ಜಗತ್ತಿನ 'ಚಿತ್ತವನ್ನೇ ಕೆದಕುವ' ಹಿಂದೂ ಧರ್ಮದ ಆಚಾರ-ವಿಚಾರ

By: Jaya subramanya
Subscribe to Boldsky

ಅನಾದಿ ಕಾಲದಿಂದಲೂ ಹಿಂದೂ ಧರ್ಮವು ತನ್ನ ಪವಿತ್ರತೆ ಮತ್ತು ಆಚರಣೆಗಳಿಂದ ಹೆಸರುವಾಸಿಯಾಗಿದೆ. ವಿದೇಶಿಗರನ್ನು ಭಾರತದ ನೆಲಕ್ಕೆ ಕರೆತಂದ ಹಿಂದೂ ಧರ್ಮವು ತನ್ನದೇ ಆದ ಪದ್ಧತಿಗಳಿಂದ ಮತ್ತು ಸಂಪ್ರದಾಯಗಳಿಂದ ಜನರ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ. ಹಿಂದೂಗಳು ಅನುಸರಿಸುವ ರೂಢಿ ಸಂಪ್ರದಾಯಗಳು ಸರಳವಾಗಿದ್ದರೂ ಅದಕ್ಕೊಂದು ವೈಚಾರಿಕ ಚೌಕಟ್ಟಿದೆ ಮತ್ತು ಸಾಮಾಜಿಕ ಬದ್ಧತೆ ಇದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ಮುಡಿಯಲ್ಲಿಡುವ ಹೂವು, ಹಣೆಗೆ ಹಚ್ಚು ಕುಂಕುವ, ಕೈಗಳ ಬಳೆ, ಹೀಗೆ ಹೆಣ್ಣು ಇಲ್ಲವೇ ಗಂಡು ಅಲಂಕರಿಸಿಕೊಳ್ಳುವ ಯಾವುದೇ ಸಾಮಾಗ್ರಿ ಕೂಡ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಮತ್ತು ಪೂಜನೀಯ ರೂಪವನ್ನು ಪಡೆದುಕೊಂಡಿದೆ. ಪ್ರಪಂಚದಲ್ಲೇ ಹಿಂದೂ ಧರ್ಮ ಮಹತ್ತರವಾದುದು ಏಕೆ?

ಈ ಧರ್ಮದಲ್ಲಿ ಶಾಸ್ತ್ರಗಳು ರೂಪುಗೊಂಡಿರುವುದೇ ಜನರನ್ನು ಸಜ್ಜನ ಹಾದಿಯಲ್ಲಿ ಮುನ್ನಡೆಸಲು. ಅಂತೆಯೇ ಮೂಢನಂಬಿಕೆಗಳನ್ನು ಹಿಂದೂಗಳು ನಂಬಿದರೂ ಕೂಡ ಅದರಲ್ಲೊಂದು ವೈಜ್ಞಾನಿಕ ರಹಸ್ಯವಿರುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹಿಂದೂ ಧರ್ಮದಲ್ಲಿ ಅತಿ ಪವಿತ್ರದ್ದೆಂದು ಹೇಳಲಾಗುವ ಕೆಲವೊಂದು ಅಂಶಗಳತ್ತ ಗಮನ ಹರಿಸೋಣ.... 

ಬಾಳೆಮರ

ಬಾಳೆಮರ

ಅರಿಶಿನ, ಬೆಲ್ಲ ಮತ್ತು ಕಡಲೆಬೇಳೆಯನ್ನು ಬಾಳೆಗೆ ಅರ್ಪಿಸಿ ಪ್ರತೀ ಗುರುವಾರ ಪೂಜಿಸುತ್ತಾರೆ. ಹೆಚ್ಚಿನ ಮನೆಗಳಲ್ಲಿ ಈ ಪೂಜನೀಯ ಗಿಡವಿರುತ್ತದೆ.

