For Quick Alerts
ALLOW NOTIFICATIONS  
For Daily Alerts

ಜ್ಞಾನ ದೇವತೆ ಸರಸ್ವತಿಯನ್ನು ವಿದ್ಯಾರ್ಥಿಗಳು ಏಕೆ ಪೂಜಿಸಬೇಕು?

|

ಹಿಂದೂ ಧರ್ಮದಲ್ಲಿ ಹಲವಾರು ದೇವ ದೇವತೆಗಳನ್ನು ಬೇರೆ ಬೇರೆ ಕಾರಣಕ್ಕಾಗಿ ಪೂಜಿಸಲಾಗುತ್ತದೆ. ಬ್ರಹ್ಮನನ್ನು ಸೃಷ್ಟಿಕರ್ತ ಎಂದು ಪೂಜಿಸಿದರೆ, ವಿಷ್ಣುವನ್ನು ಪರಿಪಾಲಕ ಎಂಬುದಾಗಿ ಆರಾಧಿಸುತ್ತಾರೆ. ಶಿವನನ್ನು ವಿನಾಶ ಮಾಡಿ ಪೊರೆಯುವವರು ಎಂಬುದಾಗಿ ಬಣ್ಣಿಸಿ ಪೂಜಿಸಲಾಗುತ್ತದೆ. ಋಣಾತ್ಮಕ ಅಂಶಗಳನ್ನು ನಮ್ಮಿಂದ ಹೊಡೆದೋಡಿಸಿ ಒಳ್ಳೆಯತನವನ್ನು ನೆಲೆಸುವಂತೆ ಮಾಡುವವರು ಎಂಬುದಾಗಿ ಆರಾಧಿಸುತ್ತಾರೆ.

ಈ ಮೂವರು ದೇವತೆಗಳನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನದಲ್ಲಿ ಕಾಣಲಾಗುತ್ತದೆ. ಅಂತೆಯೇ ಸರಸ್ವತಿ, ಲಕ್ಷ್ಮೀ, ಮತ್ತು ಪಾರ್ವತಿಯನ್ನು ಸಮಾನ ಶಕ್ತಿ ನೆಲೆಯಲ್ಲಿ ಪೂಜಿಸಲಾಗುತ್ತದೆ. ತ್ರಿದೇವಿಗಳಲ್ಲಿ ಒಬ್ಬರಾಗಿರುವ ಸರಸ್ವತಿಯನ್ನು ವಿದ್ಯಾ ದೇವತೆಯಾಗಿ ಪೂಜಿಸಲಾಗುತ್ತದೆ. ಭಾರತದ ಹೆಚ್ಚಿನ ಸ್ಥಳಗಳಲ್ಲಿ ಸರಸ್ವತಿಯನ್ನು ವಿದ್ಯಾ ದೇವತೆಯಾಗಿ ಕಂಡು ಪೂಜಿಸುತ್ತಾರೆ ಹಂಸದ ಮೇಲೆ ಸರಸ್ವತಿ ನೆಲೆಗೊಂಡು ಪೂಜಿಸಲ್ಪಡುತ್ತಾರೆ.

ದೇವರನ್ನು ಹೊತ್ತಿರುವ ವಾಹನಗಳು ಆ ದೇವರ ಅಂಶವನ್ನು ಪ್ರತಿನಿಧಿಸುತ್ತವೆ ಮತ್ತು ಆ ದೇವರಿಗಿರುವ ಮಹತ್ವವನ್ನು ತಿಳಿಸುತ್ತದೆ. ಇಂದಿನ ಲೇಖನದಲ್ಲಿ ಸರಸ್ವತಿ ದೇವಿಯ ವಾಹವವಾದ ಹಂಸದ ಬಗ್ಗೆ ತಿಳಿದುಕೊಳ್ಳೋಣ. ಪ್ರಥಮಮ್ ಭಾರತಿ ನಾಮ್, ದ್ವಿತೀಯಂ ಚ ಸರಸ್ವತಿ, ತ್ರಿತೀಯಂ ಶಾರದಾ ದೇವಿ ಚತುರ್ಥಮ್ ಹಂಸವಾಹಿನಿ ದೇವಿ ಸರಸ್ವತಿಯ ಕುರಿತಾಗಿರುವ ಮಂತ್ರ ಇದಾಗಿದ್ದು ಸರಸ್ವತಿಯ ವಿಶೇಷತೆಯನ್ನು ಈ ಮಂತ್ರದ ಮೂಲಕ ನಮಗೆ ತಿಳಿದುಕೊಳ್ಳಬಹುದಾಗಿದೆ. ಇದರ್ಥವೇನೆಂದರೆ ನಿಮ್ಮ ಪ್ರಥಮ ಹೆಸರು ಭಾರತಿ ಎರಡನೆಯ ಹೆಸರು ಸರಸ್ವತಿ ಮತ್ತು ಮೂರನೆಯ ಹೆಸರು ಶಾರದಾ ಮತ್ತು ನಾಲ್ಕನೆಯ ಹೆಸರು ಹಂಸವಾಹಿನಿಯಾಗಿದೆ.

