For Quick Alerts
ALLOW NOTIFICATIONS  
For Daily Alerts

ಪುರಾಣದಲ್ಲಿ ಬಚ್ಚಿಟ್ಟ ಸತ್ಯ- ಭಗವಾನ್ ಶಿವನ ಜನ್ಮ ರಹಸ್ಯ!

|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ.

ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ. ನಿಮ್ಮನ್ನು ಮೂಕವಿಸ್ಮಿತಗೊಳಿಸುವ ಭಗವಾನ್ ಶಿವನ ರೋಚಕ ಕಥೆಗಳು!

ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ. ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ ಶಿವನ ಜನನ ಮತ್ತು ಬಾಲ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಒಂದು ವೇಳೆ ನಿಮಗೂ ಈ ಬಗ್ಗೆ ಮಾಹಿತಿಯಿಲ್ಲದಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಕಥನವನ್ನು ಓದಿ ಪಾವನರಾಗಿ...

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಹಿಂದೂ ಪುರಾಣದ ಪ್ರಕಾರ ಶಿವ ತ್ರಿಮೂರ್ತಿಗಳಲ್ಲಿ ಪ್ರಮುಖನಾಗಿದ್ದು ಲೋಕವಿನಾಶಕನೂ ಆಗಿದ್ದಾನೆ. ತ್ರಿಮೂರ್ತಿಗಳ ಶಕ್ತಿಯನ್ನು ಅಳೆಯುವುದಾದರೆ ಮೊದಲಿಗೆ ಶಿವ, ಬಳಿಕ ಬ್ರಹ್ಮ ಮತ್ತು ನಂತರದ ಸ್ಥಾನಗಳಲ್ಲಿ ವಿಷ್ಣು ನಿಲ್ಲುತ್ತಾರೆ.

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಶಿವನಲ್ಲಿ ಲೋಕವನ್ನೇ ವಿನಾಶಗೊಳಿಸುವ ಶಕ್ತಿಯಿದ್ದರೂ ಈ ಶಕ್ತಿಯನ್ನು ಎಂದಿಗೂ ಆತ ತಪ್ಪು ಕೆಲಸಗಳಿಗೆ ಬಳಸಲಾರ. ದುಷ್ಟರ ವಿನಾಶ ಮತ್ತು ದುಷ್ಟಶಕ್ತಿಗಳನ್ನು ನಿವಾರಿಸಲು ಈ ಶಕ್ತಿಯನ್ನು ಬಳಸುವ ಶಿವ ಹಲವು ಬಾರಿ ಮಾತ್ರ ತನ್ನ ಈ ಶಕ್ತಿಯನ್ನು ಬಳಸಿದ್ದಾನೆ.

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಶಿವನ ರೂಪವನ್ನು ಪುರಾಣಗಳಲ್ಲಿ ವಿವಿಧ ರೂಪಗಳಲ್ಲಿ ವಿವರಿಸಲಾಗಿದ್ದರೂ ಮೂಲರೂಪದಲ್ಲಿ ಶಿವನಿಗೆ ನಾಲ್ಕು ಕೈ, ನಾಲ್ಕು ಮುಖ ಮತ್ತು ಮೂರು ಕಣ್ಣುಗಳಿರುವಂತೆ ವರ್ಣಿಸಲಾಗಿದೆ. ಈ ಮೂರನೆಯ ಕಣ್ಣು ಹಣೆಯಲ್ಲಿದ್ದು ಸದಾ ಮುಚ್ಚಿರುತ್ತದೆ. ಈ ಮೂರನೆಯ ಕಣ್ಣೇ ಲೋಕವಿನಾಶಗೊಳಿಸಲು ಶಕ್ಯವಿರುವ ಪ್ರಬಲ ಬೆಳಕಿನ ಕಿರಣಗಳನ್ನು ಸೂಸುತ್ತದೆ.

