For Quick Alerts
ALLOW NOTIFICATIONS  
For Daily Alerts

ಸಾವನ್ನು ನಿರ್ಧರಿಸುವ ದೇವರು: ಯಮರಾಜ

|

ಸಾವು ಎನ್ನುವುದು ಒಂದು ಜೀವಿಯ ಅಂತ್ಯ. ಸಾವಿನ ನಂತರ ಒಂದು ಜೀವ ಏನಾಗುವುದು? ಅದರ ಆತ್ಮ ಎಲ್ಲಿಗೆ ಹೋಗಿ ಸೇರುತ್ತದೆ? ಎನ್ನುವ ವಿಷಯದ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಕೆಲವು ಪರುರಾಣ ಹಾಗೂ ಧಾರ್ಮಿಕ ಕಥೆಗಳ ಪ್ರಕಾರ ಹೆಚ್ಚು ಪಾಪ ಮಾಡಿದ್ದರೆ ನರಕಕ್ಕೆ ಹೋಗುತ್ತಾರೆ, ಅದೇ ಪುಣ್ಯ ಹೆಚ್ಚಾಗಿದ್ದರೆ ಅವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹೇಳಲಾಗುವುದು. ಅದೇ ಸ್ವರ್ಗ ಹಾಗೂ ಪುಣ್ಯವು ಎಲ್ಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ನಮ್ಮ ಸಾವನ್ನು ನಿರ್ಧರಿಸುವವನು ಯಮರಾಜ. ಚಿತ್ರಗುಪ್ತ ಎನ್ನುವ ಅವನ ಆಸ್ತಾನದಲ್ಲಿ ಇರುವವನು ಪ್ರತಿಯೊಬ್ಬರ ಪಾಪ ಪುಣ್ಯಗಳನ್ನು ಲೆಕ್ಕ ಮಾಡುತ್ತಿರುತ್ತಾನೆ. ಆ ಲೆಕ್ಕಗಳ ಆಧಾರದ ಮೇಲೆಯೇ ಯಮನು ನಮ್ಮ ಜೀವದ ಅಂತ್ಯ ಅಥವಾ ಸಾವನ್ನು ನಿರ್ಧರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಹಾಗಾಗಿ ಸಾವು ಎನ್ನುವುದು ಪ್ರತಿಯೊಬ್ಬರಿಗೂ ಭಯವನ್ನು ಹುಟ್ಟಿಸುವ ಸಂಗತಿ. ಅಂತೆಯೇ ಯಾರನ್ನಾದರೂ ಸಾಯಿಸುವುದು ಅಷ್ಟೇ ಪಾಪದ ಸಂಗತಿ. ಒಂದು ಜೀವವನ್ನು ಅಮಾನುಷವಾಗಿ ಸಾಯಿಸುವ ಕೆಲಸದಷ್ಟು ಪಾಪದ ಸಂಗತಿ ಬೇರೆ ಯಾವುದೂ ಇಲ್ಲ. ಒಂದು ಜೀವಕ್ಕೆ ಸಾಧ್ಯವಾದರ ಆಸರೆ ಹಾಗೂ ಸಂತೋಷವನ್ನು ಕಲ್ಪಿಸಿ ಕೊಡಬಹುದು. ಅದೇ ಒಂದು ಜೀವಿಯನ್ನು ಸಾಯಿಸುವುದು, ಅದಕ್ಕೆ ನೋವುಂಟು ಮಾಡುವುದು ಅನಾಚಾರ ಹಾಗೂ ಪಾಪ ಎನಿಸಿಕೊಳ್ಳುವುದು. ಪ್ರಕೃತಿಯಲ್ಲಿ ಒಂದು ಜೀವಿಯನ್ನು ತಿಂದು ಜೀವಿಸುವ ಪ್ರಾಣಿಗಳು ಇವೆ. ಶಾಸ್ತ್ರ ಹಾಗೂ ಧರ್ಮದ ಪ್ರಕಾರ ಒಂದು ಜೀವಿಯನ್ನು ತಿಂದು ಬದುಕುವ ಜೀವ ಸಂಕುಲದಲ್ಲಿ ಜನಿಸಿದರೆ ಪಾಪವಿಲ್ಲ. ಅಂತೆಯೇ ಒಂದು ಜೀವಿಯನ್ನು ಕೊಂದರೆ ಅದನ್ನು ತಿನ್ನುವುದರ ಮೂಲಕ ಪಾಪವನ್ನು ಕಳೆದುಕೊಳ್ಳಬೇಕು ಎನ್ನಲಾಗುವುದು. ಅದಕ್ಕಾಗಿಯೇ "ಕೊಂದ ಪಾಪ ತಿಂದು ಪರಿಹಾರ ಮಾಡಬೇಕು" ಎನ್ನುವ ಮಾತಿದೆ.

