For Quick Alerts
ALLOW NOTIFICATIONS  
For Daily Alerts

ಪಕ್ಷಿಗಳಿಗೆ ಆಹಾರ ನೀಡುವುದರಿಂದ ಇರುವ ಲಾಭಗಳು ಯಾವುವು?

|

ಪಕ್ಷಿಗಳಿಗೆ ಆಹಾರ ನೀಡುವುದು, ಶುಕ್ರ ಗ್ರಹದ ತಪ್ಪು ಸ್ಥಾನದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಶನಿ ದೇವ ಮತ್ತು ಸೂರ್ಯ ದೇವರನ್ನು ಸಂತೋಷಪಡಿಸುತ್ತದೆ. ಇದು ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ತೊಡೆದುಹಾಕಲು ಕೂಡಾ ಸಹಾಯ ಮಾಡುತ್ತದೆ. ಹಕ್ಕಿಗಳಿಗೆ ಆಹಾರ ನೀಡುವುದು ಕುಟುಂಬದ ಸದಸ್ಯರ ಆರೋಗ್ಯ ಸುಧಾರಿಸಲು ಸಹ ಸಹಾಯ ಮಾಡಬಹುದು. ರಾಹು ಮತ್ತು ಕೇತು ದೆಶೆಯ ಸಂದರ್ಭದಲ್ಲಿ ಇದನ್ನು ಶಿಫಾರಸು ಮಾಡಲಾಗಿದೆ.

ಪಕ್ಷಿಗಳ ಒಡನಾಡಿತ್ವವನ್ನು ಆನಂದಿಸುವ ಅವಕಾಶ ಅವುಗಳಿಗೆ ಆಹಾರ ನೀಡುವುದರಿಂದ ಸಿಗುವ ಒಂದು ಉತ್ತಮವಾದ ಪ್ರಯೋಜನವೆಂದೇ ಹೇಳಬಹುದು. ಅನೇಕ ಪಕ್ಷಿಗಳು ಆಹಾರ ಮತ್ತು ನೀರನ್ನು ಹುಡುಕುತ್ತಾ ಸುಡುವ ಸೂರ್ಯನ ಅಡಿಯಲ್ಲಿ ಹಾದು ಹೋಗುತ್ತವೆ. ಎಲ್ಲಾ ಹಕ್ಕಿಗಳೂ ತಮ್ಮ ವಾಸಕ್ಕಾಗಿ ಅನುಕೂಲಕರ ವಾತಾವರಣವನ್ನು ಪಡೆದಿರುವುದಿಲ್ಲ. ಇದು ಅವರ ಸಂಖ್ಯೆಗಳು ವೇಗವಾಗಿ ಕುಗ್ಗಿ ಹೋಗಲು ಒಂದು ಮುಖ್ಯ ಕಾರಣವಾಗಿದೆ. ನೀರು ಮತ್ತು ಆಹಾರ ಒಂದು ಮೂಲಭೂತ ವಸ್ತುವಾಗಿದೆ. ಆದ್ದರಿಂದ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಅದು ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಬೇಸಿಗೆ ಕಾಲದಲ್ಲಿ!.

