For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದ ಮಹಿಳೆಯರು, ಇಂತಹ ಕಾರ್ಯಗಳನ್ನು ಮಾಡಲೇಬಾರದಂತೆ!

|

ಹಿಂದೂ ಧರ್ಮದಲ್ಲಿನ ಕೆಲವೊಂದು ಆಚರಣೆಗಳು ಹಾಗೂ ವಿಧಿವಿಧಾನಗಳು ತುಂಬಾ ವಿಚಿತ್ರವೆಂದು ಹೊರಗಿನವರಿಗೆ ಅನಿಸಿದರೂ ಇದಕ್ಕೆ ತನ್ನದೇ ಆಗಿರುವಂತಹ ಕೆಲವೊಂದು ಕಾರಣಗಳು ಇದ್ದೇ ಇರುತ್ತದೆ. ಇದರ ಪ್ರಕಾರವೇ ಹಿಂದೂ ಧರ್ಮದಲ್ಲಿನ ಆಚರಣೆಗಳು ಇಂದಿಗೂ ನಡೆಯುತ್ತಲಿದೆ. ಹಿಂದೂ ಧರ್ಮದಲ್ಲಿ ಶಾಸ್ತ್ರಬದ್ಧವಾಗಿ, ಇನ್ನು ಕೆಲವು ಸಾಮರ್ಥ್ಯದ ಮೇಲೆ ಹಾಗೂ ಜ್ಯೋತಿಷ್ಯದ ನಂಬಿಕೆ ಮೇಲೆ ಅನಾದಿ ಕಾಲದಿಂದಲೂ ಕೆಲವೊಂದು ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಕೆಲವೊಂದು ಕಾರ್ಯಗಳನ್ನು ಮಹಿಳೆಯರು ಮಾಡಲೇಬಾರದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಇದನ್ನು ಮಾಡಿದರೆ ಅದು ಮಹಿಳೆಯರಿಗೆ ತುಂಬಾ ಅಶುಭವೆಂದು ಹೇಳಲಾಗುತ್ತದೆ. ಸಂಪ್ರದಾಯ ಬದ್ಧವಾಗಿರುವಂತಹ ಕೆಲವೊಂದು ಹಿಂದೂ ಮನೆಗಳಲ್ಲಿ ಈಗಲೂ ಈ ಕ್ರಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದರ ಹಿಂದೆ ನಿಜವಾಗಿಯೂ ಯಾವುದೇ ಕಾರಣಗಳು ಇದೆಯಾ ಅಥವಾ ಇದು ಮೂಢನಂಬಿಕೆಗಳಾ ಎನ್ನುವುದು ಅಧ್ಯಯನಗಳಿಂದ ಮಾತ್ರ ತಿಳಿದುಬರಲಿದೆ.

ಈ ಲೇಖನದಲ್ಲಿ ನಾವು ಹಿಂದೂ ಧರ್ಮದ ಮಹಿಳೆಯರು ಮಾಡಬಾರದ ಕೆಲವೊಂದು ಕಾರ್ಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ನೀವು ಸಂಪ್ರದಾಯಬದ್ಧರಾಗಿದ್ದರೆ ಖಂಡಿತವಾಗಿಯೂ ಇದನ್ನು ಪಾಲಿಸಿಕೊಂಡು ಹೋಗಬಹುದು. ಇಲ್ಲವಾದಲ್ಲಿ ಇದು ಕೂಡ ಒಂದು ನಂಬಿಕೆ ಮಾತ್ರ ಎಂದು ಹೇಳಿ ಅಲ್ಲಿಗೆ ಬಿಟ್ಟುಬಿಡಬಹುದು. ಆಯ್ಕೆ ನಿಮಗೆ ಬಿಟ್ಟದ್ದು...