ಒಂದು ಜೀವಿಯ ಪಾಪ ಪುಣ್ಯಗಳನ್ನು ನಿರ್ಧರಿಸುವ ದೇವರು ಯಮರಾಜ. ನಮ್ಮ ಪಾಪ-ಪುಣ್ಯಗಳಿಗೆ ಅನುಗುಣವಾಗಿಯೇ ಸಾವು ಎದುರಾಗುವುದು. ಹಾಗಾಗಿ ನಮ್ಮ ಸಾವನ್ನು ನಿರ್ಧರಿಸುವ ದೇವರು ಎಂದರೆ ಒಮ್ಮೆ ಮೈಯೆಲ್ಲಾ ನಡುಕವನ್ನು ಹುಟ್ಟಿಸುವುದು. ನಮ್ಮ ಸಾವನ್ನು ಕಲ್ಪಿಸಿಕೊಂಡರೂ ಸಹ ಒಂದಷ್ಟು ಹತಾಷೆ ಹಾಗೂ ಬೇಸರದ ಭಾವನೆ ಮೂಡುವುದು. ನಮ್ಮನ್ನು ಕಾಪಾಡುವ, ತಪ್ಪುಗಳನ್ನು ಕ್ಷಮಿಸುವ ದೇವರ ಬಗ್ಗೆ ನಾವು ಸಾಕಷ್ಟು ಭಕ್ತಿಯನ್ನು ಹೊಂದಿದ್ದೇವೆ. ಅಂತೆಯೇ ಆರಾಧನೆ, ಜಪ-ತಪಗಳನ್ನು ಮಾಡುತ್ತೇವೆ. ಆ ದೇವರ ಹೆಸರಿನಲ್ಲಿ ಹಬ್ಬ-ಉತ್ಸವ ಹಾಗೂ ವ್ರತಗಳನ್ನು ಕೈಗೊಳ್ಳುತ್ತೇವೆ. ಅದೇ ನಮ್ಮ ಸಾವನ್ನು ನಿರ್ಧರಿಸುವ ದೇವರ ಬಗ್ಗೆ ಬೇಕಾದ ಮಾಹಿತಿ ಅಥವಾ ಪೂಜೆಯ ವಿಧಿ-ವಿಧಾನವನ್ನು ನಾವು ಅರಿತಿಲ್ಲ. ಹಾಗಾದರೆ ನಮ್ಮ ಸಾವನ್ನು ನಿರ್ಧರಿಸುವ ದೇವರು ಯಾರು? ಅವನ ಕಾರ್ಯವೇನು? ಅವನಿಗೆ ಏಕೆ ನಾವು ನ್ಮಮ ಭಕ್ತಿಯನ್ನು ವ್ಯಕ್ತ ಪಡಿಸುವುದಿಲ್ಲ? ಎನ್ನುವಂತಹ ಅನೇಕ ಸಂಗತಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಲೇಖನದ ಮುಂದಿನ ಭಾಗ ಒಳಗೊಂಡಿದೆ.