ಪಕ್ಷಿಗಳಿಗೆ ಆಹಾರ ನೀಡುವುದು ಅವರಿಗೆ ಮಾತ್ರಾ ಅಲ್ಲ, ನಮಗೂ ಕೂಡಾ ಪ್ರಯೋಜನಕಾರಿಯಾಗಿದೆ. ಜ್ಯೋತಿಷ್ಯದಲ್ಲಿ ನಂಬಿರುವಂತೆ, ಅವುಗಳ ಪ್ರಯೋಜನಗಳನ್ನು ಕುಟುಂಬ ಸದಸ್ಯರಿಗೆ ಕೂಡ ವಿಸ್ತರಿಸಬಹುದಾಗಿದೆ. ಜನನ ಪಟ್ಟಿಯಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರುವವರಿಗೆ ಇದನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಅವರ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ ಅಥವಾ ಕೆಟ್ಟ ಪರಿಣಾಮಗಳನ್ನು ಶಮನಗೊಳಿಸಲಾಗುತ್ತದೆ. ನಮ್ಮೊಂದಿಗೆ ಗ್ರಹವನ್ನು ಹಂಚಿಕೊಳ್ಳುತ್ತಿರುವ ಈ ಮುಗ್ಧ ಸ್ವರೂಪದ ಜೀವಿಗಳಿಗೆ ಆಹಾರ ನೀಡುವುದರಿಂದ ಇರುವ ಪ್ರಯೋಜನಗಳ ಪಟ್ಟಿ ಇಲ್ಲಿದೆ. ನೀವು ಅವುಗಳಿಗೆ ಆಹಾರ ನೀಡುವುದು ಮಾತ್ರವಲ್ಲದೇ, ಇತರರಿಗೂ, ಹಕ್ಕಿಗಳಿಗೆ ಆಹಾರ ನೀಡಲು ಸಲಹೆ ನೀಡಬೇಕು.

ಶನಿ ದೇವನಿಗೆ ಸಂತೋಷಕರ:

ಶನಿ ದೇವನಿಗೆ ಸಂತೋಷಕರ:

ಪಕ್ಷಿಗಳಿಗೆ ಆಹಾರವನ್ನು ನೀಡುವುದು ಕುಂಡಲಿಯಲ್ಲಿರುವ ಗ್ರಹ ದೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಶನಿ ದೇವರನ್ನು ಸಹ ಸಂತೋಷಪಡಿಸುತ್ತದೆ. ವ್ಯಕ್ತಿಯ ಜೀವನದಿಂದ ಎಲ್ಲ ಅಡಚಣೆಗಳನ್ನೂ ತೆಗೆದು ಹಾಕಿ ಅವರಿಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಇರುವ ಪ್ರಯೋಜನಗಳು:

ಆರೋಗ್ಯಕ್ಕೆ ಇರುವ ಪ್ರಯೋಜನಗಳು:

ಪಕ್ಷಿಗಳಿಗೆ ಉಣಬಡಿಸುವುದರಿಂದ ಅವುಗಳಿಗೆ ಖಂಡಿತವಾಗಿಯೂ ಸಹಾಯವಾಗುತ್ತದೆ. ಇದಲ್ಲದೆ, ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿದಂತೆ, ವ್ಯಕ್ತಿಯ ಆರೋಗ್ಯ ಮತ್ತು ಅವರ ಕುಟುಂಬ ಸದಸ್ಯರಿಗೆ ಸಹ ಇದು ಪ್ರಯೋಜನವನ್ನು ನೀಡುತ್ತದೆ.

ರಾಹು ಮತ್ತು ಕೇತು ದೆಶೆ:

ರಾಹು ಮತ್ತು ಕೇತು ದೆಶೆ:

ನಿಮ್ಮ ಜನನ ಕುಂಡಲಿಯಲ್ಲಿ ರಾಹು ಮತ್ತು ಕೇತು ದೆಶೆ ಇದ್ದರೆ, ಪಕ್ಷಿಗಳಿಗೆ ಆಹಾರ ನೀಡುವುದು ಆ ದೆಶೆ ನಿವಾರಣೆಗೆ ಉತ್ತಮ ಸಲಹೆಯಾಗಿದೆ.

