For Quick Alerts
ALLOW NOTIFICATIONS  
For Daily Alerts

ಸತ್ಯದ ದೇವರಾದ ಸತ್ಯನಾರಾಯಣನಿಗೆ 'ಸತ್ಯನಾರಾಯಣ ಪೂಜೆ'

By Manu
|

ಸತ್ಯವೇ ದೇವರು ಎಂಬ ನಂಬಿಕೆಯ ಸಾಕಾರರೂಪವಾಗಿರುವ ಸತ್ಯನಾರಾಯಣನಿಗೆ ಸಲ್ಲಿಸುವ ಪೂಜೆಯೇ ಸತ್ಯನಾರಾಯಣ ಪೂಜೆ. ಹಿಂದೂಗಳು ವಿವಿಧ ದೇವರುಗಳಿಗೆ ಸಲ್ಲಿಸುವ ಪೂಜೆಗಳಲ್ಲಿ ಈ ಪೂಜೆ ಹೆಚ್ಚಿನ ಮಹತ್ವದ ಮತ್ತು ಹೆಚ್ಚಾಗಿ ಸಲ್ಲಿಸಲ್ಪಡುವ ಪೂಜೆಯಾಗಿದೆ. ಸತ್ಯನಾರಾಯಣನ ಪೂಜೆ, ಮಮ ಪ್ರಸಾದ ವಿನಿಯೋಗಃ

ಅನಾದಿಕಾಲದಿಂದಲೂ ಈ ಪೂಜೆಯನ್ನು ಸಲ್ಲಿಸಿದ ಭಕ್ತರಿಗೆ ದೇವರು ಹಲವು ರೀತಿಯ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಪೂಜೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಿದ ಭಕ್ತರ ಕಂಟಕಗಳು ನಿವಾರಣೆಯಾಗಿರುವುದನ್ನು ಕಂಡ ಬಳಿಕ ಈ ಪೂಜೆಯ ಮಹತ್ವವೇನೆಂದು ಅರಿವಾಗುತ್ತದೆ. ಇಷ್ಟಾರ್ಥ ಸಿದ್ಧಿಸುವ ಸತ್ಯನಾರಾಯಣ ಪೂಜೆಯ ಮಹತ್ವವೇನು?

ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಸತ್ಯ ಎಂದರೆ ನಿಜ ಮತ್ತು ನಾರಾಯಣ ಎಂದರೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡಿರುವವನು ಎಂಬ ಅರ್ಥವಿದೆ. ಭಗವಾನ್ ವಿಷ್ಣುವಿನ ಒಂದು ರೂಪವಾದ ನಾರಾಯಣನನ್ನು ಪೂಜಿಸುವ ಮೂಲಕ ಭಕ್ತರು ತಮಗೆ ಎದುರಾದ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಸಾಮಾನ್ಯವಾಗಿ ಈ ಜನ್ಮದಲ್ಲಿ ಎದುರಾಗುವ ಕಷ್ಟಗಳು ಈ ಜನ್ಮದ ಹಾಗೂ ಪೂರ್ವಜನ್ಮದ ಪಾಪದ ಫಲಗಳೂ ಆಗಿರಬಹುದಾಗಿದ್ದು ಇದನ್ನು ಸರಿಪಡಿಸಲೂ ಈ ಪೂಜೆ ಹೆಚ್ಚಿನ ಮಹತ್ವ ಪಡೆದಿದೆ.

Imagecourtesy

ಇಲ್ಲಿ ಸತ್ಯಕ್ಕೆ ಮಾತ್ರ ಬೆಲೆ....

ಇಲ್ಲಿ ಸತ್ಯಕ್ಕೆ ಮಾತ್ರ ಬೆಲೆ....

