For Quick Alerts
ALLOW NOTIFICATIONS  
For Daily Alerts

ಪ್ರಜ್ವಲಿಸುವ 'ದೀಪ', ಸಾಕ್ಷಾತ್ ದೇವಿಯ ಸ್ವರೂಪ

By Manu
|

ಆಚಾರ-ವಿಚಾರ, ಸಂಪ್ರದಾಯಗಳಿಗೆ ಸನಾತನ ಧರ್ಮವಾದ ಹಿಂದೂ ಧರ್ಮವು ತಾಯಿ ಎಂದು ಕರೆಯಬಹುದು. ನಮಗೆ ಗೊತ್ತಿರುವಂತೆಯೇ ಹಲವಾರು ಆಚಾರ ವಿಚಾರಗಳು ಇದರಲ್ಲಿ ಇದೆ, ಇನ್ನು ಗೊತ್ತಿಲ್ಲದಂತೆ ಎಷ್ಟು ಇವೆ ಎಂದು ಲೆಕ್ಕ ಹಾಕಲು ಹೋದರೆ, ಅದು ಒಂದು ದೊಡ್ಡ ಗಣತಿಯಂತಾಗುತ್ತದೆ. ಕೆಲವೊಂದು ಸಣ್ಣ ಸಣ್ಣ ಆಚಾರಗಳಿಂದ ಹಿಡಿದು, ಬಹಳಷ್ಟು ದಿನಗಳ ಕಾಲ ನಡೆಯುವ ಅನುಷ್ಟಾನಗಳವರೆಗೆ ಹಿಂದೂ ಧರ್ಮದಲ್ಲಿ ಹಲವಾರು ಕ್ರಿಯೆಗಳು ಮತ್ತು ಚಟುವಟಿಕೆಗಳು ಇವೆ. ದೀಪ ಹಚ್ಚುವಾಗ ಎಣ್ಣೆ ಕಲೆಯಾದರೆ ಏನು ಮಾಡ್ತೀರಾ?

ಅದರಲ್ಲಿ ಒಂದು ದೀಪ ಹಚ್ಚುವುದು. ಮನೆಯಲ್ಲಿ ದೇವರ ಕೋಣೆಯಲ್ಲಿ ನಾವು ದೀಪವನ್ನು ಉರಿಸುತ್ತೇವೆ. ಯಾವುದಾದರು ಸಭೆ-ಸಮಾರಂಭಗಳನ್ನು ಆರಂಭಿಸುವ ಮೊದಲು ದೀಪ ಬೆಳಗುವುದರ ಮೂಲಕ ಅದಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡುತ್ತೇವೆ. ದೀಪ ಅಥವಾ ಜ್ಯೋತಿ ಎಂದು ಕರೆಯಲ್ಪಡುವ ಇದನ್ನು ನಾವು ದೇವರ ಆರಾಧನೆಯಲ್ಲಿ ಪ್ರಮುಖವಾಗಿ ಬೆಳಗುತ್ತೇವೆ.

ದೀಪವನ್ನು ಹಚ್ಚಿ ದೇವಿಯನ್ನು ಪ್ರಾರ್ಥಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಹೇಳಲಾಗುತ್ತದೆ. ಮದುವೆಯಾದ ಮತ್ತು ಮದುವೆಯಾಗಲು ಕಾಯುತ್ತಿರುವ ಹೆಂಗಸರು ದೀಪ ನಮಸ್ಕಾರ ಎಂದು ಕರೆಯಲ್ಪಡುವ ಅನುಷ್ಟಾನವನ್ನು ಮಾಡಲು ಹಿರಿಯರು ತಿಳಿಸುತ್ತಾರೆ. ಬನ್ನಿ ಹಿಂದೂ ಸಂಸ್ಕೃತಿಯಲ್ಲಿ ದೀಪದ ಹಿಂದಿರುವ ಮಹತ್ವದ ಸಂಗತಿಗಳನ್ನು ತಿಳಿಯೋಣ, ಮುಂದೆ ಓದಿ...

