For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚಿದರೆ ಮನೆಯಲ್ಲಿ ಆಗುವ ಬದಲಾವಣೆಗಳೇನು?

|

ದೀಪ ಎನ್ನುವುದು ಭರವಸೆಯ ಸಂಕೇತ. ಮನಸ್ಸಿನಲ್ಲಿ ಎಂಥದ್ದೇ ಒತ್ತಡವಿರಲಿ, ನೋವು ಇರಲಿ ದೇವರ ಮನೆಗೆ ಹೋಗಿ ದೀಪ ಹಚ್ಚಿ ಕಣ್ಣುಚ್ಚಿ ಒಂದು ಕ್ಷಣ ನಿಂತರೆ ಸಾಕು ಮನಸ್ಸು ತುಂಬಾ ನಿರಾಳ ಅನಿಸುವುದು, ಮನಸ್ಸಿನಲ್ಲಿನ ಭರವಸೆ ಮೂಡುವುದು, ಒಂದು ಧನಾತ್ಮಕ ಶಕ್ತಿ ನಮ್ಮನ್ನು ಆವರಿಸಿದಂತೆ ಆಗುವುದು ಅಲ್ವಾ?

ನೀವು ಗಮನಿಸಿರಬಹುದು ಬೆಳಗ್ಗೆ ಅಥವಾ ಸಂಜೆ ದೇವರ ಮನೆ ಕಡೆ ನೋಡಿದಾಗ ಅಲ್ಲಿ ದೀಪ ಬೆಳಗುತ್ತಿದ್ದರೆ ಅದನ್ನು ನೋಡಿದರೆ ಸಾಕು ಮನಸ್ಸಿಗೆ ಆನಂಧವಾಗುವುದು. ಒಂದು ದಿನ ದೀಪ ಹಚ್ಚದಿದ್ದರೂ ಮನಸ್ಸಿನಲ್ಲಿ ಏನೋ ಕಸಿವಿಸಿ ಹೌದಲ್ವಾ?

ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪ ಬೆಳಗುವುದಕ್ಕೆ ನಮ್ಮ ಸಂಪ್ರದಾಯದಲ್ಲಿ ಅದರದ್ದೇ ಆದ ಮಹತ್ವವಿದೆ. ಇಲ್ಲಿ ನಾವು ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪ ಬೆಳಗುವುದರಿಂದ ಸಿಗುವ ಗುಣಗಳೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಬೆಳಗ್ಗೆ ದೀಪ ಹಚ್ಚುವುದರ ಹಿಂದಿನ ಉದ್ದೇಶ

ಬೆಳಗ್ಗೆ ದೀಪ ಹಚ್ಚುವುದರ ಹಿಂದಿನ ಉದ್ದೇಶ

ಬೆಳಗ್ಗೆ ಎದ್ದ ಬಳಿಕ ನಮ್ಮ ಆ ದಿನದ ದಿನಚರಿ ಪ್ರಾರಂಭವಾಗುವುದು. ನಮ್ಮ ಕೆಲಸ, ಕಾರ್ಯಗಳಿಗೆ ತೆರಳುವ ಮುನ್ನ ಸ್ನಾನ ಮಾಡಿ ದೇವರಿಗೆ ದೀಪ ಮುಚ್ಚಿ ಕನಿಷ್ಠ 5 ನಿಮಿಷ ದೇವರ ಮುಂದೆ ಕಣ್ಮುಚ್ಚಿ ನಿಲ್ಲುತ್ತೇವೆ. ಆಗ ನಮ್ಮ ಮನಸ್ಸಿಗೆ ಒಂದು ಭರವಸೆ ಮೂಡುವುದು.

ಈ ದಿನ ಉತ್ತಮವಾಗಿ ಕಳೆಯುವಂತಾಗಲಿ, ನಮಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಶಕ್ತಿಯನ್ನು ನೀಡು ಎಂದು ಪ್ರಾರ್ಥಿಸಿ ಬೆಳಗ್ಗೆ ದೀಪವನ್ನು ಹಚ್ಚುತ್ತೇವೆ. ಈ ದೀಪ ನಮ್ಮಲ್ಲಿ ಒಂದು ಬಗೆಯ ದೈವಿಕವಾದ ಅನುಭವವನ್ನು ನೀಡುವುದರ ಜೊತೆಗೆ ಧನಾತ್ಮಕ ಶಕ್ತಿಯನ್ನು ತುಂಬುವುದು.