ತೆಂಗಿನ ಕಾಯಿ ಒಡೆಯುವುದು

ತೆಂಗಿನ ಕಾಯಿ ಒಡೆಯುವುದು

ಪೂಜೆಗೆ ಇಟ್ಟಿರುವಂತಹ ತೆಂಗಿನಕಾಯಿಯನ್ನು ಮಹಿಳೆಯರು ಒಡೆಯಬಾರದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಯಾಕೆಂದರೆ ತೆಂಗಿನಕಾಯಿಯು ಲಕ್ಷ್ಮೀ ದೇವಿ ಮತ್ತು ಉರ್ವರ ದೇವಿಯ ಸಂಕೇತವಾಗಿದೆ. ಪುರುಷರು ಮಾತ್ರ ಪೂಜೆ ಇಟ್ಟಿರುವ ತೆಂಗಿನಕಾಯಿ ಒಡೆಯಬಹುದು. ಮಹಿಳೆಯರಿಗೆ ಇದು ನಿಷಿದ್ಧ.

ಜನಿವಾರ ಧರಿಸುವುದು

ಜನಿವಾರ ಧರಿಸುವುದು

ಬ್ರಾಹ್ಮಣರು ಧರಿಸುವಂತಹ ಪವಿತ್ರ ದಾರವನ್ನು ಜನಿವಾರವೆಂದು ಕರೆಯಲಾಗುತ್ತದೆ. ಇದನ್ನು ಪುರುಷರು ಮಾತ್ರ ಧರಿಸಬಹುದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಇಂತಹ ಯಾವುದೇ ದಾರ ಅಥವಾ ಪವಿತ್ರ ದಾರವನ್ನು ಮಹಿಳೆಯರು ಧರಿಸಬಾರದು. ಬ್ರಾಹ್ಮಣ ಮಹಿಳೆಯರಿಗೆ ಕೂಡ ಇದು ನಿಷಿದ್ಧವಾಗಿದೆ.

Most Read: ಮುಂಜಾನೆ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವಿಧಾನಗಳು

ಆಂಜನೇಯ ದೇವರ ಪೂಜೆ

ಆಂಜನೇಯ ದೇವರ ಪೂಜೆ

ಶ್ರೀರಾಮ ಬಂಟನಾಗಿರುವ ಹನುಮಂತ ದೇವರು ಬ್ರಹ್ಮಚಾರಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಪುರಾಣಗಳಲ್ಲಿ ಬ್ರಹ್ಮಚಾರಿಗಳು ಕಟು ಬ್ರಹ್ಮಚಾರ್ಯವನ್ನು ಪಾಲಿಸುತ್ತಿದದ್ದು ಮಾತ್ರವಲ್ಲದೆ, ಮಹಿಳೆಯರಿಂದಲೂ ದೂರವಿರುತ್ತಿದ್ದರು. ಇವರು ಮಹಿಳೆಯರನ್ನು ತಮ್ಮ ತಾಯಿಯೆಂದು ಭಾವಿಸುತ್ತಿದ್ದರು. ಹನುಮಂತ ದೇವರು ಕೂಡ ಬ್ರಹ್ಮಚಾರಿಯಾಗಿಯೇ ಇದ್ದರು. ಇದರಿಂದ ಪುರಾತನ ಕಾಲದಿಂದಲೂ ಮಹಿಳೆಯರು ಹನುಮಂತ ದೇವರ ಪೂಜೆ ಮಾಡುತ್ತಿರಲಿಲ್ಲ. ಕೆಲವು ಮಹಿಳೆಯರು ಪೂಜೆ ಮಾಡಿದರೂ ಅವರು ವಿಗ್ರಹವನ್ನು ಮಾತ್ರ ಮುಟ್ಟಬಾರದು ಎಂದು ಹೇಳಲಾಗುತ್ತದೆ.

