For Quick Alerts
ALLOW NOTIFICATIONS  
For Daily Alerts

ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ

By CM. Prasad
|

ಪೊಂಗಲ್ ಎಂದಾಕ್ಷಣ ದಕ್ಷಿಣ ಭಾರತದ ಹಬ್ಬ ನೆನಪಾಗುತ್ತದೆ. ಹೌದು! ನಾವೆಲ್ಲರೂ ಪೊಂಗಲ್ ಹಬ್ಬವನ್ನು ಆನಂದದಿಂದ ಆಚರಿಸಲು ತುದಿಗಾಲಲ್ಲಿ ನಿಂತಿದ್ದೇವೆ. ಹೊಸ ಉಡುಪುಗಳು, ಸಿಹಿ ತಿನಿಸುಗಳು, ವಿವಿಧ ಸಂಪ್ರದಾಯಗಳು, ಹೊರಗಿನ ತಣ್ಣನೆಯ ವಾತಾವರಣ, ಸಂಬಂಧಿಕರ ಆಗಮನ ಮತ್ತು ಎಳ್ಳುಬೆಲ್ಲದ ರುಚಿ ಒಟ್ಟಾಗಿ ಪೊಂಗಲ್ ಹಬ್ಬದ ಮಜಾವನ್ನು ಹೆಚ್ಚಿಸುತ್ತದೆ. ಪೊಂಗಲ್ ಹಬ್ಬವನ್ನು ಇಡೀ ಪ್ರಪಂಚವೇ ಆಚರಿಸುತ್ತಿದ್ದು, ವಿಶೇಷವಾಗಿ ಭಾರತಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೊಂಗಲ್ ಎಂಬುದು ವಿಶಿಷ್ಟವಾದ ಅರ್ಥಗರ್ಭಿತ ಪದವಾಗಿದ್ದು, ತಮಿಳು ಮತ್ತು ತೆಲುಗಿನಲ್ಲಿ "ಪಾತ್ರೆಯಲ್ಲಿ ಕುದಿದ ಅನ್ನ ಉಕ್ಕುತ್ತಿರುವ ಚಿತ್ರಣವೇ" ಇದರ ಭಾವಾರ್ಥವಾಗಿ ನಂಬಲಾಗಿದೆ.

Traditions & Customs Of Pongal 2016

ಈ ಆಚರಣೆಯ ಮೂಲವು ಜನರಿಂದ ಜನರಿಗೆ ಬಾಯಿಂದ ಬಾಯಿಗೆ ವಾಡಿಕೆಯಿಂದ ಬಂದಿದ್ದು, ಅದರ ಮೂಲವು ಪೂರ್ಣಪ್ರಮಾಣದಲ್ಲಿ ತಿಳಿಯಲು ಸಾಧ್ಯವಾಗದಿರಬಹುದು. ಆದರೆ ದ್ರಾವಿಡ ಜನಾಂಗದವರು ಹೊಸ ಬೆಳೆಯನ್ನು ಕೊಯ್ಲು ಮಾಡುವ ಸುಗ್ಗಿ ಸಂದರ್ಭವನ್ನು ಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಹೊಸವರ್ಷದಲ್ಲಿ ಹಬ್ಬಗಳಲ್ಲೇ ಮೊದಲ ಹಬ್ಬವಾಗಿ ಭಕ್ತಿಪೂರ್ವಕವಾಗಿ ದೇವರನ್ನು ಬೇಡುತ್ತಾ ಕೃತಜ್ಞತಾ ಭಾವವನ್ನು ಅರ್ಪಿಸಿ ಆನಂದದಿಂದ ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಹಬ್ಬವನ್ನು ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಅಂದಹಾಗೆ ಈ ಹಬ್ಬದಲ್ಲಿ ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ ಎಂಬ ಗಾದೆ ಎಲ್ಲರಿಗೂ ಚಿರಪರಿಚಿತ. ಸುಗ್ಗಿಯ ಹಿಗ್ಗಿನ ಸಂಕ್ರಾಂತಿಗೆ 'ಸಿಹಿ ಅವಲಕ್ಕಿ' ಪೊಂಗಲ್

