For Quick Alerts
ALLOW NOTIFICATIONS  
For Daily Alerts

ಮಲಗುವ ಕೋಣೆಯ ವಾಸ್ತು ಹೇಗಿರಬೇಕು ಗೊತ್ತಾ?

|

ಮನೆಯ ಉತ್ತರ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಪ್ರಶಸ್ತ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗೆಯೇ ಆಗ್ನೇಯ ಹಾಗೂ ಈಶಾನ್ಯ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಅಶುಭ. ಮಕ್ಕಳು ಹಾಗೂ ಇನ್ನೂ ಮದುವೆ ಆಗದವರು ಬೇಕಾದರೆ ಪೂರ್ವ ದಿಕ್ಕಿನಲ್ಲಿ ತಮ್ಮ ಕೋಣೆ ಹೊಂದಬಹುದು. ಕೋಣೆಯ ಮಧ್ಯಭಾಗದಲ್ಲಿ ಮಂಚ ಅಳವಡಿಸುವುದು ಸೂಕ್ತವಲ್ಲ. ತಿಳಿ ಗುಲಾಬಿ, ನೀಲಿ ಹಾಗೂ ಹಸಿರು ವರ್ಣವನ್ನು ಗೋಡೆಗಳಿಗೆ ಬಳಸಬಹುದು. ಕೋಣೆಯ ದಕ್ಷಿಣ, ನೈಋತ್ಯ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಫರ್ನಿಚರ್‌ಗಳನ್ನು ಇಡುವುದು ಸೂಕ್ತವಾಗಿದೆ.

ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾದ ದಶ ದಿಕ್ಕುಗಳು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿದ್ದು, ಕೆಲ ದಿಕ್ಕುಗಳು ಅನೇಕ ವಿಷಯಗಳಿಗೆ ಮಂಗಳಕರವಾಗಿವೆ. ಅದೇ ರೀತಿ ಇನ್ನು ಕೆಲ ವಿಷಯಗಳ ಸಂದರ್ಭದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ.

 Bedroom Vastu

ಓರ್ವ ವ್ಯಕ್ತಿಗೆ ಸರಿಹೊಂದುವಂತೆ ವಾಸ್ತು ಶಾಸ್ತ್ರ ಪರಿಗಣಿಸದೆ ಮನೆಯ ವಾಸ್ತು ವಿನ್ಯಾಸ ಮಾಡುವುದರಿಂದ ಆ ಸ್ಥಳದಲ್ಲಿ ಕೆಲ ಬಗೆಯ ಅನಾರೋಗ್ಯಕರ ಹಾಗೂ ಅಹಿತಕರ ವಾತಾವರಣ ನಿರ್ಮಾಣವಾಗುವ ಸಂಭವವಿರುತ್ತದೆ.

ವಾಸ್ತು ಶಾಸ್ತ್ರವನ್ನು ಕಡೆಗಣಿಸಿ ಕಟ್ಟಡ ನಿರ್ಮಿಸುವುದು ವ್ಯಕ್ತಿ ತನಗೆ ತಾನೇ ಕೆಟ್ಟದ್ದನ್ನು ಮಾಡುವ ಪ್ರಕ್ರಿಯೆಯಾಗುತ್ತದೆ. ಹೀಗಾಗಿ ವಾಸ್ತುವಿನ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಿ ಜೀವನದಲ್ಲಿ ಶಾಂತಿ ಹಾಗೂ ಆನಂದವನ್ನು ಪಡೆಯಬಹುದಾಗಿದೆ.

ಬೆಡ್ ರೂಂ ವಾಸ್ತು ನಿಯಮಗಳು

ಬೆಡ್ ರೂಂ ವಾಸ್ತು ನಿಯಮಗಳು

ಮನೆಯಲ್ಲಿ ನಾವು ಅತಿ ಹೆಚ್ಚು ಸಮಯ ಕಳೆಯುವ ಬೆಡ್ ರೂಂ ಅತಿ ಪ್ರಮುಖ ಜಾಗವಾಗಿದೆ. ಹೀಗಾಗಿ ಬೆಡ್ ರೂಂ ನಿರ್ಮಾಣ ಮಾಡುವಾಗ ವಾಸ್ತು ನಿಯಮಗಳನ್ನು ಪರಿಪಾಲನೆ ಮಾಡುವುದು ಅಗತ್ಯ. ಬೆಡ್ ರೂಂ ಬಗೆಗಿನ ವಾಸ್ತು ನಿಯಮಗಳ ಬಗ್ಗೆ ಇಲ್ಲಿ ಕೆಲ ಪ್ರಮುಖ ಟಿಪ್ಸ್ ನೀಡಲಾಗಿದೆ.

