For Quick Alerts
ALLOW NOTIFICATIONS  
For Daily Alerts

ಶಿವನ ಅನುಗ್ರಹ ಪಡೆಯಲು ಸೋಮವಾರದ ಶಿವನ ಪೂಜೆ ಹೀಗೆ ಮಾಡಬೇಕು

|

ಹಿಂದೂ ಧರ್ಮದಲ್ಲಿ ಸೋಮವಾರ ಬಂತೆಂದರೆ ಅದನ್ನು ಶಿವ ದೇವರಿಗೆ ಅರ್ಪಿಸಲಾಗುತ್ತದೆ. ಸರಳ ಪೂಜೆಗೆ ಒಲಿಯುವ ಭಗವಂತನಾಗಿರುವ ಶಿವ ಭಕ್ತರ ಕೋರಿಕೆಗಳನ್ನು ಶೀಘ್ರದಲ್ಲಿಯೇ ನೆರವೇರಿಸಿಕೊಡುವ ದಯಾಮಯನಾಗಿದ್ದಾರೆ. ಎಂದರೆ ಶಾಶ್ವತ ಆನಂದ ಐ ಅಂದರೆ ಪುರುಷ ಶಕ್ತಿ ಮತ್ತು ವ ಅಂದರೆ ಸ್ತ್ರೀ ಶಕ್ತಿ ಎಂದರ್ಥವಾಗಿದೆ. ಶಿವನು ವಿಧ್ವಂಸಕರಾಗಿದ್ದು ಮತ್ತು ಅತೀಂದ್ರಿಯ ಜ್ಞಾನಕ್ಕೆ ಭಗವಂತನಾಗಿದ್ದಾರೆ. ವೇದಗಳ ಪ್ರಕಾರ ಲಿಂಗ ರೂಪದಲ್ಲಿ ಭಗವಂತನನ್ನು ಪೂಜಿಸುವುದರಿಂದ ಭಕ್ತರಿಗೆ ಜೀವನದಲ್ಲಿ ಶಾಶ್ವತ ಆನಂದ ಮತ್ತು ಭವಿಷ್ಯದಲ್ಲಿ ಅವರ ಸರ್ವ ಆಸೆಗಳೂ ಈಡೇರುತ್ತದೆ ಎಂದಾಗಿದೆ.

ಭಕ್ತಿಯಿಂದ ಸೋಮವಾರ ಶಿವನನ್ನು ಆರಾಧಿಸಿದರೆ ಭಗವಂತ ಅವರ ಮನದ ಅಭೀಷ್ಟೆಗಳನ್ನು ನೆರವೇರಿಸಿಕೊಡುತ್ತಾರೆ ಎಂಬುದು ಜನಜನಿತವಾದ ಮಾತಾಗಿದೆ. ಆದರೆ ಶಿವ ಪೂಜೆಯನ್ನು ನೀವು ಮಾಡುವ ವೇಳೆಯಲ್ಲಿ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ. ಶಿವ ಪೂಜೆಯಲ್ಲಿ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಬೇಕು. ಬಿಲ್ವ ಪತ್ರೆಯು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ. ಅಂತೆಯೇ ಅವರ ತ್ರಿಶೂಲವು ಹಿಂದಿನ ಪಾಪಗಳನ್ನು ತೊಳೆದು ಹಾಕುತ್ತದೆ. ಅಂತೆಯೆ ಪೂಜೆಗಾಗಿ ಬಿಲ್ವ ಪತ್ರೆಯನ್ನು ಕೊಯ್ಯಲು ಕೆಲವೊಂದು ದಿನಗಳಿದ್ದು ಆ ದಿನ ಮಾತ್ರವೇ ನೀವು ಮರದಿಂದ ಬಿಲ್ವ ಪತ್ರೆಯನ್ನು ಕೊಯ್ಯಬೇಕಾಗುತ್ತದೆ. ಹೀಗೆ ಸೋಮವಾರದ ಪೂಜೆ ಮತ್ತು ವೃತಾಚಾರಣೆಯು ಅನನ್ಯವಾದ ವಿಶಿಷ್ಟತೆಗಳನ್ನು ಪಡೆದುಕೊಂಡು ಅನುಸರಿಬೇಕಾಗುತ್ತದೆ.