ಶಿವನ ರೂಪದ ವರ್ಣನೆ

ಶಿವನ ರೂಪದ ವರ್ಣನೆ

ಈ ಕಿರಣಗಳಿಗೆ ಮನುಷ್ಯರ ಸೃಷ್ಟಿಯ ಸಕಲ ವಸ್ತುಗಳ ಸಹಿತ ದೇವರ ಸೃಷ್ಟಿಯ ಸಕಲವನ್ನೂ ನಾಶಗೊಳಿಸುವ ಶಕ್ತಿಯಿದೆ. ಹಿಂದೂಗಳ ಇನ್ನೊಂದು ಪವಿತ್ರ ಗ್ರಂಥವಾದ ವೇದಗಳಲ್ಲಿಯೂ ಶಿವನನ್ನು ಲೋಕವಿನಾಶಕನೆಂದೇ ಬಣ್ಣಿಸಿದ್ದು ರುದ್ರನೆಂಬ ಹೆಸರಿನಿಂದ ಉಲ್ಲೇಖಿಸಲ್ಪಟ್ಟಿದೆ. ರುದ್ರ ಎಂದರೆ ಚಂಡಮಾರುತದ ಅಧಿದೇವತೆ ಎಂಬ ಅರ್ಥ ಬರುತ್ತದೆ.

ಶಿವನ ಜನನವಾದುದು ಹೇಗೆ?

ಶಿವನ ಜನನವಾದುದು ಹೇಗೆ?

ಶಿವನ ಜನನದ ಬಗೆ ಒಂದು ಕುತೂಹಲಕಾರವಾದ ಕಥೆಯಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ತಮ್ಮಿಬ್ಬರಲ್ಲಿ ಬಲಶಾಲಿ ಯಾರು ಎಂಬ ವಿಷಯವಾಗಿ ವಾಗ್ಯುದ್ದ ನಡೆಸಿದ್ದರು. ಆ ಸಮಯದಲ್ಲಿ ಅವರೆದುರಿಗೆ ಅತ್ಯಂತ ಎತ್ತರವಾದ ಮತ್ತು ಪ್ರಖರವಾದ ಬೆಳಕಿನ ಕಂಭವೊಂದು ಪ್ರತ್ಯಕ್ಷವಾಯಿತು. ಇದರ ಬೇರುಗಳು ಪಾತಾಳಕ್ಕೂ, ಮರದ ತುದಿ ಆಕಾಶಕ್ಕಿಂತಲೂ ಮೇಲೆ ವ್ಯಾಪಿಸಿದ್ದವು.

ಶಿವನ ಜನನವಾದುದು ಹೇಗೆ?

ಶಿವನ ಜನನವಾದುದು ಹೇಗೆ?

ಈ ಕಂಭದ ಬಗ್ಗೆ ಕುತೂಹಲಗೊಂಡ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಇದರ ಬುಡ ಮತ್ತು ತುದಿಗಳೆಲ್ಲಿವೆ ಎಂದು ತಿಳಿದುಕೊಳ್ಳಲು ಉತ್ಸುಕರಾದರು. ಬ್ರಹ್ಮ ಒಂದು ಹಂಸದ ರೂಪ ತಾಳಿ ಕಂಭದ ತುತ್ತ ತುದಿಗೆ ಹಾರಿ ಹೋದರೆ ವಿಷ್ಣು ಒಂದು ಕಾಡುಹಂದಿಯ ರೂಪವನ್ನು ತಳೆದು (ವರಾಹರೂಪ) ಭೂಮಿಯಲ್ಲಿ ಸುರಂಗ ಕೊರೆಯುತ್ತಾ ಪಾತಾಳದತ್ತ ಸಾಗಿದ. ಆದರೆ ಇಬ್ಬರ ಸಾಮರ್ಥಕ್ಕೂ ಮೀರಿ ಆ ಕಂಭ ಬೆಳೆದಿರುವುದರಿಂದ ಇದರ ತುದಿ ಅಥವಾ ಬುಡಗಳನ್ನು ತಲುಪಲಾರದೇ ಸೋತು ಇಬ್ಬರೂ ಭೂಮಿಯ ಮೇಲೆ ಹಿಂದಿರುಗುತ್ತಾರೆ.