ಪವಿತ್ರ ಓಂ ಮಂತ್ರ ಪಠಣ

ಪವಿತ್ರ ಓಂ ಮಂತ್ರ ಪಠಣ

ಯಾವುದೇ ಮಂತ್ರದ ಆರಂಭದಲ್ಲಿ ಹೇಳುವಂತಹ ಓಂ ಮಂತ್ರವನ್ನು ಮಹಿಳೆಯರು ಉಚ್ಛರಿಸಬಾರದು ಎಂದು ಹೇಳಲಾಗುತ್ತದೆ. ಓಂ ಎನ್ನುವುದು ಈಶ್ವರ ದೇವರಿಗೆ ಸಂಬಂಧಿಸಿದ ಮಂತ್ರವಾಗಿರುವ ಕಾರಣದಿಂದಾಗಿ ಮಹಿಳೆಯರು ಇದನ್ನು ಉಚ್ಛರಿಸಬಾರದು ಎಂದು ಕೆಲವರು ಹೇಳುತ್ತಾರೆ. ಓಂ ಮಂತ್ರವನ್ನು ಉಚ್ಛರಿಸುವ ವೇಳೆ ಹೊಕ್ಕಳಿನ ಭಾಗದಲ್ಲಿ ಉಂಟಾಗುವಂತಹ ಒತ್ತಡವು ಮಹಿಳೆರಿಗೆ ಅನಾರೋಗ್ಯವನ್ನು ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ಅದಾಗ್ಯೂ, ಹೆಚ್ಚಿನ ಜನರು ಈ ವಾದವನ್ನು ಒಪ್ಪುವುದೇ ಇಲ್ಲ. ಆದರೆ ಅನಾದಿ ಕಾಲದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು.

ಸೀತಾಫಲ ತುಂಡು ಮಾಡುವುದು

ಸೀತಾಫಲ ತುಂಡು ಮಾಡುವುದು

ಸೀತಾಫಲವನ್ನು ಮಹಿಳೆಯರು ತುಂಡು ಮಾಡಬಾರದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಆದರೆ ಮೊದಲು ಪುರುಷರು ಇದನ್ನು ತುಂಡು ಮಾಡಿದ ಬಳಿಕ ಮಹಿಳೆಯರು ತುಂಡು ಮಾಡಬಹುದಾಗಿದೆ.

Most Read: ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಕೆಟ್ಟ ಅಭ್ಯಾಸದಿಂದಲೇ ಬಡತನ ಕಾಡುವುದಂತೆ!

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬಾರದು

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬಾರದು

ದೆವ್ವ ಅಥವಾ ದುಷ್ಟಶಕ್ತಿಗಳ ಪ್ರಭಾವದಿಂದಾಗಿ ಮಹಿಳೆಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬಾರದು ಎಂದು ಹೇಳಲಾಗುತ್ತದೆ. ದೆವ್ವಗಳು ಅಥವಾ ದುಷ್ಟಶಕ್ತಿಗಳು ಹೆಚ್ಚಾಗಿ ಮಹಿಳೆಯರ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಲಾಗಿದೆ. ಇದನ್ನು ತಡೆಯುವ ದೃಷ್ಟಿಯಿಂದಾಗಿ ಅಂತ್ಯಕ್ರಿಯೆಯಲ್ಲಿ ಅವರು ಭಾಗಿಯಾಗಬಾರದು ಅಥವಾ ಸ್ಮಶಾನ ಸ್ಥಳಕ್ಕೆ ಬರಬಾರದು ಎಂದು ಹೇಳಲಾಗಿದೆ. ಇನ್ನೊಂದು ನಂಬಿಕೆಯ ಪ್ರಕಾರ ಮಹಿಳೆಯರು ಕಣ್ಣೀರು ಹಾಕಬಾರದು ಮತ್ತು ಕಣ್ಣೀರಿನಿಂದ ಆತ್ಮಕ್ಕೆ ಶಾಂತಿ ಸಿಗದು ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ಅವರಿಗೆ ರುಧ್ರಭೂಮಿಗೆ ಪ್ರವೇಶಿಸಲು ನಿಷೇಧವಿದೆ.

English summary

Things That Hindu Women Are Forbidden To Do

In the case of various Hindu beliefs, most sacred rituals and tasks were divided on the basis of ability as well as on the basis of some spiritual or astrological reasons. Whether these were true or mere prejudices of society can be known only through a detailed study.
Story first published: Saturday, December 8, 2018, 16:10 [IST]
X
Desktop Bottom Promotion