ದೀಪದ ಹಿನ್ನೆಲೆ

ದೀಪದ ಹಿನ್ನೆಲೆ

ನಂಬಿಕೆಗಳ ಪ್ರಕಾರ ರಾಜ ರಾಜೇಶ್ವರಿ ದೇವಿಯು ದೀಪದಲ್ಲಿ ನೆಲೆಸಿರುತ್ತಾಳಂತೆ. ಈಕೆಯು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಅಂಶಗಳನ್ನು ಹೊಂದಿರುವ ದೇವಿಯಂತೆ. ಹಾಗಾಗಿ ದೀಪಲಕ್ಷ್ಮಿಯನ್ನು (ರಾಜರಾಜೇಶ್ವರಿ ದೇವಿಯ ಅವತಾರವಾಗಿ) ಕುಂಕುಮ, ಹೂವು ಮತ್ತು ಸ್ತೋತ್ರಗಳ ಮೂಲಕ ಪ್ರತಿ ಶುಕ್ರವಾರವು ಪೂಜಿಸಲಾಗುತ್ತದೆ. ಇದರಿಂದ ನಿಮಗೆ ದೊರೆಯುವ ಪ್ರಯೋಜನಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ದೀಪವನ್ನು ಬೆಳಗಿಸುವ ಹಿಂದಿರುವ ತತ್ವ....

ದೀಪವನ್ನು ಬೆಳಗಿಸುವ ಹಿಂದಿರುವ ತತ್ವ....

ದೀಪವನ್ನು ಬೆಳಗುವ ಹಿಂದೆ ಒಂದು ಆಳವಾದ ತತ್ವವು ಅಡಗಿದೆ. ನಾವು ನಮ್ಮ ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚುತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ದೀಪಲಕ್ಷ್ಮಿಯನ್ನು ಪ್ರಾರ್ಥಿಸುತ್ತೇವೆ.

ದೀಪದ ಮಹತ್ವ

ದೀಪದ ಮಹತ್ವ

ದೀಪದ ತಳಭಾಗ: (ಕಮಲ ಪಾದ): ಬ್ರಹ್ಮದೇವ

ದೀಪದ ಸ್ತಂಭ: ವೆಂಕಟೇಶ್ವರ

ಎಣ್ಣೆ/ತುಪ್ಪವನ್ನು ಹಾಕುವ ಭಾಗ: ರುದ್ರ

ದೀಪದ ಮಹತ್ವ

ದೀಪದ ಮಹತ್ವ

*ಬತ್ತಿಯನ್ನು ಇಡುವ ಭಾಗ: ಮಹೇಶ್ವರ

*ಬತ್ತಿಯ ತುದಿ ಭಾಗ : ಸದಾಶಿವ

*ತುಪ್ಪ/ಎಣ್ಣೆ:ನಾಥಂ

ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ

ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ

ಈ ಮೊದಲೆ ಹೇಳಿದಂತೆ ದೀಪವನ್ನು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪವಾಗಿ ಆರಾಧಿಸಲಾಗುತ್ತದೆ. ದೀಪದ ಐದು ಮುಖಗಳು ಪ್ರತಿಯೊಬ್ಬ ಹೆಂಗಸು ಪಡೆಯಬೇಕಾದ ಐದು ಗುಣಗಳನ್ನು ತಿಳಿಸುತ್ತದೆ. ಅವುಗಳು ಯಾವುವೆಂದರೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ

ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ

*ಪ್ರೀತಿ

*ಬುದ್ಧಿವಂತಿಕೆ

*ಧೃಢನಿಶ್ಚಯ

*ತಾಳ್ಮೆ

*ಎಚ್ಚರಿಕೆ

ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ...

ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ...

ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮಹಿಳೆಯರ ಮನಸ್ಸಿಗೆ ಹೋಲಿಸಲಾಗುತ್ತದೆ. ಯಾವಾಗ ದೀಪವನ್ನು ಹಚ್ಚಲಾಗುತ್ತದೆಯೋ, ಆಗ ಮಹಿಳೆಯರ ಮನಸ್ಸಿನಲ್ಲಿ ಪ್ರಾಮುಖ್ಯತೆಯ ಅರಿವು ಉಂಟಾಗುತ್ತದೆ. ದೀಪವನ್ನು ಹಚ್ಚುವುದು ಎಂದರೆ ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ. ಇದು ನಮಗೆ ಬೌದ್ಧಿಕತೆ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ...

ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ...