ಶಿವನ ಜನನವಾದುದು ಹೇಗೆ?

ಶಿವನ ಜನನವಾದುದು ಹೇಗೆ?

ಆ ಬಳಿಕ ಆ ಕಂಭದಲ್ಲಿ ಒಂದು ಬಿರುಕು ಮೂಡಿ ಆ ಬಿರುಕಿನಿಂದ ಶಿವ ಹೊರಬರುತ್ತಾನೆ. ಶಿವನ ಈ ಪರಾಕ್ರಮ ಮತ್ತು ಅಪರಿಮಿತ ಶಕ್ತಿಯನ್ನು ಕಂಡ ಇಬ್ಬರೂ ತಮಗಿಂತಲೂ ಶಕ್ತಿಶಾಲಿಯಾದ ದೇವರು ಎಂದು ಶಿವನನ್ನು ಮೂರನೆಯವನಾಗಿ ಸೇರಿಸಿಕೊಳ್ಳುತ್ತಾರೆ. ಆದ್ದರಿಂದಲೇ ತ್ರಿಮೂರ್ತಿಗಳ ಹೆಸರು ಹೇಳುವಾಗ ಮೊದಲು ಬಂದ ಕಾರಣ ಬ್ರಹ್ಮ ವಿಷ್ಣುರವರ ಹೆಸರನ್ನೂ ನಂತರ ಬಂದ ಕಾರಣ ಮಹೇಶ್ವರ ಎಂಬ ಹೆಸರನ್ನೂ ಕರೆಯಲಾಗುತ್ತದೆ.

ಶಿವನ ಶಕ್ತಿ ಮತ್ತು ಪಾತ್ರಗಳು

ಶಿವನ ಶಕ್ತಿ ಮತ್ತು ಪಾತ್ರಗಳು

ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವ ಅಷ್ಟೂ ದೇವರುಗಳ ಪೈಕಿ ಶಿವನ ಬಗ್ಗೆ ಇರುವ ಅಪಾರ ಮಾಹಿತಿಗಳು ಅತೀವ ವೈಪರೀತ್ಯಗಳಿಂದ ಕೂಡಿರುವ ಕಾರಣ ಶಿವನನ್ನು ಅರ್ಥಮಾಡಿಕೊಳ್ಳುವುದು ತುಂಬಾ ಜಟಿಲವಾಗಿದೆ. ಮಹಾಶಕ್ತಿಶಾಲಿಯಾಗಿದ್ದರೂ ಶಿವ ಹಲವಾರು ರೂಪಗಳನ್ನು ಧರಿಸಿದ್ದಾನೆ.

ಶಿವನ ಶಕ್ತಿ ಮತ್ತು ಪಾತ್ರಗಳು

ಶಿವನ ಶಕ್ತಿ ಮತ್ತು ಪಾತ್ರಗಳು

ಆತ ವಾಸವಾಗಿರುವುದು ಹಿಮಾಲಯದ ಶೈತ್ಯ ವಾತಾವರಣದಲ್ಲಿ, ಭೇಟಿ ನೀಡುವುವುದ್ ಸ್ಮಶಾನಗಳಿಗೆ, ಕೊರಳಲ್ಲಿ ಕಪೋಲಮಾಲೆ, ಕುತ್ತಿಗೆಯಲ್ಲಿ ನಾಗರಹಾವಿನ ಮಾಲೆ. ತಲೆಯಲ್ಲಿ ಬಂಧಿತವಾದ ಗಂಗೆ, ಶಿಖೆಯಲ್ಲಿ ಚಂದ್ರ. ಇವನ ಹಿಂಬಾಲಕರೋ, ರಕ್ತಪಿಪಾಸುಗಳಾದ ಭಯಹುಟ್ಟಿಸುವ ಭೂತಗಳು. ಶಿವನಲ್ಲಿ ಸಹಾಯ ಬೇಡಿ ಧಾವಿಸುವವರಲ್ಲಿ ಮನುಷ್ಯರಿಗಿಂತ ಇತರ ದೇವರ ಸಂಖ್ಯೆಯೇ ಹೆಚ್ಚಾಗಿದೆ.

