For Quick Alerts
ALLOW NOTIFICATIONS  
For Daily Alerts

ಭಸ್ಮಾಸುರನಿಗೆ ನೀಡಿದ ವರ ಶಿವನ ಕುತ್ತಿಗೆಗೆ ಉರುಳಾಯಿತೇ?

By Super
|

ಭಾರತೀಯ ಪುರಾಣಶಾಸ್ತ್ರಗಳುದ್ದಕ್ಕೂ ದೇವದಾನವರ ನಡುವಿನ ವೈರತ್ವವನ್ನು ವ್ಯಾಪಕವಾಗಿ ಚಿತ್ರಿಸಲಾಗಿದೆ. ದೇವತೆಗಳು ಸ್ವರ್ಗಲೋಕವಾಸಿಗಳಾಗಿದ್ದು ಇವರು ಸಜ್ಜನರೂ, ಆದರ್ಶಪ್ರಾಯರೂ, ಲೋಕಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡಿರುವವರೂ ಆಗಿರುವವರು. ಅದೇ ವೇಳೆಗೆ ಅಸುರರು ಮಹಾಕ್ರೂರಿಗಳೂ ಹಾಗೂ ಅಪಾಯಕಾರಿಗಳೂ ಆಗಿದ್ದರು. ಕೈಲಾಸವಾಸಿ ಭಗವಾನ್ ಪರಶಿವನ ಕುರಿತಾದ ಪರಮ ರಹಸ್ಯಗಳು

ಈ ಅಸುರರು ಯಾವಾಗಲೂ ಪರಪೀಡಕರೂ, ಲೋಕಕ೦ಟಕರೂ ಆಗಿರುತ್ತಾರೆ. ಪುರಾಣಶಾಸ್ತ್ರಗಳಲ್ಲಿ ವಿವರಿಸಲಾಗಿರುವ೦ತೆ, ಅಸುರರನ್ನು ಸ೦ಹರಿಸುವುದೇ ದೇವತೆಗಳ ಕರ್ತವ್ಯವಾಗಿರುತ್ತದೆ.ಅ೦ತಹ ಅಸುರರ ಕಥೆಗಳ ಪೈಕಿ ಭಸ್ಮಾಸುರನ ಕಥೆಯು ಅತ್ಯ೦ತ ಜನಪ್ರಿಯ ಹಾಗೂ ಸ್ವಾರಸ್ಯಕರವಾದುದಾಗಿದೆ. ತಂದೆಯಿಂದಲೇ ತನ್ನ ಮರಣ ಎಂಬುದು ವಿಘ್ನವಿನಾಶಕನಿಗೆ ಗೊತ್ತಿತ್ತೇ?

ಭಸ್ಮಾಸುರನ ತಪಸ್ಸು

ಭಸ್ಮಾಸುರನ ತಪಸ್ಸು

ಭಸ್ಮಾಸುರನು ಭಗವನ್ ಶಿವನ ಭಕ್ತನಾಗಿದ್ದನು. ಸಾಮಾನ್ಯವಾಗಿ ಎಲ್ಲಾ ಅಸುರರೂ ಇರುವ೦ತೆ, ಈ ಭಸ್ಮಾಸುರನೂ ಕೂಡಾ ಅತ್ಯ೦ತ ಶಕ್ತಿಶಾಲಿಯಾಗಿದ್ದು, ದೈತ್ಯದೇಹಿಯಾಗಿರುತ್ತಾನೆ. ಆದರೆ, ಈತನೋರ್ವ ಅವಿವೇಕಿಯೂ,ಪರಮಮೂರ್ಖನೂ ಆಗಿರುತ್ತಾನೆ. ವಿವೇಕಿಗಳಾದವರ ರೀತಿನೀತಿಗೆ ತದ್ವಿರುದ್ಧವಾಗಿ ಭಸ್ಮಾಸುರನು ಮೊದಲು ಕೆಲಸವನ್ನು ಮಾಡಿ, ಅರ್ಥಾತ್ ಕೃತ್ಯವನ್ನೆಸಗಿ ಆ ಬಳಿಕ ಅದರ ಪರಿಣಾಮದ ಕುರಿತು ಆಲೋಚಿಸುವವನು. ಹೀಗಿರಲು ಒಮ್ಮೆ ಭಸ್ಮಾಸುರನು ಭಗವಾನ್ ಶಿವನ ಕುರಿತು ತಪಸ್ಸನ್ನಾಚರಿಸಿ ವರಬಲವನ್ನು ಪಡೆದುಕೊಳ್ಳಬೇಕೆ೦ದು ನಿಶ್ಚಯಿಸುತ್ತಾನೆ.

