For Quick Alerts
ALLOW NOTIFICATIONS  
For Daily Alerts

ಸಾಕಪ್ಪ-ಸಾಕು! ಇಂತಹ ಮೂಢನಂಬಿಕೆಗಳಿಂದ ಹೊರ ಬನ್ನಿ....

By Deepu
|

ಮೂಢನಂಬಿಕೆಗಳು ಜನರ ಜೀವನದ ಭದ್ರ ಬುನಾದಿ ಎಂದೇ ಹೇಳಬಹುದು. ಬೆಕ್ಕು ಅಡ್ಡಬಂದಲ್ಲಿ ಅಪಶಕುನ, ಕಾಗೆ ಕೂಗಿದಲ್ಲಿ ನೆಂಟರ ಆಗಮನ ನಾಯಿ ಊಳಿಟ್ಟರೆ ಮನೆಯ ಯಜಮಾನನಿಗೆ ಅಪಾಯ ಹೀಗೆ ನಾವು ನಂಬುವ ಮೂಢನಂಬಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ಇಂದಿನ ಜೀವನದಲ್ಲಿ ಇಷ್ಟು ಮುಖ್ಯವಾದ ಪಾತ್ರವನ್ನು ವಹಿಸಿರುವ ಮೂಢನಂಬಿಕೆ ಇತಿಹಾಸದಲ್ಲೂ ತನ್ನ ಗುರುತನ್ನು ಉಂಟುಮಾಡಿದೆ ಎಂಬುದೇ ಇದರ ವಿಶೇಷತೆಯಾಗಿದೆ.

ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಮೂಢನಂಬಿಕೆಗಳ ಪಟ್ಟಿಯನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಸಣ್ಣ ವಿಚಾರಗಳಿಂದ ಜನ್ಮತಾಳಿರುವ ಈ ಮೂಢನಂಬಿಕೆಗಳ ಭಂಡಾರ ಬೆಳೆಯುತ್ತಾ ಬೆಳೆಯುತ್ತಾ ದೃಢವಾಗುತ್ತಾ ಹೋಗಿದೆ. ಈ ನಂಬಿಕೆಗಳು ಎಂದಿಗೂ ಅಂತ್ಯವಿಲ್ಲ. ಬದಲಿಗೆ ಹೊಸ ಹೊಸ ನಂಬಿಕೆಗಳ ಜನ್ಮತಾಳುತ್ತಾ ಬರಲಿವೆ. ಕೆಲವೊಂದು ಮೂಢನಂಬಿಕೆಗಳು ಮನುಷ್ಯನ ಜೀವಕ್ಕೆ ಅಪಾಯವನ್ನು ತಂದೊಡ್ಡಿದರೆ, ಇನ್ನು ಕೆಲವೊಂದು ನೆನಪಿಸಿಕೊಂಡರೆ ಸುಮ್ಮನೆ ನಗು ತರಿಸುತ್ತವೆ! ಹಾಗಾದರೆ ಆ ಮೂಢನಂಬಿಕೆಗಳು ಯಾವುವು ಎಂಬುದನ್ನು ಮುಂದೆ ಓದಿ....

ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ?

ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ?

