For Quick Alerts
ALLOW NOTIFICATIONS  
For Daily Alerts

ಅಭಿಮನ್ಯು- ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆ

By Super
|

ಮಹಾಭಾರತದಲ್ಲಿ ಒಂದೊಂದು ಪಾತ್ರವೂ ಒಂದೊಂದು ನೈಪುಣ್ಯವನ್ನು ಬಿಂಬಿಸುತ್ತದೆ. ವಿವೇಚನೆಗೆ ಧರ್ಮರಾಯನಾದರೆ, ಬಿಲ್ವಿದ್ಯೆಗೆ ಅರ್ಜುನ, ಬಲಪರಾಕ್ರಮಕ್ಕೆ ಭೀಮನಾದರೆ ಪ್ರತಿಜ್ಞೆಗೆ ಭೀಷ್ಮ ಪಿತಾಮಹರನ್ನು ಉದಾಹರಿಸಲಾಗುತ್ತದೆ. ಕಪಟತನಕ್ಕೆ ಶಕುನಿಯಾದರೆ ಶೌರ್ಯಕ್ಕೆ ಅಭಿಮನ್ಯು ಹೆಸರುವಾಸಿಯಾಗಿದ್ದಾರೆ. ಆದರೆ ಇಡಿಯ ಮಹಾಭಾರತದಲ್ಲಿ ಸೌಂದರ್ಯಕ್ಕೆ ಯಾವುದೇ ಮಹತ್ವ ಕಂಡುಬರುವುದಿಲ್ಲ. ಪಾಂಡವರನ್ನು ಸರ್ವನಾಶ ಮಾಡುವುದೇ ದ್ರೌಪದಿಯ ಉದ್ದೇಶವಾಗಿತ್ತೇ?

ಏಕೆಂದರೆ ಐವರು ಸಹೋದರರಲ್ಲಿ ನಕುಲ ಅತ್ಯಂತ ಸ್ಪುರದ್ರೂಪಿಯಾಗಿದ್ದ. ಆದರೆ ಆತನ ಸೌಂದರ್ಯವನ್ನು ಕೇವಲ ಒಂದು ಸಾಲಿನಲ್ಲಿ ಹೇಳಲಾಗಿದೆಯೇ ಹೊರತು ಎಲ್ಲೂ ಇತರ ವರ್ಣನೆಯೇ ಇಲ್ಲ. ಇದು ನಮಗೆ ಮನುಷ್ಯನ ಬಾಹ್ಯರೂಪಕ್ಕಿಂತಲೂ ಆಂತರಿಕ ಗುಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಮಹಾಭಾರತ ಕಲಿಸುವ ಸತ್ಯ... ಅರ್ಜುನ ಧರ್ಮರಾಯನನ್ನು ಕೊಲ್ಲಲು ಬಯಸಿದ್ದನೇ?

ಎಲ್ಲವನ್ನೂ ಬಲ್ಲವ ಶ್ರಿಕೃಷ್ಣ

ಎಲ್ಲವನ್ನೂ ಬಲ್ಲವ ಶ್ರಿಕೃಷ್ಣ

ಮಹಾಭಾರತದ ಸಮಯದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಜಾರಿಯಲ್ಲಿತ್ತು. ಅಂತೆಯೇ ಅರ್ಜುನನಿಗೆ ದ್ರೌಪದಿಯ ಹೊರತಾಗಿ ಕೃಷ್ಣನ ಸಹೋದರಿಯಾದ ಸುಭದ್ರೆಯೂ ಮಡದಿಯಾಗಿದ್ದಳು. ಅರ್ಜುನನಿಗೆ ಒಟ್ಟು ಏಳು ಪತ್ನಿಯರಿದ್ದರೆಂದು ಕೆಲವೆಡೆ ದಾಖಲಾಗಿದೆ. ಗುರುಕುಲದಲ್ಲಿದ್ದಾಗಲೇ ಕೃಷ್ಣನು ತಂಗಿ ಸುಭದ್ರೆಯತ್ತ ಒಲವು ಮೂಡಿತ್ತು. ತನ್ನ ಮನದಾಳದ ಮಾತನ್ನು ಆತ ಕೇವಲ ಸುಭದ್ರೆಯೊಂದಿಗೆ ಮಾತ್ರ ಹಂಚಿಕೊಳ್ಳುತ್ತಿದ್ದ.ಅತ್ಯಂತ ಗೌಪ್ಯವಾದ ಯುದ್ಧದ ವಿವರಗಳನ್ನೂ ಹಂಚಿಕೊಳ್ಳುತ್ತಿದ್ದ.