ಸತ್ಯನಾರಾಯಣನನ್ನು ಆರಾಧಿಸುವುದೆಂದರೆ ಮೊದಲು ತಾನು ಸತ್ಯವಂತನಾಗಿರಬೇಕಾಗಿರುವ ಕಾರಣ ಈ ಪೂಜೆಯನ್ನು ಮಾಡುವ ಮುನ್ನ ಮಾನಸಿಕವಾಗಿ ದೃಢರಾಗುವುದು ಅತ್ಯಂತ ಮುಖ್ಯವಾಗಿದೆ. ಆಡುವ ಮಾತುಗಳೆಲ್ಲವೂ ಸತ್ಯವೇ ಆಗಿರಬೇಕಾದದ್ದು ಕಡ್ಡಾಯ ಅಗತ್ಯವಾಗಿದೆ. ಭಕ್ತ ಎಷ್ಟು ಸತ್ಯವಂತನಾಗುತ್ತಾನೆಯೋ ನಾರಾಯಣ ಆ ಭಕ್ತನಿಗೆ ಅಷ್ಟು ಹತ್ತಿರಾಗುತ್ತಾನೆ.

ಪೂಜೆಗೆ ಆಪ್ತರ ಆಹ್ವಾನ

ಪೂಜೆಗೆ ಆಪ್ತರ ಆಹ್ವಾನ

ಸಾಮಾನ್ಯವಾಗಿ ಈ ಪೂಜೆಗೆ ಸ್ನೇಹಿತರನ್ನು ಮತ್ತು ಬಂಧುಬಳಗದ ಆಪ್ತರನ್ನು ಆಹ್ವಾನಿಸಲಾಗುತ್ತದೆ. ಆಪ್ತರಲ್ಲಿ ಬಾಂಧವ್ಯ ಇನ್ನಷ್ಟು ಹೆಚ್ಚಲು ಈ ಸಂದರ್ಭ ಅತ್ಯಂತ ಯೋಗ್ಯವಾಗಿದೆ ಇದರಿಂದ ಪೂಜೆಗೆ ಒಳಗಾಗುವ ಎಲ್ಲರೂ ನಾರಾಯಣನ ಕೃಪೆಗೆ ಪಾತ್ರರಾಗಿ ಸಂತೋಷ, ಒಗ್ಗಟ್ಟು ಒಗತನ ಮೂಡಲು ಸಾಧ್ಯವಾಗುತ್ತದೆ.

ಪೂಜೆಗೆ ಆಪ್ತರ ಆಹ್ವಾನ

ಪೂಜೆಗೆ ಆಪ್ತರ ಆಹ್ವಾನ

ಸಾಮಾಜಿಕವಾಗಿ ಇತರರೂ ಸಂತೋಷವಾಗಿದ್ದರೆ ನಾವೂ ಸಂತೋಷವಾಗಿರಬಹುದು. ನಮ್ಮಿಂದ ಸಂತೋಷ ಪಡೆದವರು ಸಂತೋಷವನ್ನೇ ಪ್ರತಿಯಾಗಿ ನೀಡುವುದರಿಂದ ನಾವು ಬಿತ್ತ ಫಲವೇ ನಮಗೆ ದಕ್ಕಿದಂತಾಗುತ್ತದೆ.

ಕೀರ್ತನೆ

ಕೀರ್ತನೆ

ಸಾಮಾನ್ಯವಾಗಿ ಪೂಜೆಯ ಬಳಿಕ ಸತ್ಯನಾರಾಯಣನ ಕಥೆ ಮತ್ತು ಕೀರ್ತನೆಗಳು ನಡೆಯುತ್ತವೆ. ಗುಂಪಿನಲ್ಲಿರುವ ಎಲ್ಲರೂ ಸತ್ಯನಾರಾಯಣನ ಸ್ತುತಿ, ಭಜನೆ ಮತ್ತು ಭಕ್ತಿಗೀತೆಗಳನ್ನು ಹಾಡುವ ಮೂಲಕ ಎಲ್ಲರಲ್ಲಿಯೂ ಭ್ರಾತೃತ್ವ ಮತ್ತು ಧನಾತ್ಮಕ ಶಕ್ತಿ ಆವರರಿಸುತ್ತದೆ.

