For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?...ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

By Jaya Subramanya
|

ಭಾರತದ ದಕ್ಷಿಣ ಭಾಗದಲ್ಲಿ ನೆಲೆಸಿರುವವರಿಗೆ ವರಮಹಾಲಕ್ಷ್ಮಿ ವೃತವು ಹೆಚ್ಚು ಮಹತ್ವಪೂರ್ಣ ಮತ್ತು ವಿಶೇಷ ಎಂದೆನಿಸಿದೆ. ಈ ದಿನಂದು ಲಕ್ಷ್ಮೀಯನ್ನು ಪೂಜಿಸುವುದರಿಂದ ಆಕೆ ನಮ್ಮ ಮನದ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇರುವುದರಿಂದ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.

ಲಕ್ಷ್ಮೀಯ ಆರಾಧನೆಯಿಂದ ಕಷ್ಟಗಳೆಲ್ಲಾ ದೂರವಾಗಿ ಅದೃಷ್ಟ ಒಲಿಯುವುದು

ಕರ್ನಾಟಕದ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಪೂಜೆಯನ್ನು ನೆರವೇರಿಸುವುದಕ್ಕಾಗಿ ಮಹಿಳೆಯರು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಮಹಾಲಕ್ಷ್ಮೀಯನ್ನು ಒಲಿಸಿಕೊಳ್ಳುವುದರಿಂದ ಅವರ ಮನದ ಕಾಮನೆಗಳನ್ನು ದೇವಿಯು ಈಡೇರಿಸುತ್ತಾರೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ದೇವಿಯು ಸುಮಂಗಲಿ ಯೋಗವನ್ನು ಕರುಣಿಸುತ್ತಾರೆ ಎಂಬ ಮಹತ್ವವನ್ನೂ ಈ ಹಬ್ಬವು ಒಳಗೊಂಡಿದೆ. ಈ ಕೆಳಗೆ ನಾವು ಪೂಜೆಯ ಮುಹೂರ್ತವನ್ನು ನೀಡಿದ್ದು ಪೂಜೆಗಾಗಿ ಏನೆಲ್ಲಾ ವಸ್ತುಗಳು ಬೇಕು ಎಂಬ ವಿವರವನ್ನು ನೀಡಿದ್ದೇವೆ....

ವರಮಹಾಲಕ್ಷ್ಮಿ ಪೂಜೆಗಾಗಿ ಪೂಜಾ ಮುಹೂರ್ತ

ವರಮಹಾಲಕ್ಷ್ಮಿ ಪೂಜೆಗಾಗಿ ಪೂಜಾ ಮುಹೂರ್ತ

ಹಿಂದೂ ಕ್ಯಾಲೆಂಡರ್ ಪ್ರಕಾರ ವರಮಹಾಲಕ್ಷ್ಮಿ ಪೂಜೆಯನ್ನು ಪ್ರತೀ ವರ್ಷದ ಪ್ರಥಮ ಶುಕ್ರವಾರದಂದು ನಡೆಸಲಾಗುತ್ತದೆ. ಇದು ಶ್ರಾವಣ ಮಾಸದ ಶುಕ್ಷ ಪಕ್ಷವಾಗಿದೆ.

ರಕ್ಷಾಬಂಧನದ ದಿನದಂದು ಕೂಡ ಪೂಜೆಯನ್ನು ಮಾಡುತ್ತಾರೆ. ರಕ್ಷಾಬಂಧನದಕ್ಕಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ಈ ವರ್ಷ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 4

ಈ ವರ್ಷ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 4

ಈ ವರ್ಷ ವರಮಹಾಲಕ್ಷ್ಮಿ ಪೂಜೆಯನ್ನು ಆಗಸ್ಟ್ 4 ರಂದು ನೆರವೇರಿಸಲಾಗುತ್ತದೆ

ವರಮಹಾಲಕ್ಷ್ಮಿ ಪೂಜೆಯ ಮುಹೂರ್ತವು ಬೆಳಗ್ಗೆ 6:45 ರಿಂದ 8:48ರ ಸಮಯವಾಗಿದೆ

ಸಂಜೆಯ ಮುಹೂರ್ತವು 7:15 ರಿಂದ 8:50 ಆಗಿದೆ.