ಚಕ್ರವ್ಯೂಹದ ಬಗ್ಗೆ ತಿಳಿಸುತ್ತಿದ್ದ ಕೃಷ್ಣ

ಚಕ್ರವ್ಯೂಹದ ಬಗ್ಗೆ ತಿಳಿಸುತ್ತಿದ್ದ ಕೃಷ್ಣ

ಒಮ್ಮೆ ಸುಭದ್ರೆ ಅಭಿಮನ್ಯುವನ್ನಿನ್ನೂ ಗರ್ಭದಲ್ಲಿಟ್ಟುಕೊಂಡಿದ್ದಾಗ ಕೃಷ್ಣನು ಯುದ್ಧದ ಅತ್ಯಂತ ಕ್ಲಿಷ್ಟಕರವಾದ ಚಕ್ರವ್ಯೂಹದ ಬಗ್ಗೆ ವಿವರ ನೀಡುತ್ತಿದ್ದ. ಇದರಲ್ಲಿ ವೃತ್ತಕಾರದಲ್ಲಿ ಸೈನ್ಯ ವ್ಯೂಹ ರಚಿಸುವುದು, ಅದರೊಳಗೆ ನುಸುಳುವುದು ಎಷ್ಟು ಕಷ್ಟವೋ ಅದರಿಂದ ಜೀವಸಹಿತ ಹೊರಬರುವುದು ಇನ್ನೂ ಕಷ್ಟ. ವ್ಯೂಹದೊಳಗೆ ನುಗ್ಗುವ ಪರಿಯನ್ನು ಹೇಳುತ್ತಿದ್ದಂತೆಯೇ ಗರ್ಭದಲ್ಲಿದ್ದ ಅಭಿಮನ್ಯು ಇದನ್ನು ಕೇಳಿಸಿಕೊಂಡು ತನ್ನ ಮನದಾಳದಲ್ಲಿ ಆಗಲೇ ಸ್ಥಾಪಿಸಿದ್ದ. ಎಲ್ಲವನ್ನು ಬಲ್ಲ ಕೃಷ್ಣ ಕಥೆಯನ್ನು ಅರ್ಧದಲ್ಲೇ ನಿಲ್ಲಿಸಿದ...!

ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದ ಕೃಷ್ಣ

ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದ ಕೃಷ್ಣ

ಆದರೆ ಅಷ್ಟು ಹೊತ್ತಿಗೆ ದಣಿವಿನಿಂದ ನಿದ್ದೆಗೆ ಜಾರಿದ ಸುಭದ್ರೆ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಸುಭದ್ರೆ ನಿದ್ದೆಹೋದುದನ್ನು ತಿಳಿದ ಕೃಷ್ಣನು ತನ್ನ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದ. ಇದರಿಂದ ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಬರುವ ಮಾಹಿತಿ ಸಿಗದೇ ಹೋಯಿತು. ಮುಂದಿನ ಮಾಹಿತಿ ಸಿಗುವಂತೆ ಗರ್ಭದಲ್ಲಿಯೇ ಒದ್ದಾಗ ಸುಭದ್ರೆಗೆ ಎಚ್ಚರವಾದರೂ ಆಗ ತಡವಾಗಿತ್ತು. ಕೃಷ್ಣನು ತನ್ನ ಮಾತುಗಳನ್ನು ನಿಲ್ಲಿಸಿಯಾಗಿತ್ತು!