ಇತ್ತೀಚಿನ ದಿನಗಳಲ್ಲಿ ಗಂಡಸರು ಸಹ ದೇವಾಲಯಗಳಲ್ಲಿ ದೀಪವನ್ನು ಹಚ್ಚುವುದನ್ನು ನೋಡಬಹುದು. ಕೆಲವರು ದೇವಾಲಯಗಳಲ್ಲಿನ ನಂದಾದೀಪಗಳಿಗೆ ಎಣ್ಣೆಯನ್ನು ದಾನ ಮಾಡುತ್ತಾರೆ. ಒಂದು ವೇಳೆ ನೀವು ಪ್ರತಿದಿನವು ನಿಮ್ಮ ಮನೆಯಲ್ಲಿ ಕೆಲವೊಂದು ಶ್ಲೋಕಗಳನ್ನು ಹೇಳಿಕೊಂಡು ದೀಪವನ್ನು ಬೆಳಗಿದರೆ, ಇದರಿಂದ ನಿಮ್ಮ ಜೀವನವು ಸಹ ಬೆಳಗುತ್ತದೆ ಎಂದು ಹೇಳಲಾಗುತ್ತದೆ.

ಸಲಹೆ

ಸಲಹೆ

* ನೀವು ದೇವರಿಗೆ ಆರತಿಯನ್ನು ಮಾಡುವಾಗ, ದೀಪವನ್ನು "ॐ" ಆಕಾರದಲ್ಲಿ ಕನಿಷ್ಠ ಮೂರು ಬಾರಿಯಾದರು, ದೇವರ ಮೂರ್ತಿಯ ಅಡಿಯಿಂದ ಮುಡಿಯವರೆಗೆ ಆರತಿ ಮಾಡಿ.

* ದೀಪವನ್ನು ಬೆಳಗಲು ಎಣ್ಣೆ/ತುಪ್ಪ ಅಥವಾ ಎಣ್ಣೆ-ತುಪ್ಪಗಳ ಮಿಶ್ರಣವನ್ನು ಬಳಸಬಹುದು.

* ದೀಪಗಳು ಅದೃಷ್ಟದ ಸಂಕೇತ - ಒಂದು ವೇಳೆ ನಿಮಗೆ ಯಾರಾದರು ದೀಪವನ್ನು ಉಡುಗೊರೆಯಾಗಿ ನೀಡಿದರೆ, ಅದನ್ನು ತುಂಬು ಹೃದಯದಿಂದ ಸ್ವೀಕರಿಸಿ. ಒಂದು ವೇಳೆ ದೀಪ ಬೆಳಗುತ್ತಿದ್ದಲ್ಲಿ, ಅದು ಶುಭ ಶಕುನ.

ಸಲಹೆ

ಸಲಹೆ

* ಕನಿಷ್ಠ ಪಕ್ಷ ಶುಕ್ರವಾರಗಳಂದು ದೇವಿಯ ಮುಂದೆ ದೀಪವನ್ನು ಎಳ್ಳೆಣ್ಣೆಯಿಂದ ಬೆಳಗಿ.

* ಕಾರ್ತಿಕ ಮಾಸದಲ್ಲಿ ಮನೆಯ ಮುಂದೆ ದೀಪಗಳನ್ನು ಬೆಳಗುವುದು ಒಳ್ಳೆಯದು ಎಂದು ಹೇಳುತ್ತಾರೆ. ಇದರಿಂದ ಮನೆಗೆ ಅಷ್ಟೈಶ್ವರ್ಯಗಳು ಬರುತ್ತವೆ ಎಂಬ ನಂಬಿಕೆ ಇದೆ.

ಸಲಹೆ

ಸಲಹೆ

* ಯಾವಾಗಲು ದೀಪಕ್ಕೆ ಅರಿಶಿನ ಕುಂಕುಮ ಮತ್ತು ಗಂಧದ ಪುಡಿಯನ್ನು ಹಚ್ಚಿರಿ.

* ದೀಪಕ್ಕೆ ಹೂವುಗಳನ್ನು ಸಹ ಅರ್ಪಿಸಿ.

* ದೀಪವನ್ನು ಹಚ್ಚುವ ಮುನ್ನ ಗಣಪತಿಯನ್ನು ಪ್ರಾರ್ಥಿಸಿ, ನಂತರ ನಿಮ್ಮ ಕುಲದೇವರನ್ನು ಪ್ರಾರ್ಥಿಸಿ, ಆಮೇಲೆ ದೀಪವನ್ನು ಬೆಳಗಿ.

English summary

The Importance of Lamp in Hindu Culture

In our Hindu culture, lighting a lamp denotes dispelling away darkness. The lamp is, in most Indian languages, called as “Jyoti”. When we pray to Goddesses by lighting a lamp, the belief is that we will be richly rewarded with tremendous prosperity. Married women or girls of marriageable age are always advised to light a lamp and pray for the welfare of their family, pray for marriage to a good boy, pray for motherhood.
X
Desktop Bottom Promotion