For Quick Alerts
ALLOW NOTIFICATIONS  
For Daily Alerts

ಲೋಕ ಕಲ್ಯಾಣಕ್ಕಾಗಿ ಶಿವನು ಧರಿಸಿದ 19 ಅವತಾರಗಳು

By Deepu
|

ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ನಾವು ಅರಿತಿದ್ದೇವೆ. ಆದರೆ ಶಿವನ ಹತ್ತೊಂಬತ್ತು ಅವತಾರಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು ಭಗವಾನ್ ಶಿವನ 19 ಅವತಾರಗಳನ್ನು ಎತ್ತಿದ್ದು ಈ ಅವತಾರಗಳ ಒಂದೇ ಅಂಶ ಕೆಟ್ಟದ್ದನ್ನು ಮಟ್ಟ ಹಾಕಿ ಒಳ್ಳೆಯದನ್ನು ಸಾಧಿಸುವುದಾಗಿದೆ. ಈ ಅವತಾರಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಈ ಅವತಾರಗಳನ್ನು ಶಿವನು ಒಂದೊಂದು ಉದ್ದೇಶಗಳನ್ನಿಟ್ಟು ಕೊಂಡೇ ಎತ್ತಿದ್ದು ಇಂದಿನ ಲೇಖನದಲ್ಲಿ ಈ ಅವಾತರಗಳ ಬಗ್ಗೆ ತಿಳಿದುಕೊಳ್ಳೋಣ. ಈ ಅವತಾರಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬೇಕು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಹೆಚ್ಚಿನ ವಿವಿರಗಳನ್ನು ನೀಡಿದ್ದೇವೆ....

ಪಿಪ್ಪಲಾದ್ ಅವತಾರ

ಪಿಪ್ಪಲಾದ್ ಅವತಾರ

ದದೀಚಿಯ ಮನೆಯಲ್ಲಿ ಪಿಪ್ಪಲಾದನಾಗಿ ಶಿವನು ಅವತಾರವೆತ್ತಿದ್ದರು. ಆದರೆ ಪಿಪ್ಪಲಾದ ಜನಿಸಿದ ನಂತರ ಋಷಿಯು ಆಶ್ರಮವನ್ನು ತೊರೆಯುತ್ತಾರೆ. ತಾನು ಬೆಳೆಯುತ್ತಿದ್ದಂತೆ ಪಿಪ್ಪಲಾದನಿಗೆ ತನ್ನ ತಂದೆ ಮನೆ ಬಿಟ್ಟು ಹೋಗಿರುವುದರ ಕಾರಣ ತಿಳಿದು ಬರುತ್ತದೆ. ಶನಿಯು ವಕ್ರದೃಷ್ಟಿಯಿಂದ ತನ್ನ ತಂದೆಯು ಮನೆ ಬಿಟ್ಟು ಹೋಗಿರುವುದು ಪಿಪ್ಪಲಾದನಿಗೆ ಅರಿವಾಗುತ್ತದೆ. ಇದರಿಂದ ಪಿಪ್ಪಲಾದನು ಶನಿಯು ಶಪಿಸುತ್ತಾರೆ. ಶನಿಯು ಕ್ಷಮೆಯನ್ನು ಕೇಳಿಕೊಂಡ ನಂತರ ಒಂದು ಷರತ್ತಿನ ಮೇರೆಗೆ ಪಿಪ್ಪಲಾದನು ಶಾಪವನ್ನು ಹಿಂಪಡೆಯುತ್ತಾರೆ. ಅದೇನೆಂದರೆ 16 ರ ಹರೆಯದಲ್ಲಿ ಶನಿಯು ಯಾರನ್ನೂ ಕಾಡಬಾರದು ಎಂದಾಗಿದೆ ಅಂತೆಯೇ ಶನಿಯ ಪಿಪ್ಪಲಾದ ಅವತಾರವನ್ನು ಪೂಜಿಸುವುದರಿಂದ ಶನಿಯ ಕಾಟದಿಂದ ಮುಕ್ತಿ ದೊರೆಯತ್ತದೆ.