ವರಮಹಾಲಕ್ಷ್ಮಿ ಪೂಜೆಗಾಗಿ ಪಂಚಾಂಗವು ಆಗಸ್ಟ್ 4 2017 ಆಗಿದೆ

ಈ ವರ್ಷ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 4

ಈ ವರ್ಷ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 4

ಸೂರ್ಯೋದಯಂ: 06.02

ಸೂರ್ಯಾಸ್ತಮಮ್: 19:03

ಚಂದ್ರೋದಯಂ: 16:30

ಚಂದ್ರಾಸ್ತಮಮ್: 27:43

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ಪ್ರತಿಯೊಂದು ಪೂಜೆಗಾಗಿ ಪೂಜೆ ಮಾಡುವ ಸಾಮಾಗ್ರಿ ಮುಖ್ಯವಾದುದಾಗಿದೆ. ಈ ಉಪಕರಣಗಳನ್ನು ಈ ಮೊದಲೇ ಸಿದ್ಧಮಾಡಿಟ್ಟುಕೊಳ್ಳುವುದರಿಂದ ಪೂಜೆಯನ್ನು ಸಾಂಗವಾಗಿ ನೆರವೇರಿಸಲು ನಿಮಗೆ ಸಾಧ್ಯವಾಗುತ್ತದೆ. ಅಂತೆಯೇ ಈ ಉಪಕರಣಗಳನ್ನು ಜೋಡಿಸಿಡುವುದು ಮಂಗಳಕರವಾಗಿದೆ.

ರಂಗೋಲಿ ಬಿಡಿಸಲು ಬೇಕಾಗಿರುವ ಸಾಮಾಗ್ರಿ

*ಅಕ್ಕಿ ಹಿಟ್ಟು ಮತ್ತು ಬಣ್ಣಗಳು

*ತಂಬಾಲಂ - ದೊಡ್ಡ ತಟ್ಟೆ (ತಾಮ್ರದಿಂದ ಮಾಡಲ್ಪಟ್ಟಿರುವುದು)

*ಪೇಟಾ

*ಅಕ್ಕಿ - ಪೇಟಾ ಸುತ್ತಲೂ ಹರಡಲು ಬಳಸಲಾಗುತ್ತದೆ

*ಬಾಳೆಎಲೆಗಳು

*ಒಂದು ಕಲಶ - ಬೆಳ್ಳಿ ಅಥವಾ ಕಂಚಿನಿಂದ ಮಾಡಲ್ಪಟ್ಟಿರುವುದು

*ನೀರು - ಶುದ್ಧವಾಗಿರುವಂತಹದ್ದು

*ಕರ್ಪೂರ, ಏಲಕ್ಕಿ, ಕೇಸರಿ, ದಾಲ್ಚಿನ್ನಿ - ಕಲಶದಲ್ಲಿ ಹಾಕಲು ಇದನ್ನು ಬಳಸಲಾಗುತ್ತದೆ

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ಮಾವಿನ ಎಲೆಗಳು - ಕಲಶದ ಸುತ್ತಲೂ ಅಲಂಕಾರಕ್ಕಾಗಿ ಕಟ್ಟಲು

ಸ್ವಲ್ಪ ತೆಂಗಿನಕಾಯಿಗಳು - ಒಂದನ್ನು ಕಲಶದ ಮೇಲೆ ಇರಿಸುತ್ತಾರೆ ಮತ್ತು ಉಳಿದವುಗಳನ್ನು ಪೂಜೆ ಹಾಗೂ ತಾಂಬೂಲದಲ್ಲಿ ಉಪಯೋಗಿಸುತ್ತಾರೆ