ಅಭಿಮನ್ಯುವಿನ ಬಾಲ್ಯದ ಜೀವನ

ಅಭಿಮನ್ಯುವಿನ ಬಾಲ್ಯದ ಜೀವನ

ತನ್ನ ಬಾಲ್ಯವನ್ನು ಅಭಿಮನ್ಯು ದ್ವಾರಕೆಯಲ್ಲಿ, ತನ್ನ ತಾಯಿಯ ಆರೈಕೆಯಲ್ಲಿಯೇ ಕಳೆದ. ಆಗ ಪಾಂಡವರು ಹದಿನಾಲ್ಕು ವರ್ಷದ ವನವಾಸದಲ್ಲಿದ್ದರು.ಅದರಲ್ಲೂ ಕಡೆಯ ಒಂದು ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಬೇಕಿತ್ತು. ಇದಕ್ಕಾಗಿ ಅವರು ವಿರಾಟರಾಜನ ರಾಜ್ಯದಲ್ಲಿ ಆಶ್ರಯ ಪಡೆದರು. ಈ ಅವಧಿ ಕಳೆದ ಬಳಿಕ ತನ್ನ ಬಳಿ ಇದುವರೆಗೆ ಇದ್ದವರು ಪಾಂಡವರೇ ಎಂದು ಅರಿತು ಸಂತುಷ್ಟನಾದ ವಿರಾಟ ರಾಜ ತನ್ನ ಮಗಳಾದ ಉತ್ತರೆಯನ್ನು ಅರ್ಜುನನಿಗೆ ವಿವಾಹಮಾಡಿಕೊಡಲು ಮುಂದಾದ. ಆದರೆ ಈ ಹೊತ್ತಿಗೆ ಬಹಳಷ್ಟು ವಯಸ್ಕನಾಗಿದ್ದ ಅರ್ಜುನ ಉತ್ತರೆಯನ್ನು ಮಗಳಂತೆ ಕಂಡು ಈ ಕೊಡುಗೆಯನ್ನು ತನ್ನ ಬದಲಿಗೆ ತನ್ನ ಮಗ ಅಭಿಮನ್ಯುವಿಗಾಗಿ ಸ್ವೀಕರಿಸಿದ.

ಉತ್ತರೆಯನ್ನು ಪತ್ನಿಯಾಗಿ ಸ್ವೀಕರಿಸಿದ ಅಭಿಮನ್ಯು

ಉತ್ತರೆಯನ್ನು ಪತ್ನಿಯಾಗಿ ಸ್ವೀಕರಿಸಿದ ಅಭಿಮನ್ಯು

ತಂದೆಯ ಅಣತಿಯಂತೆ ಉತ್ತರೆಯನ್ನು ಅತಿ ಕಡಿಮೆ ವಯಸ್ಸಿನಲ್ಲಿ ಪತ್ನಿಯಾಗಿ ಸ್ವೀಕರಿಸಿದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ವೇಳೆಗೆ ಪಾಂಡವರ ಮತ್ತು ಕೌರವರ ನಡುವೆ ಕುರುಕ್ಷೇತ್ರದ ಯುದ್ದ ಪ್ರಾರಂಭವಾಗಿತ್ತು. ತಂದೆ ಅರ್ಜುನನೊಂದಿಗಾಗಲೀ ಪತ್ನಿ ಉತ್ತರೆಯೊಂದಿಗಾಗಲೀ ಮಾತನಾಡುವಷ್ಟು ವ್ಯವಧಾನವಾಗಲೀ ಕಾಲಾವಕಾಶವಾಗಲೀ ಅವನಲ್ಲಿ ಇರಲಿಲ್ಲ. ಯುದ್ಧಕ್ಕೆ ಹೋಗಲು ಇನ್ನೂ ಎಳೆಯ ವಯಸ್ಸಿನ ಅಭಿಮನ್ಯುವನ್ನು ವಿಮುಖನನ್ನಾಗಿಸಲು ಎಲ್ಲರೂ ಪ್ರಯತ್ನಪಟ್ಟರೂ ಜನ್ಮತಃ ಶೂರನಾಗಿದ್ದ ಅಭಿಮನ್ಯು ಯಾರ ಮಾತನ್ನೂ ಕೇಳದೇ ಯುದ್ಧಕ್ಕೆ ತೆರಳಲು ಸಿದ್ಧನಾಗಿದ್ದ. ರಣರಂಗದಲ್ಲಿ ಇದ್ದವರಾರೂ ಇವನ ವಯಸ್ಸಿನವರಾಗಿರಲಿಲ್ಲ, ಇವನಿಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರೂ ಮತ್ತು ಯುದ್ಧದ ಸೂಕ್ಷ್ಮ ವಿಷಯಗಳನ್ನು ಅರಿತ ಪರಾಕ್ರಮಿಗಳೇ ಇದ್ದರು. ಇದನ್ನು ಅರಿತೂ ಮನೆಯಲ್ಲಿರಲು ಇಚ್ಛಿಸದ ಅಭಿಮನ್ಯು ರಣರಂಗಕ್ಕೆ ಹೊರಟೇಬಿಟ್ಟ.

