Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಈ ದೇವಸ್ಥಾನಗಳ ಹೆಸರು ಕೇಳಿದರೆಯೇ ಮನದಲ್ಲಿ ಭಯ ಭಕ್ತಿ ಮೂಡುತ್ತದೆ
ದೇವಸ್ಥಾನಗಳನ್ನು ನಾವು ನಂಬಿಕೆಯೆ ಕೇಂದ್ರಬಿಂದುಗಳೆಂದು ಕರೆಯುತ್ತೇವೆ. ನಾವು ನಂಬುವ ದೇವರು ನಮ್ಮ ಕೈಬಿಡುವುದಿಲ್ಲ, ಪ್ರತಿಯೊಂದು ಸ್ಥರದಲ್ಲೂ ನಮ್ಮೊಂದಿಗೆ ಇರುತ್ತಾರೆ, ನಮ್ಮನ್ನು ಮಕ್ಕಳಂತೆ ಸಲಹುತ್ತಾರೆ ಎಂಬುದೇ ನಮ್ಮ ಜೀವನವನ್ನು ಮುನ್ನಡೆಸುವ ಶಕ್ತಿಯಾಗಿ ಕಾಯುತ್ತದೆ, ಈಗಲೂ ಕೂಡ ಇದನ್ನು ಚಾಚೂ ತಪ್ಪದೇ ನಮ್ಮ ಹಿಂದೂ ಧರ್ಮದಲ್ಲಿ ಪಾಲಿಸಿಕೊಂಡು ಬರುತ್ತಿದ್ದೇವೆ...
ಅದರಲ್ಲೂ ನಮ್ಮ ಹಿಂದೂ ಧರ್ಮದಲ್ಲಿ ದೈವ ಭಕ್ತಿ ಹೇಗಿದೆ ಎಂದರೆ ಕಲ್ಲಿಗೂ ಪೂಜೆ ಮಾಡುವ ಮುಗ್ಧ ಭಕ್ತಿಯಂತಹದ್ದು. ಬರಿಯ ಕಲ್ಲಿಗೆ ಕುಂಕುಮ ಅರಿಶಿನ ಹೂಗಳಿಂದ ಅಲಂಕಾರ ಮಾಡಿದರೆ ಸಾಕು ಒಂದು ದಿನ ಆ ಕಲ್ಲಿಗಾಗಿ ದೇವಸ್ಥಾನವೇ ನಿರ್ಮಾಣವಾಗುತ್ತದೆ. ಹೀಗೆ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ದೇವರಿದ್ದಾರೆ ಎಂಬ ನಂಬಿಕೆ ನಮ್ಮದಾಗಿದೆ.
ಈಗಲೂ ಅಷ್ಟೇ ಭಾರತದ ಪ್ರತಿ ಹಳ್ಳಿಯೂ ಒಂದಲ್ಲ ಒಂದು ಇತಿಹಾಸ ಹೊಂದಿದ ದೇವಸ್ಥಾನವೊಂದನ್ನು ಹೊಂದಿರುತ್ತದೆ. ಇದನ್ನು ಪಟ್ಟಿಮಾಡಲು ಹೋದರೆ ವರ್ಷಗಟ್ಟಲೇ ಬೇಕಾದೀತು. ಆದರೆ ಇವುಗಳಲ್ಲಿ ಕೆಲವು ಹೆಚ್ಚಿನ ಮಹತ್ವವನ್ನು ಹೊಂದಿದ್ದು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಇದಕ್ಕೆ ಭಕ್ತರು ನೀಡುವ ಕಾರಣವೆಂದರೆ ಈ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥಿಸುವುದರಿಂದ ತಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎಂಬುದು. ಈ ದೇವರಿಗೆ ಭಕ್ತರು ಜಾಗೃತ ದೇವರು ಎಂದು ಕರೆಯುತ್ತಾರೆ. ಭಾರತದಾದ್ಯಂತ ಇರುವ ಇಂಥ ದೇವಾಲಯಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ....

