Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಗವದ್ಗೀತೆ: ಗುರಿಯಿಲ್ಲದ ಮನಕೆ ದಾರಿ ತೋರುವ ದೇವರ ಗೀತೆ
ತಮ್ಮದೇ ಧರ್ಮವನ್ನು ಪಾಲಿಸುವ ಜನರಲ್ಲಿ ಪೌರಾಣಿಕ ಅಂಶಗಳು ಅವರ ಮನಸ್ಸಿನಲ್ಲಿ ಬಹುದೊಡ್ಡ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಪ್ರತಿಯೊಂದು ಧರ್ಮವೂ ಪೌರಾಣಿಕ ಅಂಶಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ತಮ್ಮದೇ ನಂಬಿಕೆಯನ್ನಿಡುವ ಹಕ್ಕನ್ನು ಅವರು ಪಡೆದುಕೊಂಡಿದ್ದಾರೆ ಅಂತೆಯೇ ಅವುಗಳ ನೀತಿಯನ್ನು ತಮ್ಮ ಜೀವನದಲ್ಲಿ ಪಾಲಿಸುವ ತತ್ವಕ್ಕೂ ಅವರು ಬದ್ಧರಾಗಿದ್ದಾರೆ.

ಇತರ ಧರ್ಮಗಳಂತೆಯೇ ಹಿಂದೂ ಧರ್ಮವು ಪೌರಾಣಿಕ ಅಂಶಗಳು ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿದ್ದು, ಇವುಗಳಲ್ಲಿರುವ ಬೋಧನೆಗಳು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸುವಂತಹದ್ದು ಮಹತ್ವದ ಕಾರ್ಯವಾಗಿದೆ. ಇಂತಹುದೇ ಪೌರಾಣಿಕ ನೆಲೆಗಟ್ಟನ್ನು ಹೊಂದಿರುವ ಧರ್ಮಗ್ರಂಥವಾಗಿದೆ ಭಗವದ್ಗೀತೆ. ಪವಿತ್ರ ಸಿದ್ಧಾಂತಗಳನ್ನು ಹೊಂದಿರುವ ಭಗವದ್ಗೀತೆಯು ಹೆಚ್ಚು ಪವಿತ್ರವಾದುದು ಮತ್ತು ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಜೀವನ ಸತ್ಯಗಳನ್ನೇ ಈ ಪುಸ್ತಕವು ಒಳಗೊಂಡಿದೆ. ಧರ್ಮ ಮಾರ್ಗದ ಉಪದೇಶ ನೀಡುವ- ಭಗವದ್ಗೀತೆ
ನಮ್ಮ ಜೀವನದ ಸುಸೂತ್ರ ಸಾಗುವಿಕೆಗೆ ಬೇಕಾದ ಅರ್ಥಗಳನ್ನು ಕರ್ಮಫಲಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದ್ದು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಸುಖ, ದುಃಖ, ಮರಣ, ಜನನ ಎಲ್ಲದಕ್ಕೂ ಅರ್ಥವನ್ನು ಪಡೆದುಕೊಂಡಿದೆ. ಸ್ವತಃ ದೇವರೇ ಇಲ್ಲಿ ಜೀವನದ ಪರಮ ಸಿದ್ಧಾಂತವನ್ನು ಬೋಧಿಸಿದ್ದು ನಮ್ಮ ಜೀವನದಲ್ಲಿ ಈ ತತ್ವಗಳ ಪ್ರಯೋಜನವೇನು ಅದರಿಂದ ನಾವು ಕಂಡುಕೊಳ್ಳಬಹುದಾದ ಜೀವನದ ರಹಸ್ಯವನ್ನು ಅರಿಯಬಹುದಾಗಿದೆ. ಇಂದಿನ ಲೇಖನದಲ್ಲಿ ಭಗವದ್ಗೀತೆ ಬೋಧಿಸಿರುವ ಅಂಶಗಳನ್ನು ನಾವು ತಿಳಿಸಲಿದ್ದು ಜೀವನದಲ್ಲಿ ಈ ಅಂಶಗಳ ಪ್ರಯೋಜನವೇನು ಎಂಬುದನ್ನು ಕಂಡುಕೊಳ್ಳೋಣ.