ಬೆಚ್ಚಿ ಬಿದ್ದ ಕೌರವರು

ಬೆಚ್ಚಿ ಬಿದ್ದ ಕೌರವರು

ಅಭಿಮನ್ಯುವಿನಂತಹ ಎಳೆಚಿಗರೆಯನ್ನು ನಿರೀಕ್ಷಿಸದ ಕೌರವರು ಈ ಚಿಕ್ಕ ಹುಡುಗ ನಮ್ಮಂತಹ ಪರಾಕ್ರಮಿಗಳನ್ನು ಏನು ತಾನೇ ಮಾಡಲು ಸಾಧ್ಯ ಎಂಬ ಉಡಾಫೆಯಿಂದ ಬೇರೆ ಪರಾಕ್ರಮಿಗಳತ್ತ ತಮ್ಮ ಚಿತ್ತ ಹರಿಸಿದ್ದೇ ಅವರಿಗೆ ಭಾರಿಯಾಗಿತ್ತು. ಏಕೆಂದರೆ ನುರಿತ ಪರಾಕ್ರಮಿಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಹೋರಾಡುತ್ತಾ ಕೊಂಚ ಹೊತ್ತಿನಲ್ಲಿಯೇ ಈತ ಸಾಮಾನ್ಯ ಪೋರನಲ್ಲ ಎಂದು ಕೌರವರಿಗೆ ಮನದಟ್ಟು ಮಾಡಿಸಿದ.

ಚಕ್ರವ್ಯೂಹವನ್ನು ಭೇದಿಸುವ ರಹಸ್ಯ

ಚಕ್ರವ್ಯೂಹವನ್ನು ಭೇದಿಸುವ ರಹಸ್ಯ

ಯುದ್ಧದ ಹದಿಮೂರನೆಯ ದಿನ, ಅರ್ಜುನ ತನ್ನ ಯುದ್ಧದ ತಯಾರಿಯಲ್ಲಿ ವ್ಯಸ್ತನಾಗಿದ್ದ. ಇತ್ತ ವಿರೋಧಿಪಡೆಯಲ್ಲಿ ಕೌರವರ ಸೇನಾಧಿಪತಿಯಾಗಿದ್ದ ದ್ರೋಣಾಚಾರ್ಯರು ಇಂದು ಚಕ್ರವ್ಯೂಹವನ್ನು ರಚಿಸುವ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಈ ಚಕ್ರವ್ಯೂಹವನ್ನು ಬೇಧಿಸಲು ಕೇವಲ ಅರ್ಜುನನಿಗೊಬ್ಬನಿಂದಲೇ ಸಾಧ್ಯ ಎಂಬ ವಿಷಯವನ್ನು ಅವರು ಚೆನ್ನಾಗಿ ಅರಿತಿದ್ದರು. ಚಕ್ರವ್ಯೂಹ ರಚಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಯುಧಿಷ್ಟಿರ ಕೊಂಚ ಅಧೀರನಾದ. ಏಕೆಂದರೆ ಆ ಹೊತ್ತಿನಲ್ಲಿ ಅರ್ಜುನ ಅಲಭ್ಯನಾಗಿದ್ದ. ಚಿಂತಾಕ್ರಾಂತನಾದ ಯುಧಿಷ್ಟಿರ ಬೇರೆ ಉಪಾಯವಿಲ್ಲದೇ ಅಭಿಮನ್ಯುವಿನತ್ತ ತಿರುಗಿ ಚಕ್ರವ್ಯೂಹ ಬೇಧಿಸಲು ಸಹಾಯ ಮಾಡುವೆಯಾ ಎಂದು ಯಾಚಿಸಿದ.