*ಅರಿಶಿನ ಹುಡಿ

*ಶ್ರೀಗಂಧ ಪೇಸ್ಟ್

*ಕುಂಕುಮ

*ಅರಿಶಿನ ಮಿಶ್ರಿತ ಅಕ್ಕಿ - ಅಕ್ಷತೆ

*ಕಮಲ

*ದೇವಿಯ ಮುಖ - ಮಾರುಕಟ್ಟೆಯಲ್ಲಿ ದೊರೆಯುತ್ತದೆ

*ಮೂಗುತ್ತಿ ಮತ್ತು ಕಣ್ಣಿನ ಆಭರಣ - ಮಾರುಕಟ್ಟೆಯಲ್ಲಿ ಲಭ್ಯ

*ದೇವಿಗೆ ವಸ್ತ್ರಗಳು

*ಹೂವುಗಳಿಂದ ಮಾಡಿದ ಮಾಲೆ

*ಪೂಜೆಗಾಗಿ ಹೂವು

*ಬಾಳೆಹಣ್ಣು, ವೀಳ್ಯದೆಲೆ ಮತ್ತು ಅಡಿಕೆ

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

*ತೋರಂ - ಅರಿಶಿನವನ್ನು ಬಳಿದು ಮಾಡಿದ ದಾರ. ಇದು ಒಂಭತ್ತು ದಾರ ಮತ್ತು ಗಂಟುಗಳನ್ನು ಒಳಗೊಂಡಿದೆ. ಇದನ್ನು ಕೈಗೆ ಕಟ್ಟಲಾಗುತ್ತದೆ

ಪೋಂಗು ನೂಲು - ಇದು ಹಳದಿ ಬಣ್ಣದಿಂದ ಮಾಡಲಾದ ದಾರವಾಗಿದೆ. ಇದನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ

*ಒಣ ಹಣ್ಣುಗಳು

*ಹಾಲು

*ಹಣ್ಣುಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ಪಂಚಾಮೃತಂ - ಹಣ್ಣು, ಒಣ ಹಣ್ಣುಗಳು, ತುಪ್ಪ, ನಟ್ಸ್ ಮತ್ತು ಬೆಲ್ಲವನ್ನು ಬಳಸಿ ತಯಾರಿಸಿರುವಂತಹದ್ದು

ನೈವೇದ್ಯಕ್ಕಾಗಿ ಪಾಕವೈವಿಧ್ಯಗಳು - ಸಿಹಿ ಸೇಮಿಗೆ ಪಾಯಸ, ಅಪ್ಪ, ಚಿತ್ರಾನ್ನ, ಕರ್ಜಿಕಾಯಿ, ಪೂರನ್, ಇಡ್ಲಿ ಮತ್ತು ಇನ್ನು ಕೆಲವು

ನೀವು ಪೂಜೆಗೆ ಆಹ್ವಾನಿಸಿರುವ ಮಹಿಳೆಯರನ್ನು ಆಧರಿಸಿ ತಾಂಬೂಲ ಪ್ಯಾಕೆಟ್ ಸಿದ್ಧಮಾಡಿ.

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು

*ಇದರಲ್ಲಿ ಶ್ರೀಗಂಧದ ಪೇಸ್ಟ್, ಕುಂಕುಮ, ಬಳೆಗಳು, ಹಳದಿ ದಾರ, ವೀಳ್ಯದೆಲೆಗಳು, ಅಡಿಕೆ, ತೆಂಗಿನಕಾಯಿ ಮತ್ತು ಬಾಳೆಹಣ್ಣು ಇರಬೇಕು.

*ನೀವು ರವಿಕೆ ಕಣವನ್ನು ಕೂಡ ನೀಡಬಹುದು. ಇದರೊಂದಿಗೆ ಒಂದು ರೂಪಾಯಿ ನಾಣ್ಯವನ್ನು ಇರಿಸಿ.

*ಪ್ರಸಾದ ವಿತರಿಸಲು ತಟ್ಟೆ ಮತ್ತು ಲೋಟಗಳನ್ನು ಸಿದ್ಧಪಡಿಸಿ

ಮಹಾಲಕ್ಷ್ಮೀ ಸ್ತೋತ್ರದ ಪುಟಗಳು ಮತ್ತು ವ್ರತಾ ಕಥೆಯು ಇದರಲ್ಲಿರಲಿ. ಪೂಜೆಯಲ್ಲಿ ಭಾಗವಹಿಸುವವರಿಗೆ ಇದನ್ನು ವಿತರಿಸಿ.

ವರಮಹಾಲಕ್ಷ್ಮಿ ಪೂಜೆ ಮಾಡುವಾಗ ಇದರ ಬಗ್ಗೆ ಗಮನವಿರಲಿ

English summary

Varamahalakshmi Pooja Muhurtam And The Pooja Samagri

Varamahalakshmi is an important festival to the Hindus living in the south of India. It is dedicated to the Goddess Maha Lakshmi who is considered to be the Goddess of wealth. In the southern states. Given below are the Pooja Muhurtams and the things required, or samagri, to perform the pooja correctly. Read on to know more. According to the Hindu calendar, the Varamahalakshmi Pooja is performed every year on the first Friday of the Shukla Paksha of the Shravana month.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more