ಸಂತೋಷ
ಸಂಭವಗಳು ಅನಿವಾರ್ಯ ಮತ್ತು ನಿವಾರಿಸಲಾಗದೇ ಇರುವಂಥದ್ದಾಗಿದೆ. ಏನು ಸಂಭವಿಸುತ್ತದೆಯೋ, ಮಾನವರ ಜೀವನದ ಒಳಿತಿಗಾಗಿ ಸಂಭವಿಸುತ್ತದೆ. ಇದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ನಿನಗಿಲ್ಲ ಅಂತೆಯೇ ಅದನ್ನು ನಿಲ್ಲಿಸಲು ನಿನ್ನಿಂದಾಗದು.
ಫಲಿತಾಂಶವನ್ನು ಅಪೇಕ್ಷಿಸಬೇಡ
ಭಗವದ್ಗೀತೆಯು ಕಾರ್ಯವನ್ನು ಮಾತ್ರ ಬೇಡ ಫಲಾಪೇಕ್ಷೆಯನ್ನು ನಿರೀಕ್ಷಿಸದಿರು ಎಂಬುದಾಗಿ ಹೇಳುತ್ತದೆ.
ಆತ್ಮವು ಅಮರ
ಆತ್ಮವು ಅಮರವಾಗಿದ್ದು ಅದನ್ನು ನಾಶಮಾಡಲು ಸಾಧ್ಯವಿಲ್ಲ. ವ್ಯಕ್ತಿಯು ಸತ್ತಾಗ ದೇಹವನ್ನು ಮಾತ್ರ ಅದು ಬದಲಿಸುತ್ತದೆ. ಇದು ಒದ್ದೆಯಾಗುವುದಿಲ್ಲ ಅಂತೆಯೇ ಬೆಂಕಿಯಲ್ಲಿ ಸುಡುವುದೂ ಇಲ್ಲ.
ಆಸ್ತಿ ಸಂಗ್ರಹಣೆಯ ಬಗ್ಗೆ ಯೋಚಿಸದಿರು
ಇದು ಭಗವದ್ಗೀತೆಯಿಂದ ನೀವು ಕಲಿಯಬೇಕಾದ ಹೆಚ್ಚು ಮುಖ್ಯವಾದ ಅಂಶವಾಗಿದೆ. ನೀವು ಹುಟ್ಟುವಾಗ ಬರಿಗೈಯಲ್ಲಿದ್ದಿರಿ ಅಂತೆಯೇ ಜಗತ್ತನ್ನು ತ್ಯಜಿಸುವಾಗ ಕೂಡ ಬರಿಗೈಯಲ್ಲೇ ಇರುವಿರಿ. ನೀವು ಸತ್ತ ನಂತರ ಯಾವುದೇ ಲೌಕಿಕ ಆಸ್ತಿಯನ್ನು ಕೊಂಡೊಯ್ಯಲು ಸಾಧ್ಯವಿಲ್ಲ.
ದುರಾಸೆ, ಕಾಮ, ಕ್ರೋಧ ತ್ಯಜಿಸು
ಮಾನವನ ಸ್ವಭಾವ ಮತ್ತು ಗುಣವನ್ನು ಕಾಮ, ಕ್ರೋಧ ಹಾಗೂ ದುರಾಸೆಯು ನಾಶ ಮಾಡಿಬಿಡುತ್ತದೆ. ನಿಮಗೆ ಶಾಂತಿಯುತ ಜೀವನವನ್ನು ದಯಪಾಲಿಸಲು ಮೂರು ಅಂಶಗಳ ಬಳಿ ನಿಮ್ಮನ್ನು ಸುಳಿಯದಂತೆ ಗೀತೆಯು ತಡೆಯುತ್ತದೆ.
