For Quick Alerts
ALLOW NOTIFICATIONS  
For Daily Alerts

  ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ 'ಎಣ್ಣೆ ದೀಪ', ನೀವು ಮನೆಯಲ್ಲಿ ಬೆಳಗಿ...

  By Divya Pandith
  |

  ತನ್ನ ಕಾಲ ಬಳಿ ಕತ್ತಲಿದ್ದರೂ ಜಗತ್ತನ್ನು ಬೆಳಗುವ ಶಕ್ತಿ ಇರುವುದು ಒಂದು ಪುಟ್ಟ ಹಣತೆಗೆ ಮಾತ್ರ. ಅಂದಕಾರವನ್ನು ಓಡಿಸಿ, ಜ್ಞಾನ ಮತ್ತು ಸಮೃದ್ಧಿಯನ್ನು ನೀಡುವುದು ಬೆಳಕು. ಬಾಳಿನ ಕತ್ತಲೆಯನ್ನು ತೆಗೆದು ಸುಂದರ ಜೀವನವನ್ನು ನೀಡು ಎಂದು ಲಕ್ಷ್ಮಿ ದೇವಿಗೆ ಮೊರೆ ಇಡುವ ಹಬ್ಬ ದೀಪಾವಳಿ. ಹಾಗಾಗಿಯೇ ಮನೆಯ ತುಂಬ ಹಣತೆಯ ಬೆಳಕನ್ನು ಚಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ.

  ನಾಗರೀಕತೆಯ ದಿನದಿಂದ ಆಧುನಿಕ ಪ್ರಪಂಚವನ್ನು ನಾವು ಸೃಷ್ಟಿಸಿರಬಹುದು, ಎಣ್ಣೆ ದೀಪದ ಬದಲಿಗೆ ವಿದ್ಯುತ್ ದೀಪವನ್ನೇ ಬೆಳಗಿ, ಬೆಳಕಿನ ಹೊಳೆ ಹರಿಸಬಹುದು. ಆದರೆ ಎಣ್ಣೆಯಿಂದ ತುಂಬಿಕೊಂಡು ನವಿರಾದ ಭತ್ತಿಯ ಮೂಲಕ ಬೆಳಕನ್ನು ಚೆಲ್ಲುವ ಹಣತೆಯ ಶ್ರೇಷ್ಠತೆಯೇ ಬೇರೆ. ಪುಟ್ಟ ಹಣತೆಯಾದರೂ ಅದರಿಂದಾಗುವ ಪ್ರಯೋಜನಗಳು ಹಲವಾರು. ಅದಕ್ಕಾಗಿಯೇ ದೀಪಾವಳಿ ಎನ್ನುವ ಪವಿತ್ರ ದಿನದಂದು ಹಣತೆಯನ್ನು ಬೆಳಗಬೇಕು ಎನ್ನುವುದು.

  Oil Lamps

  ಅನೇಕರು ಹಬ್ಬದ ದಿನ ಮೊಂಬತ್ತಿ, ಕೃತಕ ವಿದ್ಯುತ್ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೆ ಅವು ಆಧ್ಯಾತ್ಮಿಕವಾಗಿ ಅಷ್ಟು ಪ್ರಶಸ್ತವಾದುದ್ದಲ್ಲ. ಹಬ್ಬದ ದಿನ ಎಣ್ಣೆಯಿಂದ ತುಂಬಿದ ಹಣತೆಯ ದೀಪವನ್ನೇ ಏಕೆ ಬೆಳಗಬೇಕು? ಎನ್ನುವ ಪ್ರಶ್ನೆ ಅನೇಕರಲ್ಲಿ ಗೊಂದಲವನ್ನುಂಟುಮಾಡಿರುತ್ತದೆ. ಅವರಿಗಾಗಿ ಸೂಕ್ತ ವಿವರಣೆಯನ್ನು ಈ ಲೇಖನ ನೀಡುತ್ತದೆ.

  ಯಾವ ದೀಪ ಶ್ರೇಷ್ಠ?