ತಿಂಗಳಿನ ಮುಟ್ಟು ಮಹಿಳೆಯರಿಗೆ ಸಂಭಂದಪಟ್ಟ ಮೂಢನಂಬಿಕೆ ಒಂದು ಕೀಳಾದ ಮತ್ತು ಪುರುಷ ಪ್ರಾಧಾನ್ಯವಾದದ್ದು. ಮೇಲ್ನೋಟಕ್ಕೆ ಮುಟ್ಟಿನ ಮಹಿಳೆಯರು ಅಶುದ್ಧಿ ಮತ್ತು ಅಶುಚಿಯೆಂದು ಪರಿಗಣಿಸಲಾಗಿದೆ. ಅಂತಹ ಮಹಿಳೆಯರನ್ನು ಅಡುಗೆಮನೆಯೊಳಗೆ ಸೇರಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಮಂಗಳಕರ ಕೆಲಸ ಕಾರ್ಯವನ್ನು ಮಾಡಲು ಅನುಮತಿ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಅಂತಹ ಮಹಿಳೆಯರ ಮುಖವನ್ನು ನೋಡುವುದೂ ಕೂಡ ಅಪಶಕುನವೆಂದು ಹೇಳುತ್ತಿದ್ದರು. ಹಾಗೆಂದು ಹಿಂದಿನ ಕಾಲದಲ್ಲಿ ಮುಟ್ಟು ಆಗುತ್ತಿರುವ ಮಹಿಳೆಯರು ಕುಟುಂಬದ ಇತರ ಸದಸ್ಯರಿಗೆ ಕಾಣಬಾರದೆಂದು ಮನೆಯ ಒಂದು ಪ್ರತ್ಯೇಕ ಮತ್ತು ಏಕಾಂತ ಕೋಣೆಯಲ್ಲಿ ಇಡುತ್ತಿದ್ದರು.

ಸೋಮವಾರದ ಉಪವಾಸ

ಸೋಮವಾರದ ಉಪವಾಸ

ವಿಶೇಷವಾಗಿ ಯುವತಿಯರು ಸೋಮವಾರದಂದು ಉಪವಾಸವಿರಬೇಕು ಎಂಬ ಮೂಢನಂಬಿಕೆ ಭಾರತದಲ್ಲಿ ಬೆಳೆದುಬಂದಿದೆ. ಸೋಮವಾರದಂದು ಉಪವಾಸವಿದ್ದು ಶಿವನನ್ನು ಆರಾಧಿಸಿದರೆ ಆಕೆಗೆ ಶಿವನಂತಹ ಪತಿ ದೊರಕುತ್ತಾನೆ ಎಂದು ನಂಬಲಾಗಿದೆ. ವೈಜ್ಞಾನಿಕವಾಗಿ ಈ ವಿಧಿಯನ್ನು ಅವಲೋಕಿಸಿದರೆ ಸೋಮವಾರದಂದು ಕೇವಲ ದ್ರವಾಹಾರವನ್ನು ಸೇವಿಸಿ ಉಪವಾಸವಿರುವ ಮೂಲಕ ಯುವತಿಯರ ಜೀರ್ಣಾಂಗಗಳು ಪೂರ್ಣವಾಗಿ ಕಲ್ಮಶರಹಿತವಾಗಲು ನೆರವಾಗುತ್ತದೆ. ಈ ದಿನದಂದು ಮನೆಗೆಲಸದಿಂದ ಬಿಡುವು ಸಿಗುವ ಕಾರಣ ಅಗತ್ಯವಾದ ಆರಾಮವನ್ನೂ ಪಡೆದಂತಾಗುತ್ತದೆ.

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ನಡುರಾತ್ರಿ ಮೂರು ಗಂಟೆಗೆ ಭೂತಗಳು ಹೊರಬರುತ್ತವೆ

ಕ್ರೈಸ್ತರು ನಡುರಾತ್ರಿ ಕಳೆದ ಬಳಿಕ ಮೂರು ಗಂಟೆಯ ಹೊತ್ತಿನಲ್ಲಿ ಆತ್ಮಗಳು ಅತಿ ಹೆಚ್ಚು ಕ್ರಿಯಾತ್ಮಕವಾಗುತ್ತವೆ ಎಂದು ನಂಬುತ್ತಾರೆ. ಈ ಹೊತ್ತಿನಲ್ಲಿ ಮನೆಯಿಂದ ಹೊರ ಹೋಗಬಾರದು. ಒಂದು ವೇಳೆ ಅನಿವಾರ್ಯವಾಗಿ ಹೋಗಲೇಬೇಕಾಗಿದ್ದರೆ ಶಿಲುಬೆಯೊಂದನ್ನು ಖಂಡಿತಾ ಕೊಂಡೊಯ್ಯಬೇಕು ಎಂಬ ನಂಬಿಕೆ ಇದೆ. ಹಿಂದೆ ಕೆಲವರಿಗೆ ಹಾಸಿಗೆ ಬಿಟ್ಟು ರಾತ್ರಿಯಿಡೀ ಊರು ತಿರುಗುವ ಅಭ್ಯಾಸವಿತ್ತು.

