For Quick Alerts
ALLOW NOTIFICATIONS  
For Daily Alerts

ಓಣಂ 2019: ಶಾಂತಿ, ಸಾಮರಸ್ಯ ಸಾರುವ ಹಬ್ಬದ ಮಹತ್ವ

By Jaya subramanya
|
Onam 2019 : ಓಣಂ ಹಬ್ಬದ ಆಚರಣೆಯ ಹಿಂದಿರುವ ಮಹತ್ವವೇನು? | BoldSky Kannada

ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಹಬ್ಬ ಎಂದೆನಿಸಿರುವ ಓಣಂ ಅನ್ನು ಕೇರಳಿಗರು ಸಂಭ್ರಮ ಮತ್ತು ಅತಿ ವಿಶಿಷ್ಟವಾಗಿ ಆಚರಿಸುತ್ತಾರೆ. ಆಗಸ್ಟ್ ಅಥವಾ ಸಪ್ಟೆಂಬರ್‎ನಲ್ಲಿ ಓಣಂ ಅನ್ನು ಆಚರಿಸಲಾಗುತ್ತದೆ. ಕೇರಳದ

ರಾಷ್ಟ್ರೀಯ ಹಬ್ಬವಾಗಿರುವ ಓಣಂ ಅನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.

ವಯಸ್ಸು, ಜಾತಿಯ ಹಂಗಿಲ್ಲದೆ ಕೇರಳಿಗರು ಓಣಂ ಅನ್ನು ಕೊಂಡಾಡುತ್ತಾರೆ. ಅಸುರನಾಗಿದ್ದರೂ ಮಹಾಬಲಿಯನ್ನು ಸ್ಮರಿಸುವ ನಿಟ್ಟಿನಲ್ಲಿ ಓಣಂ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಮಹಾಬಲಿಯ ಆಳ್ವಿಕೆಯಲ್ಲಿ ಕೇರಳದ ಜನರು ಸುಖ ಸಂಪನ್ನರಾಗಿದ್ದರು ಎಂಬುದಾಗಿ ಅವರು ಸ್ಮರಿಸುತ್ತಾರೆ ಏಕೆಂದರೆ ಮಹಾಬಲಿ ಸಮರ್ಥ ಮತ್ತು ನಿಷ್ಟಾವಂತ ರಾಜನಾಗಿದ್ದ.

ಜನರ ಉನ್ನತಿಗಾಗಿ ಮತ್ತು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಹಾಬಲಿಯು ತನ್ನನ್ನು ತ್ಯಾಗಮಾಡಿಕೊಂಡಿದ್ದಾನೆ ಎಂಬ ಉಲ್ಲೇಖವನ್ನು ಪುರಾಣದಲ್ಲಿ ಮಾಡಲಾಗಿದೆ. ಆದ್ದರಿಂದಲೇ ಕೇರಳಿಗರು ಬಲಿ ಚಕ್ರವರ್ತಿಯ ತ್ಯಾಗವನ್ನು ಈ ದಿನಗಳಂದು ನೆನಪಿಸಿಕೊಳ್ಳುತ್ತಾರೆ. ಮಹಾಬಲಿಯ ಸ್ವಾಗತವನ್ನು ಕೊಂಡಾಡಲು ಕೇರಳಿಗರು ಈ ಹಬ್ಬವನ್ನು ಆಚರಿಸುತ್ತಾರೆ. ಇಂದಿನ ಲೇಖನದಲ್ಲಿ ಓಣಂ ಹಬ್ಬದ ಪ್ರಾಮುಖ್ಯತೆ ಏನು ಎಂಬುದನ್ನು ಅರಿತುಕೊಳ್ಳೋಣ.

