For Quick Alerts
ALLOW NOTIFICATIONS  
For Daily Alerts

ನೆನಪಿಡಿ ಇಂತಹ ಪೂಜಾ ಸಾಮಗ್ರಿಗಳನ್ನು ಅಪ್ಪಿತಪ್ಪಿಯೂ ನೆಲದ ಮೇಲೆ ಇಡಬೇಡಿ!

|

ಹಿಂದೂ ಧರ್ಮದಲ್ಲಿ ಪೂಜೆ ಎನ್ನುವುದು ಅತೀ ಪ್ರಾಮುಖ್ಯವಾದ ಅಂಶವಾಗಿದೆ. ತುಂಬಾ ಶ್ರದ್ಧಾಭಕ್ತಿಯಿಂದ ನಾವು ಪೂಜೆ ಮಾಡುತ್ತೇವೆ. ಇದರಿಂದ ನಾವು ದೇವರ ಆಶೀರ್ವಾದ ಪಡೆಯಲು ಸಾಧ್ಯ. ಹೀಗಾಗಿ ಪ್ರತಿಯೊಂದು ಪೂಜೆ ವೇಳೆ ತುಂಬಾ ಶುದ್ಧವಾಗಿದ್ದು, ಎಲ್ಲಾ ರೀತಿಯಿಂದಲೂ ಸರಿಯಾದ ಕ್ರಮದಲ್ಲಿ ಪೂಜೆ ನೆರವೇರುವಂತೆ ನಾವು ಮಾಡುತ್ತೇವೆ. ಆದರೆ ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳು ನಡೆಯುತ್ತದೆ. ಇದನ್ನು ನಾವು ಕಡೆಗಣಿಸಬೇಕು.

These Puja Items That Should Never Be Kept On The Floor

ಕೆಲವು ತಪ್ಪುಗಳು ತುಂಬಾ ಸಣ್ಣ ಮಟ್ಟದ್ದಾಗಿರುವುದು. ಇನ್ನು ಕೆಲವು ತಪ್ಪುಗಳನ್ನು ನಾವು ಖಂಡಿತವಾಗಿಯೂ ಕಡೆಗಣಿಸಲೇಬೇಕು. ಕೆಲವೊಂದು ಪೂಜಾ ಸಾಮಗ್ರಿಗಳನ್ನು ನಾವು ನೆಲದ ಮೇಲಿಟ್ಟುಕೊಂಡು ಪೂಜೆ ಮಾಡುವುದು ಸರಿಯಾದ ಕ್ರಮವಲ್ಲ. ಇದು ನಾವು ಮಾಡುವಂತ ತಪ್ಪು. ಪೂಜೆ ಮಾಡುವ ವೇಳೆ ನೆಲದ ಮೇಲೆ ಇಡಬಾರದ ಕೆಲವು ಪೂಜಾ ಸಾಮಗ್ರಿಗಳು ಯಾವುದು ಎಂದು ಈ ಲೇಖನ ಮೂಲಕ ತಿಳಿದುಕೊಳ್ಳುವ...

ಸಾಲಿಗ್ರಾಮ

ಸಾಲಿಗ್ರಾಮ

ಸಾಲಿಗ್ರಾಮ ಕಲ್ಲನ್ನು ವಿಷ್ಣುವಿನ ಪ್ರತಿರೂಪವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಹಲವಾರು ಮನೆಗಳಲ್ಲಿ ನಾವು ಕಾಣುತ್ತೇವೆ. ಕಪ್ಪು ಬಣ್ಣದ ಈ ಕಲ್ಲು ನೇಪಾಳದಲ್ಲಿ ಹರಿಯುವ ನದಿ ಗಂದಕಿಯ ತೀರದಲ್ಲಿ ಸಿಗುವುದು. ಇದನ್ನು ನೆಲದ ಮೇಲೆ ಇಡಬಾರದು ಎಂದು ಹೇಳಲಾಗುತ್ತದೆ. ಇದನ್ನು ಶುದ್ಧವಾಗಿರುವ ಬಟ್ಟೆ ಮೇಲೆ ಇಡಬೇಕು. ಶಿವನ ಪ್ರತಿರೂಪವಾಗಿರುವಂತಹ ಶಿವಲಿಂಗವನ್ನು ಕೂಡ ಹೀಗೆ ಮಾಡಬೇಕು.

