For Quick Alerts
ALLOW NOTIFICATIONS  
For Daily Alerts

ನೋಡಿ ಇವರೇ, ಭೂಮಿಯ ಮೇಲಿನ ಅದೃಷ್ಟವಂತ ವ್ಯಕ್ತಿಗಳು!

By Jaya Subramanya
|

ಭಾರತವನ್ನು ವೇದಗಳ ನಾಡು ಎಂದು ಕರೆಯಲಾಗಿದೆ. ಹೆಚ್ಚಿನ ಜ್ಞಾನಿಗಳು, ಯೋಗಿಗಳು ಮತ್ತು ಆದರ್ಶ ಪುರುಷರನ್ನು ಭಾರತವು ಕಂಡಿದೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಚಾಣಾಕ್ಯ, ಪರಮಹಂಸರು ಹೀಗೆ ಈ ಪಟ್ಟಿ ಉದ್ದಕ್ಕೆ ಸಾಗುತ್ತದೆ. ತಮ್ಮ ಜ್ಞಾನದ ಹೆಚ್ಚಿನ ಸಂಪತ್ತನ್ನು ಇವರುಗಳು ಭಾರತಕ್ಕೆ ಸಮಾಜವನ್ನು ಪರಿವರ್ತಿಸುವಲ್ಲಿ ಅರ್ಪಿಸಿದ್ದಾರೆ. ತಮ್ಮ ಅಮೂಲ್ಯ ಜ್ಞಾನವನ್ನು ಅವರು ಜಗತ್ತಿಗೆ ಸಾರಿದ್ದಾರೆ. ಬರವಣಿಗೆಯ ಮೂಲಕ ಅವರು ಅದನ್ನು ಸಾಬೀತುಪಡಿಸಿದ್ದಾರೆ. ಮಹಾ ಭಾರತದಲ್ಲಿ ವಿಧುರನನ್ನು ನಾವು ಜ್ಞಾನದ ಭಂಡಾರವೆಂದು ಕರೆಯುತ್ತೇವೆ.

ಧೃತರಾಷ್ಟ್ರನ ಸಹೋದರ ಮತ್ತು ಕೌರವರು ಹಾಗೂ ಪಾಂಡವರು ಮಾವ ವಿಧುರನಾಗಿದ್ದು ಮನೆಯಲ್ಲೇ ಕುಳಿತುಕೊಂಡು ಮಹಾಭಾರತ ಯುದ್ಧವನ್ನು ಅವರು ವೀಕ್ಷಿಸುತ್ತಿದ್ದರಂತೆ. ಈ ಜ್ಞಾನವನ್ನು ಬಳಸಿಕೊಂಡು ಮಹಾಭಾರತದ ಯುದ್ಧ ವಿವರವನ್ನು ಅವರು ದೃತರಾಷ್ಟ್ರನಿಗೆ ವಿವರಿಸುತ್ತಿದ್ದರು. ಇಂದಿನ ಲೇಖನದಲ್ಲಿ ಅವರ ಜ್ಞಾನವನ್ನು ಬಳಸಿಕೊಂಡು ಮನುಕುಲಕ್ಕೆ ಅವರು ನೀಡಿರುವ ಮಾಹಿತಿಯನ್ನು ಅರಿತುಕೊಳ್ಳೋಣ...

ಧನ

ಧನ

ಧನವೇ ಸಮಸ್ಯೆ ಮತ್ತು ಧನವೇ ಪರಿಹಾರ ಕೂಡ ಆಗಿದೆ. ನಾವು ಹಣಕ್ಕಾಗಿಯೇ ಮತ್ತು ನಮ್ಮ ಆವಶ್ಯಕತೆಗಳನ್ನು ಪೂರೈಸುವುದ ಕ್ಕಾಗಿಯೇ ನಿತ್ಯವೂ ದುಡಿಯುತ್ತೇವೆ. ಜೀವನದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಧನ ಪರಿಹಾರವನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಹೇಳುವಾಗ ಧನ ಪ್ರತಿಯೊಂದೂ ಅಲ್ಲ ಎಂಬುದಾಗಿ ಹೇಳುತ್ತಾರೆ ಆದರೆ ಧನವೇ ಪ್ರಮುಖವಾದುದು. ನೀವು ಹಣದ ಮೂಲಕ ಸುಖ ಸಂತೋಷವನ್ನು ಗಳಿಸಬಹುದು. ಎರಡು ಸಾವಿರ ವರ್ಷಗಳ ಹಿಂದೆ ಇವರು ತಿಳಿಸಿದ ಈ ಮಾತು ಇಂದಿಗೂ ಜೀವನದಲ್ಲಿ ಅನ್ವಯವಾಗಲಿದೆ. ತನ್ನಲ್ಲಿ ಸಾಕಷ್ಟು ಆರ್ಥಿಕತೆಯನ್ನು ಹೊಂದಿರುವವರು ಯಾವುದೇ ಸಂಕಷ್ಟದಲ್ಲಿ ಕೂಡ ಸುಖವನ್ನು ಪಡೆದುಕೊಳ್ಳಬಹುದು. ಆದರೆ ದುಡ್ಡಿಲ್ಲದವರು ವೈದ್ಯರಿಗೆ ನೀಡಲೂ ದುಡ್ಡಿಲ್ಲದೆ ಸಾಕಷ್ಟು ಪರದಾಡಬೇಕಾಗುತ್ತದೆ. ಬಡವರು ಮತ್ತೂ ಬಡವರಾಗುತ್ತಾರೆ ಮತ್ತು ಶ್ರೀಮಂತರು ಬೇಗನೇ ಗುಣಮುಖರಾಗುತ್ತಾರೆ. ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಧನವನ್ನು ಆತ ಸಂಪಾದಿಸಬೇಕು.

