For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮೀ ವ್ರತ 2022: ಗರ್ಭಿಣಿಯರು ವರಮಹಾಲಕ್ಷ್ಮಿ ವ್ರತ ಮಾಡಬಹುದೇ?

|

ವರಮಹಾಲಕ್ಷ್ಮೀ ವ್ರತಕ್ಕೆ ದಿನಗಣನೆ ಆರಂಭವಾಗಿದೆ. 2022ನೇ ಸಾಲಿನಲ್ಲಿ ಆಗಸ್ಟ್‌ 5ರಂದು ವರಮಹಾಲಕ್ಷ್ಮಿ ವ್ರತ ಇರಲಿದೆ. ಶ್ರಾವಣ ಮಾಸದ ಎಲ್ಲ ಶುಕ್ರವಾರವೂ ಲಕ್ಷ್ಮಿ ಪೂಜೆಗೆ ಶುಭವಾಗಿದ್ದು, ಹುಣ್ಣಿಮೆಗೂ ಮುನ್ನ ಬರುವ ಶುಕ್ರವಾರ ಹೆಚ್ಚು ಪವಿತ್ರ ಎಂದು ನಂಬಲಾಗಿದೆ.

ವರಮಹಾಲಕ್ಷ್ಮಿ ಪೂಜೆಯನ್ನು ಮುತ್ತೈದೆಯರು ಕುಟುಂಬದ ಶ್ರೇಯೋಭಿವೃದ್ಧಿ, ಐಶ್ವರ್ಯ, ಆರೋಗ್ಯ ಪ್ರಾಪ್ತಿಗೆ ಶ್ರದ್ಧಾ ಪೂರ್ವಕವಾಗಿ ಮಾಡುತ್ತಾರೆ. ಪ್ರತಿ ವರ್ಷ ವರಮಹಾಲಕ್ಷ್ಮಿ ವ್ರತ ಮಾಡುವ ಮುತ್ತೈದೆಯರು ಗರ್ಭಿಣಿಯಾದ ಸಮಯದಲ್ಲಿ ವ್ರತ ಮಾಡಬಹುದೇ?, ಇದು ಶುಭವೇ ನಮ್ಮ ಸಂಪ್ರದಾಯ ಏನನ್ನು ಹೇಳುತ್ತದೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಪದ್ಧತಿಗೆ ಭಂಗವಾಗುವುದೇ?

ಪದ್ಧತಿಗೆ ಭಂಗವಾಗುವುದೇ?

ಪೂಜೆಗಳು ಮತ್ತು ವ್ರತಗಳನ್ನು ಕುಟುಂಬದ ಹಿರಿಯರಿಂದಲೂ ಮಾಡಿಕೊಂಡು ಬಂದಿರುವ ವಾಡಿಕೆ ಕೆಲವು ಮನೆತನಗಳಲ್ಲಿ ಇದ್ದರೆ ಇನ್ನು ಕೆಲವರು ಹೊಸದಾಗಿ ವರಮಹಾಲಕ್ಷ್ಮಿ ವ್ರತವನ್ನು ಮಾಡಲು ಆರಂಭಿಸುತ್ತಾರೆ. ಹೀಗೆ ಸಾಗಿ ಬಂದ ವಾಡಿಕೆ ಕೆಲವು ವರ್ಷಗಳಲ್ಲಿ ನಡುವೆ ಮಾಡಲು ಸಾಧ್ಯವಾಗದ ಸಂದರ್ಭಗಳು ಎದುರಾಗಬಹುದು. ಇಂಥಾ ಸಂದರ್ಭಗಳಲ್ಲಿ ವ್ರತ ಮಾಡದ ಬಗ್ಗೆ ಸಾಕಷ್ಟು ಗೊಂದಲಗಳು ನಮಗಾಗುವುದು ಸಾಮಾನ್ಯ, ಅಂಥಾ ಕೆಲವು ಸಂದರ್ಭಗಳಲ್ಲಿ ಗರ್ಭಾವಸ್ಥೆಯಾಗುವುದು ಒಂದು. ಗರ್ಭಾವಸ್ಥೆಯಲ್ಲಿ ವರಮಹಾಲಕ್ಷ್ಮಿ ವ್ರತ ಮಾಡದಿದ್ದರೆ ಪದ್ಧತಿಗೆ ಭಂಗವಾಗುವುದಿಲ್ಲ.