lord saraswathi

ಹಂಸವಾಹಿನಿ ಎಂದರೆ ಹಂಸವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡವರಾಗಿದ್ದಾರೆ. ಹಂಸವನ್ನು ಬುದ್ಧಿವಂತ ಪಕ್ಷಿ ಎಂದು ಕರೆಯುತ್ತಾರೆ ಹರಳು ಮತ್ತು ಕಲ್ಲಿಗಿರುವ ವ್ಯತ್ಯಾಸವನ್ನು ಈ ಪಕ್ಷಿ ಶೋಧಿಸಿ ತಿಳಿಸುತ್ತದೆ. ತಪ್ಪು ಮತ್ತು ಸರಿಯ ನಡುವಿನ ವ್ಯತ್ಯಾಸವನ್ನು ಈ ಪಕ್ಷಿ ತಿಳಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದನ್ನು ನಮಗೆ ತಿಳಿಸುತ್ತದೆ. ಅಂತೆಯೇ ಹಾನಿಕಾರಕ ಮತ್ತು ಪ್ರಯೋಜನಕಾರಿ ಬಗ್ಗೆ ವಿವರವನ್ನು ನೀಡುತ್ತದೆ. ದೇವತೆಯು ತನ್ನ ಭಕ್ತರ ಇಂತಹ ಗುಣಗಳನ್ನು ಅಭಿನಂದಿಸುತ್ತಾರೆ ಮತ್ತು ಅವರ ಪ್ರಾರ್ಥನೆಗಳಿಗೆ ಒಲಿದು ಅವರನ್ನು ಮನ್ನಿಸುತ್ತಾರೆ.

ಹಂಸವು ಏನನ್ನು ಪ್ರತಿನಿಧಿಸುತ್ತದೆ

ಬಿಳಿ ಬಣ್ಣದ ಹಂಸವು ಶಾಂತಿಯ ಸಂಕೇತವಾಗಿದೆ. ತನ್ನ ಭಕ್ತರನ್ನು ಶಾಂತಿಯಿಂದ ಪೊರೆಯುತ್ತಾರೆ. ಬಿಳಿ ಬಣ್ಣ ಆಕೆಗೆ ಪ್ರಿಯವಾಗಿದೆ. ಎಕಾಗ್ರತೆಯನ್ನು ಪಡೆದುಕೊಳ್ಳಲು ಈ ಬಣ್ಣ ನೆರವಾಗುತ್ತದೆ. ಅದಕ್ಕಾಗಿಯೇ ವಿದ್ಯಾರ್ಥಿಗಳು ಪಾಠವನ್ನು ಅಭ್ಯಾಸಿಸುವಾಗ ಬಿಳಿ ಬಣ್ಣದ ಉಡುಪನ್ನು ಧರಿಸಿ ಓದುವಂತೆ ಸೂಚಿಸಲಾಗುತ್ತದೆ. ಇನ್ನು ಧ್ಯಾನ ಮಾಡುವಾಗ ಕೂಡ ಬಿಳಿ ಬಣ್ಣದ ಉಡುಪನ್ನು ಧರಿಸಿ ಈ ಕಾರ್ಯವನ್ನು ನಡೆಸುತ್ತಾರೆ. ಶಾಂತಿಯಿಂದ ಒಡಗೂಡಿರುವ ಪ್ರತಿಯೊಂದು ಕಾರ್ಯ ಕೂಡ ಸರಸ್ವತಿಗೆ ಪ್ರಿಯವಾದುದಾಗಿದೆ. ಪ್ರೀತಿ ಮತ್ತು ಕ್ಷಮಾಪಣೆಯನ್ನು ಆಕೆ ಮನ್ನಿಸುತ್ತಾರೆ. ಪ್ರೀತಿಯನ್ನು ಹರಡುವವರನ್ನು ಮತ್ತು ತಪ್ಪುಗಳನ್ನು ಮನ್ನಿಸುವ ಗುಣವಿರುವವನ್ನು ಆಕೆ ಇಷ್ಟಪಡುತ್ತಾರೆ.