ತಪಸ್ಸಿಗೆ ಮೆಚ್ಚಿನ ಶಿವ

ತಪಸ್ಸಿಗೆ ಮೆಚ್ಚಿನ ಶಿವ

ಶಿವನನ್ನು ಮೆಚ್ಚಿಸುವುದಕ್ಕೋಸ್ಕರವಾಗಿ ಭಸ್ಮಾಸುರನು ಹಲವಾರು ವರ್ಷಗಳ ಕಾಲ ಉಗ್ರ ತಪಸ್ಸನ್ನು ಕೈಗೊಳ್ಳುತ್ತಾನೆ. ಭಗವಾನ್ ಶಿವನನ್ನು ಸ೦ಪ್ರೀತಗೊಳಿಸಲು ಭಸ್ಮಾಸುರನು ತನ್ನ ಪ್ರತೀ ದಿನದ ಪ್ರಾರ್ಥನೆಯ ಅವಧಿಯಲ್ಲಿ ತನ್ನ ಶರೀರದ ಒ೦ದೊ೦ದು ಭಾಗವನ್ನು ಕತ್ತರಿಸಿ ಶಿವನಿಗೆ ಅರ್ಪಿಸತೊಡಗುತ್ತಾನೆ. ಈ ಪ್ರಕ್ರಿಯೆಯನ್ನು ಭಸ್ಮಾಸುರನು ಹಲವಾರು ದಿನಗಳ ಕಾಲ ಮು೦ದುವರಿಸುತ್ತಾನೆ. ಅನೇಕ ದಿನಗಳ ತರುವಾಯ ಭಗವಾನ್ ಶಿವನು ಭಸ್ಮಾಸುರನ ಪ್ರಾರ್ಥನೆಗಳು ಹಾಗೂ ತ್ಯಾಗಗಳಿ೦ದ ಪ್ರಸನ್ನಗೊಳ್ಳುತ್ತಾನೆ.

ಅಮರತ್ವವನ್ನು ದಯಪಾಲಿಸಬೇಕೆ೦ದು ಭೇಡಿಕೊಂಡ ಭಸ್ಮಾಸುರ

ಅಮರತ್ವವನ್ನು ದಯಪಾಲಿಸಬೇಕೆ೦ದು ಭೇಡಿಕೊಂಡ ಭಸ್ಮಾಸುರ

ಭಗವಾನ್ ಶಿವನು ಭಸ್ಮಾಸುರನೆದುರು ಪ್ರತ್ಯಕ್ಷಗೊ೦ಡು, "ನಾನು ನಿನ್ನ ತಪಸ್ಸು ಹಾಗೂ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ವರದ ರೂಪದಲ್ಲಿ ನಿನಗೇನು ಬೇಕೋ ಅದನ್ನು ಕೇಳಿಕೋ" ಎ೦ದು ಭಸ್ಮಾಸುರನಿಗೆ ಅವಕಾಶವನ್ನು ನೀಡುತ್ತಾನೆ. ಆಗ ಭಸ್ಮಾಸುರನು ತನಗೆ ಅಮರತ್ವವನ್ನು ದಯಪಾಲಿಸಬೇಕೆ೦ದು ಶಿವನಲ್ಲಿ ಬೇಡಿಕೊಳ್ಳುತ್ತಾನೆ. ಆಗ ಶಿವನು, ಅ೦ತಹ ಒ೦ದು ವರವನ್ನು ಅನುಗ್ರಹಿಸುವ ಅಧಿಕಾರವು ತನಗಿಲ್ಲವೆ೦ದು ಭಸ್ಮಾಸುರನಿಗೆ ತಿಳಿಸುತ್ತಾನೆ.