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ

ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ

ಸಾಮಾನ್ಯವಾಗಿ ಹಿಮಾಲಯದ ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಸದಾ ಧ್ಯಾನಾಸಕ್ತನಾಗಿರುವ ಶಿವ ತನ್ನ ಭಕ್ತರ ಮೊರೆಯನ್ನು ಕೇಳಿ ಅವರ ಸಹಾಯಕ್ಕೆ ಧಾವಿಸುತ್ತಾನೆ. ದುಷ್ಟರ ಉಪಟಳ ತಾಳಲಾರದೇ ಶಿವನಲ್ಲಿ ಮೊರೆಯಿಡುವ ಭಕ್ತರ ರಕ್ಷಣೆಗೆ ಧಾವಿಸುವ ಶಿವ ದುಷ್ಟರ ರುಂಡವನ್ನು ಚೆಂಡಾಡುತ್ತಾನೆ. ಪ್ರಸನ್ನನಾಗಿದ್ದಾಗ ತಾಂಡವನೃತ್ಯ ಮಾಡುವ ಶಿವ ತನ್ನ ಭಕ್ತರ ಮನದಲ್ಲಿದ್ದ ದುಗುಡವನ್ನು ನಿವಾರಿಸುತ್ತಾನೆ. ತಾಂಡವನೃತ್ಯ ಸತ್ಯದ ಸಂಕೇತವೂ ಆಗಿದೆ.

ಲೋಕವುಳಿಸಲು ವಿಷಕಂಠನಾದ ಶಿವ

ಲೋಕವುಳಿಸಲು ವಿಷಕಂಠನಾದ ಶಿವ

ಪುರಾಣಗಳ ಪ್ರಕಾರ ಒಮ್ಮೆ ಸರ್ಪಗಳ ದೇವತೆಯಾದ ವಾಸುಕಿ ತನ್ನ ವಿಷದಿಂದ ಲೋಕವನ್ನು ವಿನಾಶಗೊಳಿಸಲು ಹೊರಟಿದ್ದಾಗ ದೇವತೆಗಳು ಈ ವಿಷದಿಂದ ರಕ್ಷಿಸಲು ಶಿವನ ಮೊರೆ ಹೊಕ್ಕರು. ಆಗ ಸಹಾಯಕ್ಕೆ ಧಾವಿಸಿದ ಶಿವ ಈ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿಟ್ಟುಕೊಂಡು ಲೋಕವನ್ನು ರಕ್ಷಿಸಿದ. ಈ ವಿಷದ ಕಾರಣ ಶಿವನ ಗಂಟಲು ನೀಲಿಬಣ್ಣದ್ದಾಗಿದೆ.

ಲೋಕವುಳಿಸಲು ವಿಷಕಂಠನಾದ ಶಿವ

ಲೋಕವುಳಿಸಲು ವಿಷಕಂಠನಾದ ಶಿವ

ಶಿವನ ಎಲ್ಲಾ ಚಿತ್ರಗಳಲ್ಲಿ ಇದೇ ಕಾರಣಕ್ಕೆ ಗಂಟಲನ್ನು ಗಾಢನೀಲಿ ಬಣ್ಣದಲ್ಲಿಯೇ ಚಿತ್ರಿಸಲಾಗಿದೆ. ಭೂಮಿಗೆ ಶಿವ ನೀಡಿರುವ ಇನ್ನೊಂದು ಉಪಕಾರವೆಂದರೆ ಗಂಗಾನದಿಯ ಹರಿವನ್ನು ಹತೋಟಿಯಲ್ಲಿಟ್ಟುಕೊಂಡಿರುವುದು.