ಕುಂಕುಮ

ಕುಂಕುಮ

ವಿವಾಹಿತ ಸ್ತ್ರೀಯು ಬೈತಲೆಯಲ್ಲಿ ಇರಿಸುವ ಪವಿತ್ರ ತಿಲಕವಾಗಿದೆ. ಮದುವೆಯ ಸಮಯದಲ್ಲಿ ಸ್ತ್ರೀಗೆ ಆಕೆಯ ಪತಿಯು ಬೈತಲೆಯನ್ನು ಕುಂಕುಮದಲ್ಲಿ ಅಲಂಕರಿಸಿ ಆಕೆಯನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತಾನೆ ಮತ್ತು ಇದು ಐದು ಮುತ್ತುಗಳಲ್ಲಿ ಒಂದಾಗಿದೆ. ಮಹಾಕಾಳಿ, ದುರ್ಗಾ ಮತ್ತು ಲಕ್ಷ್ಮೀ ದೇವರಿಗೂ ಕುಂಕುಮವನ್ನು ಅರ್ಪಿಸುತ್ತಾರೆ.

ಬೊಟ್ಟು

ಬೊಟ್ಟು

ಹೆಚ್ಚಿನ ದೇವಾನುದೇವತೆಗಳನ್ನು ಸಣ್ಣ ಬೊಟ್ಟನ್ನಿಟ್ಟು ಅಲಂಕರಿಸುತ್ತಾರೆ. ದೇವತೆಗಳು ಮತ್ತು ಬಾಲ ಕೃಷ್ಣನ ಮೂರ್ತಿಗೆ ಈ ಶೃಂಗಾರ ವಸ್ತುವನ್ನು ಹಚ್ಚಿ ಅಲಂಕರಿಸುತ್ತಾರೆ.

ರಂಗೋಲಿ

ರಂಗೋಲಿ

ಹೆಚ್ಚಿನ ಮನೆಯ ಪ್ರವೇಶದ್ವಾರಲ್ಲಿ ನೀವು ರಂಗೋಲಿಯನ್ನು ಕಾಣುತ್ತೀರಿ. ರಂಗೋಲಿಯಲ್ಲಿರುವ ಪ್ರಖರ ಬಣ್ಣಗಳು ಜನರ ಬಾಳಿನಲ್ಲಿ ಧನಾತ್ಮಕತೆಯನ್ನು ಹೊಳಪನ್ನು ತರುತ್ತದೆ ಎಂಬ ನಂಬಿಕೆಯಿಂದ ಪೂಜನೀಯವಾಗಿ ರಂಗೋಲಿಯನ್ನು ಬಿಡಿಸುತ್ತಾರೆ.

ಚಿನ್ನ

ಚಿನ್ನ

ಈ ಅತ್ಯಮೂಲ್ಯ ವಸ್ತುವು ಹಿಂದೂ ಧರ್ಮದಲ್ಲಿ ಹೆಚ್ಚು ಪೂಜನೀಯವಾದುದು. ಸಂಪತ್ತಿನ ಗುರುತಾಗಿ ಚಿನ್ನವನ್ನು ಕಾಣಲಾಗುತ್ತದೆ. ದೇವರಿಗೆ ಚಿನ್ನವನ್ನು ಅರ್ಪಿಸುವುದರ ಮೂಲಕ ಸಂಪ್ರದಾಯವನ್ನು ಜನರು ಅನುಸರಿಸುತ್ತಾರೆ.

ಬೆಳ್ಳಿ

ಬೆಳ್ಳಿ

ಬೆಳ್ಳಿಯ ನಾಣ್ಯಗಳು ಮತ್ತು ಆಭರಣಗಳನ್ನು ನೀಡುವುದು ಭಾರತದಲ್ಲಿ ಸಂಪ್ರದಾಯವಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಧನ್‌ತೇರಾಸ್ ಸಂದರ್ಭದಲ್ಲಿ, ಜನರು ಬೆಳ್ಳಿಯ ಮತ್ತು ಚಿನ್ನದ ವಸ್ತುಗಳನ್ನು ಖರೀದಿಸುತ್ತಾರೆ ಮತ್ತು ಇದನ್ನು ಅದೃಷ್ಟವೆಂದು ನಂಬಲಾಗುತ್ತದೆ.