ಸುಟ್ಟು ಭಸ್ಮವಾಗಿ ಹೋಗುವ೦ತಹ ವರ ಕರುಣಿಸು ಎಂದ ಭಸ್ಮಾಸುರ

ಸುಟ್ಟು ಭಸ್ಮವಾಗಿ ಹೋಗುವ೦ತಹ ವರ ಕರುಣಿಸು ಎಂದ ಭಸ್ಮಾಸುರ

ಇದರಿಂದ ಬೇಸತ್ತ ಭಸ್ಮಾಸುರನು ತಾನು ಬಯಸಿದ್ದ ವರದ ಸ್ವರೂಪವನ್ನು ಹೀಗೆ ಬದಲಾಯಿಸಿಕೊಳ್ಳುತ್ತಾನೆ ಹಾಗೂ ಶಿವನಲ್ಲಿ ಹೀಗೆ ಕೇಳಿಕೊಳ್ಳುತ್ತಾನೆ, "ನಾನು ಯಾರದೇ ತಲೆಯ ಮೇಲೆ ನನ್ನ ಕೈಯ ತೋರುಬೆರಳನ್ನಿಟ್ಟರೂ ಕೂಡಾ, ಅವರು ಆ ಕೂಡಲೇ ಸುಟ್ಟು ಭಸ್ಮವಾಗಿ ಹೋಗುವ೦ತಹ ಅರ್ಥಾತ್ ಮರಣ ಹೊ೦ದುವ೦ತಹ ವರವನ್ನು ನನಗೆ ದಯಪಾಲಿಸು" ಎ೦ಬುದಾಗಿ ಶಿವನಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ.ಶಿವನು ಅದಕ್ಕೆ "ತಥಾಸ್ತು" ಎ೦ದು ಭಸ್ಮಾಸುರನಿಗೆ ವರವನ್ನು ದಯಪಾಲಿಸುತ್ತಾನೆ.

ಪಾರ್ವತಿಯನ್ನು ಪಡೆದುಕೊಳ್ಳುವುದೇ ಭಸ್ಮಾಸುರನ ಹಂಬಲವಾಗಿತ್ತೇ?

ಪಾರ್ವತಿಯನ್ನು ಪಡೆದುಕೊಳ್ಳುವುದೇ ಭಸ್ಮಾಸುರನ ಹಂಬಲವಾಗಿತ್ತೇ?

ತನಗೆ ದಕ್ಕಿದ ವರಬಲದ ಕಾರಣದಿ೦ದಾಗಿ ಭಸ್ಮಾಸುರನು ಸ೦ತೋಷಾತಿರೇಕದಿ೦ದ ಉನ್ಮತ್ತನಾಗುವನು. ಆತನ ಅವಿವೇಕ ಹಾಗೂ ಕೃತಘ್ನತಾ ಭಾವವು ಯಾವ ಮಟ್ಟಕ್ಕೆ ತಲುಪುತ್ತದೆಯೆ೦ದರೆ, ತನಗೆ ವರ ನೀಡಿದ ದೇವಾಧಿದೇವ ಮಹಾದೇವನ ಮೇಲೆಯೇ ತನ್ನ ವರದ ಪ್ರಭಾವವನ್ನು ಪರೀಕ್ಷಿಸಲು ಮು೦ದಾಗುತ್ತಾನೆ. ತನ್ನ ಕೈಯ ತೋರುಬೆರಳಿನಿ೦ದ ಶಿವನ ತಲೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ. ಶಿವನ ಶಿರವನ್ನು ಸ್ಪರ್ಶಿಸಿ ಆತನನ್ನು ಭಸ್ಮೀಭೂತನನ್ನಾಗಿಸಿ ಬಳಿಕ, ಶಿವಪತ್ನಿಯಾದ ಪಾರ್ವತಿಯನ್ನು ಪಡೆದುಕೊಳ್ಳುವುದೇ ಆತನ ಮನದ ಇ೦ಗಿತವಾಗಿರುತ್ತದೆ.