ಕೀರ್ತನೆ

ಕೀರ್ತನೆ

ಇದರಿಂದ ಋಣಾತ್ಮಕ ಶಕ್ತಿ ಕಡಿಮೆಯಾಗಿ ಆಪ್ತರ ನಡುವೆ ನಡೆಯುವ ಕಲಹ ಮತ್ತು ಮನಸ್ತಾಪಗಳಿಗೆ ಕಡಿವಾಣ ಹಾಕುತ್ತದೆ. ಭಕ್ತಿಗೀತೆಗಳನ್ನು ಹಾಡುವ ಸಂದರ್ಭದಲ್ಲಿ ಮನವೆಂಬ ಮರ್ಕಟ ಎತ್ತೆತ್ತಲೂ ಸುಳಿಯುವುದನ್ನೂ ತಡೆದು ಏಕಾಗ್ರತೆ ಪಡೆಯಲು ಸಾಧ್ಯವಾಗುತ್ತದೆ.

ಶ್ರೀ ಸತ್ಯನಾರಾಯಣ ಕಥೆ

ಶ್ರೀ ಸತ್ಯನಾರಾಯಣ ಕಥೆ

ಈ ಕಥೆಯ ಪ್ರಕಾರ ನಾರದರು ಒಮ್ಮೆ ಭೂಲೋಕದಲ್ಲಿ ಸಂಚರಿಸುತ್ತಿದ್ದಾಗ ಭೂವಾಸಿಗಳು ತಮ್ಮ ಕೆಟ್ಟ ಆಲೋಚನೆ ಮತ್ತು ಲೋಭಿತನದ ಕಾರಣ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದುದನ್ನು ಕಂಡರು. ಇದರ ಪರಿಹಾರಕ್ಕಾಗಿ ತಕ್ಷಣ ನಾರಾಯಣನ ಬಳಿ ಧಾವಿಸಿದ ನಾರದರು ಇದಕ್ಕೆ ಪರಿಹಾರವನ್ನು ಸೂಚಿಸುವಂತೆ ಕೇಳಿಕೊಂಡರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶ್ರೀ ಸತ್ಯನಾರಾಯಣ ಕಥೆ

ಶ್ರೀ ಸತ್ಯನಾರಾಯಣ ಕಥೆ

ನಾರಾಯಣರು ಸೂಚಿಸಿದ ಸಲಹೆಯ ಪ್ರಕಾರ ಯಾರು ಉತ್ತಮ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಅದರ ಫಲ ಖಂಡಿತಾ ಸಿಗುತ್ತದೆ. ಇದನ್ನು ಕರ್ಮಫಲ ಎಂದು ಕರೆಯುತ್ತಾರೆ. ಆ ಪ್ರಕಾರ ಕೆಟ್ಟ ಕಾರ್ಯಗಳಿಗೂ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿಯಾದರೂ ಇದರ ಫಲಗಳನ್ನು ಅನುಭವಿಸಲೇಬೇಕು. ಸಾಮಾನ್ಯವಾಗಿ ಪೀಡಿತನಿಗೆ ತನ್ನ ಪೀಡೆಯ ಕಾರಣವೇ ಗೊತ್ತಿರುವುದಿಲ್ಲ.

ಶ್ರೀ ಸತ್ಯನಾರಾಯಣ ಕಥೆ

ಶ್ರೀ ಸತ್ಯನಾರಾಯಣ ಕಥೆ

ಆದ್ದರಿಂದ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುವ ಮೂಲಕ ಈ ಫಲಗಳನ್ನು ಶೀಘ್ರವಾಗಿ ಅನುಭವಿಸಿ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಭಕ್ತನು ಈ ಸಂದರ್ಭದಲ್ಲಿ ಸತ್ಯವಂತನಾಗಿರುವುದನ್ನು ಪರಿಗಣಿಸಿದ ಸತ್ಯನಾರಾಯಣನು ಈ ಫಲಗಳನ್ನು ಶೀಘ್ರವಾಗಿ ನಿವಾರಿಸಲು ಅನುಗ್ರಹ ತೋರುತ್ತಾನೆ. ಇದೇ ಈ ಪೂಜೆಯ ಮಹತ್ವವಾಗಿದೆ.

English summary

Significance of the Satyanarayan Puja

The Satyanarayan Puja, (worship of Satyanarayan, the embodiment of the eternal Truth), is one of the most common pujas (ritualistic prayers) that are offered to the Lord by the Hindus.Enthusiastic devotees, from time immemorial, have performed it with greatly beneficial results. It has been observed that after the performance of this puja with faith and devotion, devotees benefit by getting their problems and difficulties resolved.
X
Desktop Bottom Promotion