ಓಣಂ ಹಬ್ಬಕ್ಕೆ ಪಾಯಸ ಮೇಳದ ಮೆರುಗು

ಓಣಂ ಖಾದ್ಯ
ಓಣಂನಂದು ವಿಶೇಷವಾಗಿ ಖಾದ್ಯವನ್ನು ಸಿದ್ಧಪಡಿಸುವುದು ವಾಡಿಕೆ ಇದಕ್ಕೆ ಓಣಂ ಸದ್ಯವೆಂದು ಕರೆಯುತ್ತಾರೆ. ಬಾಳೆ ಎಲೆಯಲ್ಲಿ ಈ ಖಾದ್ಯವನ್ನು ಬಡಿಸುವುದು ಕ್ರಮವಾಗಿದ್ದು 13-26 ಬಗೆಯ ಖಾದ್ಯಗಳನ್ನು ಇದು ಒಳಗೊಂಡಿರುತ್ತದೆ. ಅವಿಲು, ಓಲನ್, ಕಿಚಡಿ, ಕಾಳನ್, ಅನ್ನ, ಪಚ್ಚಡಿ, ಕೂಟು, ಚಿಪ್ಸ್, ಸಾಂಬಾರ್, ಥೋರನ್, ಪುಳಿಶ್ಶೇರಿ, ರಸಂ,ಪುಳಿಂಜಿ, ಪಾಯಸ, ಎರಿಶ್ಶೇರಿ, ಮಜ್ಜಿಗೆ ಮತ್ತು ಹಪ್ಪಳವನ್ನು ಇದು ಒಳಗೊಂಡಿರುತ್ತದೆ. ಓಣಂ ವಿಶೇಷ: ನಾಲಿಗೆಯ ರುಚಿತಣಿಸುವ 20 ರೆಸಿಪಿ

onam

ಪ್ರತಿಯೊಬ್ಬ ಮಲಯಾಳಿಗಳ ಮನೆಗಳಲ್ಲಿ 11-13 ಖಾದ್ಯಗಳನ್ನು ತಯಾರಿಸಲಾಗುತ್ತದೆ. ನೀವು ಮಲೆಯಾಳಿ ಅಲ್ಲದೇ ಇದ್ದರೂ, ಕೆಲವೊಂದು ರೆಸ್ಟಾರೊಂಟ್‎ಗಳು ತಮ್ಮ ಅತಿಥಿಗಳಿಗಾಗಿ ವಿಶೇಷ ಭೋಜನವನ್ನು ಸಿದ್ಧಪಡಿಸಿರುವುದನ್ನು ಕಂಡುಕೊಳ್ಳಬಹುದಾಗಿದೆ.

ಪೂಕಳಂ (ಹೂವಿನ ರಂಗೋಲಿ)
ಹೂವಿನ ರಂಗೋಲಿಯಾಗಿರುವ ಪೂಕ್ಕಳಂ ಒಣಂ ಹಬ್ಬದ 10 ದಿನದಂದು ಅಲಂಕರಿಸಲಾಗುತ್ತದೆ. ಭಾರತದ ಇತರ ಕಡೆಗಳಲ್ಲಿ ಹಾಕುವ ರಂಗೋಲಿಗೆ ಇದು ಸಮಾನವಾಗಿದ್ದರೂ ಬಣ್ಣಗಳ ಬದಲಿಗೆ ಇವರುಗಳು ಹೂವನ್ನು ಇದಕ್ಕಾಗಿ ಬಳಸುತ್ತಾರೆ.
ಪ್ರತಿಯೊಂದು ಮನೆಯ ಮುಂಭಾಗದಲ್ಲೂ ಈ ಹೂವಿನ ರಂಗೋಲಿಯನ್ನು ನೀವು ಕಾಣಬಹುದಾಗಿದೆ. ಸ್ಥಳದ ಅಭಾವದಿಂದಾಗಿ ಕೆಲವರು ತಮ್ಮ ಮನೆಯೊಳಗೆ ಹೂವಿನ ರಂಗೋಲಿಯನ್ನು ಬಿಡಿಸುತ್ತಾರೆ.

ಸಾಂಪ್ರದಾಯಿಕ ಉಡುಗೆ
ಮುಂಡು ಎಂದು ಕರೆಯಲಾದ ಸಾಂಪ್ರದಾಯಿಕ ಉಡುಪನ್ನು ಧರಿಸಿ ಒಣಂ ಹಬ್ಬವನ್ನು ಆಚರಿಸುತ್ತಾರೆ. ಅರ್ಧ ಬಿಳಿ ಬಣ್ಣದ ಮುಂಡನ್ನು ಮಹಿಳೆಯರು ಧರಿಸಿದ್ದರೆ ಪುರುಷರು ಚಿನ್ನದ ಬಾರ್ಡರ್ ಉಳ್ಳ ಬಿಳಿ ಧೋತಿ ಮತ್ತು ಕುರ್ತಾವನ್ನು ತೊಟ್ಟುಕೊಳ್ಳುತ್ತಾರೆ.