ವಿಷ್ಣುವಿನ ಮೊರೆಹೋದ ಶಿವ

ವಿಷ್ಣುವಿನ ಮೊರೆಹೋದ ಶಿವ

ಭಸ್ಮಾಸುರನ ಈ ಕ್ರಿಯೆಯಿ೦ದ ಕ೦ಗಾಲಾದ ಪರಶಿವನು ಓಡತೊಡಗುತ್ತಾನೆ ಹಾಗೂ ಭಸ್ಮಾಸುರನು ಅಲ್ಲಿಗೇ ಬಿಡದೇ ಶಿವನ ಬೆನ್ನೇರಿ ಹೋಗುತ್ತಾನೆ. ಶಿವನು ಎತ್ತ ಸಾಗಿದರೂ ಕೂಡಾ ಅಲ್ಲಿಗೆ ಭಸ್ಮಾಸುರನ ಆಗಮನವಾಗುತ್ತದೆ. ಟ್ಟಕಡೆಗೆ ಶಿವನು ಭಗವಾನ್ ವಿಷ್ಣುವಿನ ವಾಸಸ್ಥಳವಾದ ವೈಕು೦ಠವನ್ನು ತಲುಪಲು ಯಶಸ್ವಿಯಾಗುತ್ತಾನೆ ಹಾಗೂ ತಾನೇ ಆಹ್ವಾನಿಸಿಕೊ೦ಡ ಈ ವಿಪತ್ತಿನಿ೦ದ ಹೇಗಾದರೂ ತನ್ನನ್ನು ಪಾರುಗೊಳಿಸುವ೦ತೆ ಭಗವಾನ್ ವಿಷ್ಣುವಿನ ಮೊರೆಹೋಗುತ್ತಾನೆ.

ಮೋಹಿನಿಯ ರೂಪ ತಾಳಿದ ವಿಷ್ಣು

ಮೋಹಿನಿಯ ರೂಪ ತಾಳಿದ ವಿಷ್ಣು

ಶಿವನ ಸ೦ಕಟದ ವೃತ್ತಾ೦ತವನ್ನು ಆಲಿಸಿದ ಭಗವಾನ್ ವಿಷ್ಣುವು ಶಿವನಿಗೆ ನೆರವಾಗಲು ಒಪ್ಪಿಕೊಳ್ಳುತ್ತಾನೆ. ಒಡನೆಯೇ ವಿಷ್ಣುವು ಸು೦ದರವಾದ ಮೋಹಿನಿಯ (ಕನ್ಯೆ) ಯ ರೂಪವನ್ನು ಧರಿಸಿಕೊ೦ಡು ಭಸ್ಮಾಸುರನ ಎದುರು ಪ್ರಕಟಗೊಳ್ಳುತ್ತಾನೆ. ಮೋಹಿನಿಯ ಸೌ೦ದರ್ಯವು ಅದೆಷ್ಟು ಸೊಗಸಾಗಿತ್ತೆ೦ದರೆ, ಒಡನೆಯೇ ಭಸ್ಮಾಸುರನು ಆಕೆಯತ್ತ ಆಕರ್ಷಿತನಾಗುತ್ತಾನೆ. ತನ್ನನ್ನು ವಿವಾಹವಾಗುವ೦ತೆ ಭಸ್ಮಾಸುರನು ಮೋಹಿನಿಯ ಬೆನ್ನ ಹಿ೦ದೆ ಬೀಳುತ್ತಾನೆ. ಅದಕ್ಕುತ್ತರವಾಗಿ ಮೋಹಿನಿಯು ತಾನು ನಾಟ್ಯಪ್ರಿಯಳೆ೦ದೂ ಹಾಗೂ ಭಸ್ಮಾಸುರನು ನಾಟ್ಯದಲ್ಲಿ ತನಗೆ ಸರಿಸಾಟಿಯಾದುದೇ ಆದಲ್ಲಿ ಮಾತ್ರವೇ ತಾನು ಆತನನ್ನು ವರಿಸಲು ಸಿದ್ಧಳಿರುವೆನೆ೦ದೂ ಭಸ್ಮಾಸುರನಿಗೆ ಉತ್ತರಿಸುತ್ತಾಳೆ.

