ಗಣೇಶ ಚತುರ್ಥಿ ಹಬ್ಬದ ವಿಶೇಷತೆ, ಹಿನ್ನೆಲೆ, ಹಾಗೂ ಮಹತ್ವ

By: Hemanth
Subscribe to Boldsky

ಗಣೇಶ ಚತುದರ್ಶಿಯಂದು ಆರಂಭವಾಗುವ ಗಣೇಶ ದೇವರ ಹುಟ್ಟುಹಬ್ಬದ ಸಂಭ್ರಮವು ಅನಂತಚತುದರ್ಶಿಯ ತನಕವು ಮುಂದುವರಿಯುವುದು. ಹಿಂದೂ ಧರ್ಮಿಯರ ಪ್ರತಿಯೊಂದು ಮನೆ ಹಾಗೂ ದೇವಾಲಯಗಳಲ್ಲಿ ಸಂಭ್ರಮವನ್ನು ಆಚರಿಸಲಾಗುವುದು. ಗಜಮುಖನಾಗಿರುವ ಗಣಪತಿ ದೇವರಿಗೆ ಹಿಂದೂ ಪುರಾಣಗಳಲ್ಲಿ ತನ್ನದೇ ಆದಂತಹ ಸ್ಥಾನವಿದೆ. ಗಣಪತಿ ದೇವರ ಹುಟ್ಟು ಮತ್ತು ಹಲವಾರು ಸಾಹಸಮಯ ಕಥೆಗಳ ಬಗ್ಗೆ ನಾವು ಕೇಳಿದ್ದೇವೆ. ಪುರಾಣಗಳಲ್ಲಿ ಗಣಪತಿಯ ಬಗ್ಗೆ ಹಲವಾರು ರೀತಿಯ ಕಥೆಗಳು ಇವೆ.

ಗಣಪತಿಯ ಆರಾಧಕರು ಒಂದೊಂದು ರೂಪವನ್ನು ಆರಾಧಿಸಿಕೊಂಡು ಬರುತ್ತಾರೆ. ದಕ್ಷಿಣ ಭಾರತದಲ್ಲಿ ಗಣಪತಿಯು ಬ್ರಹ್ಮಚಾರಿಯೆಂದು ಪೂಜಿಸಲಾಗುತ್ತದೆ. ಆದರೆ ಇತರ ಕೆಲವೊಂದು ಕಡೆಗಳಲ್ಲಿ ಗಣಪತಿಯು ರಿದ್ಧಿ ಮತ್ತು ಸಿದ್ಧಿ ಎನ್ನುವ ಸೋದರಿಯರನ್ನು ಮದುವೆಯಾಗಿದ್ದಾರೆಂಬ ಕಥೆಯಿದೆ. ಗಣಪತಿ ದೇವರ ಬಗ್ಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕಥೆ ಹಾಗೂ ನಂಬಿಕೆಯಿದೆ.

ಕೆಲವು ಕಡೆಗಳಲ್ಲಿ ಗಣಪತಿ ದೇವರು ಬುದ್ಧಿ(ಜ್ಞಾನ), ಸಿದ್ಧಿ(ಆಧ್ಯಾತ್ಮಿಕ ಶಕ್ತಿ) ಮತ್ತು ರಿದ್ಧಿ(ಸಮೃದ್ಧಿ)ಯನ್ನು ಮದುವೆಯಾಗಿದ್ದಾರೆಂದು ನಂಬುತ್ತಾರೆ. ಇನ್ನು ಕೆಲವು ಕಡೆ ವಿದ್ಯೆ ಹಾಗೂ ಕಲೆಯ ದೇವತೆ ಸರಸ್ವತಿಯನ್ನು ಗಣಪತಿ ದೇವರು ಮದುವೆಯಾಗಿದ್ದಾರೆಂದು ಹೇಳಲಾಗುತ್ತದೆ. 

ಗಣಪತಿ ದೇವರು ಮತ್ತು ಅವರ ಸಂಗಾತಿಗಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳು ಹಲವಾರು ರೀತಿಯ ಗೊಂದಲಗಳನ್ನು ಉಂಟು ಮಾಡುತ್ತದೆ. ಶಿವಪುರಾಣದಲ್ಲಿ ಗಣಪತಿ ದೇವರ ಮದುವೆ ಬಗ್ಗೆ ವರ್ಣನೆಯಿದೆ. ಪ್ರಜಾಪತಿಯ ಇಬ್ಬರು ಮಕ್ಕಳಾದ ಸಿದ್ಧಿ ಮತ್ತು ಬುದ್ಧಿಯನ್ನು ಮದುವೆಯಾಗಲು ಗಣೇಶ ಹಾಗೂ ಅವರ ಸೋದರ ಸ್ಕಂದ ಸ್ಪರ್ಧೆ ನಡೆಸುತ್ತಾರೆ.

