For Quick Alerts
ALLOW NOTIFICATIONS  
For Daily Alerts

Varalakshmi Vratha 2021: ವರಮಹಾಲಕ್ಷ್ಮಿ ವ್ರತ ಪೂಜಾ ದಿನ, ಶುಭ ಮುಹೂರ್ತ, ವ್ರತದ ಮಹತ್ವ ಮತ್ತು ಪೂಜೆಯ ವಿಧಾನ

|

ಹಿಂದೂ ಸಂಪ್ರದಾಯದಲ್ಲಿ ಸಂಪತ್ತಿನದ ಅಧಿದೇವತೆ ಎಂದೇ ಕರೆಯಲ್ಪಡುವ ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ಲದಲ್ಲಿ ಮಾಡುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು, ಇದಕ್ಕೆ ಬಹಳ ವಿಶೇಷ ಮಹತ್ವವಿದೆ ಎನ್ನಲಾಗುತ್ತದೆ. ಸಂಪತ್ತು, ಸಮೃದ್ಧಿ, ಕುಟುಂಬದ ಶ್ರೇಯೋಭೀವೃದ್ಧಿಗಾಗಿ ಶ್ರಾವಣ ಮಾಸದ ಪೂರ್ಣಿಮೆಯ ಮುನ್ನ ಅಥವಾ ಹುಣ್ಣಿಮೆಯ ಮೊದಲ ಶುಕ್ರವಾರ ಮಾಡುವ ವರಮಹಾಲಕ್ಷ್ಮೀ ವ್ರತ 2021ನೇ ಸಾಲಿನಲ್ಲಿ ಆಗಸ್ಟ್‌ 20ರಂದು ಆಚರಿಸಲಾಗುತ್ತಿದೆ.

Varalakshmi Vratham

ವರಮಹಾಲಕ್ಷ್ಮಿ ವ್ರತವನ್ನು ಎಂದು ಯಾವ ಸಮಯದಲ್ಲಿ ಮಾಡಿದರೆ ಶುಭ, ಶುಭ ಮುಹೂರ್ತ ಯಾವುದು, ಲಕ್ಷ್ಮಿ ವ್ರತದ ಮಹತ್ವವೇನು, ವ್ರತವನ್ನು ಹೇಗೆ ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ:

ವರಮಹಾಲಕ್ಷ್ಮಿ ವ್ರತ 2021 ಪೂಜಾ ದಿನ ಶುಭ ಮುಹೂರ್ತ

ವರಮಹಾಲಕ್ಷ್ಮಿ ವ್ರತ 2021 ಪೂಜಾ ದಿನ ಶುಭ ಮುಹೂರ್ತ

ಸರಿಯಾದ ಮುಹೂರ್ತದಲ್ಲಿ ಪೂಜೆ ಸಲ್ಲಿಸುವುದರಿಂದ ನಿತ್ಯ ಸಮೃದ್ಧಿಯನ್ನು ಖಾತ್ರಿಪಡಿಸುವುದರಿಂದ ವರಲಕ್ಷ್ಮಿ ಪೂಜೆಯನ್ನು ಯಾವಾಗ ಮಾಡಬೇಕೆಂದು ತಿಳಿಯುವುದು ಮುಖ್ಯವಾಗಿದೆ. ಆಗಸ್ಟ್ 20ಕ್ಕೆ ಲಕ್ಷ್ಮಿ ಪೂಜೆಯ ಮುಹೂರ್ತ ಹೀಗಿದೆ:

ಸಿಂಹ ಲಗ್ನ ಪೂಜೆ ಮುಹೂರ್ತ - ಬೆಳಿಗ್ಗೆ 6.08 ರಿಂದ ಬೆಳಿಗ್ಗೆ 08.01 ರವರೆಗೆ

ವೃಶ್ಚಿಕ ಲಗ್ನ ಪೂಜೆ ಮುಹೂರ್ತ - ಮಧ್ಯಾಹ್ನ 12.09 ರಿಂದ 2.20 ರವರೆಗೆ

ಕುಂಭ ಲಗ್ನ ಪೂಜೆ ಮುಹೂರ್ತ - ಸಂಜೆ 6.21 ರಿಂದ 8.03 ರವರೆಗೆ

ವೃಷಭ ಲಗ್ನ ಪೂಜೆ ಮುಹೂರ್ತ - ಮಧ್ಯಾಹ್ನ 11.31 ರಿಂದ 1.33 ರವರೆಗೆ

ವರಲಕ್ಷ್ಮಿ ವ್ರತದ ದಿನ ಪೂಜೆ ಆರಂಭ ಹಾಗೂ ಅಂತ್ಯವಾಗುವ ಸಮಯ

ಸೂರ್ಯೋದಯ ಆಗಸ್ಟ್ 20, 2021 ಬೆಳಿಗ್ಗೆ 6:08 ಆರಂಭವಾಗುತ್ತದೆ

ಸೂರ್ಯಾಸ್ತ ಆಗಸ್ಟ್ 20, 2021 ಸಂಜೆ 6:51 ಕ್ಕೆ ಕೊನೆಗೊಳ್ಳುತ್ತದೆ

ಪೂರ್ಣಿಮಾ ತಿಥಿ ಆಗಸ್ಟ್ 21, 2021 ಸಂಜೆ 7:00 ಆರಂಭವಾಗುತ್ತದೆ

ಪೂರ್ಣಿಮಾ ತಿಥಿ ಆಗಸ್ಟ್ 22, 2021 5:31 ಕ್ಕೆ ಕೊನೆಗೊಳ್ಳುತ್ತದೆ

ನೆನಪಿಡಿ: ಯಾವುದೇ ಕಾರಣಕ್ಕೂ ಲಕ್ಷ್ಮೀ ಪೂಜೆಯನ್ನು ರಾಹುಕಾಲದಲ್ಲಿ ಮಾಡುವಂತಿಲ್ಲ, ಇದು ಪೂಜೆಗೆ ಪ್ರಶಸ್ತ ಸಮಯವಲ್ಲ. ರಾಹುಕಾಲದಲ್ಲಿ ಲಕ್ಷ್ಮೀ ಪೂಜೆ ಅಶುಭ, ಒಳಿತಾಗುವುದಿಲ್ಲ ಎಂದು ಹೇಳಲಾಗುತ್ತದೆ.

ವರಮಹಾಲಕ್ಷ್ಮಿ ವ್ರತದ ಮಹತ್ವ

ವರಮಹಾಲಕ್ಷ್ಮಿ ವ್ರತದ ಮಹತ್ವ

ವಿವಾಹಿತ ಮಹಿಳೆಯರು ಈ ಪವಿತ್ರ ವರಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ತಮ್ಮ ಪತಿ ಮತ್ತು ಮಕ್ಕಳಿಗೆ ಆಶೀರ್ವಾದ ಪಡೆಯಲು ಲಕ್ಷ್ಮಿ ವ್ರತ ಮಾಡುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಶುಭ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟಲಕ್ಷ್ಮಿ - ಪ್ರೀತಿ, ಸಂಪತ್ತು, ಶಕ್ತಿ, ಶಾಂತಿ, ಕೀರ್ತಿ, ಆನಂದ, ಭೂಮಿ ಮತ್ತು ಕಲಿಕೆಯ ಎಂಟು ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಸಮಾನ ಎಂದು ನಂಬಲಾಗಿದೆ. ಶ್ರದ್ಧೆ ಹಾಗೂ ಭಕ್ತಿಯಿಂದ ವರಮಹಾಲಕ್ಷ್ಮೀ ವ್ರತವನ್ನು ಮಾಡಿದರೆ ಆರೋಗ್ಯ, ಸಂಪತ್ತು, ಸಂತೋಷ, ದೀರ್ಘಾಯಸ್ಸು, ಘನತೆ, ಯಶಸ್ಸುಗಳನ್ನು ಗಳಿಸಲು ಸಾಧ್ಯವಾಗುತ್ತದೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವುದೆಂದರೆ ಅಷ್ಟ ಲಕ್ಷ್ಮೀಯರ ಆರಾಧನೆ ಮಾಡಿದಂತೆ ಎನ್ನಲಾಗುತ್ತದೆ. ದೇವಿ ವರಲಕ್ಷ್ಮೀ ಮಹಾಲಕ್ಷ್ಮೀಯ ರೂಪವಾಗಿದ್ದು, ಈಕೆ ಕ್ಷೀರಸಾಗರದಿಂದ ಎದ್ದು ಬಂದವಳೂ, ಬಣ್ಣ ಬಣ್ಣದ ವಸ್ತ್ರಗಳಿಂದ ಸುಂದರವಾಗಿ ಅಲಂಕೃತವಾಗಿರುವವಳಾಗಿದ್ದಾಳೆ. ಈ ವ್ರತವನ್ನು ಜಾತಿ ಮತ್ತು ಪಂಥಗಳ ಭೇದವಿಲ್ಲದೆ ಎಲ್ಲರೂ ಆಚರಿಸಬಹುದು ಹಾಗೂ ಆಚರಿಸುತ್ತಾರೆ. ವರಲಕ್ಷ್ಮಿ ವ್ರತವನ್ನು ಆಂಧ್ರಪ್ರದೇಶ, ಕರ್ನಾಟಕ, ಉತ್ತರ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸುವ ಪದ್ಧತಿ ಇದೆ.