ನಂದಿ ಅವಾತರ

ನಂದಿ ಅವಾತರ

ಶಿವನ ಮೂರ್ತಿಯ ಮುಂಭಾಗದಲ್ಲಿರುವ ನಂದಿಯು ಕೂಡ ಶಿವನ ಅವತಾರವಾಗಿದೆ. ಭಾರತದ ಹೆಚ್ಚಿನ ಕಡೆಗಳಲ್ಲಿ ಶಿವನನ್ನು ನಂದಿಯ ರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಕೈಗಳು ಮತ್ತು ಹೋರಿಯ ಮುಖವನ್ನು ಹೊಂದಿದ್ದಾರೆ. ಎರಡು ಕೈಗಳು ಕೊಡಲಿಯನ್ನು ಹಿಡಿದುಕೊಂಡಿದ್ದು ಇನ್ನೆರಡು ಇದಕ್ಕೆ ತಾಗಿಕೊಂಡಿವೆ.

ವೀರಭದ್ರ ಅವತಾರ

ವೀರಭದ್ರ ಅವತಾರ

ಸತಿಯು ದಕ್ಷ ಯಜ್ಞದಲ್ಲಿ ತನ್ನನ್ನು ತಾನೇ ದಹಿಸಿಕೊಂಡ ನಂತರ ಶಿವನು ಕ್ರೋಧಗೊಳ್ಳುತ್ತಾರೆ. ತಮ್ಮ ಮುಡಿಯಿಂದ ಒಂದು ಕೂದಲನ್ನು ಕಿತ್ತಾಗ ಅದು ವೀರಭದ್ರ ಅವತಾರವನ್ನು ತಾಳುತ್ತದೆ. ರುದ್ರಕಾಳಿ ಕೂಡ ಈ ಸಮಯದಲ್ಲಿ ಜನ್ಮತಾಳುತ್ತಾರೆ. ಶಿವನ ಭಯಂಕರ ಅವತಾರವಾಗಿದೆ ವೀರಭದ್ರ ಅವತಾರ. ಕಪ್ಪು ವರ್ಣದಲ್ಲಿ ಕೆಂಪಗಿನ ಕಣ್ಣಿನಲ್ಲಿ ಆಯುಧಗಳನ್ನು ಹಿಡಿದುಕೊಂಡು ಪ್ರತ್ಯಕ್ಷರಾಗುತ್ತಾರೆ. ಈ ಅವತಾರವು ಯಜ್ಞದಲ್ಲಿ ದಕ್ಷನ ತಲೆಯನ್ನು ಕಡಿಯಿತು.

ಭೈರವ ಅವತಾರ

ಭೈರವ ಅವತಾರ

ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಬ್ರಹ್ಮ ಮತ್ತು ವಿಷ್ಣುವು ಯುದ್ಧ ನಡೆಸುತ್ತಿದ್ದ ಸಮಯದಲ್ಲಿ ಶಿವನು ಭೈರವ ಅವತಾರವನ್ನು ತಾಳಿ ಬ್ರಹ್ಮನ ಐದನೇ ತಲೆಯನ್ನು ಅವರು ಸುಳ್ಳು ಹೇಳಿದ್ದಕ್ಕಾಗಿ ಕಡಿಯುತ್ತಾರೆ. ಇದರಿಂದ ಬ್ರಹ್ಮ ಹತ್ಯಾ ದೋಷಕ್ಕೆ ಶಿವನ ಗುರಿಯಾಗುತ್ತಾರೆ. ಹನ್ನೆರಡು ವರ್ಷಗಳ ಕಾಲ ಶಿವನು ಬ್ರಹ್ಮನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಬೇಕಾಗಿ ಬರುತ್ತದೆ. ಎಲ್ಲಾ ಶಕ್ತಿಪೀಠಗಳನ್ನು ಕಾಯುವ ಹೊಣೆಯನ್ನು ಶಿವನು ಈ ಅವತಾರದಲ್ಲಿ ಹೊತ್ತುಕೊಂಡಿರುತ್ತಾರೆ.

