Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಸಂಬಂಧದಲ್ಲಿನ ಹಲವಾರು ವಿಧಗಳು
ಯಾವುದೋ ಒಂದು ಸಮಾರಂಭಕ್ಕೆ ಹೋದಾಗ ಅಥವಾ ಕಾಫಿ ಶಾಪ್ ನಲ್ಲಿ ನಿಮಗೆ ಹೃದಯಕ್ಕೆ ಹತ್ತಿರವಾಗುವಂತಹ ವ್ಯಕ್ತಿಯೊಬ್ಬ ನಿಮ್ಮ ಕಣ್ಣಿನ ನೋಟಕ್ಕೆ ಬೀಳುತ್ತಾನೆ. ಆತ/ಆಕೆಯನ್ನು ನೀವು ಮನಸ್ಸಿನಲ್ಲಿ ಪ್ರೀತಿಸಲು ಆರಂಭಿಸುತ್ತೀರಿ. ಮುಂದೆ ಹೇಗೋ ಅವರ ಪರಿಚಯವಾಗಿ ಪ್ರೀತಿ ಮುಂದುವರಿಯುವುದು. ನಿಮ್ಮಿಬ್ಬರ ಸಂಬಂಧ ಕೂಡ ಇದೇ ರೀತಿಯಲ್ಲಿ ಮುಂದುವರಿಯುತ್ತಾ ಇರುವಾಗ ಆತ/ಆಕೆಯ ಸ್ವಭಾವ, ನಡವಳಿಕೆ, ಗುಣ ಏನಾದರೊಂದು ಹಿಡಿಸದೆ ಇರಬಹುದು.
ಕೆಲವೊಮ್ಮೆ ವಿಪರೀತ ಕೋಪ ಮಾಡಿಕೊಂಡು ಸಮಸ್ಯೆ ಉಂಟು ಮಾಡಬಹುದು. ಇಂತಹ ಹಲವಾರು ಸಮಸ್ಯೆಗಳು ಸಂಬಂಧದಲ್ಲಿ ಕಾಣಸಿಗುವುದು. ಸಂಬಂಧದಲ್ಲಿ ಇರುವಂತಹ ಕೆಲವೊಂದು ವಿಧಗಳನ್ನು ಈ ಲೇಖನದಲ್ಲಿ ನಾವು ನಿಮ್ಮ ಮುಂದಿಡಲು ಬಯಸಿದ್ದೇವೆ. ಇದನ್ನು ಓದಿಕೊಂಡು ನೀವು ಯಾವ ಸಂಬಂಧಲ್ಲಿ ಇದ್ದೀರಿ ಎಂದು ತಿಳಿಯಿರಿ....

ಅಧಿಕಾರಯುತ ಸಂಬಂಧ
ಜೀವನದಲ್ಲಿ ಒಂದಲ್ಲಾ ಒಂದು ಹಂತದಲ್ಲಿ ನಿಮ್ಮ ಮೇಲೆ ಅಧಿಕಾರ ಸಾಧಿಸಿದಂತಹ ವ್ಯಕ್ತಿಯೊಂದಿಗೆ ನೀವು ಡೇಟಿಂಗ್ ನಡೆಸಿರಬಹುದು. ಇಲ್ಲಿ ಅವರೇ ಸಂಬಂಧದ ನಿಯಮಗಳನ್ನು ರೂಪಿಸುವರು ಮತ್ತು ನಾವು ಅದನ್ನು ಪಾಲಿಸಿಕೊಂಡು ಹೋಗಬೇಕು. ಈ ಸಂಬಂಧಕ್ಕೆ ಬೆನ್ನೆಲುಬು ಇಲ್ಲ ಎಂದು ನಿಮಗನಿಸಬಹುದು. ಇಲ್ಲಿನ ನಿಯಮಗಳು ಹೆಚ್ಚು ಭೀಕರವಾಗಿರುವುದು. ಇಂತಹ ಸಂಬಂಧದಲ್ಲಿ ನಿಮ್ಮ ಹೃದಯ ಮಾತನ್ನು ಹೇಳಿಕೊಳ್ಳಲು ನಿಮಗೆ ಆತಂಕವಾಗುವುದು.

ಮುಕ್ತ ಸಂಬಂಧ
ಈ ಸಂಬಂಧವು ಇಬ್ಬರು ಭಾವನಾತ್ಮಕವಾಗಿ ಹೆಚ್ಚು ನಿಕಟವಾಗಿರದೆ ಇದ್ದಾಗ ಕೆಲಸ ಮಾಡುವುದು. ಇವರಿಬ್ಬರು ಪರಸ್ಪರರನ್ನು ಗೌರವಿಸಿ, ಸಂಬಂಧದಲ್ಲಿ ಉಳಿದುಕೊಳ್ಳುವರು. ಆದರೆ ಇವರು ಬೇರೆ ಸಂಬಂಧ ಕೂಡ ಇಟ್ಟುಕೊಳ್ಳಬಹುದು.

