ಶನಿದೇವರನ್ನು ಒಲಿಸಿಕೊಳ್ಳಲು ತಪ್ಪದೇ ಮಾಡಿ ಶನಿವಾರ ವ್ರತ

Posted By: Deepu
Subscribe to Boldsky

ಭಾರತೀಯ ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರ ವೃತಾಚಾರಣೆಗಳಿಗೆ ಅನಾದಿ ಕಾಲದಿಂದಲೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾ ಬರಲಾಗಿದೆ. ಪೂಜೆ ಮಾಡುವುದರ ಜೊತೆಗೆ ಒಪ್ಪತ್ತಿನ ಉಪವಾಸ ಇಲ್ಲವೇ ಬರಿಯ ನೀರು ಸೇವನೆ, ಹಣ್ಣುಗಳ ಸೇವನೆ, ಸೋಮವಾರ, ಶುಕ್ರವಾರ, ನವರಾತ್ರಿ ಉಪವಾಸ ಕೈಗೊಳ್ಳುವುದ ಹೀಗೆ ಹಲವಾರು ಉಪವಾಸ ವೃತಗಳನ್ನು ಜನರು ಅನುಸರಿಸುತ್ತಾರೆ. ದೇವರಿಗೆ ತಮ್ಮ ಭಕ್ತಿಯನ್ನು ತೋರ್ಪಡಿಸುವ ರೀತಿಯೆಂಬುದಾಗಿ ಜನರು ಈ ಉಪವಾಸವನ್ನು ನಂಬುತ್ತಾರೆ. ಹಿಂದಿನ ಕಾಲದಂತೆ ವರ್ಷಪೂರ್ತಿ ಉಪವಾಸ ಮಾಡುವವರು ಒಂದು ಹೊತ್ತು ಊಟ ಮಾಡುವವರು ಇದ್ದರು.

ಶನಿ ಮಹಾದಶೆಯ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವುದು ಹೇಗೆ?

ಆದರೆ ಇಂದಿನ ಕಾಲದಲ್ಲಿ ಅಷ್ಟೊಂದು ಸಮಯ ಉಪವಾಸ ಕೈಗೊಳ್ಳಲು ಸಾಧ್ಯವಿಲ್ಲದೇ ಇರುವುದರಿಂದ ಜನರು ವಾರದ ಕೆಲವು ದಿನ ಇಲ್ಲವೇ ಕೆಲವೊಂದು ಶುಭಾವಸರಗಳಲ್ಲಿ ಒಂದು ಹೊತ್ತು ಆಹಾರವನ್ನು ತೆಗೆದುಕೊಂಡು ದೇವರ ಧ್ಯಾನದಲ್ಲಿರುತ್ತಾರೆ. ವಾರದ ಕೆಲವು ದಿನಗಳ ಕಾಲ ಉಪವಾಸ ಕೈಗೊಳ್ಳುವುದು ಹೆಚ್ಚಿನವರಿಗೆ ತಿಳಿದೇ ಇದೆ ಆದರೆ ಶನಿವಾರದ ದಿನ ಉಪವಾಸ ಮಾಡುವುದರಿಂದ ದೊರೆಯುವ ಪ್ರಯೋಜನ ಮತ್ತು ಯಾವ ದೇವರನ್ನು ಇದು ಪ್ರೀತ್ಯರ್ಥಪಡಿಸುತ್ತದೆ ಎಂಬದುನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಶನಿ ದೇವರಿಗಾಗಿಯೇ ವಿಶೇಷವಾಗಿ ಶನಿವಾರದ ವ್ರತ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಇದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು ಮತ್ತು ಶನಿ ದೋಷದಿಂದ ಮುಕ್ತಿಯನ್ನು ಹೊಂದಬಹುದು.... 

