಲು ಹಾಗೂ ತಮ್ಮ ಕೆಲಸದಗಳು ಸುಸೂತ್ರವಾಗಿ ನೆರವೇರಲು ರುದ್ರಾಕ್ಷಿ ಧರಿಸುತ್ತಾರೆ.

ರುದ್ರಾಕ್ಷ ಎಂಬುದು ಒಂದು ಮರ, ಆ ಮರದಲ್ಲಿ ಸಿಗುವ ಕಾಯಿಯೇ ರುದ್ರಾಕ್ಷಿ. ಇದರ ಕುರಿತು ಒಂದು ಪೌರಾಣಿಕ ಕತೆಯಿದೆ. ಪುರಾಣಗಳ ಪ್ರಕಾರ, ಶಿವನು ಸತತ ಧ್ಯಾನದ ನಂತರ ತನ್ನ ಕಣ್ಣು ತೆರೆಯುವ ಸಂದರ್ಭದಲ್ಲಿ ಕಣ್ಣಿನಿಂದ ಹೊರ ಬಿದ್ದ ಹನಿಯಿಂದ ಈ ರುದ್ರಾಕ್ಷ ಮರ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶಿವ ಭಕ್ತರು ರುದ್ರಾಕ್ಷ ಮಾಲೆ ಧರಿಸುತ್ತಾರೆ. ಶಿವ ಪೂಜೆಗೆ ರುದ್ರಾಕ್ಷಿ ಮಾಲೆ ಬಳಸಿದರೆ ತುಮಬಾ ಒಳ್ಳೆಯದು. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ದೇವರ ಮೂರ್ತಿಯಷ್ಟೇ ಭಕ್ತಿಯಿಂದ ಕಾಣಲಾಗುವುದು.

ರುದ್ರಾಕ್ಷಿಗಳಲ್ಲಿ ಹಲವಾರು ಬಗೆಯ ರುದ್ರಾಕ್ಷಿಗಳಿವೆ. ರುದ್ರಾಕ್ಷಿಗಳಲ್ಲಿ ಏಕಮುಖಿ, ದ್ವಿಮುಖಿ, ತ್ರಿಮುಖಿ ಎಂದು ಹಲವಾರು ರೀತಿಯಲ್ಲಿ ವಿಂಗಡಿಸಲಾಗಿದೆ. ಒಂದೊಂದು ಬಗೆಯ ರುದ್ರಾಕ್ಷಿಗೆ ಅದರದ್ದೇ ಆದ ಮಹತ್ವವಿದೆ. ಒಂದೊಂದು ಸಿದ್ದಿಗಾಗಿ ಒಂದೊಂದು ಬಗೆಯ ರುದ್ರಾಕ್ಷಿಯನ್ನು ಧರಿಸಲಾಗುವುದು.

ವಿವಿಧ ಮುಖದ ರುದ್ರಾಕ್ಷಿ

ವಿವಿಧ ಮುಖದ ರುದ್ರಾಕ್ಷಿ

ರುದ್ರಾಕ್ಷಿಗಳಲ್ಲಿ ಹಲವಾರು ಬಗೆಯ ರುದ್ರಾಕ್ಷಿಗಳಿವೆ. ರುದ್ರಾಕ್ಷಿಗಳಲ್ಲಿ ಏಕಮುಖಿ, ದ್ವಿಮುಖಿ, ತ್ರಿಮುಖಿ ಎಂದು ಹಲವಾರು ರೀತಿಯಲ್ಲಿ ವಿಂಗಡಿಸಲಾಗಿದೆ. ಒಂದೊಂದು ಬಗೆಯ ರುದ್ರಾಕ್ಷಿಗೆ ಅದರದ್ದೇ ಆದ ಮಹತ್ವವಿದೆ. ಒಂದೊಂದು ಸಿದ್ದಿಗಾಗಿ ಒಂದೊಂದು ಬಗೆಯ ರುದ್ರಾಕ್ಷಿಯನ್ನು ಧರಿಸಲಾಗುವುದು.