ಜಾನಪದ ನೃತ್ಯ
ಓಣಂ ಹಬ್ಬದಲ್ಲಿ ಜಾನಪದ ನೃತ್ಯ ಹೆಚ್ಚು ಪ್ರಾಮುಖ್ಯವುಳ್ಳದ್ದಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ನೃತ್ಯವನ್ನು ಮಾಡುತ್ತಾರೆ ಈ ನತ್ಯದಲ್ಲಿ ಚಪ್ಪಾಳೆಯ ಮೂಲಕ ಹೆಜ್ಜೆಗಳನ್ನು ಅವರು ಹಾಕುತ್ತಾರೆ. ಇದನ್ನು "ಕೈಕೊಟ್ಟಿಕಳಿ" ಎಂದು ಕರೆಯುತ್ತಾರೆ.

"ತುಂಬಿ ತುಳ್ಳಲ್" ಎಂಬ ಇನ್ನೊಂದು ನೃತ್ಯ ಪ್ರಕಾರವನ್ನು ವಲಯದಲ್ಲಿ ನಿರ್ವಹಿಸುತ್ತಾರೆ. ಈ ನೃತ್ಯಗಳನ್ನು ಮಾಡುವಾಗ ಮಹಿಳೆಯರು ಹಾಡುಗಳನ್ನು ಹಾಡುತ್ತಾರೆ ಮತ್ತು ಇದರಲ್ಲಿ ಹೆಚ್ಚಿನ ಹಾಡುಗಳು ರಾಜ ಮಹಾಬಲಿಯದ್ದಾಗಿರುತ್ತದೆ. ಇನ್ನೊಂದು ನೃತ್ಯ "ಕಥಕ್ಕಳಿ" ಯಾಗಿದ್ದು ಇದನ್ನು ಆಡುವವರು ಭಾರವಾದ ವಸ್ತ್ರವನ್ನು ಧರಿಸಿ ಢಾಳಾದ ಅಲಂಕಾರವನ್ನು ಮಾಡಿಕೊಂಡು ಹಾವಭಾವದೊಂದಿಗೆ ನೃತ್ಯವನ್ನು ಮಾಡುತ್ತಾರೆ.

ಬೋಟ್ ರೇಸ್
"ವಲ್ಲಮ್‪‎ಕಳಿ" ಎಂದು ಕರೆಯಲಾದ ಬೋಟ್ ರೇಸ್ ಹಬ್ಬದ ಅತಿ ಪ್ರಮುಖ ಅಂಶವಾಗಿದೆ. ಬೋಟ್ ರೇಸ್‎ನಲ್ಲಿ 100 ಬೋಟ್‎ ಚಲಾಯಿಸುವವರಿದ್ದು ಸ್ಪರ್ಧೆ ನಡೆಯುತ್ತದೆ. ಬೋಟ್ ಅನ್ನು ಸುಂದರವಾಗಿ ಮತ್ತು ವಿಭಿನ್ನವಾಗಿ ಅಲಂಕರಿಸಲಾಗುತ್ತದೆ. ದೇಶದ ಹಲವೆಡೆಗಳಿಂದ ಮತ್ತು ಸ್ಥಳೀಯರು ಈ ರೇಸ್‎ನಲ್ಲಿ ಭಾಗವಹಿಸುತ್ತಾರೆ.

ಆನೆಯ ಮೆರವಣಿಗೆ

ಓಣಂ ಹಬ್ಬದಲ್ಲಿ ಹೆಚ್ಚು ಮುಖ್ಯವಾದುದು ಆನೆಯ ಮೆರವಣಿಗೆಯಾಗಿದೆ. ಆನೆಯನ್ನು ಚಿನ್ನದ ಆಭರಣಗಳು ಮತ್ತು ಹೂವಿನಿಂದ ಅಲಂಕರಿಸುತ್ತಾರೆ ನಂತರ ಇದು ನಗರದುದ್ದಕ್ಕೂ ಮೆರವಣಿಗೆಯನ್ನು ಮಾಡುತ್ತದೆ. ಆನೆ ಕೂಡ ನೃತ್ಯವನ್ನು ಈ ಸಂದರ್ಭದಲ್ಲಿ ಮಾಡುತ್ತದೆ ಮತ್ತು ಗುಂಪಿನಲ್ಲಿ ತನ್ನ ಹಾವಭಾವಗಳನ್ನು ಪ್ರದರ್ಶಿಸುತ್ತದೆ. ಹೀಗೆ ಈ ಎಲ್ಲಾ ಅಂಶಗಳು ಓಣಂನೊಂದಿಗೆ ಹೊಂದಿಕೊಂಡಿದೆ.

English summary

Things You Should Know About Onam

Onam is one of the most renowned festivals of Kerala and it is celebrated in a splendid and magnificent way. Every year the Onam festival is celebrated in August or September. This majestic festival is considered as Kerala’s National festival.
X
Desktop Bottom Promotion