ಹಿತ್ತಾಳೆ

ಹಿತ್ತಾಳೆ

ಕಲಶದಂತಹ ಪೂಜಾ ಸಾಮಾಗ್ರಿಗಳು ಹಿತ್ತಾಳೆಯಲ್ಲಿದ್ದು ಇದನ್ನು ಪವಿತ್ರವೆಂದು ನಂಬಲಾಗುತ್ತದೆ. ದೇವರ ಮೂರ್ತಿಗಳು, ಯಂತ್ರಗಳು ಮತ್ತು ಆಭರಣಗಳನ್ನು ಹಿತ್ತಾಳೆಯಲ್ಲಿ ತಯಾರಿಸುತ್ತಾರೆ.

ತುಳಸಿ

ತುಳಸಿ

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತಿ ಪವಿತ್ರವೆಂದು ಕಾಣಲಾಗುತ್ತದೆ. ತಮ್ಮ ವಿವಾಹ ಜೀವನ ಸುಖಮಯವಾಗಿರಲೆಂದು ಬಯಸುತ್ತಾ ವಿವಾಹಿತ ಸ್ತ್ರೀಯರು ತುಳಸಿ ಗಿಡವನ್ನು ಪೂಜಿಸುತ್ತಾರೆ.

ಅಡಿಕೆ

ಅಡಿಕೆ

ಪೂಜೆ ಮತ್ತು ಹವನಗಳ ಸಂದರ್ಭದಲ್ಲಿ ಅಡಿಕೆಯನ್ನು ಹಿಂದೂಗಳು ಅರ್ಪಿಸುತ್ತಾರೆ. ಇದನ್ನು ಶುದ್ಧ ಮತ್ತು ಪೂಜನೀಯ ಎಂಬುದಾಗಿ ಕಂಡುಕೊಳ್ಳಲಾಗುತ್ತದೆ. ಗಣೇಶನಿಗೆ ಅಡಿಕೆಯನ್ನು ಅರ್ಪಿಸುತ್ತಾರೆ.

ವೀಳ್ಯದೆಲೆ

ವೀಳ್ಯದೆಲೆ

ಶುದ್ಧತೆಯ ಸಂಕೇತವಾಗಿ ವೀಳ್ಯದೆಲೆಯನ್ನು ಕಾಣಲಾಗುತ್ತದೆ ಮತ್ತು ವೀಳ್ಯದೆಲೆ ಇಲ್ಲದೆ ಪೂಜೆ ಸಂಪೂರ್ಣಗೊಳ್ಳುವುದಿಲ್ಲ.

ಮಾವಿನ ಎಲೆಗಳು

ಮಾವಿನ ಎಲೆಗಳು

ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳನ್ನು ಅತಿ ಪೂಜನೀಯ ಎಂಬುದಾಗಿ ಕಂಡುಕೊಳ್ಳಲಾಗುತ್ತದೆ. ಯಾವುದೇ ಪೂಜೆಯ ಸಮಯದಲ್ಲಿ ಮುಂಭಾಗದಲ್ಲಿ ಮಾವಿನ ತೋರಣವನ್ನು ಕಟ್ಟಿ ಶುಭ ಆರಂಭವನ್ನು ಮಾಡುತ್ತಾರೆ.

 ಅರಿಶಿನ

ಅರಿಶಿನ

ಭಗವಾನ್ ವಿಷ್ಣುವಿಗೆ ಅರಿಶಿನವನ್ನು ಅರ್ಪಿಸುತ್ತಾರೆ ಮತ್ತು ಭಾರತದ ದಕ್ಷಿಣ ಭಾಗದಲ್ಲಿ ಇದು ಹೆಚ್ಚು ಪವಿತ್ರದ್ದೆಂದು ಕಂಡುಕೊಳ್ಳಲಾಗುತ್ತದೆ.

 
English summary

What are some sacred objects in Hinduism?

Hinduism is a sacred religion. In Hinduism, many things are considered holy. Hindus do not just worship idols of Gods and Goddesses, but also consider few objects as sacred. From small basil plant to the vermilion powder, these small sacred objects have a spiritual significance.
Please Wait while comments are loading...
Subscribe Newsletter