  ಎಲೆಕ್ಟ್ರಿಕ್ ದೀಪಗಳು ಜನಪ್ರಿಯಗೊಳ್ಳುವ ಮೊದಲು ಎಣ್ಣೆ ದೀಪಗಳೇ ಪ್ರಪಂಚದಾದ್ಯಂತ ಬೆಳಗಲಾಗುತ್ತಿತ್ತು. ಅಲ್ಲದೆ ವಿವಿಧ ಸಂಪ್ರದಾಯ ಹಾಗೂ ಸಂಸ್ಕøತಿಯ ದ್ಯೋತಕವಾಗಿತ್ತು. 4500 ರಿಂದ 3300 ಬಿಸಿ ವರೆಗೂ ಎಣ್ಣೆಯ ದೀಪದ ಮಹತ್ವ ಹಾಗೇ ಉಳಿದುಕೊಂಡು ಬಂದಿತ್ತು. ನಂತರದ ದಿನಗಳಲ್ಲಿ ಎಣ್ಣೆಯ ದೀಪದ ಬದಲು ಬೇರೆ ಬೇರೆ ದೀಪಗಳು ಬೆಳಕಿಗೆ ಬಂದವು.

  Oil Lamps

  ಅದೆಷ್ಟೇ ವಿವಿಧ ಬಗೆಯ ಕೃತಕ ದೀಪಗಳು ಚಾಲ್ತಿಯಲ್ಲಿದ್ದರೂ, ವಿನಮ್ರತೆಯಿಂದ ಬೆಳಗುವ ಎಣ್ಣೆ ದೀಪ ಸಾಕಷ್ಟು ಒಳ್ಳೆಯದನ್ನು ಮಾಡುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಿ, ಸದಾ ಸಂತಸದ ವಾತಾವರಣವನ್ನು ಸೃಷ್ಟಿಸುವ ಶಕ್ತಿ ಇರುವುದು ಎಣ್ಣೆ ದೀಪದಲ್ಲಿ.

  ದೀಪದ ಮಹತ್ವ

  ವಸ್ತುಗಳನ್ನು ಗುರುತಿಸುವುದು, ಅವುಗಳ ಆಕಾರ, ಬಣ್ಣ, ವೈವಿಧ್ಯತೆ ಹಾಗೂ ಶ್ರೇಷ್ಠತೆಯನ್ನು ಅಳೆಯ ಬೇಕೆಂದರೆ ನಮಗೆ ಮೊದಲು ಬೆಳಕು ಬೇಕು. ನಮ್ಮ ದೃಷ್ಟಿ ಎಷ್ಟೇ ಸ್ಪಷ್ಟವಾಗಿದ್ದರೂ ಬೆಳಕಿಲ್ಲದಿದ್ದರೆ ಏನನ್ನೂ ನಾವು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ಬೆಳಕಿಲ್ಲದ ಪ್ರಪಂಚ ನಮಗೆ ಕತ್ತಲು ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಧಾರ್ಮಿಕ ಇತಿಹಾಸವನ್ನು ಹೊಂದಿರುವ ದೀಪಾವಳಿ ಹಬ್ಬವೂ ಸಹ ಅಂದಕಾರದಿಂದ ಬೆಳಕಿನೆಡೆಗೆ ಬರುವ ಉದ್ದೇಶವನ್ನು ಸೂಚಿಸುವ ಹಬ್ಬವಾಗಿದೆ.