ಉಪನಯನ(ಜನಿವಾರ)

ಉಪನಯನ(ಜನಿವಾರ)

ಉಪನಯನವು ಜನಿವಾರಕ್ಕೆ ಮತ್ತೊಂದು ಹೆಸರಾಗಿದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಸಹಿತ ಕೆಲವೊಂದು ಪಂಗಡದವರು ಈ ಪವಿತ್ರ ದಾರವನ್ನು ತೊಡುವರು. ಹುಡುಗರು ಒಂದು ವಯಸ್ಸಿಗೆ ಬಂದ ಬಳಿಕ ಕೆಲವೊಂದು ವಿಧಿವಿಧಾನ ಮೂಲಕವಾಗಿ ಅವರಿಗೆ ಈ ಜನಿವಾರ ತೊಡಿಸಲಾಗುತ್ತದೆ. ಇದನ್ನು ಯಾವತ್ತೂ ನೆಲದ ಮೇಲೆ ಇಡಬಾರದು.

Most Read: ಪವಿತ್ರ ದಾರ-ಜನಿವಾರದ ಮಹಿಮೆ ಹಾಗೂ ಪ್ರಾಮುಖ್ಯತೆ

ಶಂಖ

ಶಂಖ

ಹೆಚ್ಚಿನ ಹಿಂದೂಗಳ ಮನೆಯಲ್ಲಿ ಶಂಖವು ಕಾಣಸಿಗುವುದು. ಮುರಿದಿರುವ ಶಂಖವನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಶಂಖವನ್ನು ನೆಲದ ಮೇಲೆ ಕೂಡ ಇಡಬಾರದು.

Most Read: ಮನೆಯಲ್ಲಿ ಶಂಖವಿದ್ದರೆ ಇಂತಹ ವಿಷಯದ ಬಗ್ಗೆ ಆದಷ್ಟು ಎಚ್ಚರವಿರಲಿ!

ದೀಪ

ದೀಪ

ಪೂಜೆ ಮಾಡುವಾಗ ಹೆಚ್ಚಿನವರು ಈ ತಪ್ಪನ್ನು ಮಾಡುವರು. ಯಾಕೆಂದರೆ ದೀಪವನ್ನು ಇಡುವಾಗ ನೇರವಾಗಿ ನೆಲದ ಮೇಲೆ ಇಡಬಾರದು. ಅದರಡಿಗೆ ಏನಾದರೂ ಪ್ಲೇಟ್ ಅಥವಾ ಟ್ರೇ ಇಡಬೇಕು. ಇದರ ಬಳಿಕ ದೇವರಿಗೆ ದೀಪ ಹಚ್ಚಬೇಕು. ಇದನ್ನು ನೆಲದ ಮೇಲೆ ಇಡಬಾರದು.

ಬಂಗಾರ

ಬಂಗಾರ

ದೇವರಿಗೆ ಪೂಜೆ ಮಾಡುವಂತಹ ವೇಳೆ ಕೆಲವು ಜನರು ಪೂಜೆಯ ಅರಿವಾಣದಲ್ಲಿ ಬಂಗಾರದ ಆಭರಣವನ್ನು ಇಡುವರು. ಬಂಗಾರವು ಸಮೃದ್ಧಿಯ ಸಂಕೇತವಾಗಿದೆ ಮತ್ತು ಇದನ್ನು ಲಕ್ಷ್ಮೀ ದೇವಿ ಎಂದು ನಂಬಲಾಗಿದೆ. ಇದರಿಂದ ಬಂಗಾರವನ್ನು ಯಾವಾಗಲೂ ಕೆಂಪು ಬಟ್ಟೆಯಲ್ಲಿ ಕಟ್ಟಿಡಬೇಕು. ಇದನ್ನು ನೆಲದ ಮೇಲೆ ಇಡಬಾರದು.

Most Read: ಕೈಗೆ, ಕಾಲಿಗೆ, ಬಂಗಾರ ಧರಿಸುವ ಮುನ್ನ ತಿಳಿದಿರಲಿ ಈ ಸಂಗತಿಗಳು!

English summary

These Puja Items That Should Never Be Kept On The Floor

While we try to ensure that there are no mistakes made while performing any sacred rituals, performing them in haste due to lack of time might end up committing mistakes. The most common among them is keeping Puja items on the floor while we make preparations for the daily prayers. However, there are some Puja items that should never be kept on the floor.
X
Desktop Bottom Promotion