For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿ ದಿನದಂದು ತಪ್ಪದೇ ಈ ಎಲ್ಲಾ ಕಾರ್ಯಗಳನ್ನು ಮಾಡಿ

|

ಹಿಂದೂ ಧರ್ಮದಲ್ಲಿ ಎರಡು ರೀತಿಯ ಭಕ್ತರಿದ್ದಾರೆ. ಒಂದು ಗುಂಪಿನವರು ಶಿವನ ಭಕ್ತರು. ಇನ್ನೊಂದು ಗುಂಪಿನವರು ವಿಷ್ಣುವಿನ ಭಕ್ತರು. ವಿಷ್ಣುವನ್ನು ಆರಾಧಿಸುವವರು ವಿಷ್ಣುವಿನ ಆಶೀರ್ವಾದ ಪಡೆಯಲು ಎಲ್ಲಾ ರೀತಿಯ ಪೂಜೆ, ಆರಾಧನೆಗಳನ್ನು ಮಾಡುವರು. ಇದರಲ್ಲಿ ಪ್ರಮುಖವಾಗಿ ವೈಕುಂಠ ಏಕಾದಶಿಯು ಒಂದಾಗಿದೆ. ವಿಷ್ಣು ಭಕ್ತರಿಗೆ ವೈಕುಂಠ ಏಕಾದಶಿಯು ಅತೀ ಮಹತ್ವದ್ದಾಗಿರುವುದು.

ವಿಷ್ಣುವಿನ ಮಂದಿರಗಳಲ್ಲಿ ವೈಕುಂಠ ಏಕಾದಶಿಯನ್ನು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ವೈಕುಂಠ ಏಕಾದಶಿಗೆ ಹೆಚ್ಚಿನ ಮಹತ್ವವಿದೆ. ವಿಷ್ಣುವಿನ ಆಧ್ಯಾತ್ಮಿಕ ರಾಜ್ಯ ವೈಕುಂಠದಲ್ಲಿ ಶ್ರೀ ವೈಷ್ಣವ ಸಂಪ್ರದಾಯದ ಶ್ರೇಷ್ಠ ಭಕ್ತ ನಮ್ಮಲ್ವರ್ ನ್ನು ಈ ದಿನ ನೆನಪಿಸಲಾಗುತ್ತದೆ. ವೈಕುಂಠ ಏಕಾದಶಿಯ ದಿನ ನೀವು ಯಾವ ರೀತಿಯ ವ್ರತವನ್ನು ಆಚರಿಸಬೇಕು ಮತ್ತು ವಿಷ್ಣುವಿನ ಆಶೀರ್ವಾದಕ್ಕೆ ಒಳಗಾಗುವುದು ಹೇಗೆ ಎಂದು ನೀವು ಲೇಖನದ ಮೂಲಕ ತಿಳಿಯಿರಿ...

ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಿ

ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಿ

ವೈಕುಂಠ ಏಕದಶಿಯ ದಿನ ನೀವು ಹರೇ ಕೃಷ್ಣ ಮಹಾಮಂತ್ರವನ್ನು 108 ಸಲ ಜಪಿಸಬೇಕು.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ಕಲಿಯುಗದಲ್ಲಿ ನಿಮಗೆ ಆಧ್ಯಾತ್ಮಕದ ಮನವರಿಕೆ ಆಗಬೇಕೆಂದರೆ ಆಗ ನೀವು ಕೃಷ್ಣ ದೇವರ ಹೆಸರನ್ನು ಜಪಿಸಬೇಕು ಎಂದು

ವೇದಗಳು ಹೇಳುತ್ತವೆ. ಹರೇ ಕೃಷ್ಣ ಮಹಾಮಂತ್ರವು ಕಾಳಿ ಸಂತರನ ಉಪನಿಷತ್ ನಲ್ಲಿ ಉಲ್ಲೇಖವಿದೆ. ಇದನ್ನು ಉಪನಿಷತ್ ನಲ್ಲೂ ಹೇಳಲಾಗಿದೆ. ಎಲ್ಲಾ ರೀತಿಯ ವೇದಗಳನ್ನು ಕರಗತ ಮಾಡಿಕೊಂಡರೂ ಕೂಡ ಈ ಯುಗದಲ್ಲಿ ಹರೇ ಕೃಷ್ಣ ಮಹಾಮಂತ್ರವನ್ನು ಹೇಳುವುದಕ್ಕಿಂತ ಒಳ್ಳೆಯದು ಬೇರೆನೂ ಇಲ್ಲವೆಂದು ತಿಳಿಯಬಹುದು.

