For Quick Alerts
ALLOW NOTIFICATIONS  
For Daily Alerts

ಪ್ರಪಂಚದಲ್ಲೇ ಹಿಂದೂ ಧರ್ಮ ಮಹತ್ತರವಾದುದು ಏಕೆ?

|

ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ನ೦ಬಿಕೆಗಳಲ್ಲಿ ಒ೦ದು. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.

ಹಿಂದೂ ಧರ್ಮ ನಮಗೆ ಸಾಟಿಯಿಲ್ಲದ ಪರಿಣತಿಯೊಂದಿಗೆ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ - ಉದಾಹರಣೆಗೆ: ಪುರಾತನ ರಾಜ್ಯಗಳ ದೇವಾಲಯಗಳು, ಅರಮನೆಗಳು, ಇತ್ಯಾದಿ - ಈ ಕೊಡುಗೆಗಳು ಕೇವಲ ವಿಶ್ವಾಸಾರ್ಹ ದೃಢೀಕರಣಗಳಾಗಿವೆ. ಬನ್ನಿ ಹಿಂದೂಧರ್ಮದ ಬಗ್ಗೆ ಇರುವ ಕುತೂಹಲಕಾರಿ ಸಂಗತಿಗಳ ಬಗ್ಗೆ ಮುಂದೆ ಅವಲೋಕಿಸೋಣ...

ಸಾಧುಸ೦ತರು

Some interesting facts about Hinduism

ಭಾರತದೇಶವು ಸಾಧುಸ೦ತರುಗಳ ನೆಲೆವೀಡಾಗಿದ್ದು, ಇವರ ಪೈಕಿ ಅತ್ಯ೦ತ ಭಯವನ್ನು ಹುಟ್ಟಿಸುವ ಆದರೆ ಅಷ್ಟೇ ಗೌರವಾದರಗಳಿಗೂ ಪಾತ್ರರಾಗಿರುವ ಒ೦ದು ಸಾಧುವರ್ಗವೆ೦ದರೆ ಅದು ಅಘೋರಿ ಸಾಧುಗಳ ಪ೦ಗಡವಾಗಿದೆ. ತಮ್ಮ ಧಾರ್ಮಿಕ ಜೀವನದ ಒ೦ದು ಭಾಗವಾಗಿ ಈ ಅಘೋರಿ ಸಾಧುಗಳು ಕೈಗೊಳ್ಳುವ ವಿಕ್ಷಿಪ್ತ ಹಾಗೂ ಭಯಾನಕ ವಿಧಿವಿಧಾನಗಳು ಕುಖ್ಯಾತವಾಗಿದ್ದು, ಇವು ಜನಸಾಮಾನ್ಯರಲ್ಲಿ ಕುತೂಹಲವನ್ನೂ ಹಾಗೂ ಪರಮಾಶ್ಚರ್ಯವನ್ನೂ ಉ೦ಟುಮಾಡುವ೦ತಹವುಗಳಾಗಿವೆ.

ಕಷ್ಟ ಕಾರ್ಪಣ್ಯಗಳಿಗೆ ಗಾಯತ್ರಿ ಮಂತ್ರದ ಪಠಣ


ಗಾಯತ್ರಿ ಮ೦ತ್ರ ಪಠಣಕ್ಕಾಗಿ ಎರಡನೆಯ ಸೂಕ್ತ ಸಮಯವೆ೦ದರೆ ಅದು ಮಧ್ಯಾಹ್ನದ ಅವಧಿಯಾಗಿದೆ. ಮೂರನೆಯ ಬಾರಿ ಗಾಯತ್ರಿ ಮ೦ತ್ರವನ್ನು ಪಠಿಸಲು ಸೂಕ್ತ ಸಮಯವೆ೦ದರೆ ಸೂರ್ಯಾಸ್ತಮಾನಕ್ಕಿ೦ತ ಮೊದಲು ಆರ೦ಭಗೊ೦ಡು ಸ೦ಪೂರ್ಣ ಸೂರ್ಯಾಸ್ತದವರೆಗೂ ಮು೦ದುವರಿಸಬೇಕು. ಈ ಮೂರು ಸಮಯಗಳನ್ನು ಹೊರತುಪಡಿಸಿ, ಬೇರೆ ಅವಧಿಯಲ್ಲಿ ಮ೦ತ್ರವನ್ನು ಪಠಿಸಲು ಬಯಸುವಿರಾದರೆ, ಪಠಿಸುವವರು ಮನಸ್ಸಿನಲ್ಲಿಯೇ ಮೌನವಾಗಿ ಪಠಿಸಿದರೆ ಸಂಪೂರ್ಣ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವಿರಿ ಎನ್ನುವ ನಂಬಿಕೆ ಇದೆ. ಗಾಯತ್ರಿ ಮ೦ತ್ರದ ಚಿಕಿತ್ಸಾತ್ಮಕ ಶಕ್ತಿಗಳ ಬಗ್ಗೆ ತಿಳಿದಿದೆಯೇ?

ರುದ್ರಾಕ್ಷ


ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷವನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಕೋಟಲೆಗಳ ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ. ರುದ್ರಾಕ್ಷಿಯ ಬಗೆಗಿನ ಆಸಕ್ತಿಕರ ಅಂಶಗಳು

ದೇವರ ಪ್ರತಿಮೆ
ಪ್ರತಿಮೆಯು ಯಾವುದೇ ದೃಷ್ಟಿಕೋನದಿ೦ದಲೂ ದೇವರಲ್ಲ. ಪ್ರತಿಮೆಯು ಅಮೂರ್ತವಾಗಿರುವ ದೈವಸ್ವರೂಪದ ಮೂರ್ತರೂಪವಾಗಿದೆ. ದೇವರ ವ್ಯಕ್ತ ಅಥವಾ ಮೂರ್ತಿರೂಪದ ಈ ಪ್ರತಿಮೆಯು ಮಾನವರಿಗೆ ದೇವರ ಕುರಿತ ರೂಪ ಧ್ಯಾನವನ್ನು ಕೈಗೊಳ್ಳಲು ನೆರವಾಗುತ್ತದೆ ಹಾಗೂ ಭಗವತ್ ಸಾಕ್ಷಾತ್ಕಾರದ ಮು೦ದಿನ ಹೆಜ್ಜೆಗೆ ಸಹಾಯವಾಗುತ್ತದೆ.

ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆ
ಆತ್ಮಗಳು ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆಯನ್ನು ಬಹಳವಾಗಿ ಚರ್ಚೆಮಾಡಲಾಗುತ್ತದೆ. ಹಿಂದೂಧರ್ಮದ ಪ್ರಕಾರ, ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ಆತ್ಮವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಶಕ್ತಿಮಟ್ಟದಲ್ಲಿರುವ ದೇಹಗಳನ್ನು ಉತ್ತಮ ಸಾಮರ್ಥ್ಯವಿರುವ ಆತ್ಮಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ಪೂಜಾ ಗೃಹದಲ್ಲಿ ದೇವರ ಪ್ರತಿಮೆ ಹೇಗಿರಬೇಕು?

ಓಂ
ಓಂ ಎನ್ನುವ ಮಂತ್ರ ಅತ್ಯಂತ ಪ್ರಬಲ ಮಂತ್ರ ಮತ್ತು ಅದನ್ನು ಪಠಿಸಿದಾಗ ಸರ್ವೋಚ್ಛ ಜ್ಞಾನ ಪ್ರಕಟವಾಗುತ್ತದೆ. ಓಂಕಾರದ ಪಠನೆಯಿಂದಾಗುವ ಪ್ರತಿಧ್ವನಿಗಳು ಹೆಚ್ಚು ನಿಗೂಢವಾಗಿರುತ್ತದೆ ಮತ್ತು ಪರಿಸರದ ಮೇಲೆ ತರಂಗಗಳ ಪರಿಣಾಮವುಂಟಾಗುತ್ತವೆ. ಓಂಕಾರದಿಂದ ಹೆಚ್ಚಿಸಿಕೊಳ್ಳಿ ಆರೋಗ್ಯ

ಘ೦ಟೆಗಳ ನಿನಾದ
ದೇವಸ್ಥಾನಗಳ ಘ೦ಟೆಗಳು ಸಾಮಾನ್ಯವಾದ ಲೋಹಗಳಿ೦ದ ಮಾಡಲ್ಪಟ್ಟಿರುತ್ತವೆ. ದೇವಸ್ಥಾನದ ಘ೦ಟೆಗಳು ಕ್ಯಾಡ್ಮಿಯ೦, ಸತು, ಸೀಸ, ತಾಮ್ರ, ನಿಕ್ಕಲ್, ಕ್ರೋಮಿಯ೦, ಹಾಗೂ ಮ್ಯಾ೦ಗನೀಸ್ ನ೦ತಹ ವಿವಿಧ ಲೋಹಗಳ ಮಿಶ್ರಣದಿ೦ದ ಮಾಡಲ್ಪಟ್ಟಿರುತ್ತವೆ. ದೇವಸ್ಥಾನದ ಇ೦ತಹ ಘ೦ಟೆಯನ್ನು ತಯಾರಿಸಲು ಬಳಸಲಾಗುವ ವಿವಿಧ ಲೋಹಗಳ ಅನುಪಾತದಲ್ಲಿ ವಿಜ್ಞಾನವು ಅಡಗಿದೆ. ಘ೦ಟೆಯ ತಯಾರಿಕೆಯಲ್ಲಿ ಬಳಸಲಾಗುವ ಪ್ರತಿಯೊ೦ದು ಘಟಕ ಲೋಹವನ್ನೂ ಸಹ ಯಾವ ತೆರನಾಗಿ, ಯಾವ ಪ್ರಮಾಣದಲ್ಲಿ ಮಿಶ್ರಗೊಳಿಸಿರುತ್ತಾರೆ೦ದರೆ, ಘ೦ಟೆಯ ಸದ್ದು ಮೊಳಗಿದಾಗ, ಘ೦ಟೆಯ ತಯಾರಿಕೆಯಲ್ಲಿ ಬಳಸಲಾದ ಪ್ರತಿಯೊ೦ದು ಲೋಹವೂ ಕೂಡ ವಿಶಿಷ್ಟವಾದ, ತನ್ನದೇ ಆದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಗಳ ಸ೦ಯೋಜನೆಯು ಎಡ ಹಾಗೂ ಬಲಭಾಗದ ಮೆದುಳುಗಳ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ. ಆದ್ದರಿ೦ದ, ಘ೦ಟೆಯ ಸಪ್ಪಳವು೦ಟಾದ ಕೂಡಲೇ, ಘ೦ಟೆಯು ತೀಕ್ಷ್ಣವಾದ ಹಾಗೂ ದೀರ್ಘವಾದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಯು ಹಲವು ಸೆಕೆ೦ಡುಗಳ ಕಾಲ ಹಾಗೆಯೇ ಮು೦ದುವರಿಯುತ್ತದೆ.

English summary

Some interesting facts about Hinduism

Hinduism is a widely acknowledged religion and particularly appreciated for its rich heritage and culture. Hinduism has endued us with unparalleled expertise in art, literature and architecture- the temples of ancient kingdoms, palaces etc. are more than just credible attestations to this. take a look at these interesting facts about Hinduism
X
Desktop Bottom Promotion