Yamraj

ಸಾವನ್ನು ನಿರ್ಧರಿಸುವ ದೇವರು

ನಮ್ಮ ಸಾವನ್ನು ನಿರ್ಧರಿಸುವ ದೇವರು ಎಂದರೆ ಯಮರಾಜ. ಯಮರಾಜನು ಶನಿ ದೇವರ ಸಹೋದರ. ಇವರು ಸೂರ್ಯ ದೇವನ ಮಕ್ಕಳು. ಯಮರಾಜನನ್ನು ಧರ್ಮದ ಕರ್ತನು. ಅಂತೆಯೇ ಜೀವ ಸಂಕುಲದ ಸಾವನ್ನು ನಿರ್ಧರಿಸುವವನು ಎಂದು ಸಹ ಹೇಳಲಾಗುವುದು. ಯಮರಾಜನು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂತ್ಯವನ್ನು ನಿರ್ಧರಿಸುತ್ತಾನೆ. ನಂತರ ಅವರೇನಾಗುವರು ಎನ್ನುವುದನ್ನು ಅವನೇ ನಿರ್ಣಯಿಸುವನು. ಯಮನು ಮೊದಲ ಮಾನವ. ಹಾಗಾಗಿಯೇ ಅವನೇ ಸಾವನ್ನು ನಿರ್ಣಯಿಸುವ ದೇವ ಅಥವಾ ನ್ಯಾಯಾಧೀಶ ಎಂದು ಕರೆಯಲಾಗುವುದು.

Most Read: ಸಾವಿನ ಬಗ್ಗೆ ಯಮ ಧರ್ಮ ತಿಳಿಸಿದ ರಹಸ್ಯ ಯಾವುದು?

ಯಮರಾಜನಿಗೆ ಇರುವ ವಿಭಿನ್ನ ಹೆಸರುಗಳು

ಯಮರಾಜನಿಗೆ ಅನೇಕ ಹೆಸರಿನಿಂದ ಕರೆಯಲಾಗುವುದು. ಯಮರಾಜ, ಧರ್ಮರಾಜ(ನ್ಯಾಯಾಧೀಶನಾಗಿ ನ್ಯಾಯವನ್ನು ನಿರ್ಣಯಿಸುವವನು ಎಂದರ್ಥ), ಯಮ, ಧರ್ಮ, ಪಿತೃಪತಿ, ಮೃತು, ವಿವಾಸ್ವತ ಸೇರಿದಂತೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವುದು ಎಂದು ಹೇಳಲಾಗುವುದು.

ನಂಬಿಕೆಗಳು

ವೇದದ ಅನುಸಾರ ಅಥವಾ ಪ್ರಕಾರ ಯಮರಾಜನು ಮೊದಲ ಮಾನವನಾಗಿ ಹುಟ್ಟಿ, ಮೊದಲು ಮರಣವನ್ನು ಪಡೆದನು. ನಂತರ ಸ್ವರ್ಗಕ್ಕೆ ಹೋದ ಮೊದಲ ವ್ಯಕ್ತಿ. ಅವನೇ ಅಲ್ಲಿಯ ಅರಸನಾದನು ಎನ್ನಲಾಗುತ್ತದೆ. ಅಂತೆಯೇ ಯಮರಾಜನೇ ನರಕದಲ್ಲಿಯೂ ಆಡಳಿತ ನಡೆಸುತ್ತಾನೆ ಎನ್ನುವ ನಂಬಿಕೆಯಿದೆ. ಅದನ್ನು ಕೆಲವರು ಸುಳ್ಳು ಅಥವಾ ನಕಲಿ ಎಂದು ಸಹ ಹೇಳುತ್ತಾರೆ. ಏಕೆಂದರೆ ವೈದಿಕ ಕಾಲದಲ್ಲಿ ನರಕದ ಪರಿಕಲ್ಪನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಸಂಪೂರ್ಣವಾದ ಅಭಿವೃದ್ಧಿಯಾಗಿರಲಿಲ್ಲ ಎನ್ನಲಾಗುವುದು. ಯಮನು ಸಾವನ್ನು ನಿರ್ಧರಿಸುವ ದೇವನು. ಪುರಾಣದಲ್ಲಿ ಉಲ್ಲೇಖಿಸಿರುವುದರ ಪ್ರಕಾರ ಸ್ವರ್ಗದ ಸಂಗತಿಯ ಜೊತೆಗೆ ನರಕದ ಉಸ್ತುವಾರಿಯನ್ನು ಹೊಂದಿದ್ದಾನೆ ಎನ್ನಲಾಗುವುದು. ಯಮನು ಪಾತಾಳ ಅಥವಾ ಕೆಳ ಜಗತ್ತಿನ ರಾಜ ಪ್ರತಿನಿಧಿಯಾಗಿದ್ದಾನೆ. ಯಮರಾಜನ ನಗರವು ನರಮಾಗರ, ಯಮಲೋಕ, ಯಮಪುರ ಮತ್ತು ನಿರ್ಗಮನವಾದ ಆತ್ಮಗಳ ಸ್ಥಳ ಎನ್ನುವ ಹೆಸರಿನಿಂದ ಕರೆಯಲಾಗುವುದು.