Things to Remember While Doing Lord Shiva Puja on monday

ನೀವು ವ್ರತ ಮತ್ತು ಪೂಜೆಯನ್ನು ಮಾಡುವುದಕ್ಕಿಂತಲೂ ಮೊದಲು ನಿಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು ಶಿವನಿಗೆ ಅರ್ಪಿಸಿ ಪೂಜೆಯನ್ನು ಮಾಡಬೇಕು. ನಿಮ್ಮ ಸಮಸ್ಯೆಗಳನ್ನು ದೇವರಿಗೆ ಹೇಳಿ ಮತ್ತು ಪರಿಹಾರಕ್ಕಾಗಿ ಅವರನ್ನು ಯಾಚಿಸಿ ಇದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಏಕೆಂದರೆ ಶಿವನ ಅನುಗ್ರಹ ಪ್ರತಿಯೊಂದು ಕಾರ್ಯದಲ್ಲಿ ಇರಲೇಬೇಕು. ಸರಳವಾಗಿ ಶಿವನನ್ನು ಪೂಜಿಸಿ ನೀವು ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು . ಬರಿಯ ಬಿಲ್ವಪತ್ರೆಯನ್ನು ನೀವು ಶಿವನಿಗೆ ಅರ್ಪಿಸಿದರೂ ಸಾಕು ಆ ದೇವರು ಒಲಿಯುತ್ತಾರೆ ಯಾವುದೇ ಆಡಂಬರದ ಪೂಜೆ ಆ ದೇವರಿಗೆ ಅಗತ್ಯವಿಲ್ಲ. ವಿಷಕಂಠ, ನಂಜುಂಡ, ಮಹಾದೇವ, ಶಿವ, ಶಂಕರ, ಭೋಲೇನಾಥ, ನಂದೀಶ ಹೀಗೆ ಬೇರೆ ಬೇರೆ ಹೆಸರುಗಳಿಂದ ಶಿವನನ್ನು ಕರೆಯಲಾಗುತ್ತದೆ. ಭಕ್ತರ ಬಯಕೆಗಳನ್ನು ಈಡೇರಿಸುವ ಅಪ್ಪ ಶಿವನಾಗಿದ್ದು ಭಕ್ತರ ಕಣ್ಣೀರಿಗೆ ಕರಗುವವರಾಗಿದ್ದಾರೆ. ಹಾಗಿದ್ದರೆ ತಡಮಾಡದೆಯೇ ಸೋಮವಾರದ ಪೂಜೆಯನ್ನು ಮಾಡಿ ಶಿವನ ಅನುಗ್ರಹವನ್ನು ಪಡೆದುಕೊಳ್ಳಿ.

1. ಈ ದಿನಗಳಂದು ಬಿಲ್ವ ಪತ್ರೆಯನ್ನು ಮರದಿಂದ ಕೊಯ್ಯಬಾರದು

1. ಈ ದಿನಗಳಂದು ಬಿಲ್ವ ಪತ್ರೆಯನ್ನು ಮರದಿಂದ ಕೊಯ್ಯಬಾರದು

ಸೋಮವಾರ

ಅಮವಾಸ್ಯೆ

ಮಕರ ಸಂಕ್ರಾಂತಿ

ಪೂರ್ಣಿಮೆ

ಅಷ್ಟಮಿ

ನವಮಿ

ಈ ದಿನಗಳಂದು ಕೊಯ್ದ ಎಲೆಗಳನ್ನು ಹರಿದ ಎಲೆಗಳನ್ನು ಶಿವನಿಗೆ ಅರ್ಪಿಸಬಾರದು.

2. ಕುಂಕುಮ ತಿಲಕವನ್ನು ಹಚ್ಚಬೇಡಿ

2. ಕುಂಕುಮ ತಿಲಕವನ್ನು ಹಚ್ಚಬೇಡಿ

ಶಿವಲಿಂಗಕ್ಕೆ ಕುಂಕುಮವನ್ನು ಹಚ್ಚಬಾರದು ಬದಲಿಗೆ ಗಂಧವನ್ನು ಹಚ್ಚಿ. ಏಕೆಂದರೆ ಶಿವನು ಏಕಾಗ್ರತೆಯಿಂದ ಧ್ಯಾನವಾವಸ್ಥೆಯಲ್ಲಿ ಕುಳಿತಿರುತ್ತಾರೆ ಮತ್ತು ಕುಂಕುಮದಿಂದ ಉಷ್ಣ ಉತ್ಪತ್ತಿಯಾಗುವುದರಿಂದ ಅವರ ಧ್ಯಾನಕ್ಕೆ ತೊಂದರೆಯಾಗುತ್ತದೆ. ಗಂಧವು ತಣ್ಣಗಿದ್ದು ಇದು ತಂಪಾಗಿಸುತ್ತದೆ.