ಈ ದಿನ ಪೂಜೆ ಮತ್ತು ಉಪವಾಸ ಮಾಡುವುದು ಹೇಗೆ

ಈ ದಿನ ಪೂಜೆ ಮತ್ತು ಉಪವಾಸ ಮಾಡುವುದು ಹೇಗೆ

ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಶನಿವಾರ ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಸತತವಾಗಿ 11 ಅಥವಾ 51 ವಾರಗಳ ಉಪವಾಸವನ್ನು ಮಾಡುತ್ತಾರೆ. ನಂತರ ಉದ್ಯಾಪನ ಮಾಡಿ ಬೇಕಿದ್ದಲ್ಲಿ ಪುನಃ ವ್ರತವನ್ನು ಕೈಗೊಳ್ಳಬಹುದು.

ಈ ದಿನ ಪೂಜೆ ಮತ್ತು ಉಪವಾಸ ಮಾಡುವುದು ಹೇಗೆ

ಈ ದಿನ ಪೂಜೆ ಮತ್ತು ಉಪವಾಸ ಮಾಡುವುದು ಹೇಗೆ

ಉಪವಾಸ ಮಾಡುವವರ ಬೆಳಗ್ಗೆ ಸ್ನಾನವನ್ನು ಮಾಡಬೇಕು ಅಂತೆಯೇ ಸ್ನಾನದ ಸಮಯದಲ್ಲಿ ಕಪ್ಪು ಇಲ್ಲವೇ ನೀಲಿ ಬಣ್ಣದ ದಿರಿಸನ್ನು ಧರಿಸಿರಬೇಕು. ಕಬ್ಬಿಣದಿಂದ ಮಾಡಿದ ಶನಿ ದೇವರನ್ನು ಪೂಜಿಸುವುದು ಶ್ರೇಯಸ್ಕರವಾಗಿದೆ. ಪೂಜೆಯ ಸಮಯದಲ್ಲಿ ಕಪ್ಪು ಬಣ್ಣದ ಹೂವು, ಕಪ್ಪು ಎಳ್ಳು ಮತ್ತು ಬೇಯಿಸಿದ ಅನ್ನದೊಂದಿಗೆ ಕಪ್ಪು ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಲಾಗುತ್ತದೆ. ಶನಿ ದೇವರ ಮಂತ್ರ ಪಠಣೆ ಮತ್ತು ಶನಿ ದೇವರ ಕಥಾ ಮಹಿಮೆಯನ್ನು ಓದುವ ಮೂಲಕ ಪೂಜೆಯನ್ನು ಮುಗಿಸಲಾಗುತ್ತದೆ.

ಶನಿವಾರ ವ್ರತದ ನಿಯಮಗಳೇನು

ಶನಿವಾರ ವ್ರತದ ನಿಯಮಗಳೇನು

ಶನಿವಾರದಂದು ವ್ರತಾಧಾರಿಗಳು ಹನುಮಂತ ಮತ್ತು ಭೈರವನ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಎಳ್ಳೆಣ್ಣೆ, ಕಪ್ಪು ಉದ್ದಿನ ಬೇಳೆ, ಕಪ್ಪು ಎಳ್ಳು ಮತ್ತು ಕಪ್ಪು ಬಟ್ಟೆಯನ್ನು ದೇವರಿಗೆ ಅರ್ಪಿಸಬೇಕು. ದಿನವಿಡೀ ಉಪವಾಸವಿದ್ದು ಸೂರ್ಯಾಸ್ತದ ನಂತರ ಎರಡು ಗಂಟೆಗಳ ಬಳಿಕ ಆಹಾರವನ್ನು ಸೇವಿಸಬೇಕು.

ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ಒಂಬತ್ತು ಗ್ರಹಗಳಲ್ಲಿ ಹೆಚ್ಚು ಶಕ್ತಿಶಾಲಿ ಯಾರೆಂಬುದರ ಬಗ್ಗೆ ಒಮ್ಮೆ ಚರ್ಚೆಯಾಗುತ್ತದೆ. ಇದನ್ನು ನಿರ್ಧರಿಸಲು ಗ್ರಹಗಳು ಇಂದ್ರನನ್ನು ಸಂಧಿಸುತ್ತಾರೆ. ಆದರೆ ಗ್ರಹಗಳ ಕೋಪವನ್ನು ಅರಿತಿದ್ದ ಇಂದ್ರನು ಅವರನ್ನು ವಿಕ್ರಮಾದಿತ್ಯನ ಬಳಿ ಕಳುಹಿಸುತ್ತಾರೆ. ವಿಕ್ರಮಾದಿತ್ಯ ಉಜ್ಜಯಿನಿಯ ಹೆಸರಾಂತ ರಾಜನಾಗಿದ್ದನು.

ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ಚಿನ್ನ, ಬೆಳ್ಳಿ, ಕಂಚು, ತಾಮ್ರ, ಹಿತ್ತಾಳೆ, ತವರ, ಸತು, ಮೈಕಾ ಮತ್ತು ಕಬ್ಬಿಣದಿಂದ ಮಾಡಿದ ಒಂಬತ್ತು ಸಿಂಹಾಸನಗಳನ್ನು ತನ್ನ ಅರಮನೆಯಲ್ಲಿ ಇರಿಸುತ್ತಾರೆ. ಹಾಗೂ ಗ್ರಹಗಳ ಬಳಿ ಒಂಬತ್ತು ಸಿಂಹಾಸನಗಳನ್ನು ಆಯ್ಕೆಮಾಡಲು ಕೇಳುತ್ತಾನೆ. ಸೂರ್ಯನಿಂದ ಆರಂಭಿಸಿ ಕೊನೆಯ ಕಬ್ಬಿಣದ ಸಿಂಹಾಸವನ್ನು ಶನಿ ಆಯ್ಕೆಮಾಡಿಕೊಳ್ಳುತ್ತಾರೆ.

 ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ತಮ್ಮ ಆಯ್ಕೆಗೆ ಅನುಗುಣವಾಗಿ ಯಾರು ಸಿಂಹಾಸವನ್ನು ಆರಿಸಿಕೊಂಡಿದ್ದಾರೋ ಅಂತೆಯೇ ಅವರ ಪರಾಕ್ರಮ ಮತ್ತು ಶ್ರೇ‍ಷ್ಠತೆ ಇದರಿಂದ ತಿಳಿಯುತ್ತದೆ ಎಂದು ವಿಕ್ರಮಾದಿತ್ಯ ಹೇಳುತ್ತಾನೆ. ಕಬ್ಬಿಣದ ಸಿಂಹಾಸವನ್ನು ಆಯ್ಕೆಮಾಡಿದ್ದ ಶನಿಗೆ ಇದರಿಂದ ತೀವ್ರ ಅಸಮಾಧಾನವುಂಟಾಗಿ ವಿಕ್ರಮಾದಿತ್ಯನನ್ನು ಹಿಂಸಿಸುತ್ತಾರೆ.

 ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ರಾಜ ವಿಕ್ರಮಾದಿತ್ಯನು ಸಾಡೆ ಸಾಥಿ ದೋಷವನ್ನು ಮುಂದಿನ ಏಳು ಮತ್ತು ಅರ್ಧ ವರ್ಷಗಳ ಕಾಲ ಅನುಭವಿಸುವ ಶಿಕ್ಷೆಗೆ ಗುರಿಯಾಗುತ್ತಾನೆ. ಅರಣ್ಯದಲ್ಲಿ ತನ್ನ ದಾರಿಯನ್ನು ರಾಜನು ತಪ್ಪುತ್ತಾನೆ ಮತ್ತು ಆಹಾರವಿಲ್ಲದೆ ಅಲೆಯಬೇಕಾಗುತ್ತದೆ ಹಾಗೂ ಕಳ್ಳತನದ ಶಿಕ್ಷೆಗೆ ಗುರಿಯಾಗುತ್ತಾನೆ. ಬೀಜದಿಂದ ಎಣ್ಣೆ ತೆಗೆಯುವ ಕೆಲಸ ಆತನಿಗೆ ದೊರೆಯುತ್ತದೆ. ಒಂದೊಮ್ಮೆ ಕೆಲಸ ಮಾಡುತ್ತಿದ್ದಾಗ ರಾಜನು ಹಾಡುತ್ತಾನೆ ಮತ್ತು ಆತನ ಮಧುರ ಕಂಠಸಿರಿಗೆ ಸೋತು ಪ್ರದೇಶದ ರಾಜಕುಮಾರಿಯು ವಿಕ್ರಮಾದಿತ್ಯನನ್ನು ವಿವಾಹವಾಗಲು ಬಯಸುತ್ತಾಳೆ.