ಅಶ್ವತ್ಥಾಮ

ಅಶ್ವತ್ಥಾಮ

ಸಮುದ್ರ ಮಥನ ಸಮಯದಲ್ಲಿ ಶಿವನು ಭಯಂಕರ ವಿಷವನ್ನು ಕುಡಿಯುತ್ತಾರೆ. ಈ ವಿಷವು ಶಿವನ ಗಂಟಲನ್ನು ಸುಡಲು ಆರಂಭಿಸುತ್ತದೆ. ವಿಷ ಪುರುಷನು ಶಿವನ ಸಂಪೂರ್ಣ ದೇಹವನ್ನು ಸುಡಲು ಆರಂಭಿಸಿದಾಗ ವಿಷ ಪುರುಷನಿಗೆ ಶಿವನು ವರವನ್ನು ನೀಡುತ್ತಾರೆ. ಮುಂದೆ ಭೂಮಿಯ ಮೇಲೆ ದ್ರೋಣನ ಮಗನಾಗಿ ಕೆಟ್ಟ ಕ್ಷತ್ರಿಯರನ್ನು ಕೊಲ್ಲುವ ಅಶ್ವತ್ಥಾಮನಾಗಿ ವಿಷ ಪುರುಷನ್ನು ಜನ್ಮತಾಳುತ್ತಾನೆ.

ಶರಭ ಅವತಾರ

ಶರಭ ಅವತಾರ

ಅರ್ಧ ಪಕ್ಷಿ ಮತ್ತು ಅರ್ಧ ಸಿಂಹದ ಅವತಾರವಾಗಿದೆ ಶರಭ ಅವತಾರ. ನರಸಿಂಹನ ಅವತಾರದಂತೆ ಶಿವನು ಶರಭ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೃಹಪತಿ ಅವತಾರ

ಗೃಹಪತಿ ಅವತಾರ

ವಿಶ್ವನರ ಎಂಬ ಬ್ರಾಹ್ಮಣನ ಮನೆಯಲ್ಲಿ ಶಿವನು ಜನ್ಮವನ್ನು ತಾಳುತ್ತಾರೆ. ಗೃಹಪತಿ ಎಂದು ವಿಶ್ವನರ ತನ್ನ ಮಗನಿಗೆ ನಾಮಕರಣ ಮಾಡುತ್ತಾರೆ. ಒಂಭತ್ತನೆಯ ವರ್ಷದಲ್ಲಿ ಸಾಯುತ್ತಾನೆ ಎಂದು ನಾರದರು ಅವರ ತಂದೆ ತಾಯಿಗೆ ತಿಳಿಸುತ್ತಾರೆ. ಸಾವನ್ನು ಜಯಿಸುವುದಕ್ಕಾಗಿ ಗೃಹಪತಿಯು ಕಾಶಿಗೆ ಹೋಗುತ್ತಾರೆ. ಶಿವನಿಂದ ವರವನ್ನು ಪಡೆದುಕೊಂಡು ಗೃಹಪತಿಯು ಸಾವನ್ನು ಜಯಿಸುತ್ತಾರೆ.

ದುರ್ವಾಸ

ದುರ್ವಾಸ

ವಿಶ್ವದಲ್ಲಿ ಶಿಸ್ತನ್ನು ಕಾಯ್ದಿರಿಸಲು ಶಿವನು ಈ ಅವಾತರವನ್ನು ತಾಳುತ್ತಾರೆ. ದುರ್ವಾಸರು ತಮ್ಮ ಕೋಪಕ್ಕೆ ಖ್ಯಾತರಾಗಿದ್ದರು.

ಹನುಮಾನ್

ಹನುಮಾನ್

ಹನಮಂತನ ಅವತಾರವನ್ನು ಶಿವನ ಅವತಾರವೆಂದು ಕರೆಯಲಾಗಿದೆ. ರಾಮನ ಅವರಾತರದಲ್ಲಿದ್ದ ವಿಷ್ಣುವಿನ ಸೇವೆಯನ್ನು ಮಾಡಲು ಶಿವನು ಹನುಮಂತನ ಅವತಾರವನ್ನು ತಾಳಿದರು ಎಂಬುದಾಗಿ ಇತಿಹಾಸದಲ್ಲಿ ದಾಖಲಿಸಲಾಗಿದೆ.

