For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ ಆಚರಣೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...

|
ವರಮಹಾಲಕ್ಷ್ಮಿ ಹಬ್ಬದ ವ್ರತಾಚರಣೆ ಹಾಗು ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಡೀಟೇಲ್ | Oneindia Kannada

ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವತೆಯೆಂದೇ ಪೂಜಿಸಲ್ಪಡುವಂತಹ ಲಕ್ಷ್ಮೀ ದೇವಿಯನ್ನು ವರಮಹಾಲಕ್ಷ್ಮೀ ಎಂದೂ ಕರೆಯಲಾಗುವುದು. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ವರಮಹಾಲಕ್ಷ್ಮಿ ಪೂಜೆ ಅಥವಾ ವರಮಹಾಲಕ್ಷ್ಮೀ ವ್ರತ ಕೈಗೊಳ್ಳಲಾಗುವುದು. ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದೆಲ್ಲೆಡೆ ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಸುಖ ಹಾಗೂ ಸಮೃದ್ಧಿಗಾಗಿ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣೆಮೆಗೆ ಮೊದಲಿನ ಶುಕ್ರವಾರದಂದು ಇದನ್ನು ಆಚರಿಸಲಾಗವುದು. ಈ ವರ್ಷ ವರಮಹಾಲಕ್ಷ್ಮೀ ಪೂಜೆಯು ಆಗಸ್ಟ್ 24ರಂದು ಆಚರಿಸಲಾಗುವುದು. ಪೂಜೆಗೆ ಗುರುವಾರದಂದು ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗುವುದು. ಪುರಾಣಗಳಲ್ಲಿ ಬೇರೆ ಬೇರೆ ಹಬ್ಬಗಳ ಆಚರಣೆಗೆ ಇರುವಂತೆ ವರಮಹಾಲಕ್ಷ್ಮೀ ಆಚರಣೆಗು ತನ್ನದೇ ಆಗಿರುವಂತಹ ಕಥೆಯಿದೆ. ಇದಲ್ಲಿ ಜನಪ್ರಿಯವಾಗಿರುವುದು ಚಾರುಮತಿ ಕಥೆ. ಒಂದು ಶಿವ ದೇವರದಲ್ಲಿ ಅವರ ಪತ್ನಿ ಪಾರ್ವತಿಯು ಪ್ರಶ್ನೆಯೊಂದನ್ನು ಕೇಳುವರು.

ಭೂಮಿ ಮೇಲೆ ಮಹಿಳೆಯರು ತಮಗೆ ಬೇಕಾಗಿರುವ ಒಳ್ಳೆಯ ವೈವಾಹಿಕ ಜೀವನ, ಮಕ್ಕಳು, ಮೊಮ್ಮಕ್ಕಳು ಮತ್ತು ಸಂಪತ್ತನ್ನು ಪಡೆಯುವುದು ಹೇಗೆ ಎಂದು? ವರಮಹಾಲಕ್ಷ್ಮೀ ಪೂಜೆ ಮಾಡುವಂತಹ ಮಹಿಳೆಗೆ ತನ್ನ ಜೀವನದಲ್ಲಿ ಬಯಸಿದ ಎಲ್ಲವೂ ಸಿಗುವುದು ಎಂದು ಶಿವ ದೇವರು, ಚಾರುಮತಿಯ ಕಥೆಯನ್ನು ವಿವರಿಸುವರು. ಮಗದ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆಯು ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿರುವಳು. ಆಕೆಯಿಂದ ಪ್ರಭಾವಿತಳಾಗುವ ಲಕ್ಷ್ಮೀ ದೇವಿಯು, ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರದಂದು ತನ್ನನ್ನು ಪೂಜಿಸುವಂತೆ ಹೇಳುವರು. ಭಕ್ತಿಪೂರ್ವಕವಾಗಿ ಪೂಜೆ ಮಾಡಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ಪಡೆಯುವಳು ಎಂದು ಲಕ್ಷ್ಮೀ ದೇವಿಯು ಹೇಳುವರು.