ಸಂಬಂಧಕ್ಕಾಗಿ ಕಠಿಣ ಶ್ರಮ
ಪರಸ್ಪರರು ಜತೆಯಾಗಿರಲು ಹಲವಾರು ರೀತಿಯ ಬದಲಾವಣೆಗಳನ್ನು ನೀವು ಮಾಡಿಕೊಂಡಿರಬಹುದು. ನಿಮ್ಮ ಪರವಾಗಿ ಈ ಸಂಬಂಧವಿರಲು ಕಠಿಣವಾಗಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಮಾತನಾಡುವ ರೀತಿ, ಬಟ್ಟೆ ಹಾಕಿಕೊಳ್ಳುವುದು, ಸಾಮಾಜಿಕವಾಗಿ ಬೆರೆತುಕೊಳ್ಳುವುದು ಮತ್ತು ನಿಮ್ಮ ಆದ್ಯತೆಗಳನ್ನು ಬದಲಾಯಿಸಿಕೊಳ್ಳುವಿರಿ. ಹೊರ ಜಗತ್ತಿಗೆ ನೀವು ತುಂಬಾ ಸಂತೋಷವಾಗಿದ್ದೀರಿ ಎಂದು ತೋರಿಸಿಕೊಟ್ಟರೂ ಒಳಗಿನಿಂದ ನೀವು ನೋವಿನಿಂದ ಕೊರಗುತ್ತಾ ಇರುತ್ತೀರಿ.

ತಾತ್ಕಾಲಿಕ ಸಂಬಂಧ
ಇಬ್ಬರು ಸಂಗಾತಿಗಳು ಜತೆಯಾಗಿರುವಂತಹ ಸ್ವಲ್ಪ ಸಮಯದ ಸಂಬಂಧ ಇದಾಗಿದೆ. ಇದಕ್ಕೆ ಯಾವುದೇ ಭವಿಷ್ಯದ ಯೋಜನೆಗಳು ಇರುವುದಿಲ್ಲ. ಪರಸ್ಪರರ ಜತೆ ಮತ್ತು ಲೈಂಗಿಕ ಕ್ರಿಯೆ ಬಯಸುವಿರಿ. ಇದು ಅಡಚಣೆ ಇರುವಂತಹ ಸಂಬಂಧ ಮತ್ತು ಒಬ್ಬರು ದೀರ್ಘ ಸಂಬಂಧ ಬಯಸಿದಾಗ ಇದು ಬೇಗನೆ ಕೊನೆಯಾಗುವುದು.

ದೀರ್ಘ ಕಾಲದ ಸಂಬಂಧ
ರೋಮ್ಯಾಂಟಿಕ್ ಆಗಿರುವ ಪ್ರತಿಯೊಂದು ಹಂತದಲ್ಲಿ ನೀವು ದೀರ್ಘ ಸಂಬಂಧ ಕಂಡುಕೊಳ್ಳುವಿರಿ. ನಿಮ್ಮ ಸಂಬಂಧವು ದೀರ್ಘ ಕಾಲ ಉಳಿಯಲಿದೆ ಮತ್ತು ಇದನ್ನು ಮದುವೆ ತನಕ ಕೊಂಡೊಯ್ಯಬಹುದು ಎಂದು ನೀವು ಬಯಸುತ್ತೀರಿ. ತಿಂಗಳಿಗೆ ಒಂದು ಸಲ ಅಥವಾ ಅದಕ್ಕಿಂತ ಹೆಚ್ಚು ಸಲ ನೀವು ನಿಮ್ಮ ಪ್ರಿಯತಮನನ್ನು ಭೇಟಿಯಾಗುವಿರಿ. ಇದು ರಜೆ ಭೇಟಿಯಂತಿದ್ದರೂ ನಿಮ್ಮಿಂದ ಅಥವಾ ನಿಮ್ಮ ಸಂಗಾತಿಯಿಂದ ಇದು ಕೊನೆಯಾಗಬಹುದು. ತುಂಬಾ ಕಡಿಮೆ ಜನರು ಸಂಬಂಧವನ್ನು ಮದುವೆ ತನಕ ಕೊಂಡೊಯ್ಯುವರು.