ಆರೋಗ್ಯ

ಆರೋಗ್ಯ

ಸಂತೋಷಕರ ಜೀವನದಲ್ಲಿ ಆರೋಗ್ಯವೇ ಅತಿ ಮುಖ್ಯವಾದುದು. ಯಾರು ಉತ್ತಮ ಆರೋಗ್ಯವನ್ನು ಹೊಂದಿದ್ದಾರೋ ಅವರು ಸುಖೀ ಪುರುಷರಾಗಿದ್ದಾರೆ. ಆರೋಗ್ಯವಂತ ವ್ಯಕ್ತಿ ಚೆನ್ನಾಗಿ ತಿನ್ನುತ್ತಾನೆ, ಚೆನ್ನಾಗಿ ಕೆಲಸ ಮಾಡುತ್ತಾನೆ ಮತ್ತು ವ್ಯಾಯಾಮವನ್ನು ಮಾಡುತ್ತಾನೆ. ಆರೋಗ್ಯವಂತ ದೇಹವು ಆತನಿಗೆ ಆತನಿಗೆ ಆರೋಗ್ಯವಂತ ಮನಸ್ಸು ಹೃದಯವನ್ನು ನೀಡುತ್ತದೆ. ಆದರೆ ಆರೋಗ್ಯವೇ ವ್ಯಕ್ತಿಗೆ ಕೈಕೊಟ್ಟಲ್ಲಿ ಆತ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಆತನಿಗೆ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಒಳ್ಳೆಯ ಪತ್ನಿ

ಒಳ್ಳೆಯ ಪತ್ನಿ

ನಮ್ಮ ಹಿಂದಿನವರು ಮನೆಯಲ್ಲಿರುವ ಮಹಿಳೆಯರುವ ಆ ಸಂಸಾರದ ಕಣ್ಣು ಎಂದು ಬಣ್ಣಿಸುತ್ತಾರೆ. ಆ ಮನೆಯ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಆ ಮನೆಯೊಡತಿ ಕಾಪಾಡುತ್ತಾಳೆ. ಆಕೆ ಒಳ್ಳೆಯ ನಡತೆಯನ್ನು ಹೊಂದಿದ್ದರೆ ಆ ಮನೆಯವರು ಸುಖ ಸಂತೋಷದಿಂದ ಬಾಳುತ್ತಾರೆ. ಮನೆಯಲ್ಲಿರುವ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮನಸ್ಸು ಆಕೆಗೆ ಇರುತ್ತದೆ. ಸಿಹಿ ಮಾತುಗಳನ್ನು ಆಡುವ ಮಹಿಳೆಯು ಮನೆಯ ಸದಸ್ಯರನ್ನು ಖುಷಿಯಾಗಿ ಇರಿಸುತ್ತಾರೆ. ಹೀಗಿರುವವರನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಯಾರ ಪತ್ನಿಯು ಒಳ್ಳೆಯವಳಾಗಿದ್ದು ಸಿಹಿಯಾಗಿ ಮಾತನಾಡುವವರಾಗಿತ್ತಾರೋ ಆತ ಅದೃಷ್ಟವಂತ.