ಲಕ್ಷ್ಮೀ ದೇವರು ಹೇಳಿದಂತೆ ಚಾರುಮತಿಯು ಪೂಜೆ ಮಾಡವಳು ಮತ್ತು ಪೂಜೆಗೆ ನೆರೆಮನೆಯವರು ಹಾಗೂ ಸಂಬಂಧಿಕರನ್ನು ಕರೆಯುವಳು. ಪೂಜೆ ಕೊನೆಗೊಳ್ಳುತ್ತಿದ್ದಂತೆ ಮಹಿಳೆಯು ಚಿನ್ನ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟರು ಮತ್ತು ಆಕೆಯ ಮನೆಯು ಬಂಗಾರವಾಯಿತು. ಮಹಿಳೆಯು ಜೀವನಪೂರ್ತಿ ಪೂಜೆ ಮಾಡಿಕೊಂಡು ತನ್ನ ಜೀವನವನ್ನು ಸುಖ ಹಾಗೂ ಸಮೃದ್ಧಿಯಿಂದ ಕಳೆದಳು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ....

ವರಮಹಾಲಕ್ಷ್ಮೀ ಪೂಜೆ ಮಾಡುವಾಗ ಗಮನಿಸಬೇಕಾದ ವಿಚಾರಗಳು

ವರಮಹಾಲಕ್ಷ್ಮೀ ಪೂಜೆ ಮಾಡುವಾಗ ಗಮನಿಸಬೇಕಾದ ವಿಚಾರಗಳು

ರಾಹುಕಾಲವು ತುಂಬಾ ಅಶುಭವಾಗಿರುವ ಕಾರಣದಿಂದಾಗಿ ಈ ಸಮಯದಲ್ಲಿ ವರಮಹಾಲಕ್ಷ್ಮೀ ಪೂಜೆ ಮಾಡಬಾರದು. ಶುಕ್ರವಾರದಂದು ಸಾಮಾನ್ಯವಾಗಿ ರಾಹುಕಾಲವು ಬೆಳಗ್ಗೆ 10.20ರಿಂದ ಮಧ್ಯಾಹ್ನ 12 ಗಂಟೆ ತನಕ ಇರುವುದು. ಇದರಿಂದ ವರಮಹಾಲಕ್ಷ್ಮೀ ಪೂಜೆಯನ್ನು ಬೆಳಗ್ಗೆ 10.30ರ ಮೊದಲು ಮಾಡಬೇಕು ಅಥವಾ ಮಧ್ಯಾಹ್ನ 12 ಗಂಟೆ ಬಳಿಕ ಮಾಡಿ. ದೇಶದ ಕೆಲವು ಭಾಗಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಸಂಜೆ ಗೋಧೂಳಿ ಲಗ್ನದಲ್ಲಿ ಮಾಡಲಾಗುತ್ತದೆ. ನೆನಪಿಡಿ- ಪೂಜೆಯ ದಿನದ ರಾಹುಕಾಲ ಪ್ರಶಸ್ತ ಸಮಯವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ಹತ್ತೂವರೆಯಿಂದ ಹನ್ನೆರಡು ಘಂಟೆಯವರೆಗೆ ರಾಹುಕಾಲವಿದ್ದು ಈ ಅವಧಿಯ ಆಚೀಚಿನ ಹೊತ್ತಿನಲ್ಲಿ ಪೂಜೆನಡೆಸುವುದು ಅತ್ಯಂತ ಶುಭವಾಗಿದೆ. ಅಂದರೆ ಬೆಳಿಗ್ಗೆ ಹತ್ತೂವರೆಗೂ ಮೊದಲು ಅಥವಾ ಮದ್ಯಾಹ್ನ ಹನ್ನೆರಡರ ಬಳಿಕ ಪೂಜೆ ನಡೆಸಿದರೆ ಅತ್ಯುತ್ತಮವಾಗಿದೆ. ಇನ್ನೂ ಹಲವೆಡೆ ಗೋಧೂಳಿಯ ಸಮಯ ಈ ಪೂಜೆಗೆ ಪ್ರಶಸ್ತ ಎಂದು ಭಾವಿಸಲಾಗಿದೆ.