ಸರಸ್ವತಿ ದೇವರನ್ನು ಏಕೆ ಪೂಜಿಸುತ್ತಾರೆ

ತನ್ನ ಭಕ್ತರನ್ನು ಸರಸ್ವತಿಯು ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಹರಸುತ್ತಾರೆ. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಮೊದಲಿಗೆ ಸರಸ್ವತಿಯನ್ನು ಪೂಜಿಸುತ್ತಾರೆ. ಕಲಾವಿದರು, ಸಂಗೀತಗಾರರು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈಕೆ ಪ್ರಮುಖ ದೇವಿಯಾಗಿದ್ದಾರೆ. ದೇವಿಯಿಂದ ತಮ್ಮ ಬೇರೆ ಬೇರೆ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಭಕ್ತರು ಆಕೆಯನ್ನು ವಿಧವಿಧವಾಗಿ ನೆನೆಯುತ್ತಾರೆ. ಏಕಾಗ್ರತೆಯನ್ನು ಹೆಚ್ಚಿಸುವ, ಬುದ್ಧಿಯನ್ನು ಎಚ್ಚರಗೊಳಿಸುವ, ಮಾನಸಿಕ ಬೆಳವಣಿಗೆ ಮತ್ತು ಜ್ಞಾನವನ್ನು ಹೆಚ್ಚಿಸಲು ದೇವಿಯನ್ನು ಸಂಪ್ರೀತಗೊಳಿಸಲು ಈ ಮಂತ್ರಗಳನ್ನು ಪಠಿಸುತ್ತಾರೆ. ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಯಾವುದೇ ದಿನವನ್ನು ಅಯ್ಕೆಮಾಡಿಕೊಳ್ಳಬಹುದಾಗಿದೆ. ಬಿಳಿ ಹೂವುಗಳು, ಬಿಳಿ ಬಟ್ಟೆಗಳು, ಶ್ರೀಗಂಧದ ಪೇಸ್ಟ್, ಅಗರಬತ್ತಿ, ವೀಳ್ಯದೆಲೆ, ದುರ್ವಾ ಹುಲ್ಲು, ತೆಂಗಿನಕಾಯಿಯನ್ನು ಇರಿಸಿ ದೇವರನ್ನು ಪ್ರಾರ್ಥಿಸಬೇಕು. ತಮ್ಮ ಸಂಗೀತ ಪರಿಕರಗಳನ್ನು ಕೂಡ ಪೂಜಿಸಿ ನಂತರವಷ್ಟೇ ಅದನ್ನು ನುಡಿಸುತ್ತಾರೆ. ಸರಸ್ವತಿಗೆ ನೀಡುವ ವಸ್ತುಗಳನ್ನು ಮಹತ್ವದ್ದು ಎಂದು ಕಂಡುಕೊಳ್ಳಲಾಗುತ್ತದೆ ಮತ್ತು ವ್ಯಕ್ತಿಯ ವೃತ್ತು ಜೀವನವನ್ನು ಇದು ಬೆಳೆಸುತ್ತದೆ.

ಸರಸ್ವತಿ ದೇವಿಯ' ಪೂಜಾ ವಿಧಿ ವಿಧಾನ....