ಯಮರಾಜನ ಗೋಚರತೆ ಅಥವಾ ರೂಪ

ಯಮರಾಜನು ಕೆಂಪು ನಿಲುವಂಗಿಯನ್ನು ಧರಿಸುತ್ತಾನೆ. ಇವನು ಕೊಳಲನ್ನು ನುಡಿಸುತ್ತಾನೆ. ಯಮನು ಕೋಣನ ಮೇಲೆ ಕುಳಿತು ಬರುವನು. ಅವನ ಕೂದಲು ಬೆಂಕಿಯಂತೆ ಮೇಲ್ಮುಖವಾಗಿ ಹಾರಾಡುತ್ತಿರುವುದು ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ. ಯಮರಾಜನ ಜೊತೆ ಎರಡು ನಾಯಿಗಳು ಇರುತ್ತವೆ. ನಾಲ್ಕು ದಿಕ್ಕುಗಳಲ್ಲಿ ಇರುವ ಆತ್ಮಗಳನ್ನು ಹುಡುಕಲು ನಾಲ್ಕು ಕಣ್ಣುಗಳನ್ನು ಹೊಂದಿದ್ದಾನೆ. ನರಕದ ಕಡೆಗೆ ಕೊಂಡೊಯ್ಯುವ ಆತ್ಮಗಳನ್ನು ಎಲೆಯಲು ನಾಯಿಗಳು ಸಹಾಯ ಮಾಡುತ್ತವೆ ಎನ್ನಲಾಗುವುದು.

Most Read: ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ ಅಚ್ಚರಿಯ ಚಿಹ್ನೆಗಳು!

ಪುರಾಣ ಶಾಸ್ತ್ರ

ಯಮನು ಶಿವ ಮತ್ತು ವಿಷ್ಣು ದೇವರ ಆಣತಿಯನ್ನು ಅನುಸರಿಸುವನು:

ಒಂದು ಪುರಾಣದ ಕಥೆಯ ಅನುಸಾರ, ಒಂದು ಕಾಲದಲ್ಲಿ ಯಮರಾಜನು ಒಬ್ಬ ಮನುಷ್ಯನ ಆತ್ಮವನ್ನು ತೆಗೆದುಕೊಳ್ಳಲು ಹೋಗಿದ್ದನು. ಆ ಸಂದರ್ಭದಲ್ಲಿ ಆ ಮನುಷ್ಯ ಯಮನನ್ನು ತಿರಸ್ಕರಿಸಿ ಹತ್ತಿರದಲ್ಲಿ ಇರುವ ಶಿವನ ದೇವಸ್ಥಾನಕ್ಕೆ ಓಡಿದನು. ನಂತರ ಶಿವ ಲಿಂಗವನ್ನು ತಬ್ಬಿಕೊಂಡು ಶಿವನಲ್ಲಿ ಕಾಪಾಡಲು ಕೇಳಿಕೊಂಡನು. ಶಿವನು ಪ್ರತ್ಯಕ್ಷನಾಗಿ ಯಮನಲ್ಲಿ ಅವನನ್ನು ಬಿಟ್ಟು ಬಿಡು ಎಂದು ಹೇಳಿದನು. ಆಗ ಯಮನು ಶಿವನ ಮಾತನ್ನು ತಿರಸ್ಕರಿಸಿ ಮನುಷ್ಯನ ಆತ್ಮ ಪಡೆಯಲು ಮುಂದಾದನು. ಕೋಪಗೊಂಡ ಶಿವನು ಯಮನನ್ನು ಕೊಂದನು. ಅದಕ್ಕಾಗಿಯೇ ಮಹಾಮೃತ್ಯುಂಜಯ ಎಮದು ಕರೆಯಲಾಯಿತು. ನಂತರ ಯಮರಾಜನು ಕ್ಷಮೆ ಯಾಚಿಸಿರುವುದು ಹಾಗೂ ದೇವತೆಗಳ ಕೋರಿಕೆಯ ಮೇರೆಗೆ ಶಿವನು ಯಮನಿಗೆ ಇನ್ನೊಂದು ಜೀವವನ್ನು ಕೊಟ್ಟನು ಎನ್ನಲಾಗುವುದು.

ಇನ್ನೊಂದು ಕಥೆಯ ಅನುಸಾರ... ಯಮರಾಜನು ವಿಷ್ಣುವಿನ ಹಿಡಿತವನ್ನು ಹೊಂದಿರುತ್ತಾನೆ. ಅಜಮಿಲ ಎನ್ನುವ ಬ್ರಾಹ್ಮಣನು ಹರಿಯ ಸ್ಮರಣೆಯಿಂದ ಯಮನಿಂದ ತಪ್ಪಿಸಿಕೊಂಡನು ಎನ್ನುವ ಕಥೆಯಿದೆ. ಹಾಗಾಗಿ ಮರಣದ ಸಮಯದಲ್ಲಿ ಯಾರು ವಿಷ್ಣುವಿನ ಸ್ಮರಣೆಯನ್ನು ಮಾಡುತ್ತಿರುತ್ತಾರೋ ಅಂತಹವರು ಯಮನ ನಿಯಂತ್ರಣವನ್ನು ಹೊಂದಿರುವುದಿಲ್ಲ. ವಿಷ್ಣುವಿನ ಸ್ಮರಣೆಯ ಸಂದರ್ಭದಲ್ಲಿ ಯಮನು ಸಾವನ್ನು ನೀಡುವುದಿಲ್ಲ ಎನ್ನಲಾಗುವುದು.

ಯಮನ ಸಹಾಯಕರು

ಯಮನು ಚಿತ್ರಗುಪ್ತ ಎನ್ನುವ ಲೆಕ್ಕಿಗ ಅಥವಾ ಗುಮಾಸ್ತನನ್ನು ಹೊಂದಿದ್ದಾನೆ. ಅವನು ಪ್ರತಿಯೊಬ್ಬ ವ್ಯಕ್ತಿಯ ಕೆಟ್ಟ ಕೆಲಸ ಹಾಗೂ ಒಳ್ಳೆಯ ಕೆಲಸವನ್ನು ದಾಖಲಿಸಿಕೊಳ್ಳುತ್ತಾನೆ. ಒಬ್ಬ ವ್ಯಕ್ತಿ ಮರಣವನ್ನು ಹೊಂದಿದ ನಂತರ ಚಿತ್ರಗುಪ್ತನು ಅವನ ಜೀವಿತಾವಧಿಯಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಯಮನಿಗೆ ವರದಿಯನ್ನು ಒಪ್ಪಿಸುತ್ತಾನೆ. ಆಗ ಅವನು ಕೆಟ್ಟ ಕೆಲಸವನ್ನು ಅಧಿಕವಾಗಿ ಮಾಡಿದ್ದರೆ ನರಕಕ್ಕೆ ಕೊಂಡೊಯ್ಯುತ್ತಾರೆ. ನಂತರ ಅಲ್ಲಿ ಕೆಲವು ಶಿಕ್ಷೆಯನ್ನು ನೀಡಲಾಗುವುದು. ಅದೇ ಆತ್ಮ ಅಧಿಕ ಪ್ರಮಾಣದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದರೆ ಅವರನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ. ಅಲ್ಲಿ ಅವರಿಗೆ ನೆಮ್ಮದಿ ದೊರೆಯುವುದು.