ಶನಿವಾರ ವ್ರತದ ಕಥೆ

ಶನಿವಾರ ವ್ರತದ ಕಥೆ

ವಿವಾಹವಾಗಲು ರಾಜನ ಬಳಿ ಏನೂ ಇರಲಿಲ್ಲ. ಆದರೆ ಆ ಸಮಯದಲ್ಲಿ ಸಾಡೆಸಾಥಿ ಶನಿ ದೋಷನ್ನು ಅಂತ್ಯಗೊಳ್ಳುವುದರಲ್ಲಿತ್ತು ಮತ್ತು ರಾಜನು ಕಳೆದುಕೊಂಡದ್ದನ್ನು ಪುನಃ ಪಡೆದುಕೊಳ್ಳುತ್ತಾನೆ. ರಾಜನು ರಾಜಕುಮಾರಿಯನ್ನು ವಿವಾಹವಾಗುತ್ತಾನೆ ಮತ್ತು ಆಕೆಯ ಪಿತನಿಂದ ಧನಕನಕವನ್ನು ಕೊಡುಗೆಯಾಗಿ ಪಡೆದುಕೊಳ್ಳುತ್ತಾನೆ.

ಸಿರಿ ಸಂಪತ್ತು ಮರಳುತ್ತದೆ

ಸಿರಿ ಸಂಪತ್ತು ಮರಳುತ್ತದೆ

ಏಳೂವರೆ ವರ್ಷಗಳ ಬಳಿಕ ವಿಕ್ರಮಾದಿತ್ಯನು ತಾನು ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯುತ್ತಾನೆ. ತದನಂತರ ಶನಿಯನ್ನು ಒಲಿಸಿಕೊಳ್ಳಲು ರಾಜನು ಪ್ರತಿ ಶನಿವಾರ ವ್ರತವನ್ನು ಕೈಗೊಳ್ಳುತ್ತಾನೆ ಮತ್ತು ಶನಿಯ ಕೃಪೆಗೆ ಭಾಜನನಾಗುತ್ತಾನೆ. ಹೀಗೆ ವಿಕ್ರಮಾದಿತ್ಯ ಸಂತಸಮಯ ಜೀವನವನ್ನು ನಡೆಸುತ್ತಾನೆ.

ಶನಿವಾರ ವ್ರತದ ಪ್ರಯೋಜನಗಳು

ಶನಿವಾರ ವ್ರತದ ಪ್ರಯೋಜನಗಳು

ಸಾಡೆಸಾಥಿ, ದಹಿಯಾ, ಮಹಾದಶಾ ಅಥವಾ ಅಂತರ್‌ದಶವಿರುವವರು ಶನಿವಾರದ ಉಪವಾಸ, ವ್ರತವನ್ನು ಕೈಗೊಳ್ಳಬಹುದು. ಈ ದಿನ ಉಪವಾಸ ಮಾಡುವುದರಿಂದ ಸಂಧಿಗಳ ನೋವು, ಸ್ನಾಯು ಸೆಳೆತ, ಬೆನ್ನು ನೋವು, ಸ್ನಾಯುಗಳ ಅಸಮಂಜಸತೆ, ಹೀಗೆ ಹಲವಾರು ವ್ಯಾಧಿಗಳಿಂದ ಪರಿಹಾರವನ್ನು ನೀಡುತ್ತದೆ. ತಮ್ಮ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಂಡು ಆನಂದಮಯ ಜೀವನವನ್ನು ನಡೆಸಬಹುದು.

English summary

Significance of Saturday Vrat For Shani Deva..

Fasting on Saturday is considered highly beneficial and the most significant of all the weekly vrats. Scriptures advise this vrat for those who have a weak Shani dev in their Kundalis. Observed to please Saturn (Shani Dev), this vrat can win the blessings of Shani and remedy the ill effects of a weak Shani in the Kundali.