For Quick Alerts
ALLOW NOTIFICATIONS  
For Daily Alerts

ಮದುವೆಗಾಗಿ ಇಟ್ಟ ಹಣದಿಂದ ಊರಿಗೆ ರಸ್ತೆಮಾಡಿಕೊಟ್ಟ ಯುವಕ: ವೈರಲ್ ಸ್ಟೋರಿ

|

ನನ್ನ ಮದುವೆ ತುಂಬಾ ಚೆನ್ನಾಗಿ ಮಾಡಬೇಕು, ಅದ್ಧೂರಿಯಾಗಿ ಮಾಡಬೇಕು ಎಂದು ಬಯಸಿ ಹಣ ಕೂಡಿಡುವವರನ್ನು ನೋಡುತ್ತೇವೆ. ಆದರೆ ಕೂಡಿಟ್ಟ ಹಣವನ್ನು ಪರೋಪಕಾರಕ್ಕೆ ನೀಡುವವರು ಕೆಲವೇ ಕೆಲವು ಮಂದಿಯಷ್ಟೇ... ನಾವಿಲ್ಲಿ ಅಂಥದ್ದೇ ಅಪರೂಪದ ವ್ಯಕ್ತಿಯನ್ನು ಪರಿಚಯ ಮಾಡಿಸುತ್ತಿದ್ದೇವೆ.
ಅವರು ತಮ್ಮ ಮದುವೆಗಾಗಿ ಕೂಡಿಟ್ಟ ಹಣದಲ್ಲಿ ತಮ್ಮ ಗ್ರಾಮಕ್ಕೆ ಒಂದು ಒಳ್ಳೆಯ ರಸ್ತೆ ಮಾಡಿಕೊಡುವ ಮೂಲಕ ಸರ್ಕಾರದ ತನ್ನ ಆಡಳಿತ ವೈಖರಿ ಕುರಿತು ಮೈ ಮುಟ್ಟಿ ನೋಡಿಕೊಳ್ಳುವಂಥ ಕೆಲಸ ಮಾಡಿದ್ದಾರೆ.

P Chandrasekaran
Tamil Nadu techie spends his marriage savings to build a good road for his village, netizen apperciating his work, read on....

ಅವರ ಹೆಸರು ಪಿ. ಚಂದ್ರಶೇಖರನ್‌. ವೃತ್ತಿಯಲ್ಲಿ ಟೆಕ್ಕಿ. ಅವರ ಊರಿನಲ್ಲಿ ಒಂದೊಳ್ಳೆಯ ರಸ್ತೆ ಇರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಯಾರೂ ಅದರತ್ತ ಗಮನ ಹರಿಸಿರಲಿಲ್ಲ. ಜನರಿಗೆ ಇದರಿಂದ ತುಂಬಾನೇ ಕಷ್ಟವಾಗುತ್ತಿತ್ತು.

ಚಂದ್ರಶೇಖರನ್‌ ಈ ವರ್ಷ ಸೆಪ್ಟೆಂಬರ್‌ನಲ್ಲಿ ಮದುವೆಯಾಗುವವರಿದ್ದು, ಮದುವೆಗಾಗಿ ಹಣ ಕೂಡಿಟ್ಟಿದ್ದರು, ಆದರೆ ರಸ್ತೆಯ ಪರಿಸ್ಥಿತಿ ನೀಡಿ ಬೇಸತ್ತು ತಾವೇ ರಸ್ತೆ ಸರಿ ಮಾಡಲು ಯೋಚಿಸಿದರು. ಇದರ ಪರಿಣಾಮ 25 ವರ್ಷದಿಂದ ಕಾಂಕ್ರಿಟ್‌ ಕಾಣದ ರಸ್ತೆ ಇದೀಗ ಹೊಸ ಕಾಂಕ್ರಿಟ್‌ನಿಂದಾಗಿ ಸುಂದರವಾಗಿ ಕಾಣುತ್ತಿದೆ, ಜನರು ಆರಾಮವಾಗಿ ಓಡಾಡುತ್ತಿದ್ದಾರೆ. ರಸ್ತೆ ಚೆನ್ನಾಗಿ ಮಾಡಲು 10.75 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ.

ಪಿ. ಚಂದ್ರಶೇಖರನ್‌ ತಂದೆ ಚಿಕ್ಕ ವ್ಯಾಪಾರಿ, ತಾಯಿ ಗೃಹಿಣಿ, ಕೊರೊನಾ ಸಾಂಕ್ರಮಿಕ ಸಮಯದಲ್ಲಿ ವರ್ಕ್‌ ಫ್ರಂ ಹೋಂ ಇದ್ದಾಗ ರಸ್ತೆ ಸರಿಪಡಿಸಲು ಕೋರಿ ಪಂಚಾಯಿತಿಗೆ ಅರ್ಜಿ ಹಾಕಿದ್ದರು, ಆಗಾಗ ಅಲ್ಲಿಗೆ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದರು, ಆದರೆ ಅವರಿಂದ ಸಮಧಾನಕರವಾದ ಯಾವುದೇ ಉತ್ತರ ಸಿಗುತ್ತಿರಲಿಲ್ಲ.

ನಮ್ಮಕ್ಕು ನಮ್ಮೇ ಸ್ಕೀಮ್‌ನಡಿಯಲ್ಲೂ ರಸ್ತೆ ಸರಿಪಡಿಸಲು ಆಫೀಸರ್‌ಗಳನ್ನು ಭೇಟಿಯಾದರು. ಆಗ ಟ್ಯಾಕ್ಸ್‌ ಎಲ್ಲಾ ಕಳೆದು ಹಣ ಬಂದದ್ದು ರಸ್ತೆ ಸರಿಪಡಿಸಲು ಸಾಕಾಗುತ್ತಿರಲಿಲ್ಲ, ಆಗ ತಮ್ಮ ಕೈಯಿಂದ ಹಣ ಸೇರಿಸಿ ರಸ್ತೆ ಸರಿ ಪಡಿಸಲು ಮುಂದಾದರು.

ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು
ಇವರು ರಸ್ತೆ ಸರಿಪಡಿಸಲು ಮುಂದಾಗ ನೀನು ಇದರಲ್ಲಿ ತಲೆ ಹಾಕಬೇಡ ಎಂದು ಅಲ್ಲಿಯ ಸ್ಥಳೀಯ ರಾಜಕಾರಣಿಗಳು ಬೆದರಿಕೆಯನ್ನು ಹಾಕಿದ್ದರು. ಆದರೆ ಚದ್ರಶೇಖರನ್‌ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲಿ ಸ್ಥಳೀಯರು ಇವರ ಬೆಂಬಲಕ್ಕೆ ನಿಂತರು, ಹೀಗಾಗಿ ರಸ್ತೆ ಸರಿಪಡಿಸಲು ಸಾಧ್ಯವಾಯ್ತು.

ಪಿ ಚಂದ್ರಶೇಖರನ್‌ ಅವರ ಕೆಲಸಕ್ಕೆ ವ್ಯಾಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

English summary

Tamil Nadu Techie Spends Marriage Savings To Build Road in His Native Village

Tamil Nadu techie spends his marriage savings to build a good road for his village, netizen appreciating his work, read on....
X
Desktop Bottom Promotion