ಕುಟುಂಬ ಸದಸ್ಯರ ನಡುವೆ ಪ್ರೀತಿ:

ಕುಟುಂಬ ಸದಸ್ಯರ ನಡುವೆ ಪ್ರೀತಿ:

ನೀವು ಹಕ್ಕಿಗಳಿಗೆ ನೀರು ಕೊಟ್ಟರೆ, ಅವರ ತೃಪ್ತಿ ನಿಮ್ಮ ಮನೆಗೂ ತೃಪ್ತಿ ತರುತ್ತದೆ ಎಂದು ನಂಬಲಾಗಿದೆ. ಕುಟುಂಬ ಸದಸ್ಯರ ನಡುವಿನ ಕಲಹ ಮತ್ತು ಅಪಾರ್ಥಗಳು ಬಗೆಹರಿಸಿ, ಕುಟುಂಬದ ಎಲ್ಲಾ ಸದಸ್ಯರಲ್ಲಿಯೂ ಪ್ರೀತಿಯು ಹೆಚ್ಚಾಗುವಂತೆ ಮಾಡುತ್ತದೆ.

ಹೊಸ ಮನೆ ಖರೀದಿಗೆ ಸಹಾಯ:

ಹೊಸ ಮನೆ ಖರೀದಿಗೆ ಸಹಾಯ:

ಸ್ವಂತ ಮನೆ ಖರೀದಿಸುವುದು ನಿಮ್ಮ ಇತ್ತೀಚಿನ ಆಶಯಗಳಲ್ಲಿ ಒಂದಾಗಿದ್ದರೆ, ನೀವು ಪಕ್ಷಿಗಳಿಗೆ ದಿನವೂ ಆಹಾರವನ್ನು ಕೊಡುತ್ತಿದ್ದರೆ ನಿಮ್ಮ ಆಶಯಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ನೀವು ಈಗಾಗಲೇ ಒಂದು ಮನೆಯನ್ನು ಖರೀದಿಸಿದ್ದು, ಅದರ ಸಂಬಂಧ, ಏನಾದರೂ ತೊಂದರೆಗಳನ್ನು ಎದುರಿಸುತ್ತಿದ್ದರೆ, ನೀವು ಪಕ್ಷಿಗಳಿಗೆ ಆಹಾರವನ್ನು ದಿನವೂ ನೀಡಬೇಕು.

ಕೋರ್ಟ್ ಪ್ರಕರಣಗಳ ಗೆಲುವಿಗೆ ಸಹಾಯ:

ಕೋರ್ಟ್ ಪ್ರಕರಣಗಳ ಗೆಲುವಿಗೆ ಸಹಾಯ:

ಮಣ್ಣಿನ ಪಾತ್ರೆಗಳಲ್ಲಿ ಪಕ್ಷಿಗಳಿಗೆ ಆಹಾರವನ್ನು ಕೊಡುವುದು, ನಿಮಗೆ ನ್ಯಾಯಾಲಯದ ಪ್ರಕರಣಗಳನ್ನು ಗೆಲ್ಲಲು ಸಹಕಾರಿಯಾಗುತ್ತದೆ. ಹಾಗಾಗಿ ನೀವು ಆಗಾಗ್ಗೆ ನ್ಯಾಯಾಲಯಗಳನ್ನು ಭೇಟಿ ಮಾಡಬೇಕಾಗಿ ಬಂದರೆ, ನಿಮ್ಮ ಜನ್ಮ ಪಟ್ಟಿಯಲ್ಲಿ ಕೆಲವು ಸಮಸ್ಯೆಗಳಿರಬಹುದು ಎಮ್ದು ಅರ್ಥ. ಹಕ್ಕಿಗಳಿಗೆ ಆಹಾರ ನೀಡುವು ಅದನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡಬಹುದು.

ಶುಕ್ರ ಗ್ರಹದ ಪರಿಣಾಮಗಳು:

ಶುಕ್ರ ಗ್ರಹದ ಪರಿಣಾಮಗಳು:

ಪಕ್ಷಿಗಳಿಗೆ ಆಹಾರ ನೀಡುವುದು, ಶುಕ್ರಗ್ರಹದ ತಪ್ಪು ಸ್ಥಾನದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ

ಪಾಲಕರ ಆಶೀರ್ವಾದವನ್ನು ಸಂಪಾದಿಸುತ್ತದೆ:

ಪಾಲಕರ ಆಶೀರ್ವಾದವನ್ನು ಸಂಪಾದಿಸುತ್ತದೆ:

ನಿಮ್ಮ ಪೋಷಕರು ನಿಮ್ಮೊಂದಿಗೆ ನಿರಾಶೆಗೊಂಡಿದ್ದರೆ ಅಥವಾ ಅವರು ನಿಮ್ಮೊಂದಿಗೆ ಮಾತಾಡುತ್ತಿಲ್ಲವಾದರೆ, ಪಕ್ಷಿಗಳಿಗೆ ಆಹಾರ ನೀಡುವುದು ಪೋಷಕರ ಆಶೀರ್ವಾದವನ್ನು ಗೆಲ್ಲುವಲ್ಲಿ ಸಹಾಯ ಮಾಡುತ್ತದೆ. ಪೋಷಕರು ಮತ್ತು ಮಕ್ಕಳ ನಡುವೆ ಸಮಸ್ಯೆ ಇದ್ದಾಗ ಇದು ಅತ್ಯಂತ ಶಿಫಾರಸು ಮಾಡಲ್ಪಡುವ ಪರಿಹಾರಗಳಲ್ಲಿ ಒಂದಾಗಿದೆ.

ಮಾನಸಿಕ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ:

ಮಾನಸಿಕ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ:

ಮೇಲೆ ಕೊಟ್ಟಿರುವ ಎಲ್ಲಾ ಪ್ರಯೋಜನಗಳ ಪೈಕಿ, ಪ್ರಪಂಚದ ಪ್ರಸ್ತುತ ಸನ್ನಿವೇಶದಲ್ಲಿ ಮತ್ತೊಂದು ಬಹಳ ಮುಖ್ಯವಾದ ಪ್ರಯೋಜನ ಎಂದರೆ, ಮಾನಸಿಕ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುವುದು. ಅತೀ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದಲ್ಲಿ ಮಾನಸಿಕ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಪ್ರತೀ ಮಾನಸಿಕ ಸಮಸ್ಯೆ ಮತ್ತು ಸಣ್ಣ ಪುಟ್ಟ ಮಾನಸಿಕ ಒತ್ತಡದ ನಿವಾರಣೆಗೆ, ಪ್ರತಿಯೊಬ್ಬ ಜ್ಯೋತಿಷಿಯೂ ಪಕ್ಷಿಗಳಿಗೆ ಆಹಾರವನ್ನು ನೀಡುವುದರನ್ನು ಶಿಫಾರಸು ಮಾಡುತ್ತಾರೆ.

ಸೂರ್ಯನ ಮೇಲೆ ಪರಿಣಾಮಗಳು

ಸೂರ್ಯನ ಮೇಲೆ ಪರಿಣಾಮಗಳು

ಸೂರ್ಯ ದೇವನು ಸೂರ್ಯ ಗ್ರಹದ ಅಧಿಪತಿಯಾಗಿರುತ್ತಾನೆ. ಅವನು ಗೌರವ ಮತ್ತು ಯಶಸ್ಸಿ ಕಾರಣ ಕರ್ತನಾಗಿರುತ್ತಾನೆ. ಅವನನ್ನು ಪೂಜಿಸುವವನು ಸಮಾಜದಲ್ಲಿ ಗೌರವವನ್ನು ಹೊಂದಿರುತ್ತಾನೆ. ಪಕ್ಷಿಗಳಿಗೆ ಆಹಾರ ನೀಡುವುದು ಸೂರ್ಯ ದೇವನನ್ನು ಸಂತೋಷಗೊಳಿಸುತ್ತದೆ.

Read more about: short story inspiration
English summary

WHAT ARE THE BENEFITS OF FEEDING THE BIRDS

The benefit of enjoying their company is the best benefit of feeding the birds. Many birds keep wandering in search of food and water flying high under the burning Sun. Not all of them get a rich and favorable surroundings as their habitat. That is one reason their numbers seem going down so fast. Water and food are necessary for all the life forms on the earth. And more so in the hot summers.
X
Desktop Bottom Promotion