ನಿಮ್ಮ ಮನೆ ಅಥವಾ ಪೂಜೆ ಸಲ್ಲಿಸುವ ಸ್ಥಳವನ್ನು ಸ್ವಚ್ಛ ಗೊಳಿಸಿ
ಮೊತ್ತ ಮೊದಲನೆಯದಾಗಿ ನಿಮ್ಮ ಮನೆ ಅಥವಾ ಪೂಜೆ ಸಲ್ಲಿಸುವ ಸ್ಥಳವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೊಕ್ಕಟಗೊಳಿಸಬೇಕು. ಪೂಜಾದಿನದಂದು ಸ್ವಚ್ಛತೆಗೆ ಅವಕಾಶವಿಲ್ಲ, ಅಂದರೆ ಪೂಜಾದಿನದ ಮುನ್ನಾದಿನದ ಸಂಜೆಗೂ ಮೊದಲೇ ಸ್ವಚ್ಛತೆಯ ಕಾರ್ಯ ಮುಗಿಸಿಬಿಡಬೇಕು. ಮನೆಯಲ್ಲಿ ನವರಾತ್ರಿಗೆಂದು ಮನೆಯ ಸ್ವಚ್ಛತೆ ಈಗಾಗಲೇ ಆಗಿದ್ದರೂ ಸಹಾ ಸರಸ್ವತಿ ಪೂಜೆಯ ಮುನ್ನಾದಿನ ಇನ್ನೊಂದು ಬಾರಿ ಸ್ವಚ್ಛಗೊಳಿಸಬೇಕು. ವಿಶೇಷವಾಗಿ ಪುಸ್ತಕಗಳು, ಸಂಗೀತ ಉಪಕರಣಗಳು, ಮಾಹಿತಿ ಸಾಧನಗಳು, ಒಟ್ಟಾರೆ ವಿದ್ಯೆಗೆ ಪೂರಕವಾದ ಯಾವುದೇ ವಸ್ತುಗಳಿದ್ದರೂ ಸ್ವಚ್ಛಗೊಳಿಸಿ ಒಪ್ಪ ಓರಣಗೊಳಿಸಿ ಮನೆಯನ್ನು ಸಜ್ಜುಗೊಳಿಸಬೇಕು. ಇದಕ್ಕೆ ಕಂಪ್ಯೂಟರ್ ಲ್ಯಾಪ್ ಟಾಪ್‌ಗಳೂ ಹೊರತಲ್ಲ.

ಸರಸ್ವತಿ ಶ್ಲೋಕ ಪಠಿಸಿ

ಸರಸ್ವತಿ ಶ್ಲೋಕ ಪಠಿಸಿ ಪೂಜೆಗೂ ಮುನ್ನ ದೀಪವನ್ನು ಹಚ್ಚಿ ಅಗರಬತ್ತಿಗಳಿಂದ ವಾತಾವರಣವನ್ನು ಆಹ್ಲಾದಗೊಳಿಸಿ. ಅಗರಬತ್ತಿಗಳು ಎಂದರೆ ಕೆಮ್ಮು ಬರುವಷ್ಟು ಹೊಗೆ ಹಾಕುವ ಅಗತ್ಯವಿಲ್ಲ, ಬದಲಿಗೆ ನವಿರಾದ ನಸುಪರಿಮಳ ವ್ಯಾಪಿಸಿದರೆ ಸಾಕು. ಪೂಜೆಯ ಸಮಯಕ್ಕೂ ಮುನ್ನ ಸರಸ್ವತಿ ಶ್ಲೋಕ ಪಠಿಸಿ. ಇದರಿಂದ ಸರಸ್ವತಿ ದೇವಿ ನಿಮ್ಮ ಪೂಜಾ ಸ್ಥಳದಲ್ಲಿ ಆಗಮಿಸಲು ನೆರವಾಗುತ್ತದೆ.

ಕೆಲವು ಪುಸ್ತಕ ಮತ್ತು ಇತರ ವಿದ್ಯಾಪರಿಕರಗಳನ್ನಿರಿಸಿ

ವಿಗ್ರಹದ ಮುಂದೆ ನಿಮ್ಮ ಕಾರ್ಯಕ್ಕೆ ಅತಿ ಅಗತ್ಯವಾದ ಪುಸ್ತಕ, ಆಯುಧ, ಉಪಕರಣ ಅಥವಾ ವಾಹನದ ಬೀಗದ ಕೈ, ಒಟ್ಟಾರೆ ನಿಮ್ಮ ಉದ್ಯೋಗ ಅಥವಾ ಕಲಿಕೆಗೆ ಬಹುಮುಖ್ಯವಾದ ಪರಿಕರವನ್ನು ಪೂಜಾಸ್ಥಳದಲ್ಲಿರಿಸಿ ಪನ್ನೀರು ಚಿಮುಕಿಸಿ. ಈ ಉಪಕರಣಗಳಿಗೆ ಅರಿಶಿನದ ನಾಮವನ್ನು ಹಚ್ಚಿ.