ಮೋಕ್ಷಕ್ಕಾಗಿ ನಗ್ನರಾಗುವುದು!

ಮೋಕ್ಷಕ್ಕಾಗಿ ನಗ್ನರಾಗುವುದು!

ಇದು ಭಾರತದಲ್ಲಿರುವ ವಿಚಿತ್ರ ಆಚರಣೆಗಳಲ್ಲಿ ಒಂದಾಗಿದೆ. ದಿಗಂಬರ ಋಷಿಗಳು ಬೆತ್ತಲಾಗಿರಬೇಕೆಂದು ಭಾವಿಸುತ್ತಾರೆ. ಜಗತ್ತಿನ ಎಲ್ಲಾ ಮೋಹವನ್ನು ತ್ಯಜಿಸಿ ಮೋಕ್ಷ ಪಡೆಯಲು ಇದು ಹಾದಿಯೆನ್ನಲಾಗುತ್ತದೆ. ಮಹಿಳೆಯರು ನಗ್ನರಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಮೋಕ್ಷವಿಲ್ಲ. ಅವರಿಗೆ ಮೋಕ್ಷ ಸಿಗಬೇಕಾದರೆ ಮತ್ತೊಂದು ಜನ್ಮದಲ್ಲಿ ಪುರುಷರಾಗಿ ಹುಟ್ಟಿಬರಬೇಕು.

ಲಿಂಬೆ ಮತ್ತು ಹಸಿಮೆಣಸು

ಲಿಂಬೆ ಮತ್ತು ಹಸಿಮೆಣಸು

ಲಿಂಬೆ ಮತ್ತು ಹಸಿಮೆಣಸನ್ನು ಜೊತೆಯಾಗಿ ಕಟ್ಟಿ ವಾಹನ ಇಲ್ಲವೇ ಮನೆಯ ಮುಂಭಾಗದಲ್ಲಿ ನೇತುಹಾಕಿರುವುದನ್ನು ನೀವು ಕಂಡಿರುತ್ತೀರಿ. ಇದನ್ನು ಕಟ್ಟಲು ದಾರವನ್ನು ಬಳಸುತ್ತಾರೆ. ಕೆಟ್ಟ ದೃಷ್ಟಿ ತಾಗಬಾರದು ಎಂಬ ಕಾರಣಕ್ಕಾಗಿ ಜನರು ಇದನ್ನು ಕಟ್ಟುತ್ತಾರೆ ಆದರೆ ವೈಜ್ಞಾನಿಕವಾದ ತತ್ವ ಎಂದರೆ ಹತ್ತಿಯ ದಾರವು ಸೊಳ್ಳೆ ಮತ್ತು ಕೀಟಾಣುಗಳನ್ನು ಹೊಡೆದೋಡಿಸುತ್ತದೆ. ಅಂತೆಯೇ ಕಟುವಾದ ವಾಸನೆಯನ್ನು ಹೀರಿಕೊಳ್ಳುತ್ತದೆ.

English summary

Superstitions We Indians Follow Blindly

Superstition is nothing but a belief or a way of behaving and following certain rituals due to fear. Generally, these superstitions are baseless and have a totally different meaning added to them. Blindly following the superstitions and teaching others about it, without knowing the actual cause for it to be created, is nothing but sheer stupidity. Knowing the actual reason will surely stun you and make you realise that you have been fooled all these years
X
Desktop Bottom Promotion