ರಿಷಭ ಅವತಾರ

ರಿಷಭ ಅವತಾರ

ಸಮುದ್ರ ಮಂಥನದ ಬಳಿಕ, ವಿಷ್ಣುವು ಒಮ್ಮೆ ಪಾತಾಳ ಲೋಕಕ್ಕೆ ಹೋಗುತ್ತಾರೆ. ಅಲ್ಲಿದ್ದ ಸುಂದರ ಮಹಿಳೆಯಿಂದ ಪ್ರಭಾವಗೊಂಡು ಅವರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ. ಆದರೆ ಅವರ ಪುತ್ರರೆಲ್ಲರೂ ಕ್ರೂರಿಗಳಾಗಿರುತ್ತಾರೆ. ದೇವತೆಗಳನ್ನು ಮತ್ತು ಮಾನವರನ್ನು ಹಿಂಸಿಸಲು ಅವರು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ ಶಿವನು ಎತ್ತಿನ ಅವತಾರವನ್ನು ತಾಳಿ ಮಕ್ಕಳನ್ನು ಕೊಲ್ಲುತ್ತಾರೆ. ವಿಷ್ಣುವು ಎತ್ತಿನೊಂದಿಗೆ ಕಾಳಗಕ್ಕೆ ಬಂದಾಗ ಅದು ಶಿವ ಎಂಬುದು ಅವರಿಗೆ ಅರಿವಾಗುತ್ತದೆ.

ಯತಿನಾಥ ಅವತಾರ

ಯತಿನಾಥ ಅವತಾರ

ಅಹುಕ ಮತ್ತು ಆತನ ಪತ್ನಿ ಮಹಾನ್ ಶಿವ ಭಕ್ತರಾಗಿದ್ದರು. ಒಮ್ಮೆ ದೇವರು ಯತಿನಾಥನ ಅವತಾರದಲ್ಲಿ ಅವರ ಮನೆಗೆ ಆಗಮಿಸುತ್ತಾರೆ. ಮನೆ ಪುಟ್ಟದಾದ್ದರಿಂದ ಅಹುಕನು ಅತಿಥಿಯನ್ನು ಮನೆಯೊಳಗೆ ವಿರಮಿಸಲು ಹೇಳಿ ತಾನು ಹೊರಗೆ ಮಲಗುತ್ತಾನೆ. ಆದರೆ ಅಹುಕನು ಹೊರಗೆ ಮಲಗಿದ್ದ ಸಂದರ್ಭದಲ್ಲಿ ಕ್ರೂರ ಪ್ರಾಣಿಗೆ ಬಲಿಯಾಗುತ್ತಾನೆ. ಮರುದಿನ ಅಹುಕನು ಮರಣ ಸ್ಥಿತಿಯಲ್ಲಿರುವುದನ್ನು ನೋಡಿ ಆತನ ಪತ್ನಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಆಗ ಶಿವನು ತನ್ನ ನಿಜ ರೂಪವನ್ನು ಪ್ರದರ್ಶಿಸಿ ಅವರನ್ನು ನಳ ದಮಯಂತಿಯರಾಗಿ ಮರು ಜನ್ಮವನಿತ್ತು ಒಂದುಗೂಡಿಸುತ್ತಾರೆ.

ಕೃಷ್ಣ ದರ್ಶನ ಅವತಾರ

ಕೃಷ್ಣ ದರ್ಶನ ಅವತಾರ

ಜನರ ಜೀವನದಲ್ಲಿ ಯಜ್ಞ ಯಾಗಾದಿಗಳ ಮಹತ್ವವನ್ನು ತಿಳಿಸಲು ಈ ಅವತಾರವನ್ನು ಶಿವನು ಹೊಂದಿದನು.

ಭಿಕ್ಷುವರ್ಯ ಅವತಾರ

ಭಿಕ್ಷುವರ್ಯ ಅವತಾರ

ಎಲ್ಲಾ ಅಪಾಯಗಳಿಂದ ಜನರನ್ನು ಸಂರಕ್ಷಿಸಲು ಶಿವನು ಈ ಅವತಾರವನ್ನು ಎತ್ತಿದ್ದರು.

ಸುರೇಶ್ವರ ಅವತಾರ

ಸುರೇಶ್ವರ ಅವತಾರ

ತನ್ನ ಭಕ್ತರನ್ನು ಪರೀಕ್ಷಿಸಲು ಶಿವನು ಇಂದ್ರನ ರೂಪವನ್ನು ಹೊಂದಿದರು. ಇದರಿಂದಾಗಿ ಅವರಿಗೆ ಸುರೇಶ್ವರ ಎಂಬ ಹೆಸರು ಬಂದಿದೆ.