ಕೆಟ್ಟ ಚಟಗಳಿಂದ ಹೊರಬರಲು ಏಕ ಮುಖ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು, ಕುಟುಂಬದಲ್ಲಿ ಸಾಮರಸ್ಯ ನೆಲೆಸಲು ದ್ವಿಮುಖ ರುದ್ರಾಕ್ಷಿ, ಆತ್ಮ ವಿಶ್ವಾಸ ಹೆಚ್ಚಲು ಮೂರು ಮುಖದ ರುದ್ರಾಕ್ಷಿ,ಮಾನಸಿಕ ಒತ್ತಡ ಕಡಿಮೆ ಮಾಡಿ, ಜ್ಞಾಪಕ ಶಕ್ತಿ ಹೆಚ್ಚಲು ನಾಲ್ಕು ಮುಖದ ರುದ್ರಾಕ್ಷಿ, ಮೂಲವ್ಯಾಧಿ, ಪಿತ್ತ, ಸ್ತನ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಪಂಚಮುಖಿ ರುದ್ರಾಕ್ಷಿ ಲೈಂಗಿಕ ಸಮಸ್ಯೆ, ಬಾಯಿ ರೋಗ, ಮೂತ್ರಕೋಶ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಅಜೀರ್ಣತೆ, ಗಂಟಲು ಸೋಂಕು, ಸಂಧಿವಾತ ಮುಂತಾದ ರೋಗಗಳನ್ನು ನಿವಾರಿಸಲು ಆರು ಮುಖದ ರುದ್ರಾಕ್ಷಿ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಗಾಗಿ ಏಳು ಮುಖದ ರುದ್ರಾಕ್ಷಿ, ಶನಿ ಹಾಗೂ ರಾಹುವಿನ ಕೆಟ್ಟ ದೃಷ್ಟಿಯಿಂದ ಪಾರಾಗಲು ಎರಡು ಮುಖದ ರುದ್ರಾಕ್ಷಿ, ರಾಹು ಹಾಗೂ ಕೇತುವಿನ ಕೆಟ್ಟ ದೃಷ್ಟಿಯಿಂದ ಪಾರಾಗಲು ಒಂಭತ್ತು ಮುಖದ ರುದ್ರಾಕ್ಷಿ ನಿದ್ರಾಹೀನತೆ, ಆಯಾಸ ಹಾಗೂ ಅತಿಯಾದ ರಕ್ತದೊತ್ತಡ ತಡೆಗಟ್ಟಲು ಹತ್ತು ಮುಖದ ರುದ್ರಾಕ್ಷಿ, ಏಕಾಗ್ರತೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲು ಹನ್ನೊಂದು ಮುಖದ ರುದ್ರಾಕ್ಷಿ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮುಖಂಡರಿಗೆ ಹನ್ನೆರಡು ಮುಖದ ರುದ್ರಾಕ್ಷಿ ಮುಖಂಡರು, ಚಿತ್ರನಟರು, ರಾಜಕಾರಣಿಗಳು, ಮಾರ್ಕೆಟಿಂಗ್ ವೃತ್ತಿಯಲ್ಲಿರುವವರು ಹದಿಮೂರು ಮುಖದ ರುದ್ರಾಕ್ಷಿ ಒಳ್ಳೆಯದೆಂದು ಹೇಳಲಾಗುತ್ತದೆ.

ಎಷ್ಟು ಮುಖದ ರುದ್ರಾಕ್ಷಿ ಧರಿಸುತ್ತೇವೆ ಅಷ್ಟೇ ಮುಖ್ಯವಾದದು ಎಷ್ಟು ಮಣಿಯ ರುದ್ರಾಕ್ಷಿ ಧರಿಸುತ್ತಿದ್ದೇವೆ ಅನ್ನುವುದು ಆಗಿದೆ. ಇಲ್ಲಿಎಷ್ಟು ಮಣಿಯ ರುದ್ರಾಕ್ಷಿ ಒಳ್ಳೆಯದೆಂದು ಹೇಳಲಾಗಿದೆ ನೋಡಿ.