ಈ ಮಂತ್ರವನ್ನು ಜಪಿಸುವುದರಿಂದ ಹೃದಯವು ಪರಿಶುದ್ಧವಾಗುವುದು, ಜೀವನದ ಎಲ್ಲಾ ರೀತಿಯ ದುಃಖಗಳಿಂದ ನಮ್ಮನ್ನು ದೂರ ಮಾಡುವುದು ಮತ್ತು ಅಂತಿಮವಾಗಿ ಇದು ನಮಗೆ ಆಧ್ಯಾತ್ಮಿಕ ಪರಿಪೂರ್ಣತೆ ನೀಡುವುದು.

ಭಗವದ್ಗೀತೆ ಓದಿ…

ಭಗವದ್ಗೀತೆ ಓದಿ…

ಗೀತಾ ಜಯಂತಿಯು ವೈಕುಂಠ ಏಕಾದಶಿಯಂದೇ ಇರುವುದು. ಗೀತಾ ಜಯಂತಿ ಎಂದರೆ ಮಹಾಭಾರತದಲ್ಲಿ ಕೃಷ್ಣ ದೇವರು ಅರ್ಜುನನಿಗೆ ಆಧ್ಯಾತ್ಮಿಕ ಜ್ಞಾನವನ್ನು ಕರುಣಿಸಿದ ದಿನ. ಇದರಿಂದಾಗಿ ಈ ದಿನ ನೀವು ಭಗವದ್ಗೀತೆಯನ್ನು ಓದಿಕೊಳ್ಳಬೇಕು. ಈ ದಿನ ಭಗವದ್ಗೀತೆ ಓದುವುದರಿಂದ ಎಲ್ಲಾ ರೀತಿಯ ಆಧ್ಯಾತ್ಮಿಕ ಜ್ಞಾನವು ಲಭ್ಯವಾಗುವುದು ಎಂದು ಹೇಳಲಾಗುತ್ತದೆ.ಕೃಷ್ಣ ದೇವರನ್ನು ವರ್ಣಿಸಲು ಎರಡು ರೀತಿಯ ಸಾಹಿತ್ಯಗಳು ಇವೆ. ಒಂದು ಸಾಹಿತ್ಯದಲ್ಲಿ ಕೃಷ್ಣ ದೇವರನ್ನು ವೈಭವೀಕರಿಸಲಾಗಿದೆ ಮತ್ತು ಇನ್ನೊಂದು ನೇರವಾಗಿ ಕೃಷ್ಣ ದೇವರು ಮಾತನಾಡುವುದು. ಭಗವದ್ಗೀತೆಯು ಕೃಷ್ಣ ದೇವರು ಮಾತನಾಡಿರುವುದೇ ಆಗಿರುವ ಕಾರಣದಿಂದ ಗೀತೆ ಮತ್ತು ಕೃಷ್ಣ ದೇವರಲ್ಲಿ ಯಾವುದೇ ವ್ಯತ್ಯಾಸವು ಇಲ್ಲ. ಭಗವದ್ಗೀತೆಯು ಕೃಷ್ಣ ದೇವರೊಂದಿಗೆ ಸಂಪರ್ಕ ಸಾಧಿಸಿದಂತೆ ಆಗಿರುವುದು. ಭಗವದ್ಗೀತೆಯನ್ನು ನೀವು ಓದಿಕೊಂಡು ಅದರ ಅರ್ಥವನ್ನು ತಿಳಿದುಕೊಳ್ಳಿ

Most Read: ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ...

ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಿ

ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಿ

ವೈಕುಂಠ ಏಕಾದಶಿಯಂದು ನೀವು ವಿಷ್ಣುವಿನ ಯಾವುದೇ ಅವತಾರವಿರುಂತಹ ದೇವಾಲಯಗಳಿಗೆ ಭೇಟಿ ನೀಡಿ. ನಿಮ್ಮ ಊರು ಅಥವಾ ಪಕ್ಕದ ಊರಿನಲ್ಲಿ ಇಂತಹ ದೇವಾಲಯಗಳು ಇರಬಹುದು. ಹೆಚ್ಚಿನ ವಿಷ್ಣು ಮಂದಿರಗಳಲ್ಲಿ ಪ್ರವೇಶದಲ್ಲಿ ವೈಕುಂಠ ದ್ವಾರ ಎಂದು ಇರುತ್ತದೆ. ವೈಕುಂಠ ಏಕಾದಶಿಯ ಶುಭ ದಿನದಂದು ಈ ದ್ವಾರದ ಮೂಲಕ ಪ್ರವೇಶ ಮಾಡುವವರಿಗೆ ವೈಕುಂಠವು ಪ್ರಾಪ್ತಿಯಾಗುವುದು ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ವಿಷ್ಣವಿನ ಅಥವಾ ವಿಷ್ಣುವಿನ ಅವತಾರವಾಗಿರುವ ಕೃಷ್ಣ, ರಾಮ, ನರಸಿಂಹ ಇತ್ಯಾದಿ ವಿಗ್ರಹಗಳು ಇದ್ದರೆ ಆಗ ನೀವು ಇದನ್ನು ಅಲಂಕಾರ ಮಾಡಿ ಕುಟುಂಬ ಸದಸ್ಯರ ಜತೆಗೆ ಸೇರಿಕೊಂಡು ವೈಕುಂಠ ಏಕಾದಶಿ ದಿನ ಇದನ್ನು ಶ್ರದ್ಧೆಯಿಂದ ಆರಾಧಿಸಬಹುದು.