ನಿನ್ನ ಜೊತೆ ನಾವು ಇದ್ದೇವೆ...!

ನಿನ್ನ ಜೊತೆ ನಾವು ಇದ್ದೇವೆ...!

ಅರ್ಜುನನಿಂದ ಕೃಷ್ಣನಿಂದ ಚಕ್ರವ್ಯೂಹ ಬೇಧಿಸುವ ರಹಸ್ಯವನ್ನು ಪಡೆದುಕೊಂಡಿದ್ದುದು ಯುಧಿಷ್ಟಿರನಿಗೆ ಗೊತ್ತಿತ್ತು. ಆದರೆ ತಾನು ಚಕ್ರವ್ಯೂಹವನ್ನು ಬೇಧಿಸಿ ಒಳಹೋಗುವ ರಹಸ್ಯವನ್ನು ಮಾತ್ರ ಬಲ್ಲೆನೆಂದೂ ಹೊರಬರುವ ರಹಸ್ಯ ತನಗೆ ಗೊತ್ತಿಲ್ಲವೆಂದೂ ಅಭಿಮನ್ಯು ದೊಡ್ಡಪ್ಪನಿಗೆ ತಿಳಿಸಿದ. ಆದರೆ ನಿರ್ವಾಹವಿಲ್ಲದೇ ಯುಧಿಷ್ಟಿರ ನೀನು ಒಮ್ಮೆ ಚಕ್ರವ್ಯೂಹವನ್ನು ಬೇಧಿಸಿ ಒಳನುಗ್ಗು, ಹಿಂದೆಯೇ ನಾವೆಲ್ಲಾ ಬರುತ್ತೇವೆ, ಎಲ್ಲರೂ ಸೇರಿ ಈ ಚಕ್ರವ್ಯೂವಹನ್ನೇ ಧೂಳೀಪಟ ಮಾಡಿಬಿಡೋಣ, ಆಗ ಹೊರಬರಲು ಯಾವುದಾದರೂ ದಾರಿ ಸಿಕ್ಕೇ ಸಿಗುತ್ತದೆ ಎಂದ.

ಚಕ್ರವ್ಯೂಹವನ್ನು ಲೀಲಾಜಾಲವಾಗಿ ಬೇಧಿಸಿದ ಅಭಿಮನ್ಯು

ಚಕ್ರವ್ಯೂಹವನ್ನು ಲೀಲಾಜಾಲವಾಗಿ ಬೇಧಿಸಿದ ಅಭಿಮನ್ಯು

ಈ ಮಾತುಗಳಿಂದ ಪ್ರೇರಿತನಾದ ಅಭಿಮನ್ಯು ತಕ್ಷಣ ಪಾಂಡವರ ಸೇನಾ ತುಕಡಿಯ ನೇತೃತ್ವ ವಹಿಸಿ ದ್ರೋಣಾಚಾರ್ಯರ ಚಕ್ರವ್ಯೂಹದತ್ತ ಧಾವಿಸಿದ. ಆದರೆ ದ್ರೋಣಾಚಾರ್ಯರೂ ಈ ಯುಕ್ತಿಯನ್ನು ಮೊದಲೇ ಊಹಿಸಿದ್ದರು. ಚಕ್ರವ್ಯೂಹದ ಮೊದಲ ವ್ಯೂಹವನ್ನು ಲೀಲಾಜಾಲವಾಗಿ ಅಭಿಮನ್ಯು ಬೇಧಿಸಿ ಒಳನುಗ್ಗುತ್ತಿದ್ದಂತೆಯೇ ದ್ರೋಣಾಚಾರ್ಯರು ಇತ್ತ ಬೇರೆ ಯಾರೂ ನುಗ್ಗದಂತೆ ಚಕ್ರವ್ಯೂಹವನ್ನು ಪುನಃ ಮುಚ್ಚಿಬಿಡಲು ಸಫಲರಾದರು.