ಕುಂಕುಮವನ್ನು ಹೆಚ್ಚಾಗಿ ಸ್ತ್ರೀಯರು ಹಚ್ಚುವುದಾಗಿದ್ದು ಮಹಿಳೆಯರಿಂದ ಪ್ರೀತಿ ಮತ್ತು ಭಕ್ತಿಯನ್ನು ಇದು ಸೂಚಿಸುತ್ತದೆ. ಪಾರ್ವತಿ ವಿಗ್ರಹಕ್ಕೆ ಕುಂಕುಮವನ್ನು ಹಚ್ಚುವುದಾಗಿದೆ ಶಿವನಿಗಲ್ಲ.

3. ಎಳನೀರನ್ನು ಅರ್ಪಿಸಬೇಡಿ

3. ಎಳನೀರನ್ನು ಅರ್ಪಿಸಬೇಡಿ

ಶಿವಲಿಂಗದ ಮೇಲೆ ಎಳನೀರನ್ನು ಅರ್ಪಿಸಬೇಡಿ ಬದಲಿಗೆ ಸಂಪೂರ್ಣ ತೆಂಗಿನಕಾಯಿಗಳನ್ನು ನೀವು ಅರ್ಪಿಸಬಹುದು.

4. ಹಣ್ಣುಗಳು

4. ಹಣ್ಣುಗಳು

ಹೆಚ್ಚಿನ ಹಣ್ಣುಗಳನ್ನು ಶಿವಲಿಂಗಕ್ಕೆ ಅರ್ಪಿಸಬಹುದಾಗಿದ್ದು ಬೇಲ್ ಹಣ್ಣು ಶಿವನಿಗೆ ಅಚ್ಚುಮೆಚ್ಚನದಾಗಿದೆ. ಇದು ತನ್ನ ವೈದ್ಯಕೀಯ ಅಂಶಗಳಿಂದ ಹೆಚ್ಚು ಪ್ರಸಿದ್ಧವಾಗಿದೆ.

5. ಪೂಜೆಗೆ ಈ ಹೂವುಗಳನ್ನು ಬಳಸಬೇಡಿ

5. ಪೂಜೆಗೆ ಈ ಹೂವುಗಳನ್ನು ಬಳಸಬೇಡಿ

ಶಿವಲಿಂಗಕ್ಕೆ ಕೇತಕಿ ಮತ್ತು ಚಂಪಾ ಹೂಗಳನ್ನು ಅರ್ಪಿಸಬೇಡಿ. ಏಕೆಂದರೆ ಇವುಗಳು ಶಿವನಿಂದ ಶಾಪಕ್ಕೆ ಒಳಗಾಗಿವೆ. ಒಮ್ಮೆ ಬ್ರಹ್ಮನು ಕೇತಕಿಯಲ್ಲಿ ಸುಳ್ಳು ಸಾಕ್ಷಿಯನ್ನು ಹೇಳಲು ಕೇಳಿಕೊಳ್ಳುತ್ತಾರೆ ಮತ್ತು ಅದರಂತೆಯೇ ಶಿವನ ವಿರುದ್ಧ ಕೇತಕಿಯು ಸುಳ್ಳು ನುಡಿಯುತ್ತದೆ. ಹೀಗಾಗಿ ಕೇತಕಿಯು ಪೂಜೆಗೆ ಅನರ್ಹ ಎಂಬ ಶಾಪಕ್ಕೆ ತುತ್ತಾಗಿದೆ.

6. ಸ್ಟೀಲ್ ಸ್ಟ್ಯಾಂಡ್ ಬೇಡ

6. ಸ್ಟೀಲ್ ಸ್ಟ್ಯಾಂಡ್ ಬೇಡ

ಶಿವನ ಅಭಿಷೇಕಕ್ಕೆ ಸ್ಟೀಲ್‌ನ ಸ್ಟ್ಯಾಂಡ್ ಅನ್ನು ಬಳಸಬೇಡಿ. ಮನೆಯಲ್ಲಿ ನೀವು ಶಿವಲಿಂಗವನ್ನು ಇರಿಸಿದ್ದರೆ ಜಲಧಾರವನ್ನು ಇದರೊಂದಿಗೆ ಇರಿಸಿ (ಮೇಲ್ಭಾಗದಲ್ಲಿ ನೀರು ಇರುವ ಕುಂಡ) ಜಲಧಾರೆ ಇಲ್ಲದೆಯೇ ಲಿಂಗವನ್ನು ಇರಿಸಬಾರದು.