ಗಣಪತಿ ದೇವರು ತಮ್ಮ ಜ್ಞಾನದಿಂದ ಸ್ಪರ್ಧೆಯನ್ನು ಗೆದ್ದುಕೊಳ್ಳುವರು ಮತ್ತು ಅವಳಿ ಸೋದರಿಯರಾಗಿರುವ ಬುದ್ಧಿ ಹಾಗೂ ಸಿದ್ಧಿಯನ್ನು ಮದುವೆ ಮಾಡಿಕೊಡಬೇಕೆಂದು ತನ್ನ ತಂದೆತಾಯಿ(ಶಿವಪಾರ್ವತಿ) ಅವರಲ್ಲಿ ಬೇಡಿಕೊಳ್ಳುವರು. ಗಣಪತಿ ದೇವರಿಗೆ ಕ್ಷೇಮ ಮತ್ತು ಲಾಭ ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತದೆ. ಗಣಪತಿ ದೇವರು ಹಾಗೂ ಅಷ್ಟಸಿದ್ಧಿ ಬಗ್ಗೆ ಇರುವ ಸಂಬಂಧವು ಹೆಚ್ಚಿನವರಿಗೆ ತಿಳಿದಿದೆ. ಯೋಗದ ಮೂಲಕ ಸಾಧಿಸಬಹುದಾದ ಎಂಟು ಆಧ್ಯಾತ್ಮಿಕ ಸಾಧನೆಯನ್ನು ಅಷ್ಟಸಿದ್ಧಿ ಎಂದು ಕರೆಯುತ್ತಾರೆ.

ಗಣಪತಿ ದೇವರ ಸುತ್ತಲು ಇರುವಂತಹ ಎಂಟು ಮಂದಿ ಮಹಿಳೆಯರು ಈ ಎಂಟು ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿನಿಧಿಸುವರು. ಕೆಲವರ ಪ್ರಕಾರ ಗಣಪತಿ ದೇವರು ಸಂತೋಷಿ ಮಾ ಅವರ ಮಗನಂತೆ. ಪಶ್ಚಿಮ ಬಂಗಾಳದಲ್ಲಿ ಗಣಪತಿ ದೇವರೊಂದಿಗೆ ಬಾಳೆಗಿಡವನ್ನು ಪೂಜಿಸಲಾಗುತ್ತದೆ.  

Lord Ganesha

ದುರ್ಗಾ ಪೂಜೆಯ ಮೊದಲ ದಿನದಂದು ಬಾಳೆ ಗಿಡಕ್ಕೆ ಕೆಂಪು ಬಣ್ಣದ ಅಂಚಿರುವ ಬಿಳಿ ಬಣ್ಣದ ಸೀರೆಯನ್ನು ಉಡಿಸಲಾಗುತ್ತದೆ. ಬಾಳೆಗಿಡದ ಎಲೆಗಳಿಗೆ ಕುಂಕುಮವನ್ನು ಸಿಂಪಡಿಸಲಾಗುತ್ತದೆ. ಕಾಲ ಬೋ ಎಂದು ಕರೆಯಲಾಗುವ ಬಾಳೆಗಿಡವನ್ನು ಪೂಜಿಸಿದ ಬಳಿಕ ಗಣಪತಿ ದೇವರ ಬದಿಯಲ್ಲಿಡಲಾಗುತ್ತದೆ. ಕಾಲ ಬೋ ಗಣಪತಿ ದೇವರ ಮಡದಿಯೆಂದು ಪಶ್ಚಿಮ ಬಂಗಾಳದವರು ಭಾವಿಸಿದ್ದಾರೆ.

ಗಣೇಶ ದೇವರು ಯಾವಾಗಲೂ ರಿದ್ಧಿ ಮತ್ತು ಸಿದ್ಧಿ ಜತೆಗೆ ಇರುವ ಕಾರಣ ಅವರ ಸಂಬಂಧದ ಬಗ್ಗೆ ಅಸ್ಪಷ್ಟತೆ ಇದೆ. ಹಿಂದೂ ಧರ್ಮದಲ್ಲಿ ಹೆಚ್ಚಿನವರು ಗಣಪತಿ ದೇವರು ಬ್ರಹ್ಮಚಾರಿಯೆಂದು ನಂಬಿದ್ದಾರೆ. ಜೋಡಿಯ ಬಗ್ಗೆ ಯಾವುದೇ ರೀತಿಯ ಪೌರಾಣಿಕ ಸಾಕ್ಷ್ಯಗಳು ಇಲ್ಲ. ಆದರೆ ಶಿವ ಪುರಾಣದಲ್ಲಿ ಬುದ್ಧಿ ಮತ್ತು ಸಿದ್ಧಿ ಜತೆಗೆ, ಮತ್ಸ್ಯ ಪುರಾಣದಲ್ಲಿ ರಿದ್ಧಿ ಮತ್ತು ಬುದ್ಧಿ ಜತೆಗೆ ಗಣಪತಿ ದೇವರಿದ್ದಾರೆ. ಹಿಂದೂ ಧರ್ಮದಲ್ಲಿ ಗಣಪತಿ ದೇವರನ್ನು ರಿದ್ಧಿ ಮತ್ತು ಸಿದ್ಧಿಯೊಂದಿಗೆ ಪೂಜಿಸಲಾಗುತ್ತದೆ. ಗಣೇಶ ಚತುದರ್ಶಿಯಂದು ಗಣಪತಿ ದೇವರನ್ನು ಜಪಿಸುವಾಗ ರಿದ್ಧಿ ಮತ್ತು ಸಿದ್ಧಿಯನ್ನು ಜಪಿಸಿದರೆ ಸುಖ ಸಮೃದ್ಧಿ ನಿಮ್ಮದಾಗುವುದು.

English summary

The Consorts Of Lord Ganesha

The nine days Puja of Ganesh Chaturthi has commenced on a grand note. Every street and temple is celebrating the birth of Lord Ganesha. The elephant head god has a very significant and special place in the Hindu mythology. We all know the various birth and bravery stories of Lord Ganesha. But, very few people know the love story of the elephant head god. The marital status of Lord Ganesha has been described in the mythological stories.
Story first published: Tuesday, August 22, 2017, 8:01 [IST]
Subscribe Newsletter