ಎಷ್ಟು ಮಣಿಯ ರುದ್ರಾಕ್ಷಿ ಮಾಲೆ ಒಳ್ಳೆಯದು

ಎಷ್ಟು ಮಣಿಯ ರುದ್ರಾಕ್ಷಿ ಮಾಲೆ ಒಳ್ಳೆಯದು

ರುದ್ರಾಕ್ಷಿ ಮಾಲೆ ಧರಿಸಲು ಕೆಲವೊಂದು ಧಾರ್ಮಿಕ ನಿಯಮಗಳಿವೆ. ಅವುಗಳ ಪ್ರಕಾರವೇ ರುದ್ರಾಕ್ಷಿಯನ್ನು ಧರಿಸಬೇಕು. ಎಷ್ಟು ಮಣಿಯ ರುದ್ರಾಕ್ಷಿ ಒಳ್ಳೆಯದೆಂದು ಕೂಡ ಪುರಾಣಗಳಲ್ಲಿ ಹೇಳಲಾಗಿದೆ.

* 108 ಮಣಿಗಳಿರುವ ರುದ್ರಾಕ್ಷಿ ಮಾಲೆ

ಏನಾದರೂ ಕೆಲಸ ಮಾಡಿದಾಗ ಆ ಕೆಲಸದಲ್ಲಿ ಸಿದ್ಧಿ ದೊರೆಯಲು 108 ಮಣಿಗಳಿರುವ ರುದ್ರಾಕ್ಷಿಯನ್ನು ಧರಿಸುದರೆ ಸಕಲ ಕಾರ್ಯಗಳಲ್ಲಿ ಸಿದ್ಧಿ, ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಮನೋಕಾಮನೆಗಳು ಈಡೇರಲು ಹಾಗೂ ಜಪ ತಪಾದಿ ಕಾರ್ಯಗಳಲ್ಲಿ 108 ಮಣಿಗಿರುವ ಮಾಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

* 140 ಮಣಿಗಳಿರು ರುದ್ರಾಕ್ಷಿ ಮಾಲೆ

ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ನೂರೆಂಟು ಮಣಿಗಳಿರುವ ರುದ್ರಾಕ್ಷಿಯನ್ನು ಧರಿಸಲಾಗುವುದು.

* 100 ಮಣಿಗಳಿರುವ ರುದ್ರಾಕ್ಷಿ ಮಾಲೆ

ಮೋಕ್ಷ ಬಯಸುವವರು 100 ಮಣಿಗಳಿರುವ ರುದ್ರಾಕ್ಷಿ ಮಾಲೆ ಧರಿಸಿದರೆ ಒಳ್ಳೆಯದೆಂಬ ನಂಬಿಕೆ ಇದೆ..

* 50 ಮಣಿಗಳಿರುವ ರುದ್ರಾಕ್ಷಿ

50 ರುದ್ರಾಕ್ಷಿಯುಳ್ಳ ಮಾಲೆಯನ್ನು ಕಂಠದಲ್ಲಿ ಧರಿಸಿದರೆ ಶುಭಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುವುದು.

* 15 ಮಣಿಗಳಿರುವ ರುದ್ರಾಕ್ಷಿ ಮಾಲೆ

15 ಮಣಿಗಳ ರುದ್ರಾಕ್ಷಿ ಮಾಲೆಯನ್ನು ಮಂತ್ರಸಿದ್ಧಿ ಹಾಗೂ ತಂತ್ರಸಿದ್ಧಿಕಾರ್ಯಗಳಿಗೆ ಬಳಸಲಾಗುತ್ತದೆ.