ಈ ಆಚರಣೆಯಲ್ಲಿ ಮಾನವರು, ಹಸುಗಳು, ಹಕ್ಕಿಗಳು ಮತ್ತು ಬೆಳೆದ ಬೆಳೆಗಳು ಒಳಗೊಂಡಿರುತ್ತದೆ. ಈ ಹಬ್ಬವು ಚಳಿಗಾಲ ಇನ್ನೇನು ಮುಗಿಯುವಷ್ಟರಲ್ಲಿ ಬರುವುದರಿಂದ ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆಮಾಡಿ, ಬೆಳೆಕೊಯ್ಲಿನ ಸಂದರ್ಭವಾದ್ದರಿಂದ ಇಡೀ ಪ್ರದೇಶದ ಚಿತ್ರಣವೇ ಮನಮೋಹಕವಾಗಿರುತ್ತದೆ. ಇದು ಹಬ್ಬದ ಋತುವನ್ನೇ ಪ್ರಾರಂಭಿಸಲಿದ್ದು, ಈ ಹಬ್ಬವನ್ನು ನಾಲ್ಕು ದಿನ ಸುದೀರ್ಘವಾಗಿ ಆನಂದದಿಂದ ಆಚರಿಸಲಾಗುತ್ತದೆ. ಅದನ್ನು ಭೋಗಿ ಪೊಂಗಲ್, ಸೂರ್ಯ ಪೊಂಗಲ್, ಮಟ್ಟು ಪೊಂಗಲ್ ಮತ್ತು ಕನುಮ್ ಪೊಂಗಲ್ ಎಂದು ಆಚರಿಸಲಾಗುತ್ತದೆ.

ಈ ಪ್ರತಿ ದಿನದ ಆಚರಣೆಗಳಿಗೆ ಅದರದ್ದೇ ಆದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ ಹೊಂದಿದ್ದು, ಹೆಚ್ಚಿನ ಸಾಂಸ್ಕೃತಿಕ ಅಭ್ಯಾಸಗಳಿಂದ ಹೆಚ್ಚು ಭಾವಪೂರ್ಣಗೊಳಿಸಿ ಸುಂದರಗೊಳಿಸುತ್ತದೆ. ಈ ಸಂದರ್ಭದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಪೊಂಗಲ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಈ ತಾಣವು ಹೇಳಬಯಸುತ್ತದೆ. ಪೊಂಗಲ್‌ಗೆ ಸಹಯೋಗ ಹೊಂದಿರುವ ಸಾಂಸ್ಕೃತಿಕ ಶೈಲಿಗಳ ಬಗ್ಗೆ ಹೆಚ್ಚು ತಿಳಿಯಲು ಈ ಲೇಖನವನ್ನು ಓದಿ. .

ಕೊಲಂ
ಪೊಂಗಲ್ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಅವಶ್ಯಕವಾಗಿ ಇರಬೇಕಾದ ವಸ್ತುವೆಂದರೆ ಅದು ಕೊಲಂ. ಇದನ್ನು ಅಕ್ಕಿಹಿಟ್ಟಿನಿಂದ ತಯಾರಿಸಲಿದ್ದು, ಇದನ್ನು ನಿಮ್ಮ ಮನೆಯ ಪೂಜಾಮಂದಿರವನ್ನು ಅನೇಕ ಶೈಲಿಗಳಲ್ಲಿ ಸಿಂಗರಿಸಲು ಬಳಸಲಾಗುತ್ತದೆ. ಸುಗ್ಗಿ ಹಬ್ಬ 'ಮಕರ ಸಂಕ್ರಾಂತಿಯ' ಇಂಟರೆಸ್ಟಿಂಗ್ ಸಂಗತಿ