ಶಬರಿಮಲೈ
ಕೇರಳದ ಶಬರಿಮಲೈಯಲ್ಲಿರುವ ಈ ದೇವಾಲಯ ಅಯ್ಯಪ್ಪ ಸ್ವಾಮಿಗೆ ಮುಡಿಪಾದ ದೇವಾಲಯವಾಗಿದೆ. ಶಿವ ಮತ್ತು ವಿಷ್ಣುವಿನ ಏಕಮಾತ್ರ ಹೆಣ್ಣು ಅವತಾರವಾದ ಮೋಹಿನಿನ ಸಂಗದಿಂದ ಜನಿಸಿದ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತು ವರ್ಷಕ್ಕೊಂದು ಬಾರಿಯ ಮೇಳದಲ್ಲಿ ಭಾಗವಹಿಸುವುದರಿಂದ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂದು ಭಕ್ತರು ನಂಬುತ್ತಾರೆ. ಪ್ರತಿ ವರ್ಷ ಮೂರು ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ತಿರುಪತಿ ದೇವಾಲಯ
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ಬೆಟ್ಟದ ಮೇಲಿರುವ ಈ ದೇವಾಲಯ ಭಗವಾನ್ ವಿಷ್ಣುವಿನ ಒಂದು ಅವತಾರವಾದ ಬಾಲಾಜಿ ಅಥವಾ ವೆಂಕಟೇಶ್ವರ ದೇವರ ಆಲಯವಾಗಿದೆ. ಪುರಾಣದ ಪ್ರಕಾರ ಶ್ರೀಮಂತ ಕುಬೇರನಿಂದ ತನ್ನ ಮಗಳ ಮದುವೆಗಾಗಿ ಬಾಲಾಜಿ ಸಾಲ ಪಡೆದುಕೊಂಡಿದ್ದು ಈ ಸಾಲವನ್ನು ತೀರಿಸಲು ಭಕ್ತರಿಂದ ದೇಣಿಗೆಯನ್ನು ಸ್ವೀಕರಿಸುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಭಕ್ತರು ನೀಡುವ ಅಪಾರ ಧನಕನದ ಕಾರಣ ತಿರುಪತಿ ದೇವಾಲಯ ಭಾರತದ ಅತ್ಯಂತ ಹೆಚ್ಚಿನ ಆದಾಯವನ್ನು ಪಡೆಯುವ ದೇವಾಲಯವಾಗಿದೆ.

ಪರಿಶುದ್ಧ ಭಕ್ತರು ಮಾತ್ರ ಈ ದೇವಸ್ಥಾನಕ್ಕೆ ಪ್ರವೇಶಿಸಲು ಸಾಧ್ಯ!
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ವೈಷ್ಣೋದೇವಿ ದೇವಾಲಯವನ್ನು ಶೇರಾವಾಲಿ ಮಾತಾ ಎಂದೂ ಕರೆಯಲಾಗುತ್ತದೆ. ಹುಲಿಯನ್ನು ಸವಾರಿ
ಮಾಡುತ್ತಿರುವ ದೇವಿಯ ಈ ದೇವಾಲಯ ದುರ್ಗಮ ಬೆಟ್ಟದ ತುದಿಯಲ್ಲಿರುವ ಗುಹೆಯಲ್ಲಿದ್ದು ದರ್ಶನಕ್ಕೆ ತಲುಪುವುದು ಅಷ್ಟು ಸುಲಭವಲ್ಲ. ಕೇವಲ ದೇವಿಯ ಪರಿಶುದ್ಧ ಭಕ್ತರು ಮತ್ತು ಸತ್ಯಂತರು ಮಾತ್ರ ಈ ಸ್ಥಳವನ್ನು ತಲುಪಬಲ್ಲರು ಎಂಬ ನಂಬಿಕೆಯಿಂದ ಹೆಚ್ಚಿನ ಜನರು ಈ ಸ್ಥಳವನ್ನು ತಲುಪಲು ಶ್ರಮಿಸುತ್ತಾರೆ.

ಬೇಡಿದನ್ನು ಕರುಣಿಸುವ ಸಿದ್ಧಿ ವಿನಾಯಕ....
ಮಹಾರಾಷ್ಟ್ರದ ಮುಂಬೈ ನಗರದ ಪ್ರಭಾದೇವಿಯಲ್ಲಿರುವ ಜನನಿಬಿಡ ಸ್ಥಳದಲ್ಲಿರುವ ಸಿದ್ಧಿ ವಿನಾಯಕ ದೇವಾಲಯ ವಿನಾಯಕನಿಗೆ ಮುಡಿಪಾದ ದೇವಾಲಯವಾಗಿದೆ. ಗಣೇಶನಲ್ಲಿ ಕೇಳಿಕೊಂಡ ಯಾವುದೇ ಕೋರಿಕೆಯೂ ಇಲ್ಲಿ ಸಿದ್ಧಿಸುವುದು ಎಂಬ ನಂಬಿಕೆಯಿಂದಲೇ ಸಿದ್ಧಿ ಎಂಬ ಪದದ ಬಳಕೆಯಾಗಿದೆ.