ಉಪವಾಸ ಕೈಗೊಳ್ಳಿ

ಉಪವಾಸ ಕೈಗೊಳ್ಳಿ

ವೈಕುಂಠ ಏಕಾದಶಿಯ ದಿನದಂದು ನೀವು ಉಪವಾಸ ಕೈಗೊಂಡರೆ ಅದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಉಪವಾಸವು ನಮ್ಮ ದೇಹಕ್ಕೆ ಲಾಭಕಾರಿ ಮಾತ್ರವಲ್ಲದೆ ಇದು ನಮ್ಮ ಮನಸ್ಸನ್ನು ಶಾಂತಗೊಳಿಸಿ, ಹೆಚ್ಚಿನ ಆಧ್ಯಾತ್ಮಿಕ ಲಾಭ ನೀಡುವುದು. ಹಲವಾರು ವಿಧದಿಂದ ಉಪವಾಸ ವ್ರತ ಕೈಗೊಳ್ಳಲಾಗುತ್ತದೆ. ನೀವು ನಿಮಗೆ ಹೊಂದಿಕೆಯಾಗುವಂತಹ ಯಾವುದಾದರೂ ಒಂದು ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು.

Most Read: ವಿಷ್ಣು ಸಂಕಷ್ಟಹರ ಮಂತ್ರ ಪಠಿಸಿ-ಸುಖ ಸಂಪತ್ತನ್ನು ಪಡೆದುಕೊಳ್ಳಿ

ವಿಷ್ಣು ದೇವರಿಗೆ ಏನಾದರೂ ಸೇವೆ ನೀಡಿ

ವಿಷ್ಣು ದೇವರಿಗೆ ಏನಾದರೂ ಸೇವೆ ನೀಡಿ

ವೈಕುಂಠ ಏಕಾದಶಿಯ ಶುಭ ದಿನದಂದು ನೀವು ವಿಷ್ಣುವಿನ ಮಂದಿರದಲ್ಲಿ ಏನಾದರೂ ಸೇವೆ ನೀಡಬಹುದು ಮತ್ತು ಶ್ರೀ ಶ್ರೀನಿವಾಸ ಗೋವಿಂದನ ಆಶೀರ್ವಾದ ಪಡೆಯಬಹುದು.

ಇದರಲ್ಲಿ ಪ್ರಮುಖವಾಗಿರುವಂತಹ ಕೆಲವು ಸೇವೆಗಳು ಈ ರೀತಿಯಾಗಿದೆ

*ವಿಷ್ಣು ಅಲಂಕಾರ ಸೇವೆ.

*ವಿಷ್ಣು ನೈವೇದ್ಯ ಸೇವೆ

*ತುಳಸಿ ಹಾರ ಸೇವೆ

*ವೈಕುಂಠ ದ್ವಾರ ಅರ್ಚನೆ ಸೇವೆ

*ಶ್ರೀಪಾದ ಸೇವೆ

*ಪ್ರಸಾದ ಸೇವೆ

ಶ್ರೀ ಶ್ರೀನಿವಾಸ ಗೋವಿಂದ ದೇವರನ್ನು ವಿಶೇಷವಾಗಿ ಪೂಜಿಸಲು ಲಕ್ಷಾರ್ಚನೆ ಸೇವೆಯು ಇದೆ. ಭಕ್ತರು ಅರ್ಚನೆ ಸಂದರ್ಭದಲ್ಲಿ ಕೃಷ್ಣ ದೇವರ ಹೆಸರನ್ನು ಒಂದು ಲಕ್ಷ ಸಲ ಹೇಳಬೇಕು.

English summary

These things you must do on Vaikuntha Ekadashi

Vaikuntha Ekadashi is one of the major festivals celebrated in the temples of Lord Vishnu, especially in South India. Apart from being an Ekadashi, this day also commemorates the attainment of Vaikuntha, the spiritual kingdom of Lord Vishnu by Nammalwar, a great devotee in the Sri Vaishnava sampradaya. Here are things recommended for you to follow on this auspicious day and seek the blessings of the Lord.
X
Desktop Bottom Promotion