ಲೋಕವುಳಿಸಲು ವಿಷಕಂಠನಾದ ಶಿವ

ಲೋಕವುಳಿಸಲು ವಿಷಕಂಠನಾದ ಶಿವ

ಮೊದಲು ಕೇವಲ ಸ್ವರ್ಗಲೋಕದಲ್ಲಿ ಮಾತ್ರ ಹರಿಯುತ್ತಿದ್ದ ಗಂಗೆಯನ್ನು ಬಾಗೀರಥನ ತಪಸ್ಸಿನ ಕಾರಣ ಭೂಮಿಗೆ ಇಳಿಸಲಾಯ್ತು. ಆದರೆ ಈ ರಭಸ ಎಷ್ಟಿತ್ತು ಎಂದರೆ ಲೋಕವನ್ನೇ ಕೊಚ್ಚಿಕೊಂಡು ಹೋಗುವಷ್ಟಿತ್ತು ಆಗ ಶಿವ ಈ ಹರಿವನ್ನು ತನ್ನ ಜಟೆಯಲ್ಲಿ ಬಂಧಿಸಿ ಕೂದಲುಗಳ ನಡುವಿನಿಂದ ಕೇವಲ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ನೀರು ಹಿಮಾಲಯದಿಂದ ಇಳಿದು ಹೋಗುವಂತೆ ಮಾಡಿದ.

ಎಲ್ಲಾ ದೇವರಿಗಿಂತ ಶಿವ ಹೇಗೆ ಪರಾಕ್ರಮಿ?

ಎಲ್ಲಾ ದೇವರಿಗಿಂತ ಶಿವ ಹೇಗೆ ಪರಾಕ್ರಮಿ?

ಇನ್ನೊಂದು ಕಥೆಯ ಪ್ರಕಾರ ಒಮ್ಮೆ ದೇವಲೋಕವನ್ನು ಅಸುರರು ಧಾಳಿಯಿಟ್ಟಾಗ ಎಲ್ಲಾ ದೇವತೆಗಳು ಶಿವನಲ್ಲಿ ಸಹಾಯಕ್ಕಾಗಿ ಧಾವಿಸಿದರು. ರಾಕ್ಷಸರ ಸಂಹಾರಕ್ಕಾಗಿ ಶಿವ ಎಲ್ಲಾ ದೇವರ ಶಕ್ತಿಯ ಸ್ವಲ್ಪ ಪ್ರಮಾಣವನ್ನು ಎರವಲು ಪಡೆದುಕೊಂಡ.

ಎಲ್ಲಾ ದೇವರಿಗಿಂತ ಶಿವ ಹೇಗೆ ಪರಾಕ್ರಮಿ?

ಎಲ್ಲಾ ದೇವರಿಗಿಂತ ಶಿವ ಹೇಗೆ ಪರಾಕ್ರಮಿ?

ಬಳಿಕ ಅಷ್ಟೂ ಅಸುರರನ್ನು ಹಿಮ್ಮೆಟ್ಟಿಸಿ ದೇವಲೋಕವನ್ನು ಉಳಿಸಿದ. ಆದರೆ ಆ ಬಳಿಕ ದೇವತೆಗಳ ಶಕ್ತಿಯನ್ನು ಹಿಂದಿರುಗಿಸದೇ ಇದ್ದ ಕಾರಣ ಶಿವ ಎಲ್ಲರಿಗಿಂತಲೂ ಪರಾಕ್ರಮಿಯಾದ ದೇವನಾಗಿದ್ದಾನೆ.

English summary

Story of Lord Shiva and his birth

Everybody knows that Shiva is 'shakti' or power. Shiva is the destroyer, the most powerful god of the Hindu pantheon and one of the godheads in the Hindu Trinity. Known by many names - Mahadeva, Mahayogi, Pashupati, Nataraja, Bhairava, Vishwanath, Bhava, Bhole Nath - Lord Shiva is perhaps the most complex of Hindu deities.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X