ಒಬ್ಬಂಟಿಯಾಗಿ ಸಿಕ್ಕಿ ಬಿದ್ದ ಅಭಿಮನ್ಯು

ಒಬ್ಬಂಟಿಯಾಗಿ ಸಿಕ್ಕಿ ಬಿದ್ದ ಅಭಿಮನ್ಯು

ಇತ್ತ ಚಕ್ರವ್ಯೂಹದೊಳಗೆ ಒಬ್ಬಂಟಿಯಾದ ಅಭಿಮನ್ಯು ಕೌರವರಿಗೆ ಸುಲಭವಾಗಿ ಸಿಕ್ಕಿಬಿದ್ದ. ಅತ್ತ ತಮ್ಮ ಮಾತಿನಂತೆ ಒಳನುಗ್ಗಲು ಅಸಹಾಯಕರಾದ ಯುಧಿಷ್ಟಿರ ಮತ್ತು ಪಾಂಡವಸೈನ್ಯ ಏನೂ ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿಯಲ್ಲಿತ್ತು. ಒಳಗೆ ಅಭಿಮನ್ಯುವನ್ನು ಕೌರವರ ಪ್ರಮುಖರಾದ ಕರ್ಣ, ದುರ್ಯೋಧನ, ದುಃಶಾಸನ, ದ್ರೋಣಾಚಾರ್ಯರು, ಅಶ್ವತ್ಥಾಮ ಮೊದಲಾದ ಪರಾಕ್ರಮಿಗಳು ಸುತ್ತುವರೆದರು.

ಅಭಿಮನ್ಯುವಿನ ಪರಾಕ್ರಮವನ್ನು ಕೊಂಡಾಡಿದ ದ್ರೋಣಾಚಾರ್ಯರು

ಅಭಿಮನ್ಯುವಿನ ಪರಾಕ್ರಮವನ್ನು ಕೊಂಡಾಡಿದ ದ್ರೋಣಾಚಾರ್ಯರು

ತನಗಿಂತಲೂ ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ, ಯುದ್ಧದ ಅನುಭವದಲ್ಲಿಯೂ ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ತನ್ನ ಮಾವ ಕೃಷ್ಣನಿಂದ ಕಲಿತ ಎಲ್ಲಾ ವರಸೆ ವಿದ್ಯೆಗಳನ್ನು ಆ ಸಮಯದಲ್ಲಿ ಉಪಯೋಗಿಸಿಕೊಂಡ. ಈ ಪುಟಾಣಿಯ ಶೌರ್ಯವನ್ನು ಕಂಡು ಅಂದು ಇಡಿಯ ಕೌರವ ಸೇನೆಯೇ ದಂಗಾಗಿತ್ತು. ಸ್ವತಃ ದ್ರೋಣಾಚಾರ್ಯರೇ ಅಭಿಮನ್ಯುವಿನ ಪರಾಕ್ರಮವನ್ನು ಕೊಂಡಾಡಿದರು.

ದುರ್ಯೋಧನ ಕೋಪ ನೆತ್ತಿಗೇರಿತು

ದುರ್ಯೋಧನ ಕೋಪ ನೆತ್ತಿಗೇರಿತು

ಚಕ್ರವ್ಯೂಹದೊಳಗಿದ್ದೂ ಕೇವಲ ಒಬ್ಬ ಪಾಂಡವರ ಕಡೆಯವನನ್ನು ಸೋಲಿಸಲಾದುದನ್ನು ಕಂಡ ದುರ್ಯೋಧನ ಕೋಪಾವಿಷ್ಟನಾದ. ಅದರಲ್ಲೂ ದ್ರೋಣಾಚಾರ್ಯರೇ ವಿರೋಧಿಪಡೆಯ ಹುಡುಗನನ್ನು ಹೊಗಳುತ್ತಿರುವುದನ್ನು ಕೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾದ. ತಕ್ಷಣ ದ್ರೋಣಾಚಾರ್ಯರತ್ತ ತೆರಳಿ ಈ ಹೊತ್ತು ಹುಡುಗನ ಪರಾಕ್ರಮವನ್ನು ಕೊಂಡಾಡುವುದಲ್ಲ, ಬದಲಿಗೆ ಯುದ್ದವನ್ನು ಜಯಿಸುವುದಾಗಿದೆ,ನಿಮ್ಮ ಧರ್ಮವನ್ನು ನಿಭಾಯಿಸಿ ಎಂದು ಅಪ್ಪಣೆ ನೀಡಿದ. ಇನ್ನೂ ಎಳೆಯನಾಗಿದ್ದ ಅಭಿಮನ್ಯುವಿನತ್ತ ಕೊಂಚ ಕರುಣೆಯ ಭಾವ ಮೂಡಿದರೂ ಮರುಕ್ಷಣ ತಮ್ಮ ಧರ್ಮವನ್ನು ನೆನಪಿಸಿಕೊಂಡ ದ್ರೋಣಾಚಾರ್ಯರು ತಡಮಾಡದೇ ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದದ್ದ ವೈರಿಯ ತಡೆಯನ್ನು ಮುರಿಯುವತ್ತ ತಮ್ಮ ಚಿತ್ತವನ್ನು ಹರಿಸಿದರು.