Most Read: ಯಮಸ್ವರೂಪಿ ಸಾವಿಗೆ 10 ಕಾರಣಗಳು ಮತ್ತು ಪರಿಹಾರಗಳು

ಯಮನು ಯಮದೂತರು ಎನ್ನುವ ಸೇವಾಧಿಕಾರಿಗಳನ್ನು ಹೊಂದಿದ್ದಾರೆ. ದೂತರು ಎಂದರೆ ಸೇವಾಧಿಕಾರಿಗಳು. ಯಮ ಎಂದರೆ ಯಮ ದೇವ. ಒಟ್ಟಾಗಿ ಯಮದೂರತರು ಎಂದು ಕರೆಯಲಾಗುವುದು. ಕೆಲವು ಆಧಾರಗಳ ಪ್ರಕಾರ ಯಮಿ ಎನ್ನುವ ಹೆಂಡತಿಯಿದ್ದಾಳೆ ಎನ್ನಲಾಗುವುದು. ಅಂತೆಯೇ ಕೆಲವು ಪುರಾವೆಗಳು ಯಮಿ ಎನ್ನುವ ಸಹೋದರಿಯನ್ನು ಹೊಂದಿದ್ದಾನೆ ಎನ್ನಲಾಗುವುದು. ಅಧಿಕ ಜನರು ಯಮಿಯನ್ನು ಯಮನ ಹೆಂಡತಿ ಎಂದೇ ಪರಿಗಣಿಸುತ್ತಾರೆ.

ಯಮನಿಗೆ ಶ್ರೇಷ್ಠ ದಿನ:

ಅಶ್ವಿನಿ ತಿಂಗಳ ಹದಿನಾಲ್ಕನೆಯ ದಿನವನ್ನು ಯಮನಿಗೆ ಶ್ರೇಷ್ಠವಾದ ದಿನ ಎನ್ನಲಾಗುವುದು. ಹದಿನಾಲ್ಕನೇ ದಿನವನ್ನು ಬೆಂಕಿಗಳನ್ನು ಸಿದ್ಧಪಡಿಸುವುದು, ಬೆಂಕಿಗಳ ಸಿದ್ಧತೆಗೆ ಶ್ರೇಷ್ಠ ದಿನ ಎನ್ನಲಾಗುವುದು. ಹದಿನಾಲ್ಕನೆಯ ದಿನವನ್ನು ಯಮನ ಮಹಲನ್ನು ಬೆಳಗುವುದು ಹಾಗೂ ಆತ್ಮವನ್ನು ಯಮನ ಲೋಕಕ್ಕೆ ಕಳುಹಿಸುವುದು ಎನ್ನುವ ಅರ್ಥ ಹಾಗೂ ಸಿದ್ಧಾಂತವನ್ನು ಸಾರುವುದು. ಹದಿನಾಲ್ಕನೆಯ ದಿನ ಸಿದ್ಧಪಡಿಸುವ ಬೆಂಕಿ ಯಮನ ಮಹಲನ್ನು ಬೆಳಗಿಸುವುದರ ಮೂಲಕ ಪವಿತ್ರಗೊಳಿಸುತ್ತದೆ ಎನ್ನುವ ಪ್ರತೀತಿಯೂ ಇದೆ.

English summary

The of Death- Yamraj

Lord Yamaraj is the the brother of Saturn (Sri Sanaiscarya). Yamaraj is not only the Lord of Dharma, but also the Lord of Death. He is often referred to in Sastra as the officer you will meet after dieing, who will judge your life and grant your next placement. Yamaraj "Yama" is considered the first human, the first to die, and therefore the lord and judge of the dead.
X
Desktop Bottom Promotion