ಹೇಳಬೇಕಾಗಿರುವ ಶೋಕ್ಲಗಳು

ಹೇಳಬೇಕಾಗಿರುವ ಶೋಕ್ಲಗಳು

ಲಕ್ಷ್ಮೀ ಸಹಸ್ರನಾಮ ಮತ್ತು ಲಕ್ಷ್ಮೀ ಅಷ್ಟೋತ್ತರ

 ತಿನ್ನುವ ಆಹಾರ

ತಿನ್ನುವ ಆಹಾರ

ವಿವಿಧ ರೀತಿಯ ಕಡಲೆಯಿಂದ ಮಾಡಿದ ತಿಂಡಿಗಳನ್ನು ಈ ದಿನ ತಿನ್ನಲಾಗುತ್ತದೆ. ಒಬ್ಬಟ್ಟು ಮತ್ತು ಇತರ ಕೆಲವೊಂದು ರೀತಿಯ ಸಿಹಿ ಕೂಡ ತಿನ್ನಲಾಗುತ್ತದೆ. ದೇಶದ ಕೆಲವೊಂದು ಭಾಗದಲ್ಲಿ ಪೂಜೆ ಮಾಡಲು ಉಪವಾಸ ಮಾಡುವುದು ಅತೀ ಅಗತ್ಯ ಮತ್ತು ಪೂಜೆ ಕೊನೆಗೊಂಡ ಬಳಿಕ ಆಹಾರ ಸೇವನೆ ಮಾಡಬಹುದು. ಇನ್ನು ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ.

ಉಪವಾಸ

ಉಪವಾಸ

ಉಪವಾಸವನ್ನು ಬೆಳಗ್ಗೆಯಿಂದ ಪೂಜೆ ಕೊನೆಗೊಳ್ಳುವ ತನಕ ಮಾಡಬಹುದು. ಕೆಲಸ ಮಾಡುತ್ತಲಿದ್ದರೆ, ಗರ್ಭಿಣಿ, ಅನಾರೋಗ್ಯದಿಂದ ಇರುವವರು ಅಥವಾ ಔಷಧಿ ತೆಗೆದುಕೊಳ್ಳುತ್ತಿರುವವರು ಉಪವಾಸ ಮಾಡಬೇಡಿ. ಕಾರಣಾಂತರಗಳಿಂದ ಈ ಪೂಜೆ ನೆರವೇರಿಸಲಾಗದ ಮಹಿಳೆಯರು ಮುಂದಿನ ಶುಕ್ರವಾರ ನೆರವೇರಿಸಬಹುದು. ಅದೂ ಸಾಧ್ಯವಾಗದಿದ್ದ ಪಕ್ಷದಲ್ಲಿ ನವರಾತ್ರಿಯ ಶುಕ್ರವಾರದಂದೂ ನೆರವೇರಿಸಬಹುದು.

 ವರಮಹಾಲಕ್ಷ್ಮೀ ಪೂಜೆ ಕಳೆದುಕೊಂಡರೆ ಏನು ಮಾಡಬಹುದು?

ವರಮಹಾಲಕ್ಷ್ಮೀ ಪೂಜೆ ಕಳೆದುಕೊಂಡರೆ ಏನು ಮಾಡಬಹುದು?