ಚಕ್ರವ್ಯೂಹದ ನಿಯಮದಂತೆ

ಚಕ್ರವ್ಯೂಹದ ನಿಯಮದಂತೆ

ಚಕ್ರವ್ಯೂಹದ ನಿಯಮದಂತೆ ಒಳಗೆ ಸಿಕ್ಕಿಬಿದ್ದ ಯೋಧನನ್ನು ಹಲವರು ಸುತ್ತುವರೆದು ನಿಧಾನವಾಗಿ ಆತನ ಮೇಲೆ ಹತೋಟಿಯನ್ನು ಸಾಧಿಸಬೇಕು. ಆದರೆ ಅಭಿಮನ್ಯು ಇನ್ನಷ್ಟು ಪರಾಕ್ರಮದಿಂದ ಹೋರಾಡಿದ. ಕುಟಿಲತೆಯಿಂದ ಹಿಂದಿನಿಂದ ಬಂದ ದ್ರೋಣಾಚಾರ್ಯರು ಮತ್ತು ಕೃಪ ಆತನ ಕುದುರೆಗಳನ್ನು ಮತ್ತು ಸಾರಥಿಯನ್ನು ಕೊಂದು ರಥವನ್ನು ಹಾಳುಗೆಡವಿ ಉರುಳಿಸಿದ ಬಳಿಕ ಅಭಿಮನ್ಯು ನೆಲದ ಮೇಲೆ ಇಳಿದು ನಿಂತೇ ಹೋರಾಟವನ್ನು ಮುಂದುವರೆಸಿದ. ಕರ್ಣ ಬಳಿಕ ಅವನ ಧನುಸ್ಸನ್ನು ತುಂಡರಿಸಿದ. ಆಗ ಅಭಿಮನ್ಯು ಖಡ್ಗದಿಂದ ಹೋರಾಟ ಮುಂದುವರೆಸಿದ. ಕಡೆಗೊಂದು ಹೊತ್ತಿನಲ್ಲಿ ಆತನ ಖಡ್ಗವೂ ಮುರಿಯಿತು. ಬಳಿಕ ಹೆಚ್ಚೂ ಕಡಿಮೆ ಅವನಷ್ಟೇ ತೂಕವಿದ್ದ ಗದೆಯಿಂದ ಹೋರಾಟ ಮುಂದುವರೆಸಿದ.