ಸಾಮಾನ್ಯವಾಗಿ ಹಾಗೂ ಬಹುತೇಕ ಹೆಣ್ಣುಮಕ್ಕಳು, ಮಹಿಳಯರೇ ಈ ವ್ರತವನ್ನು ಮಾಡುವುದು ವಾಡಿಕೆಯಾದರೂ, ಪುರುಷರು ಸಹ ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆಯದು ಎನ್ನಲಾಗುತ್ತದೆ.

ಲಕ್ಷ್ಮಿ ವ್ರತದ ಹಿನ್ನೆಲೆ

ಲಕ್ಷ್ಮಿ ವ್ರತದ ಹಿನ್ನೆಲೆ

ಮಗದ ದೇಶದಲ್ಲಿ ಸದ್ಗುಣಗಳ ಪ್ರತೀಕವಾಗಿದ್ದ ಚಾರುಮತಿ ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿ ಮಾದರಿಯಾಗಿದ್ದ ಮಹಿಳೆಯಾಗಿದ್ದಳು. ಆಕೆಯಿಂದ ಪ್ರಭಾವಿತಳಾಗುವ ಲಕ್ಷ್ಮೀ ದೇವಿ ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರದಂದು ತನ್ನನ್ನು ಪೂಜಿಸುವಂತೆ ಹೇಳುತ್ತಾಳೆ. ಭಕ್ತಿಪೂರ್ವಕವಾಗಿ ಪೂಜೆ ಮಾಡಿದರೆ ಜೀವನದಲ್ಲಿ ಇಚ್ಛಿಸಿರುವುದು ನಿನಗೆ ಪ್ರಾಪ್ತಿಯಾಗುತ್ತದೆ ಎಂದು ಲಕ್ಷ್ಮೀ ಹೇಳುವರು. ಲಕ್ಷ್ಮೀ ಹೇಳಿದಂತೆ ಚಾರುಮತಿ ಪೂಜೆ ಮಾಡಿಬನೆರೆಮನೆಯವರು ಹಾಗೂ ಸಂಬಂಧಿಕರನ್ನು ಕರೆದು ತಾಂಬೂಲ ನೀಡುವಳು. ಪೂಜೆ ಕೊನೆಗೊಳ್ಳುವ ವೇಳೆಗೆ ಚಾರುಮತಿ ಚಿನ್ನ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟರು ಮತ್ತು ಆಕೆಯ ಮನೆಯು ಬಂಗಾರವಾಯಿತು. ಮಹಿಳೆಯು ಮುಂದೆ ಜೀವನಪೂರ್ತಿ ಲಕ್ಷ್ಮಿ ಪೂಜೆ ಮಾಡಿ ಸುಖ ಹಾಗೂ ಸಮೃದ್ಧಿಯಿಂದ ಕಳೆದಳು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಸುಖ, ಸಮೃದ್ಧಿ, ಸಂಪತ್ತು, ಆರೋಗ್ಯ ಮತ್ತು ನೆಮ್ಮದಿಯನ್ನು ದಯಪಾಲಿಸು ಎಂದು ಸಲಕ್ಷ್ಮಿ ವ್ರತ ಮಾಡುತ್ತಾರೆ.

English summary

Varalakshmi Vratha 2021 Date, History Puja Timings, Rituals Why we celebrateand Significance

Here we are discussing about Varalakshmi Vratham 2021 Date, History Puja Timings, Rituals Why we celebrateand Significance. Read more.
X
Desktop Bottom Promotion