ಅವಲಂಬಿ ಸಂಬಂಧ
ನೀವು ಅಥವಾ ನಿಮ್ಮ ಸಂಗಾತಿಯು ನಿಮ್ಮ ಮೇಲೆ ಅವಲಂಬಿತವಾಗಿರುವುದು ಮತ್ತು ಒಬ್ಬರಿಲ್ಲದೆ ಇನ್ನೊಬ್ಬರಿಗೆ ಕೆಲಸ ಮಾಡಲು ಆಗದೆ ಇರುವುದು. ಸಂಗಾತಿ ಜತೆಯಾಗಿ ಇಲ್ಲದೆ ಇದ್ದಾಗ ಇದು ತುಂಬಾ ಆತಂಕ ಮತ್ತು ಖಿನ್ನತೆ ಉಂಟು ಮಾಡುವುದು. ಇದರಿಂದಾಗಿ ನಿಮ್ಮ ಜೀವನದ ಕೆಲವು ವಿಭಾಗಗಳ ಮೇಲೆ ಪ್ರಭಾವ ಬೀರಬಹುದು.

ಸ್ವತಂತ್ರ ಸಂಬಂಧ
ಇದು ತುಂಬಾ ಬಲಶಾಲಿ ಸಂಬಂಧವೆಂದು ನೀವು ಭಾವಿಸುವಿರಿ. ಆದರೆ ಇದರಲ್ಲಿ ಇಬ್ಬರು ಕೂಡ ತುಂಬಾ ಸ್ವತಂತ್ರರಾಗಿರುವರು ಮತ್ತು ಸಂಬಂಧಕ್ಕಾಗಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲ್ಲ. ಇಲ್ಲಿ ಸಂಬಂಧಕ್ಕಿಂತ ವ್ಯಕ್ತಿಯೇ ದೊಡ್ಡವನಾಗಿರುತ್ತಾನೆ. ಈ ಸಂಬಂಧದಲ್ಲಿ ಪ್ರೀತಿಗೆ ಯಾವುದೇ ಆದ್ಯತೆಯಿರಲ್ಲ.

ಲಿವ್ ಇನ್ ರಿಲೇಷನ್(ಜತೆಯಾಗಿ ವಾಸಿಸುವ ಸಂಬಂಧ)
ಈ ಸಂಬಂಧದಲ್ಲಿ ಇಬ್ಬರು ಮದುವೆಯಾಗದೆ ಎಲ್ಲಾ ರೀತಿಯಿಂದಲೂ ಜತೆಯಾಗಿ ವಾಸಿಸುತ್ತಾ ಇರುವರು. ಇಂದಿನ ದಿನಗಳಲ್ಲಿ ಹೆಚ್ಚಿನವರು ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ಮೊದಲು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವರು. ಇದರ ಬಳಿಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವರು. ಈ ಎಂಟು ಸಂಬಂಧಗಳಲ್ಲಿ ಯಾವುದಾದರೂ ಒಂದು ಸಂಬಂಧವು ನಮ್ಮ ಮುಂದೆ ಬರುವುದು. ಪರಿಪೂರ್ಣ ಸಂಬಂಧವೆನ್ನುವುದು ಇಲ್ಲ. ಆದರೆ ಇಬ್ಬರು ವ್ಯಕ್ತಿಗಳು ಸಂಬಂಧಕ್ಕೆ ಪರಿಪೂರ್ಣತೆ ಒದಗಿಸಲು ಪ್ರಯತ್ನಿಸುತ್ತಾ ಇರುವಾಗ ಆ ಸಂಬಂಧವು ನೈಜ ಹಾಗೂ ಪರಿಶುದ್ಧವಾಗುವುದು. ಇಂತಹ ಯಾವುದೇ ಒಂದು ಸಂಬಂಧದಲ್ಲಿ ನೀವು ಇದ್ದರೆ ಆಗ ನೀವು ಸಮಸ್ಯೆಗಳನ್ನು ಚರ್ಚಿಸಿ ಮತ್ತು ನಿಮ್ಮಿಬ್ಬರ ಅಗತ್ಯಕ್ಕೆ ತಕ್ಕಂತೆ ಅದನ್ನು ಪರಿಹರಿಸಿಕೊಳ್ಳಿ. ನಿಮಗೆ ಸಂಬಂಧದ ಬಗ್ಗೆ ಇನ್ನಷ್ಟು ತಿಳಿದಿದ್ದರೆ ಮತ್ತು ಇದಕ್ಕೆ ಹೆಚ್ಚುವರಿಯಾಗಿ ಸೇರಿಸಬೇಕೆಂದು ಅನಿಸಿದರೆ ಕಮೆಂಟ್ ಸೆಕ್ಷನ್ ನಲ್ಲಿ ಬರೆಯಿರಿ.



Click it and Unblock the Notifications