7. ಪೂಜಿಸಲು ಸರಿಯಾದ ವಿಧಾನ

7. ಪೂಜಿಸಲು ಸರಿಯಾದ ವಿಧಾನ

ಶಿವನನ್ನು ಪೂಜಿಸುವ ಮೊದಲು ಗಣಪತಿಯನ್ನು ಪೂಜಿಸಿ ಅಂದರೆ ಗಣೇಶನ ವಿಗ್ರಹಕ್ಕೆ ಹಾಲು ಮತ್ತು ನೀರಿನ ಅಭಿಷೇಕವನ್ನು ಮಾಡಿ ನಂತರ ಶಿವಲಿಂಗಕ್ಕೆ ಮಾಡಿ. ಯಾವುದೇ ಪೂಜೆಗೆ ಮುನ್ನ ಪ್ರಥಮ ಪೂಜೆಯನ್ನು ಗಣೇಶನಿಗೆ ಅರ್ಪಿಸಬೇಕು ಎಂಬುದು ಶಿವನ ವರವಾಗಿದೆ.

8. ಶಿವಲಿಂಗದ ಮೇಲೆ ತುಳಸಿಯನ್ನು ಹಾಕಬೇಡಿ

8. ಶಿವಲಿಂಗದ ಮೇಲೆ ತುಳಸಿಯನ್ನು ಹಾಕಬೇಡಿ

ಶಿವಪುರಾಣದಲ್ಲಿ ತಿಳಿಸಿರುವಂತೆ ತುಳಸಿಯ ಪತಿಯನ್ನು ಶಿವನು ವಧಿಸಿದ್ದರು. ತುಳಸಿಯ ಪತಿ ಅಸುರನಾದ ಶಂಕಚೂರನಾಗಿದ್ದನು. ಹಾಗಾಗಿ ತುಳಸಿಯನ್ನು ಶಿವಲಿಂಗಕ್ಕೆ ಅರ್ಪಿಸಬಾರದು.

9. ಸ್ವಚ್ಛ ಮನಸ್ಸು ಮತ್ತು ದೇಹ

9. ಸ್ವಚ್ಛ ಮನಸ್ಸು ಮತ್ತು ದೇಹ

ಪೂಜೆಯನ್ನು ಆರಂಭಿಸುವ ಮೊದಲು ನಿಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಂಡು ಮನಸ್ಸಿನಲ್ಲಿ ಕಲ್ಮಶವನ್ನಿಟ್ಟುಕೊಳ್ಳದೆಯೆ ಪೂಜೆಯನ್ನು ಆರಂಭಿಸಬೇಕು. ಸೂರ್ಯೋದಯಕ್ಕೂ ಮುನ್ನ ಶುಚಿರ್ಭೂತರಾಗಿ ಪೂಜೆಯನ್ನು ಆರಂಭಿಸಿ.

10. ಪಠಿಸಬೇಕಾದ ಮಂತ್ರ

10. ಪಠಿಸಬೇಕಾದ ಮಂತ್ರ

ಪೂಜಾ ವಿಧಿಗಳನ್ನು ಮಾಡುವಾಗ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ಪಠಿಸಿ. ನಾನು ಶಿವನಿಗೆ ತನು ಮನ ಧನವಾಗಿ ಅರ್ಪಿಸಿಕೊಳ್ಳುತ್ತಿದ್ದೇನೆ ನನ್ನ ಆತ್ಮ ಶಿವನಿಗೆ ಅರ್ಪಿತ ಎಂಬುದು ಈ ಮಂತ್ರದ ಅರ್ಥವಾಗಿದೆ.

English summary

Things to Remember While Doing Lord Shiva Puja on monday

In Hindu mythology, Mondays are associated with Lord Shiva. Do you know the name Shiva has a special significance? The syllable sh’ means permanent bliss, I’ stands for male energy whereas va’ stands for female energy. He is the god of destruction and transcendental knowledge. According to vedas, worshipping Him in the form of linga helps a person gain highest merit in this life and in the future lifetimes.
Story first published: Monday, August 27, 2018, 15:36 [IST]
X
Desktop Bottom Promotion