ಗರ್ಭಿಣಿಯರು ವ್ರತ ಮಾಡಬಹುದೇ?

ಗರ್ಭಿಣಿಯರು ವ್ರತ ಮಾಡಬಹುದೇ?

ಗರ್ಭಿಣಿಯರು "ವೃದ್ಧಿ" ಆರಂಭವಾಗುತ್ತಿದ್ದಂತೆ ಅಥವಾ 6 ತಿಂಗಳ ನಂತರ ಗರ್ಭಿಣಿಯರು ವರಮಹಾಲಕ್ಷ್ಮಿ ವ್ರತ ಮಾಡುವಂತಿಲ್ಲ ಎಂದು ಹಿರಿಯರು ಹಾಗೂ ಹಿಂದೂ ಸಂಪ್ರದಾಯ ಹೇಳುತ್ತದೆ ಹಾಗೂ ವರಮಹಾಲಕ್ಷ್ಮಿ ವ್ರತ ಮಾಡಲು ಬಯಸುವವರು ಪಾರಾಯಣ ಮತ್ತು ಪೂಜೆಯನ್ನು ಅನುಮತಿಸಲಾಗಿದ್ದು, ಉಪವಾಸ ಮಾಡುವುದು ಬೇಡ ಎನ್ನಲಾಗುತ್ತದೆ. ಗರ್ಭಿಣಿ ಮಹಿಳೆಯರ ಮೇಲೆ ಔಷಧದ ಪರಿಣಾಮ ಜತೆಗೆ ಉಪವಾಸ ಕಷ್ಟಕರವಾಗುವುದರಿಂದ, ಗರ್ಭಿಣಿಯರು ಉಪವಾಸ ಮಾಡದಿರುವುದು ಉತ್ತಮ.

ಮಗು ಹುಟ್ಟಿದ 22 ದಿನಗಳ ಒಳಗೆ ವರಮಹಾಲಕ್ಷ್ಮಿ ವ್ರತ ಇದ್ದರೆ ಬಾಣಂತಿಯರು ವ್ರತ ಮಾಡುವಂತಿಲ್ಲ ಎನ್ನಲಾಗಿದೆ.

ವೈಜ್ಞಾನಿಕವಾಗಿ ಏನು ಹೇಳುತ್ತಾರೆ?

ವೈಜ್ಞಾನಿಕವಾಗಿ ಏನು ಹೇಳುತ್ತಾರೆ?

ವರಮಹಾಲಕ್ಷ್ಮಿ ವ್ರತ ಮಾಡುವ ವೇಳೆ ಮುತ್ತೈದೆಯರು ಬೆಳಗಿನಿಂದ ಸಂಜೆಯ ವರೆಗೂ ಉಪವಾಸ ಇದ್ದು, ಸಂಜೆಯ ನಂತರ ಊಟ ಮಾಡುವ ಪದ್ಧತಿ ಇದೆ. ಗರ್ಭಾವಸ್ಥೆಯಾಗಿರುವ ಸಂದರ್ಭದಲ್ಲಿ ಇಡೀ ದಿನ ಉಪವಾಸ ಮಾಡುವುದು ಕಷ್ಟಸಾಧ್ಯ ಅಥವಾ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಗರ್ಭಿಣಿಯರು ವರಮಹಾಲಕ್ಷ್ಮಿ ವ್ರತ ಮಾಡುವುದು ಒಳಿತಲ್ಲ ಎಂದು ವೈದ್ಯಕೀಯವಾಗಿ ಹೇಳಲಾಗಿದೆ. ಅಲ್ಲದೆ, ಲಕ್ಷ್ಮಿ ವ್ರತ ಮಾಡಲು ಸಾಕಷ್ಟು ದೈಹಿಕ ಶ್ರಮವೂ ಅಗತ್ಯ ವಿರುವುದರಿಂದ ಗರ್ಭಿಣಿಯರು ಈ ಸಂದರ್ಭದಲ್ಲಿ ದೈಹಿಕ ಶ್ರಮ ತೆಗೆದುಕೊಳ್ಳುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ.

English summary

Varalakshmi Vratham: Can Pregnant Women Perform Varalakshmi Vratham

Here we are discussing about Varalakshmi Vratham 2021: Can Pregnant Women Perform Varalakshmi Vratham. Read more.
X
Desktop Bottom Promotion