ಆಗ್ನೇಯ

ಆಗ್ನೇಯ

ಮನೆಯ ಈ ಭಾಗ ಅಗ್ನಿಯ ಸ್ಥಳವಾಗಿದ್ದು, ಇಲ್ಲಿ ವಾಸಿಸುವವರ ಮನದಲ್ಲಿ ಇದು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಆಗ್ನೇಯ ದಿಕ್ಕಿನಲ್ಲಿ ಬೆಡ್ ರೂಂ ಇರಬಾರದು. ಒಂದು ವೇಳೆ ಮಕ್ಕಳು ಈ ದಿಕ್ಕಿನಲ್ಲಿ ವಾಸಿಸುತ್ತಿದ್ದರೆ, ಅವರು ತಮ್ಮ ಅಭ್ಯಾಸದಲ್ಲಿ ಸರಿಯಾಗಿ ಏಕಾಗ್ರತೆ ಸಾಧಿಸಲಾಗದೆ ಹಿನ್ನಡೆ ಅನುಭವಿಸಬಹುದು.

ಅದೇ ರೀತಿ ಈ ದಿಕ್ಕಿಗೆ ತಲೆ ಮಾಡಿ ಮಲಗುವುದರಿಂದ ಸರಿಯಾಗಿ ನಿದ್ರೆ ಬಾರದೆ ನೆಮ್ಮದಿ ಹಾಳಾಗಬಹುದು. ಇದರಿಂದ ಮನದಲ್ಲಿ ಅಶಾಂತಿ ನಿರ್ಮಾಣವಾಗಿ ಅನವಶ್ಯಕವಾಗಿ ವಾದ ಮಾಡುವುದು ಅಥವಾ ಕ್ಷುಲ್ಲಕ ಕಾರಣಗಳಿಗೆ ಜಗಳ ಸಂಭವಿಸುವುದು ಮುಂತಾದ ಅಹಿತಕರ ಘಟನೆಗಳು ನಡೆಯಬಹುದು. ಒಂದು ವೇಳೆ ಈಗಾಗಲೇ ಈ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ, ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಮಂಚ ಇಡುವುದು ಬೇಡ.

ಅಟ್ಯಾಚ್ಡ್ ಬಾತ್ ರೂಂ

ಅಟ್ಯಾಚ್ಡ್ ಬಾತ್ ರೂಂ

ಬೆಡ್ ರೂಂನಲ್ಲಿ ಅಟ್ಯಾಚ್ಡ್ ಬಾತ್ ರೂಂ ಇಟ್ಟುಕೊಳ್ಳುವುದಾದರೆ ಅದು ಕೋಣೆಯ ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿರಲಿ. ಬಾತ್ ರೂಂನ ಬಾಗಿಲು ಯಾವಾಗಲೂ ಮುಚ್ಚಿರಬೇಕು. ಇಲ್ಲದಿದ್ದರೆ ಅದರಲ್ಲಿಂದ ನಕಾರಾತ್ಮಕ ಶಕ್ತಿ ಕೋಣೆಯಲ್ಲಿ ಹರಡಿ ನೆಮ್ಮದಿ ಕೆಡಬಹುದು.

ಗೋಡೆಯ ಬಣ್ಣಗಳು

ಗೋಡೆಯ ಬಣ್ಣಗಳು

ತಿಳಿ ಗುಲಾಬಿ, ನೀಲಿ ಅಥವಾ ಹಸಿರು ಬಣ್ಣ ಬೆಡ್ ರೂಂ ಗೋಡೆಗಳಿಗೆ ಸೂಕ್ತವಾಗಿವೆ. ಆದಷ್ಟೂ ಬಣ್ಣಗಳು ತಿಳಿ ಶೇಡ್‌ನಲ್ಲಿದ್ದರೆ ಉತ್ತಮ. ಇದರಿಂದ ಮನಸ್ಸಿಗೆ ನೆಮ್ಮದಿಯ ಭಾವ ಮೂಡುತ್ತದೆ. ಇನ್ನು ಬೆಡ್ ರೂಂನಲ್ಲಿ ಮಾರ್ಬಲ್ ಉಪಯೋಗಿಸುವುದು ನವ ದಂಪತಿಗಳಿಗೆ ಅಶುಭವಾಗಿದೆ.

ಕೋಣೆಯಲ್ಲಿ ಫರ್ನಿಚರ್

ಕೋಣೆಯಲ್ಲಿ ಫರ್ನಿಚರ್

ಕೋಣೆಯ ದಕ್ಷಿಣ, ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಫರ್ನಿಚರ್ ಇರಲಿ. ಮಧ್ಯಭಾಗದಲ್ಲಿ ಹಾಸಿಗೆ ಇರಬಾರದು. ವಾಸ್ತು ಪ್ರಕಾರ ಬೆಡ್ ರೂಂನಲ್ಲಿ ಕನ್ನಡಿಗಳು ಇರಬಾರದು ಎಂದು ಹೇಳಲಾಗಿದೆ. ಒಂದು ವೇಳೆ ಅನಿವಾರ್ಯವಾದರೆ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಾತ್ರ ಇರಲಿ. ಕನ್ನಡಿಯಿಂದ ಕೋಣೆಯಲ್ಲಿ ವಾಸಿಸುವವರ ಮಧ್ಯೆ ಜಗಳಗಳಾಗುವ ಸಾಧ್ಯತೆಗಳಿರುತ್ತವೆ. ಮಲಗುವ ಸ್ಥಳದಲ್ಲಿ ಎದುರಿಗೆ ಕನ್ನಡಿ ಇರಲೇಬಾರದು. ಅಂದರೆ ಮಲಗುವ ಸಂದರ್ಭದಲ್ಲಿ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ಕಾಣದಂತಿರಬೇಕು.