ಸಂಶಯಗಳನ್ನು ತೊಡೆದುಹಾಕಿ
ಇದು ನೀವು ಗೀತೆಯಿಂದ ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ಅಂಶವಾಗಿದೆ. ನಿಮ್ಮ ಸಂದೇಹಗಳನ್ನು ನೀವು ತೊಡೆದು ಹಾಕದೇ ಇದ್ದಲ್ಲಿ ನಿಮಗೆ ಶಾಂತಿಯುತ ಜೀವನ ಲಭ್ಯವಾಗುವುದಿಲ್ಲ.
ಒಬ್ಬ ವ್ಯಕ್ತಿಯು ಶತ್ರುವೂ ಆಗಬಹುದೂ ಮಿತ್ರನೂ ಆಗಬಹುದು
ತನ್ನೊಳಗೆ ಪ್ರೇರಣೆಯನ್ನು ಪಡೆದುಕೊಂಡು, ತನ್ನ ಉತ್ತಮ ಮಿತ್ರನೂ ಶತ್ರುವೂ ಆಗಬಹುದಾಗಿದೆ. ತನ್ನ ಆಲೋಚನೆಗಳು ಮತ್ತು ವಿಚಾರಗಳಿಂದ ಈತ ಸಾಕಷ್ಟು ಪ್ರಭಾವಿತನಾಗಿರುತ್ತಾನೆ ಮತ್ತು ಹೀಗಾಗಿ ಆತ ಕಾರ್ಯನಿರ್ವಹಿಸುತ್ತಾನೆ.
ನೀವು ಏನು ಬಿತ್ತುತ್ತೀರೋ ಅದನ್ನೇ ಪಡೆದುಕೊಳ್ಳುತ್ತೀರಿ
ನಿಮ್ಮ ಕಾರ್ಯವನ್ನು ದೇವರು ನಿಶ್ಚಯಿಸುತ್ತಾನೆ. ನಿಮ್ಮ ಸಾವಿನ ನಂತರ ನಿಮಗೆ ಶಿಕ್ಷೆ ಅಥವಾ ಪುರಸ್ಕಾರ ದೊರೆಯುತ್ತದೆ. ತೀರ್ಮಾನವು ಸಾವಿನ ನಂತರವೇ ನಿಶ್ಚಯಿಸಲ್ಪಡುತ್ತದೆ ಮತ್ತು ಇದು ಮರಣ ಹೊಂದಿದ ವ್ಯಕ್ತಿಯ ಕೊನೆಯ ಹಂತವನ್ನು ಇದು ನಿರ್ಧರಿಸುತ್ತದೆ.
ಜನರಿಗೆ ಗೌರವ ನೀಡಿ
ಬೇರೆಯವರಿಂದ ಗೌರವವನ್ನು ಪಡೆದುಕೊಳ್ಳಬೇಕು ಎಂದಾದಲ್ಲಿ ಅವರನ್ನು ಮೊದಲು ನೀವು ಗೌರವಿಸಬೇಕು. ನೀವು ಗೌರವಿಸದೇ ಅವರಿಂದ ಗೌರವವನ್ನು ಅಪೇಕ್ಷಿಸುವುದು ತಪ್ಪಾಗಿದೆ.
ಜೀವನ ನಿಮಗೆ ನೀಡಿರುವುದನ್ನು ಸ್ವೀಕರಿಸಿ
ಜೀವನದ ಶ್ರೀಮಂತಿಕೆ ಮತ್ತು ಕಷ್ಟಗಳನ್ನು ನಿಮಗೆ ಆಯ್ಕೆಮಾಡಿಕೊಳ್ಳಲು ಆಗುವುದಿಲ್ಲ. ನಿಮಗೆ ಜೀವನ ಒದಗಿಸಿರುವುದನ್ನು ಮಾತ್ರವೇ ನೀವು ಸ್ವೀಕರಿಸಬೇಕು. ನಿಮ್ಮ ಹಿಂದಿನ ಕಾರ್ಯದ ಫಲವಾಗಿ ಈ ಅಂಶಗಳು ಸಂಬಂಧವನ್ನು ಪಡೆದುಕೊಂಡಿರುತ್ತವೆ.



Click it and Unblock the Notifications