ಸಾಯಿ ಬಾಬಾ
ಹಿಂದೂ ಮತ್ತು ಮುಸ್ಲಿಮರಿಂದ ಸಮಾನವಾಗಿ ಪ್ರವಾದಿ ಎಂದು ಪರಿಗಣಿಸಲ್ಪಟ್ಟ ಸಾಯಿ ಬಾಬಾರ ದೇವಾಲಯವಾದ ಶಿರ್ಡಿಯ ಸಾಯಿ ಬಾಬಾ ದೇವಾಲಯ ಎರಡೂ ಪಂಗಡಗಳ ನೆಚ್ಚಿನ ಯಾತ್ರಾಸ್ಥಳವಾಗಿದೆ. ಸಾಯಿ ಬಾಬಾ ಹದಿನಾರು ವರ್ಷದವರಿದ್ದಾಗ ತಪಸ್ಸು ಮಾಡಿದ್ದರೆಂದು ನಂಬಲಾದ ಬೇವಿನ ಮರವೂ ಧಾರ್ಮಿಕ ಮಹತ್ವ ಪಡೆದಿದೆ. ಅಷ್ಟೇ ಅಲ್ಲದೆ ಸಾಯಿ ಬಾಬಾರಿಗೆ ನೆರಳು ನೀಡಿತ್ತೆಂಬ ಕಾರಣದಿಂದ ಈ ರೆಂಬೆಯ ಎಲೆಗಳು ಸಿಹಿಯಾಗಿದೆ ಎಂದೂ ಉಳಿದ ರೆಂಬೆಗಳ ಎಲೆಗಳು ಕಹಿಯಾಗಿವೆ ಎಂದೂ ಜನರು ನಂಬುತ್ತಾರೆ. ಈ ಮರ ಇಂದಿಗೂ ಜೀವಂತವಿದ್ದು ಭಕ್ತರು ಎಲೆಗಳನ್ನು ಸೇವಿಸಲು ಉತ್ಸುಕರಾಗಿರುತ್ತಾರೆ.

ಸಾಯಿ ಬಾಬಾ
ರಾಮೇಶ್ವರಂ ದೇವಾಲಯ ತಮಿಳುನಾಡು ರಾಜ್ಯದ ಭೂಪಟ ನೋಡಿದರೆ ಸೂಜಿಯಂತೆ ಒಂದು ಭಾಗ ಶ್ರೀಲಂಕಾದತ್ತ ಚಾಚಿದ್ದು ಆ ಮುಳ್ಳಿನ ತುತ್ತ ತುದಿಯಲ್ಲಿರುವ ರಾಮೇಶ್ವರಂನಲ್ಲಿರುವ ಶಿವನ ದೇವಾಲಯ ಒಂದು ಜ್ಯೋತಿರ್ಲಿಂಗವಿರುವ ದೇವಾಲಯವಾಗಿದೆ. ಇಡಿಯ ವಿಶ್ವದಲ್ಲಿ ಒಟ್ಟು ಹನ್ನೆರಡು ಜ್ಯೋತಿರ್ಲಿಂಗಗಳಿದ್ದು ಇದರಲಿ ರಾಮೇಶ್ವರಂ ದೇವಾಲಯ ಪ್ರಮುಖವಾಗಿದೆ. ರಾಮಾಯಣದ ಪ್ರಕಾರ ಲಂಕೆಯ ಯುದ್ಧದ ಸಮಯದಲ್ಲಿ ಬ್ರಾಹ್ಮಣನೊಬ್ಬನನ್ನು ವಧಿಸಿದ ಪಾಪದಿಂದ ಮುಕ್ತಿ ಪಡೆಯಲು ಶಿವನಲ್ಲಿ ಪ್ರಾರ್ಥಿಸಲು ಈ ಸ್ಥಳವನ್ನು ಆಯ್ದುಕೊಂಡಿದ್ದ ಎಂದು ನಂಬಲಾಗಿದೆ.



Click it and Unblock the Notifications