ಬಿಳಿಯ ನೈವೇದ್ಯ

ಸರಸ್ವತಿ ಎಂದರೆ ವಿದ್ಯೆಯ ದೇವತೆ ಮಾತ್ರವಲ್ಲ, ಸ್ವಚ್ಛತೆಯ ಹರಿಕಾರಳೂ ಆಗಿದ್ದಾಳೆ. ಬಿಳಿಬಣ್ಣ ಸ್ವಚ್ಛತೆಯ ಸಂಕೇತವಾಗಿರುವ ಕಾರಣ ಪೂಜೆಯಲ್ಲಿ ಬಿಳಿಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಅಲಂಕಾರದಲ್ಲಿ ಬಿಳಿಯ ವಸ್ತುಗಳನ್ನೇ ಹೆಚ್ಚು ಬಳಸಿ. ವಿಶೇಷವಾಗಿ ನೈವೇದ್ಯಕ್ಕಾಗಿ ಬಿಳಿಯ ಬಣ್ಣದ ಖಾದ್ಯಗಳನ್ನೇ ತಯಾರಿಸಿ. ಉದಾಹರಣೆಗೆ ಅಕ್ಕಿಯ ಪಾಯಸ, ಹಾಲು, ಅವಲಕ್ಕಿಯ ಖಾದ್ಯ, ತಾಜಾ ತೆಂಗಿನ ತುರಿಯ ಖಾದ್ಯಗಳು ಇತ್ಯಾದಿಗಳನ್ನೇ ತಯಾರಿಸಿ ಪೂಜೆಯ ಸಮಯದಲ್ಲಿ ಅರ್ಪಿಸಿ.

ಸರಸ್ವತಿ ಧನಂ

ಕೆಲವು ಮನೆಗಳಲ್ಲಿ ಸರಸ್ವತಿ ಪೂಜೆಯ ಸಂದರ್ಭವನ್ನು ಹೆಣ್ಣುಮಕ್ಕಳಿಗೆ ಹೊಸ ಬಟ್ಟೆಗಳನ್ನು ಒದಗಿಸುವ ಸಂದರ್ಭವಾಗಿ ಬಳಸಲಾಗುತ್ತದೆ. ಈ ಉಡುಗೊರೆಗೆ ಸರಸ್ವತಿ ಧನಂ ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಬಳೆ, ಅಲಂಕಾರಿಕಾ ವಸ್ತುಗಳು, ವೀಳ್ಯದ ಎಲೆ, ಅಡಿಕೆ ಮತ್ತು ಬಾಳೆಹಣ್ಣುಗಳಿರುವ ಬುಟ್ಟಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇವೆಲ್ಲವೂ ಸರಸ್ವತಿಯ ಸಂಕೇತಗಳಾಗಿದ್ದು ಹೆಣ್ಣು ಮಕ್ಕಳಲ್ಲಿ ವಿವೇಕ ಮೂಡಲು ನೆರವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ. ಪೂಜೆಯ ಬಳಿಕವೂ ಮರುದಿನದವರೆಗೆ ಪುಸ್ತಕಗಳು, ಆಯುಧಗಳು, ಸಲಕರಣೆಗಳು, ಸಂಗೀತ ಉಪಕರಣಗಳು ಮೊದಲಾದವುಗಳನ್ನು ಮುಟ್ಟಲು ಅವಕಾಶವಿಲ್ಲ. ಮರುದಿನ ಅಂದರೆ ದಶಮಿಯ ದಿನದ ವಿಜಯದಶಮಿಯ ಪೂಜೆಯ ಬಳಿಕವೇ ಈ ವಸ್ತುಗಳನ್ನು ಮುಟ್ಟಬಹುದು. ಪೂಜಾ ಸ್ಥಳದಲ್ಲಿಟ್ಟ ವಸ್ತುಗಳನ್ನೂ ಮೊದಲಿನ ಸ್ಥಾನಕ್ಕೆ ಹಿಂದಿರುಗಿಸಬೇಕು.

English summary

The Goddess Of Wisdom - Saraswati

Goddess Saraswati is one of the Trimurtis and the other two are Goddess Lakshmi and Goddess Parvati. A swan, known for wisdom, is the mount of the goddess. The white colour of the swan represents peace. She blesses her devotees with wisdom and knowledge as well as success. Students are often advised to wear white clothes for better concentration.
X
Desktop Bottom Promotion