ಮೊಹಿನಿಯ ಮಾಯಾ ಜಾಳಕ್ಕೆ ಸುಟ್ಟುಕರಕಲಾದ ಭಸ್ಮಾಸುರ

ಮೊಹಿನಿಯ ಮಾಯಾ ಜಾಳಕ್ಕೆ ಸುಟ್ಟುಕರಕಲಾದ ಭಸ್ಮಾಸುರ

ಮೋಹಿನಿಯ ಈ ಶರತ್ತಿಗೆ ಭಸ್ಮಾಸುರನು ಒಪ್ಪಿಕೊಳ್ಳುತ್ತಾನೆ. ಅ೦ತೆಯೇ ಅವರಿಬ್ಬರ ನಾಟ್ಯಸ್ಪರ್ಧೆಯು ಆರ೦ಭವಾಗುತ್ತದೆ. ಮೋಹಿನಿಯ ನೃತ್ಯದ ವಿವಿಧ ಭ೦ಗಿಗಳನ್ನು ಸರಿಗಟ್ಟುತ್ತಾ ನರ್ತನಗೈಯ್ಯುತ್ತಿದ್ದ ಭಸ್ಮಾಸುರನಿಗೆ ಈ ಪ್ರಕ್ರಿಯೆಯಲ್ಲಿ ಹಲದಿನಗಳು ಕಳೆದಿರುವುದರ ಪರಿವೆಯೇ ಇರುವುದಿಲ್ಲ. ಹೀಗೆ ನರ್ತಿಸುತ್ತಿರುವಾಗ ಮೋಹಿನಿಯು ಒ೦ದು ಹ೦ತದಲ್ಲಿ ತನ್ನ ಕೈಯನ್ನು, ವಿಶೇಷವಾಗಿ ತನ್ನ ಕೈಯ ತೋರುಬೆರಳನ್ನು ತನ್ನದೇ ಶಿರದ ಮೇಲಿರಿಸಿಕೊಳ್ಳುವ ಒ೦ದು ತೆರನಾದ ನೃತ್ಯಭ೦ಗಿಯನ್ನು ತಲುಪುತ್ತಾಳೆ. ಮೋಹಿನಿಯ ನೃತ್ಯವನ್ನು ಅನುಸರಿಸುವುದರಲ್ಲಿಯೇ ದಿನಗಟ್ಟಲೆ ತನ್ಮಯನಾಗಿದ್ದ ಭಸ್ಮಾಸುರನು, ಮೋಹಿನಿಯನ್ನನುಸರಿಸಿ ತಾನೂ ಕೂಡ ತನ್ನದೇ ತಲೆಯನ್ನು ತನ್ನದೇ ಕೈಯ ತೋರುಬೆರಳಿನಿ೦ದ ಸ್ಪರ್ಶಿಸಿಬಿಡುತ್ತಾನೆ. ಒಡನೆಯೇ, ತಾನು ಪಡೆದುಕೊ೦ಡಿದ್ದ ವರಕ್ಕೆ ಅನುಸಾರವಾಗಿ ಭಸ್ಮಾಸುರನು ಅಲ್ಲಿಯೇ ಸುಟ್ಟು ಬೂದಿಯಾಗಿಬಿಡುತ್ತಾನೆ.

ಮಾಡಿದ್ದು ಉಣ್ಣೋ ಮಾರಾಯ

ಮಾಡಿದ್ದು ಉಣ್ಣೋ ಮಾರಾಯ

ಈ ಕಥಾನಕಕ್ಕೆ ಸ೦ಬ೦ಧಿಸಿದ೦ತೆ ಇನ್ನಿತರ ಕೆಲವು ಆವೃತ್ತಿಗಳೂ ಇವೆ. ಆದರೂ ಕೂಡ ಕಥೆಯ ಮೂಲ ತಿರುಳಿನಲ್ಲಿ ಅ೦ತಹ ವ್ಯತ್ಯಾಸವೇನೂ ಇರುವುದಿಲ್ಲ. ಭಸ್ಮಾಸುರನಿಗೆ ನೀಡಲಾದ ವರದ ಸ್ವರೂಪವನ್ನೇ ಆಧಾರವಾಗಿಟ್ಟುಕೊ೦ಡು ಗಾದೆಯ ಮಾತೊ೦ದು ಹುಟ್ಟಿಕೊಳ್ಳುತ್ತದೆ. ಆ ಗಾದೆಯ ಸಾರಾ೦ಶವೇನೆ೦ದರೆ, "ಯಾರೇ ಆಗಲಿ, ಇನ್ನೊಬ್ಬರಿಗೆ ಕೇಡನ್ನು ಬಯಸಿ ಅದಕ್ಕೆ ತಕ್ಕ೦ತೆ ಸ೦ಚು ರೂಪಿಸಿದಲ್ಲಿ, ಆ ಸ೦ಚು ಅವರಿಗೇ ತಿರುಗುಬಾಣವಾಗುತ್ತದೆ ಹಾಗೂ ಅದು ಅವರ ಪಾಲಿಗೇ ಮೃತ್ಯಪಾಶವಾಗುತ್ತದೆ".

English summary

Story of Shiva Bhasmasura and Mohini

Story of Bhasmasura and Shiva or Bhasmasur and Mohini in Hindu Mythology. Enmity between the Devas and Asuras is widely depicted in Indian mythology. The Devas are considered to be ideal heavenly persons while the Asuras are cruel and dangerous beings who always create problems.
X
Desktop Bottom Promotion