ನಿಮಗೆ ಪೂಜೆ ನೆರವೇರಿಸಲು ಸಾಧ್ಯವಾಗದೆ ಇದ್ದರೆ ಅಥವಾ ಯಾವುದೇ ಪರಿಸ್ಥಿತಿಯಲ್ಲಿ ಇದು ತಪ್ಪಿ ಹೋದರೆ ಆಗ ಮುಂದಿನ ಶುಕ್ರವಾರ ಅಥವಾ ನವರಾತ್ರಿಯಲ್ಲಿ ಬರುವ ಶುಕ್ರವಾರದಂದು ನೀವು ಇದರ ಆಚರಣೆ ಮಾಡಬಹುದು.ಇನ್ನು ವರಮಹಾಲಕ್ಷ್ಮಿ ಪೂಜೆಯಲ್ಲಿ ಮೂರ್ತಿಗೆ ಅಲಂಕಾರವನ್ನು ನೀವು ಚೆನ್ನಾಗಿ ಮಾಡಬೇಕು. ನಿಮ್ಮ ಮಂಟಪಕ್ಕೆ ಹೊಂದಿಕೊಳ್ಳುವ ಮೂರ್ತಿಯನ್ನು ಆಯ್ಕೆಮಾಡಿ. ಮೂರ್ತಿಯ ಅಲಂಕಾರಕ್ಕೆ ಸಮನಾಗಿ ಮಂಟಪದ ಅಲಂಕಾರ ಕೂಡ ಇರಲಿ. ಅಲ್ಲದೇ ಪೂಜೆಯಲ್ಲಿ ರಂಗೋಲಿ ಹೆಚ್ಚು ಪ್ರಾಮುಖ್ಯವಾದುದು. ಸಾಂಪ್ರದಾಯಿಕ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸುವುದರ ಜೊತೆಗೆ, ಹೊಸ ಮತ್ತು ವಿನ್ಯಾಸದ ರಂಗೋಲಿಯನ್ನು ನೀವು ಹಾಕಬಹುದಾಗಿದೆ. ಎಣ್ಣೆಯ ದೀಪಗಳನ್ನು ಇರಿಸುವುದರ ಮೂಲಕ ರಂಗೋಲಿ ವಿನ್ಯಾಸಗಳನ್ನು ಅಲಂಕರಿಸಿ.ನಿಮ್ಮ ಹಬ್ಬವನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡಲು ಈ ಅಲಂಕಾರದ ವಿಧಾನಗಳನ್ನು ಅನುಸರಿಸಿ. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುವುದು ಖಂಡಿತ.

ವರಮಹಾಲಕ್ಷ್ಮೀ ದಾರ

ವರಮಹಾಲಕ್ಷ್ಮೀ ದಾರ

ಪೂಜೆ ಬಳಿಕ 9 ಗಂಟುಗಳು ಇರುವ ಮತ್ತು ಮಧ್ಯದಲ್ಲಿ ಹೂ ಇರುವಂತಹ ದಾರವನ್ನು ಬಲ ಕೈಗೆ ಕಟ್ಟಿಕೊಳ್ಳಬೇಕು. ಇದು ಆಚರಣೆಯ ಪ್ರಮುಖ ಅಂಶ.

 ಏನು ಮಾಡಬಾರದು?

ಏನು ಮಾಡಬಾರದು?

ವರಮಹಾಲಕ್ಷ್ಮೀ ಪೂಜೆಯನ್ನು ಯಾರಿಂದಲೂ ಒತ್ತಾಯಪೂರ್ವಕವಾಗಿ ಮಾಡಿಸಬಾರದು. ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಪೂಜೆ ಮಾಡಲು ಇಷ್ಟವಿರಲ್ಲ. ಪೂಜೆ ಮಾಡುವಂತೆ ಯಾರನ್ನೂ ಒತ್ತಾಯಿಸಬಾರದು. ಯಾಕೆಂದರೆ ಅವರ ಇಚ್ಛೆಗೆ ವಿರುದ್ಧವಾಗಿ ಮತ್ತು ಮನಸ್ಸಿಲ್ಲದೆ ಮಾಡಿದ ಪೂಜೆಯ ಫಲವು ಸಿಗದು. ಇತ್ತೀಚೆಗಷ್ಟೇ ಹೆರಿಗೆಯಾದ ಮಹಿಳೆ ಮತ್ತು ಹೆರಿಗೆಯಾಗಿ 22 ದಿನ ಕಳೆಯದ ಹೊರತಾಗಿ ಈ ಪೂಜೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.

English summary

Things To Do On Varamahalakshmi vrata at home

Varalaksmi Vratham is one of the most popular pooja in South India, especially in Karnataka (Kannada), Andhra Pradesh (Telugu), Telangana (Telugu) and Tamil Nadu (Tamil). This pooja is well known as Vara Maha Lakshmi Vrata and is very religiously observed by women in these parts of the country. Let us know more about Varalaksmi pooja along with a few common questions about this famous puja.
X
Desktop Bottom Promotion