ಸಂಜೆ ಹೊತ್ತು ದೀಪ ಬೆಳಗುವುದರ ಉದ್ದೇಶ

ಸಂಜೆ ಹೊತ್ತು ದೀಪ ಬೆಳಗುವುದರ ಉದ್ದೇಶ

ಸಂಜೆ ವೇಳೆಗೆ ಕತ್ತಲಾಗುತ್ತಿದ್ದಂತೆ ಶ್ರೀ ಲಕ್ಷ್ಮೀದೇವಿ ಕೃಷ್ಣವೇಷ ಮಾಡುತ್ತಾಳೆ, ದಾರಿದ್ರ್ಯ ಲಕ್ಷ್ಮಿ ಮನೆಯಲ್ಲಿರುತ್ತಾಳೆ. ಇವಳು ಮನೆಯಿಂದ ಹೊರ ಹೋಗಬೇಕೆಂದರೆ ಸಂಜೆ ಹೊತ್ತು ದೀಪ ಬೆಳಗಬೇಕು. ಇಲ್ಲದಿದ್ದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಉಳಿದುಕೊಂಡು ಬಿಡುತ್ತಾಳೆ. ಇದರಿಂದ ಮನೆಯಲ್ಲಿ ಅನೇಕ ತೊಂದರೆಗಳು ಎದುರಾಗುವುದು ಎಂಬ ನಂಬಿಕೆಯಿದೆ.

 ಕತ್ತಲನ್ನು ದೂಡುವ ದೀಪ

ಕತ್ತಲನ್ನು ದೂಡುವ ದೀಪ

ಸಂಜೆ ಹೊತ್ತಾಗುತ್ತಿದ್ದಂತೆ ಕತ್ತಲು ಆವರಿಸುವುದು. ಈ ಸಮಯದಲ್ಲಿ ದೀಪ ಹಚ್ಚಿಟ್ಟರೆ ಮನೆಯಲ್ಲಿ ಬೆಳಕು ಇರುವುದು. ಮನೆಹಯಲ್ಲಿ ಬೆಳಕಿಗಾಗಿ ಬಲ್ಬ್‌ ಹಚ್ಚಿದರೆ ಸಾಕಲ್ಲ ಎಂದು ಕೇಳಬಹುದು. ಆದರೆ ಮನೆಯಲ್ಲಿ ಹಚ್ಚಿಟ್ಟ ದೇವರ ದೀಪ ನೀಡುವ ಮನಶಾಂತಿ ಬಲ್ಬ್‌ಗೆ ನೀಡಲು ಸಾಧ್ಯವಿಲ್ಲ. ಇದನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ಇದು ಅನುಭವಕ್ಕೆ ಬಂದಿರುತ್ತದೆ.

 ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ

ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ

ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದ್ದರೆ ಅಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು ಎಂದು ವಾಸ್ತುಶಾಸ್ತ್ರ ಕೂಡ ಹೇಳುತ್ತದೆ. ಆರೋಗ್ಯ ಸಮಸ್ಯೆ, ಸಂಬಂಧಗಳಲ್ಲಿ ಸಮಸ್ಯೆ, ಹಣಕಾಸಿನ ಸಮಸ್ಯೆ ಇವೆಲ್ಲಾ ಮನೆಯಲ್ಲಿನ ದೋಷದಿಂದ ಉಂಟಾಗುವುದು. ಈ ದೋಷಗಳನ್ನು ನಿವಾರಿಸುವ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿ ದೇವರ ದೀಪದ ಬೆಳಕಿಗೆ ಇದೆ.

ಚಿಂತೆ ದೂರವಾಗುವುದು

ಚಿಂತೆ ದೂರವಾಗುವುದು

ಎಷ್ಟೇ ಒತ್ತಡವಿರಲಿ ದೇವರಿಗೆ ದೀಪ ಹಚ್ಚಿ, ದೇವರ ನಾಮ ಹೇಳುತ್ತಾ ಒಂದು ಹತ್ತು ನಿಮಿಷ ಧ್ಯಾನ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು ಹಾಗೂ ಆರೋಗ್ಯ ವೃದ್ಧಿಸುವುದು.

English summary

Things That Happen In House If You Light Lamp In Front Of God In Morning And Evening

One must know what are things that happen in house if you light lamp in front of God in Morning and Evening..
X
Desktop Bottom Promotion