ಕೀರತ್ ಅವತಾರ

ಕೀರತ್ ಅವತಾರ

ಅರ್ಜುನನ್ನು ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಶಿವನು ಬೇಟೆಗಾರನ ರೂಪವನ್ನು ಧರಿಸಿ ಅರ್ಜುನನ್ನು ಪರೀಕ್ಷಿಸಲು ಬಯಸುತ್ತಾರೆ. ಅರ್ಜುನನನ್ನು ಕೊಲ್ಲಲು ದುರ್ಯೋಧನನು ಮೂಕ ಎಂಬ ಅಸುರನನ್ನು ಕಳುಹಿಸುತ್ತಾರೆ. ಅರ್ಜುನನ ತಪಸ್ಸಿಗೆ ಭಂಗವನ್ನುಂಟು ಮಾಡುವ ರೀತಿಯಲ್ಲಿ ಮೂಕನು ಅವರ ಎದುರು ಹಂದಿಯ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಹಂದಿಯನ್ನು ಕೊಲ್ಲಲು ಕೀರತ್ ಮತ್ತು ಅರ್ಜುನನ್ನು ಒಮ್ಮೆಲೆ ಬಾಣದ ಪ್ರಯೋಗಗಳನ್ನು ಮಾಡುತ್ತಾರೆ. ಹಂದಿಯನ್ನು ಯಾರು ಮೊದಲು ಕೊಂದರು ಎಂಬುದರ ಬಗ್ಗೆ ಶಿವ ಮತ್ತು ಅರ್ಜುನನ ನಡುವೆ ಯುದ್ಧವುಂಟಾಗುತ್ತದೆ. ಕೊನೆಯಲ್ಲಿ ಅರ್ಜುನನ ಸಾಹಸಗಳಿಂದ ಪ್ರಭಾವಿತನಾದ ಶಿವನು ಅವರಿಗೆ ತಮ್ಮ ಪಾಶುಪತಾಸ್ತ್ರವನ್ನು ನೀಡುತ್ತಾರೆ.

ಸುಂತಾತರ್ಕ ಅವತಾರ

ಸುಂತಾತರ್ಕ ಅವತಾರ

ಹಿಮಾಲಯನ ಮಗಳಾದ ಪಾರ್ವತಿಯನ್ನು ವಿವಾಹವಾಗಲು ಶಿವನು ಈ ರೂಪವನ್ನು ಧರಿಸಿದ್ದರು.

ಬ್ರಹ್ಮಚಾರಿ ಅವತಾರ

ಬ್ರಹ್ಮಚಾರಿ ಅವತಾರ

ಶಿವನು ತನಗೆ ಗಂಡನಾಗಿ ದೊರೆಯಬೇಕೆಂದು ಪಾರ್ವತಿಯು ತಪ್ಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ಪಾರ್ವತಿಯನ್ನು ಪರೀಕ್ಷಿಸಲು ಶಿವನು ಈ ರೂಪವನ್ನು ಧರಿಸಿದರು.

ಯಕ್ಷೇಶ್ವರ ಅವತಾರ

ಯಕ್ಷೇಶ್ವರ ಅವತಾರ

ದೇವತೆಗಳಲ್ಲಿದ್ದ ಕೆಟ್ಟ ಅಹಂಕಾರವನ್ನು ನಿವಾರಿಸಲು ಶಿವನು ಈ ರೂಪವನ್ನು ಧರಿಸುತ್ತಾರೆ.

ಅವಧೂತ ಅವಾತರ

ಅವಧೂತ ಅವಾತರ

ಇಂದ್ರನ ದುರಹಂಕಾರವನ್ನು ಅಡಗಿಸಲು ಶಿವನು ಈ ರೂಪವನ್ನು ತಾಳುತ್ತಾರೆ.

English summary

What are the avatars of Lord Shiva?

We are all familiar with the Dashavatar or the 10 avatars of Lord Vishnu. But do you know that Lord Shiva also has avatars? In fact, Lord Shiva has 19 avatars. An avatar is a deliberate descent of a deity in human form on Earth.
X
Desktop Bottom Promotion