ವಿದ್ಯಾಭ್ಯಾಸ

ವಿದ್ಯಾಭ್ಯಾಸ

ವಿಧುರ ಹೇಳುವಂತೆ ಯಾರು ಒಳ್ಳೆಯ ವಿದ್ಯಾಭ್ಯಾಸವನ್ನು ಹೊಂದಿದ್ದಾರೋ ಅವರು ಅದೃಷ್ಟಂತರೆಂದು. ಸದ್ಭುದ್ಧಿ ಎಂದು ಇದನ್ನು ಆತ ಕರೆಯುತ್ತಾನೆ. ಹಿಂದಿಯಲ್ಲಿ ಇದರರ್ಥ ಒಳ್ಳೆಯ ಬುದ್ಧಿ ಎಂದಾಗಿದೆ. ಈ ಸಂಸ್ಕಾರವು ಒಳ್ಳೆಯ ವಿದ್ಯಾಭ್ಯಾಸದಿಂದ ಆತನಿಗೆ ಬರುತ್ತದೆ. ಒಳ್ಳೆಯ ವಿದ್ಯಾಭ್ಯಾಸವನ್ನು ಹೊಂದಿರುವ ವ್ಯಕ್ತಿ ಎಲ್ಲೆಡೆ ಮಾನ್ಯತೆಯನ್ನು ಪಡೆಯುತ್ತಾನೆ ಎಂದಾಗಿದೆ. ವಿದ್ಯೆಯು ಆತನಿಗೆ ಒಳ್ಳೆಯ ಆದಾಯವನ್ನು ನೀಡುತ್ತದೆ. ಒಳ್ಳೆಯ ಕೆಲಸ ದೊರೆಯುವಂತೆ ಮಾಡುತ್ತದೆ. ವಿಶ್ವದ ಉತ್ತಮ ಸಾಹಿತ್ಯವನ್ನು ಓದುವುದು ಅಂತೆಯೇ ಸರಕಾರಿ ಆಡಳಿತದಲ್ಲಿ ತನ್ನ ಸಲಹೆಯನ್ನು ನೀಡುವುದು ಮೊದಲಾದುದು. ಆತ ತನ್ನ ಬುದ್ಧಿಯನ್ನು ಬಳಸಿಕೊಂಡು ಒಳ್ಳೆಯ ಅಂಶವನ್ನೇ ಆರಿಸಿ ಕೊಳ್ಳುತ್ತಾನೆ ಮತ್ತು ಉತ್ತಮ ಕೆಲಸವನ್ನು ಮಾಡುತ್ತಾನೆ. ಹೀಗೆ ವಿದ್ಯಾಭ್ಯಾಸವು ಆತನನ್ನು ಸಮಾಜದಲ್ಲಿ ಗೌರವಯುತ ವ್ಯಕ್ತಿಯನ್ನಾಗಿಸುತ್ತದೆ.

ವಿಧೇಯ ಮಗ

ವಿಧೇಯ ಮಗ

ಹೆತ್ತವರಿಗೆ ತಮ್ಮ ಮಕ್ಕಳೆಂದರೆ ಸರ್ವಸ್ವವಾಗಿರುತ್ತದೆ. ಅವರ ಜೀವನ, ಸುಖ, ಸಂತೋಷವೇ ಅವರಿಗೆ ಪ್ರಮುಖವಾಗಿರುತ್ತದೆ. ಮಕ್ಕಳು ಸಂತೋಷದಿಂದ ಇರಬೇಕೆಂದೇ ಹೆತ್ತವರು ಬಯಸುತ್ತಾರೆ. ತಮ್ಮ ಮಕ್ಕಳು ಜೀವನದಲ್ಲಿ ಒಳ್ಳೆಯ ಆಯ್ಕೆಯನ್ನು ಮಾಡಿಕೊಳ್ಳಲೀ ಎಂದೇ ಅವರು ಕನಸು ಕಾಣುತ್ತಾರೆ. ವಿಧೇಯ ಪುತ್ರರನ್ನು ಹೊಂದಿರುವ ತಂದೆ ತಾಯಿಗಳು ಅದೃಷ್ಟವಂತರು ಎಂದು ಕರೆಯಲಾಗಿದೆ. ಹಿಂದಿಯಲ್ಲಿ ಉತ್ತಮ ಪುತ್ರನಿಗೆ ಅರ್ಥಕಾರಿ ಎಂದು ಕರೆಯಲಾಗಿದೆ. ಅಂದರೆ ಸಂಸ್ಕಾರಯುತ ಪುತ್ರ ಎಂದು ಹೇಳಲಾಗಿದೆ. ಇಂತಹ ಮಕ್ಕಳು ತಮ್ಮ ಜೀವನದ ಬಗ್ಗೆ ಸೂಕ್ತ ನಿರ್ಧಾರಗಳನ್ನು ಮಾಡುತ್ತಾರೆ ಹಾಗೂ ಪೋಷಕರ ದುಃಖವನ್ನು ನೀಗಿಸುತ್ತಾರೆ.

English summary

The Luckiest Man On The Earth Has These 5 Things

Vidura Niti says that one who has five things listed here is the luckiest man on earth. These 5 things are Wealth, Health, A Good Wife, Education and an Obedient Son. Wealth makes it easy for a man to get all the materialistic pleasures. Health, good wife, good son and education are the other factors, the possessor of which can be called lucky.
X
Desktop Bottom Promotion