  ಅಂದಿನಿಂದ ಇಂದಿನ ವರೆಗೆ

  ನೂರುವರ್ಷಗಳ ಹಿಂದೆ ಮನೆಯನ್ನು ಬೆಳಗುವ ಏಕೈಕ ಶಕ್ತಿ ಇರುವುದು ಹಣತೆಗೆ ಮಾತ್ರ ಎನ್ನಲಾಗುತ್ತಿತ್ತು. ಆದರೆ ಇಂದು ವಿದ್ಯುತ್ ಬೆಳಕು ಸೇರಿದಂತೆ ಬಗೆ ಬಗೆಯ ದೀಪಗಳು ಬಂದಿವೆ. ಆದಿನಗಳಲ್ಲಿ ಸಾವಯವ ಆಹಾರಗಳು, ಪುಟ್ಟ ಮನೆ, ಮನೆಗೆ ಚಿಕ್ಕದಾದ ಕಿಟಕಿ, ಪ್ರಾಣಿ, ಪಕ್ಷಿ, ಸರಿಸೃಪಗಳ ಭಯ ಕಾಡುತಿತ್ತು. ಮನೆಯ ಒಳಗೆ ಬೆಳಗುವ ಒಂದು ಪುಟ್ಟ ಹಣತೆಯೇ ಅಲ್ಲಿರುವ ವಸ್ತು ಹಾಗೂ ವಿಶಾಲತೆಯನ್ನು ತೋರಿಸಿಕೊಡುತ್ತಿತ್ತು. ಜೊತೆಗೆ ಧಾರ್ಮಿಕ ವಿಶಿಷ್ಟತೆಯನ್ನು ಬೆಳಗುತ್ತಿತ್ತು. ಆದರೆ ಇಂದು ಹಾಗಿಲ್ಲ. ಕಲುಷಿತ ಆಹಾರ, ದೊಡ್ಡ ದೊಡ್ಡ ಮನೆಗಳು, ವಿವಿಧ ವಿನ್ಯಾಸದ ಕಿಟಕಿ, ಬಾಗಿಲುಗಳು. ಇವು ಮನೆಯ ಒಳಗೆ ಬೆಳಕು ಸುಲಭವಾಗಿ ಹೋಗಲು ಆಸ್ಪದವನ್ನು ಸೃಷ್ಟಿಸುತ್ತದೆ. ಆದರೆ ಯಾರ ಮನಸ್ಸಿಗೂ ನೆಮ್ಮದಿ ಎನ್ನುವುದಿರುವುದಿಲ್ಲ.

  Oil Lamps

  ಬಾಂಧವ್ಯ ಹೆಚ್ಚುವುದು 

  ಮನೆಗೆ ಒಂದೇ ಹಣತೆ ಅಥವಾ ದೀಪವಿದ್ದಾಗ ಮನೆ ಮಂದಿಯೆಲ್ಲಾ ಹಣತೆಯ ಸುತ್ತ ಕುಳಿತುಕೊಳ್ಳುತ್ತಾರೆ. ಅದೇ ಬಗೆ ಬಗೆಯ ದೀಪಗಳು ಹಲವಾರು ಇದ್ದಾಗ, ವ್ಯಕ್ತಿ ಅನುಕೂಲಕ್ಕೆ ತಕ್ಕಂತೆ ಸ್ವತಂತ್ರವಾಗಿ ತನ್ನ ಪಾಡಿಗೆ ತಾನು ಓಡಾಡಿಕೊಂಡು ಇರುತ್ತಾನೆ. ಒಂದೇ ದೀಪದ ಬಳಿ ಎಲ್ಲರೂ ಕುಳಿತಾಗ ಹೆಚ್ಚು ಭಾಂದವ್ಯ ಹಾಗೂ ಸಹಕಾರ ಬೆಳೆಯುತ್ತದೆ. ಉದಾ: ಕ್ಯಾಂಫ್‍ಫೈರ್ ಮಾಡಿಕೊಂಡಾಗ ಅದರ ಸುತ್ತಲು ಎಲ್ಲರೂ ಕುಳಿತುಕೊಳ್ಳುತ್ತಾರೆ. ಒಬ್ಬರು ಹೇಳುವ ವಿಚಾರವನ್ನು ಎಲ್ಲರೂ ಆಲಿಸುತ್ತಾರೆ ಜೊತೆಗೆ ಸ್ಪಂದಿಸುತ್ತಾರೆ. ಅಷ್ಟೇ ಅಲ್ಲ ಅದು ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರೊಂದಿಗೆ ಬೆರೆತ ಆನಂದದ ಅನುಭವ ಆಗುತ್ತದೆ. ಹಾಗಾಗಿ ಹಣತೆಯ ದೀಪವೇ ಸಾಂಪ್ರದಾಯಿಕವಾಗಿ ಹೆಚ್ಚು ಶ್ರೇಷ್ಠ. ಅದರ ಬಳಿ ಕುಳಿತಾಗ ಬಾಂಧವ್ಯ ಹೆಚ್ಚುವುದು ಎನ್ನಲಾಗುತ್ತದೆ.