ಅಭಿಮನ್ಯುವಿನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕೌರವಪಡೆ

ಅಭಿಮನ್ಯುವಿನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕೌರವಪಡೆ

ದುಃಶಾಸನನ ಮಗ ದುರ್ಮಾಸನನೊಡನೆ ಭೀಕರ ಗದಾಕಾಳಗ ನಡೆಸಿದ. ಈ ಕಾಳಗದಲ್ಲಿ ಇಬ್ಬರೂ ತೀರಾ ದಣಿದು ಕೆಳಕ್ಕೆ ಬಿದ್ದರು. ಆದರೆ ಮೊದಲು ಮೇಲೆದ್ದ ದುರ್ಮಾಸನ ಇನ್ನೂ ಮೇಲೇಳುತ್ತಿದ್ದ ಅಭಿಮನ್ಯುವಿನ ತಲೆಗೆ ಹೊಡೆದು ಕಿರೀಟವನ್ನು ಬೀಳಿಸಿದ. ಆದರೆ ತನ್ನೆಲ್ಲಾ ಉಳಿದ ಶಕ್ತಿಯನ್ನು ಉಪಯೋಗಿಸಿ ಗದೆಯನ್ನು ಬೀಸಿ ಅಭಿಮನ್ಯು ದುರ್ಮಾಸನನನ್ನು ವಧಿಸಿದ. ಕೌರವರು ಗದೆಯನ್ನೂ ಮುರಿದ ಬಳಿಕ ಈಟಿಯಿಂದ ಹೋರಾಡಿದ. ಈಟಿಯೂ ಮುರಿದು ಚೂರಾದ ಬಳಿಕ ಯಾವುದೇ ಆಯುಧ ಆತನಲ್ಲಿ ಉಳಿಯಲಿಲ್ಲ. ಮುರಿದು ಬಿದ್ದಿದ್ದ ರಥದ ಗಾಲಿಯನ್ನೇ ಆಯುಧದಂತೆ ಉಪಯೋಗಿಸಿ ಹಲವು ಕೌರವರನ್ನು ವಧಿಸಿದ.

ನಿರಾಯುಧನಾಗಿದ್ದ ಅಭಿಮನ್ಯುವಿನ ಮೇಲೆ ಕರ್ಣ ದಾಳಿ ಮಾಡಿಯೇ ಬಿಟ್ಟ

ನಿರಾಯುಧನಾಗಿದ್ದ ಅಭಿಮನ್ಯುವಿನ ಮೇಲೆ ಕರ್ಣ ದಾಳಿ ಮಾಡಿಯೇ ಬಿಟ್ಟ

ಕಟ್ಟಕಡೆಗೆ ಈ ಗಾಲಿಯೂ ಮುರಿಯಿತು. ಈಗ ಅಭಿಮನ್ಯು ನಿರಾಯುಧನಾಗಿದ್ದ. ಯುದ್ಧದ ನಿಯಮದಂತೆ ನಿರಾಯುಧನ ಮೇಲೆ ಧಾಳಿ ಮಾಡುವಂತಿಲ್ಲ. ಆದರೆ ಆ ಹೊತ್ತಿನಲ್ಲಿ ಕೌರವರಿಗೆ ಯುದ್ಧದ ನಿಯಮಕ್ಕಿಂತಲೂ ಯುದ್ಧದಜಯವೇ ಮುಖ್ಯವಾಗಿತ್ತು. ನಿರಾಯುಧನಾಗಿದ್ದ ಅಭಿಮನ್ಯುವಿನ ಮೇಲೆ ಕರ್ಣ ಮೊದಲು ಖಡ್ಗದಿಂದ ಇರಿದ. ಅರ್ಜುನ ಕರ್ಣನ ಮೂವರು ಮಕ್ಕಳನ್ನು ವಧಿಸಿದ್ದಕ್ಕೆ ಈ ರೀತಿಯಾಗಿ ಸೇಡು ತೀರಿಸಿಕೊಂಡ.

ವಿದ್ಯೆಯ ಅರ್ಧಭಾಗ

ವಿದ್ಯೆಯ ಅರ್ಧಭಾಗ

ಒಂದು ವಿದ್ಯೆಯ ಅರ್ಧಭಾಗ ಮಾತ್ರ ಗೊತ್ತಿರುವ ವಿವರ ಮಹಾಭಾರತದಲ್ಲಿ ಅಭಿಮನ್ಯಿನಂತೆಯೇ ಅಶ್ವತ್ಥಾಮನಿಗೂ ಇತ್ತು. ದ್ರೋಣಾಚಾರ್ಯರು ತನ್ನ ಸ್ವಂತ ಮಗನಾದ ಅಶ್ವತ್ಥಾಮನಿಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ವಿದ್ಯೆ ಹೇಳಿಕೊಟ್ಟಿದ್ದರೇ ಹೊರತು ಹಿಂದೆ ಪಡೆಯುವ ವಿದ್ಯೆಯನ್ನು ಹೇಳಿಕೊಟ್ಟಿರಲಿಲ್ಲ.

English summary

The legend of Abhimanyu in mahabharth Story

Abhimanyu was the son of Arjuna, a young warrior as brave and skillful as his father, probably the youngest warrior on the battlefield, but one who made a name for himself by his valorous deeds.
X
Desktop Bottom Promotion