ಉಡುಗೊರೆಗಳು
ಉಡುಗೊರೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳದ ಹಬ್ಬವೇ ಇಲ್ಲವೆಂಬುದು ಎಲ್ಲರ ನಂಬಿಕೆ. ಉಡುಗೊರೆಗಳನ್ನು ಹಂಚಿಕೊಳ್ಳದಿದ್ದರೆ ಹಬ್ಬದ ಪೂರ್ಣಪ್ರಮಾಣದ ಆನಂದವನ್ನು ಸವಿಯಲು ಸಾಧ್ಯವಿಲ್ಲ. ಪೊಂಗಲ್‌ ಸಂದರ್ಭದಲ್ಲಿ ಪೊಂಗಲ್ ಪಡಿ ಮತ್ತು ಪೊಂಗಲ್ ಪೊರಿಸು ಎಂಬ ವಿವಿಧ ರೀತಿಯ ಉಡುಗೊರೆಗಳನ್ನು ಕುಟುಂಬದ ಸದಸ್ಯರಿಗೆ, ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಹಂಚುವ ಅಭ್ಯಾಸವಿದ್ದು, ಇದರಿಂದ ಎಲ್ಲರೂ ಆನಂದದಿಂದ ಹಬ್ಬವನ್ನು ಆಚರಿಸುತ್ತಾರೆ.

ಕಬ್ಬು
ಪೊಂಗಲ್ ಮುಂಚಿನ ಎರಡು ಮೂರು ದಿನಗಳಲ್ಲಿ ಎಲ್ಲಿ ನೋಡಿದರೂ ನಿಮಗೆ ಕಬ್ಬಿನ ತುಂಡುಗಳು ಕಾಣಸಿಗುತ್ತವೆ. ಈ ಸಿಹಿ ಕಬ್ಬಿನ ಜಲ್ಲೆಯು ಬೆಳೆಕೊಯ್ಲಿನ ಸಮಯವನ್ನು ನೆನಪಿಸಿ ಸುಗ್ಗಿಕಾಲದ ಮಹತ್ವವನ್ನು ಸಾರುತ್ತದೆ. ಇದನ್ನು ಮನೆಯ ಆವರಣದಲ್ಲಿ ಹಾಗೂ ಮುಖ್ಯದ್ವಾರಗಳಲ್ಲಿ ಕಟ್ಟಲಿದ್ದು, ಇದು ಹಬ್ಬದ ಸಂಕೇತವನ್ನು ಎಲ್ಲರಿಗೂ ಸಾರುತ್ತದೆ.

ಪೊಂಗಲ್ ತಯಾರಿ
ಭಾರತದ ಈ ತಿಂಡಿಯನ್ನು ವಿಶ್ವದಾದ್ಯಂತ ಅನೇಕರು ಇಷ್ಟಪಟ್ಟು ಸವಿಯುತ್ತಾರೆ. ಇದನ್ನು ವಿಶೇಷವಾಗಿ ಹಬ್ಬದ ದಿನದಂದು ತಯಾರಿಸಲಿದ್ದು, ಹತ್ತಿರದವರಿಗೆ ಹಾಗೂ ಪ್ರೀತಿಪಾತ್ರರಿಗೆ ಹಂಚಿ ಆನಂದದಿಂದ ಸವಿಯಲಾಗುತ್ತದೆ.

ಬೆಲ್ಲದ ಸಿಹಿತಿನಿಸುಗಳು
ಸಿಹಿ ತಿನಿಸುಗಳನ್ನು ಈ ಹಬ್ಬದಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ಸವಿಯಲಾಗುತ್ತಿದ್ದು, ಎಳ್ಳಿನ ಸಿಹಿತಿನಿಸು, ಕೊಬ್ಬರಿ, ಬೆಲ್ಲ, ಕಡಲೆಬೀಜ ಮತ್ತು ಬಿಳಿ ಕ್ಯಾಂಡಿಯ ಸಿಹಿ ತಿನಿಸುಗಳು ಇಡೀ ಹಬ್ಬದ ಸಂಭ್ರವನ್ನು ಇಮ್ಮಡಿಗೊಳಿಸಿ ಹಬ್ಬದ ಸಂಪೂರ್ಣ ಆನಂದವನ್ನು ನೀಡುತ್ತದೆ.

English summary

Traditions & Customs Of Pongal 2016

Pongal is observed across the globe and is richly celebrated in India. The word 'Pongal' means 'boiling over of the rice in the cooking pot' in both Tamil and Telugu. Though there is little known about the origin of the festival, it is, however, a Dravidian harvest feast that has been celebrated for many centuries. Pongal is also a festival that marks the beginning of a New Year that is devoted to thank and praise the Lord with faith and sincerity. 
Story first published: Thursday, January 14, 2016, 18:10 [IST]
X
Desktop Bottom Promotion