ಬೇರೆ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಏನಾಗುತ್ತೆ?

ಉತ್ತರ ದಿಕ್ಕು

ಉತ್ತರ ದಿಕ್ಕು

ನವ ವಿವಾಹಿತರಿಗೆ ಉತ್ತರ ದಿಕ್ಕಿನಲ್ಲಿರುವ ಬೆಡ್ ರೂಂ ಬಹಳ ಶುಭವಾಗಿದೆ. ಪೂರ್ವ ದಿಕ್ಕಿನಲ್ಲಿದ್ದರೆ ಮಕ್ಕಳು ಹಾಗೂ ಅವಿವಾಹಿತರಿಗೆ ಒಳ್ಳೆಯದಾಗುತ್ತದೆ. ಚಿಕ್ಕವರು ಹಾಗೂ ವಿದ್ಯಾರ್ಥಿಗಳು ಈಶಾನ್ಯ ದಿಕ್ಕಿನಲ್ಲಿ ಬೆಡ್ ರೂಂ ಮಾಡಿಕೊಳ್ಳಬಹುದು.

ಈಶಾನ್ಯ ದಿಕ್ಕು

ಈಶಾನ್ಯ ದಿಕ್ಕು

ಈಶಾನ್ಯ ಪಾವಿತ್ರ್ಯತೆಯ ಸಂಕೇತವಾಗಿದ್ದು, ಈ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಅಶುಭವಾಗಿದೆ. ಇದು ಇಡೀ ಮನೆಯ ವಾತಾವರಣ ಹಾಳು ಮಾಡಬಹುದು. ಹೀಗಾಗಿ ಈ ದಿಕ್ಕಿನಲ್ಲಿ ಹಾಸಿಗೆ ಇಡುವುದಾಗಲಿ ಅಥವಾ ಬೆಡ್ ರೂಂ ಮಾಡುವುದಾಗಲಿ ಬೇಡ.

ವಾಯವ್ಯ ದಿಕ್ಕು

ವಾಯವ್ಯ ದಿಕ್ಕು

ನವ ದಂಪತಿಗಳು ವಾಯವ್ಯ ದಿಕ್ಕಿನಲ್ಲಿ ಬೆಡ್ ರೂಂ ಇಟ್ಟುಕೊಳ್ಳಬಹುದು.

ನೈಋತ್ಯ ದಿಕ್ಕು

ನೈಋತ್ಯ ದಿಕ್ಕು

ಒಂದು ವೇಳೆ ಮನೆ ಬಹುಮಹಡಿ ಹೊಂದಿದ್ದರೆ, ಮನೆಯ ಅತಿ ವಿಶಾಲವಾದ ಕೋಣೆಯನ್ನು ಕೊನೆಯ ಮಹಡಿಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಇದರಲ್ಲಿ ಮನೆಯ ಅತಿ ಹಿರಿಯ ಸದಸ್ಯರು ವಾಸ ಮಾಡಬೇಕು. ಮನೆಯ ನೆಲ ಮಹಡಿಗೂ ಇದೇ ನಿಯಮ ಅನ್ವಯಿಸುತ್ತದೆ. ಈ ಕೋಣೆಯನ್ನು ಮಾಸ್ಟರ್ ಬೆಡ್ ರೂಂ ಆಗಿ ಪರಿಗಣಿಸಬಹುದು.

ಪೂರ್ವ ದಿಕ್ಕು

ಪೂರ್ವ ದಿಕ್ಕು

ಮದುವೆಯಾಗದ ಮಕ್ಕಳು ಈ ದಿಕ್ಕಿನಲ್ಲಿ ಬೆಡ್ ರೂಂ ಮಾಡಿಕೊಳ್ಳಬಹುದು. ಈ ದಿಕ್ಕಿಗೆ ಮುಖ ಮಾಡಿ ಅಧ್ಯಯನ ನಡೆಸುವುದು ಅತ್ಯಂತ ಶ್ರೇಷ್ಠ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಪಶ್ಚಿಮ ದಿಕ್ಕು

ಪಶ್ಚಿಮ ದಿಕ್ಕು

ಮನೆಯ ಪಶ್ಚಿಮ ದಿಕ್ಕಿನಲ್ಲಿ ಬೆಡ್ ರೂಂ ಇರುವುದರಿಂದ ಮನೆಯಲ್ಲಿ ಹೆಚ್ಚು ಹೆಣ್ಣು ಮಕ್ಕಳು ಜನಿಸುತ್ತಾರೆ ಎಂದು ನಂಬಲಾಗಿದೆ.

English summary

Vastu Tips For Bedrooms

Bedroom Vastu says that ideal direction for bedroom is the North. Southeast and the Northeast are the most inauspicious for it. Children and the unmarried can have a room in the East. Never have bed in the centre of the room. Light shades of rose blue and green can be used for walls. South, Southwest or West are good for furniture.
X
Desktop Bottom Promotion