  ಮೊದಲು ದೀಪ ಬೆಳಗಿ

  ಯಾವುದೇ ಕೆಲಸವನ್ನು ಮಾಡುವ ಮೊದಲು ನಾವು ದೇವರಿಗೆ ಎಣ್ಣೆಯ ದೀಪ ಅಥವಾ ತುಪ್ಪದ ದೀಪವನ್ನು ಬೆಳಗಬೇಕು. ಆಗ ಸಕಾರಾತ್ಮಕ ಶಕ್ತಿಯು ಸುತ್ತಲೂ ಆವೃತವಾಗುತ್ತದೆ. ನಾವು ಅಂದುಕೊಂಡ ಕೆಲಸವು ಸುಗಮವಾಗಿ ನೆರವೇರುತ್ತದೆ. ಆದಷ್ಟು ಸಸ್ಯಹಾರಿ ಎಣ್ಣೆಯನ್ನೇ ಬೆಳಗಬೇಕು. ಅದು ಸಕಾರಾರತ್ಮಕ ಶಕ್ತಿಯನ್ನು ಹೊರಸೂಸುತ್ತದೆ.

  ಬೆಂಕಿಯೇ ಮೂಲ

  ಅನೇಕ ವಿಧಗಳಲ್ಲಿ ಬೆಂಕಿಯೇ ಜೀವನದ ಮೂಲ. ನಮ್ಮ ಸುತ್ತಲ ಪರಿಸರವನ್ನು ಗೋಚರಿಸುವಂತೆ ಮಾಡುವ ಸೂರ್ಯನ ಬೆಳಕು/ಬೆಂಕಿಯೇ ನಮ್ಮ ಜೀವನಾದಾರ. ನಾವು ತಿನ್ನುವ ಊಟವನ್ನು ಬೇಯಿಸಲು ನಮಗೆ ಬೆಂಕಿಯೇ ಆಧಾರ. ಸಂಚಾರ ಸುಗಮವಾಗಲು ವಾಹದಲ್ಲಿ ಬೆಂಕಿಯ ಶಕ್ತಿ ಉದಯಿಸಬೇಕು. ರೋಗ ರುಜನೆಯಿಂದ ದೂರವಿರಲು ಸೂರ್ಯನ ಶಕ್ತಿ ಬೇಕು. ನಮಗೆ ಬೇಕಾಗುವ ಚಿನ್ನ, ಪಾತ್ರೆ ಹಾಗೂ ಇನ್ನಿತರ ವಸ್ತುಗಳ ತಯಾರಿಗೂ ಬೆಂಕಿಯೇ ಮೂಲ. ಹಾಗಾಗಿ ದಿನದ ಆರಂಭವನ್ನು ಪ್ರಾರಂಭಿಸುವಾಗ ದೇವರ ಬಳಿ ಹಣತೆಯನ್ನು ಬೆಳಗಿ. ಸಕಾರಾತ್ಮಕ ಶಕ್ತಿಯು ನಿಮ್ಮನ್ನು ಕಾಯುತ್ತದೆ.

  Oil Lamps

  ಹಬ್ಬಕ್ಕೆ ದೀಪ ಹಚ್ಚಿ

  ದೀಪಗಳ ಹಬ್ಬ ಎಂದೇ ಕರೆಯುವ ದೀಪಾವಳಿ ಹಬ್ಬಕ್ಕೆ ಎಣ್ಣೆ ದೀಪವನ್ನು ಬೆಳಗುವ ಮೂಲಕ ಧಾರ್ಮಿಕ ಶಕ್ತಿಯನ್ನು ಹೆಚ್ಚಿಸಿ ಹಾಗೂ ಮಕ್ಕಳನ್ನು ಬೆಂಕಿ ಮತ್ತು ಪಟಾಕಿಗಳಿಂದ ದೂರವಿರುವಂತೆ ನೋಡಿಕೊಂಡು, ಸುರಕ್ಷಿತವಾಗಿರಿ.

  English summary

  The Significance of Lighting Oil Lamps

  Oil lamps were a part of various traditions and cultures around the world, until electric lights became popular. The earliest known oil lamp can be dated back to the Chalcolithic Age, about 4500 to 3300 BC. Today, their use is limited to only a few homes, more often only for visual appeal.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more