ರುದ್ರಾಕ್ಷಿ ಧರಿಸುವುದರ ಕುರಿತು ಧಾರ್ಮಿಕ ನಿಯಮಗಳು

ರುದ್ರಾಕ್ಷಿ ಧರಿಸುವುದರ ಕುರಿತು ಧಾರ್ಮಿಕ ನಿಯಮಗಳು

ಪವಿತ್ರವಾದ ರುದ್ರಾಕ್ಷಿ ಮಣಿ ಇರುವ ಮಾಲೆಯನ್ನು ಹೇಗೆ ಮತ್ತು ಎಷ್ಟು ಮಣಿಗಳನ್ನು ಬಳಸಬೇಕು ಎಂಬುದರ ಬಗ್ಗೆ ಕೂಡ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಬೇಕಾಬಿಟ್ಟಿ ನಾಟಕೀಯವಾಗಿ ರುದ್ರಾಕ್ಷಿ ಮಾಲೆ ಧರಿಸಿದರೆ ಅದರಿಂದ ತೊಂದರೆ ಉಂಟಾಗುತ್ತದೆ. ರುದ್ರಾಕ್ಷಿ ಮಾಲೆಯನ್ನು ಕೊಳ್ಳುವಾಗ ಎಚ್ಚರ ವಹಸಿಬೇಕು, ಏಕೆಂದರೆ ಕೆಲವೊಮದು ಕಡೆ ನಕಲಿ ಮಣಿಗಳನ್ನು ನೀಡುತ್ತಾರೆ. ನಕಲಿ ರುದ್ರಾಕ್ಷಿ ಧರಿಸಬಾರದು, ಇದು ಅಶುಭವನ್ನು ತರುತ್ತದೆ. ರುದ್ರಾಕ್ಷಿ ಮಾಲೆ ತುಂಡಾದರೆ ಮತ್ತೆ ಆ ರುದ್ರಾಕ್ಷಿ ಮಾಲೆ ಧರಿಸಬಾರದು.

ನೇಪಾಳ ಕಡೆಯಲ್ಲಿ ಅತೀಹೆಚ್ಚು ರುದ್ರಾಕ್ಷಿ ಮಾಲೆಯ ವ್ಯಾಪಾರ ನಡೆಯುತ್ತದೆ. ಇಲ್ಲಿ ನಿಮಗೆ ಅಸಲಿ ರುದ್ರಾಕ್ಷಿ ಸಿಗುತ್ತದೆ.

ವೈಜ್ಞಾನಿಕ ದೃಷ್ಟಿಯಿಂದಲೂ ರುದ್ರಾಕ್ಷಿ ಧರಿಸುವುದು ಒಳ್ಳೆಯದು

ವೈಜ್ಞಾನಿಕ ದೃಷ್ಟಿಯಿಂದಲೂ ರುದ್ರಾಕ್ಷಿ ಧರಿಸುವುದು ಒಳ್ಳೆಯದು

ರುದ್ರಾಕ್ಷಿ ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ದೊರೆಯುತ್ತದೆ. ರುದ್ರಾಕ್ಷದಲ್ಲಿ ಅವಾಹಕ ಶಕ್ತಿ ಇದೆ ಎಂದು ವಿಜ್ಞಾನ ಕೂಡ ಹೇಳುತ್ತದೆ. ಅವಾಹಕ ಗುಣ ಯಾವುದೇ ನಕಾರಾತ್ಮಕ ಶಕ್ತಿಯ ವಿರುದ್ಧ ಹೋರಾಡುತ್ತದೆ. ನಮ್ಮ ದೇಹ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾದಾಗ ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ಇದರಿಂದಾಗಿ ರಕ್ತದೊತ್ತಡ, ಆತಂಕ ಮುಂತಾದ ಸಮಸ್ಯೆ ಉಂಟಾಗುವುದು, ಹಾರ್ಮೋನ್ಗಳ ಅಸಮತೋಲನ ಉಂಟಾಗುವುದು. ಇದನ್ನು ತಡೆಯುವ ಶಕ್ತಿ ರುದ್ರಾಕ್ಷಿಯಲ್ಲಿದೆ.

English summary

What Are The Rules For Wearing Rudraksha?

Here are what are rules one must follow while wearing Rusdraksha and how many beats Rudraksha is good for you, to know this read this article.
X
Desktop Bottom Promotion